Virat Kohli Biopicನಲ್ಲಿ ನಟಿಸಬಹುದಾದ ಐವರು ನಟರು ಇವರೇ!
ಕನ್ನಡ ಸುದ್ದಿ  /  ಕ್ರೀಡೆ  /  Virat Kohli Biopicನಲ್ಲಿ ನಟಿಸಬಹುದಾದ ಐವರು ನಟರು ಇವರೇ!

Virat Kohli Biopicನಲ್ಲಿ ನಟಿಸಬಹುದಾದ ಐವರು ನಟರು ಇವರೇ!

Virat Kohli Biopic: ವಿರಾಟ್​​​ ಕೊಹ್ಲಿ ಅವರ ಬಯೋಪಿಕ್​​ನಲ್ಲಿ ನಟಿಸಲು ಯಾರೆಲ್ಲಾ ಸರದಿಯಲ್ಲಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ವಿರಾಟ್ ಕೊಹ್ಲಿ.! (Virat Kohli) 2022ರ ಏಷ್ಯಾಕಪ್​ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 2.0 ಅವತಾರ ಎತ್ತಿದ್ದಾರೆ. ಮೂರು ಫಾರ್ಮೆಟ್​​​​ನಲ್ಲೂ 3 ವರ್ಷಗಳ ನಂತರ ಶತಕ ಸಿಡಿಸಿ ಆರ್ಭಟ ಮುಂದುವರೆಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ವರ್ಷ ಪೂರ್ಣಗೊಳಿಸಿರುವ 34 ವರ್ಷದ ಕೊಹ್ಲಿ, ಇಂದಿಗೂ ಅದೇ ಮ್ಯಾನರಿಸಂ, ಅಗ್ರೆಸ್ಸಿವ್​ ಹೊಂದಿದ್ದಾರೆ. ಭಾರತದಲ್ಲಿ ಕೊಹ್ಲಿಗಿರುವಷ್ಟು ಫ್ಯಾನ್​ ಫಾಲೋಯಿಂಗ್​​​ ಮತ್ಯಾವ ಕ್ರೀಡಾಪಟುವಿಗೂ ಇಲ್ಲ ಎಂಬುದು ವಿಶೇಷ.

ವಿಷಯ ಏನೆಂದರೆ RRR ಖ್ಯಾತಿಯ ತೆಲುಗು ನಟ ರಾಮ್​ಚರಣ್ (Ram Charan)​​​, ವಿರಾಟ್​​​​​ ಕೊಹ್ಲಿ ಬಯೋಪಿಕ್​ ಮಾಡುವ ಒಲವು ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಪಾತ್ರದಲ್ಲಿ ನಟಿಸುವಾಸೆ ಎಂದು ಹೇಳಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ವಿರಾಟ್​​ ಕೊಹ್ಲಿ ಬಯೋಪಿಕ್​ಗೆ ಸಂಬಂಧಿಸಿದ ಚರ್ಚೆಗಳು ಬಿರುಸುಗೊಂಡಿವೆ. ಟೀಮ್ ಇಂಡಿಯಾ ಮಾಜಿ ನಾಯಕ MS ಧೋನಿ ನಂತರ ಕೊಹ್ಲಿ ಬಯೋಪಿಕ್​​ ಸೆಟ್ಟೇರುತ್ತಾ ಎಂಬ ಪ್ರಶ್ನೆಗಳು ಎದ್ದಿವೆ.

ಈಗಾಗಲೇ ಕ್ರಿಕೆಟ್​​ ದಿಗ್ಗಜರ ಬಯೋಪಿಕ್​​ಗಳು ತೆರೆಗೆ ಅಪ್ಪಳಿಸಿವೆ. 2016ರಲ್ಲಿ ಅಜರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ಲೆಜೆಂಡರಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪಾತ್ರದಲ್ಲಿ ನಟಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರು MS ಧೋನಿ: ದಿ ಅನ್​​ಟೋಲ್ಡ್​​ ಚಿತ್ರದಲ್ಲಿ ಧೋನಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೀಗ ಕೊಹ್ಲಿ ನಿವೃತ್ತಿಗೂ ಮೊದಲೇ ಜೀವನಾಧಾರಿತ ಚಿತ್ರಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ರಾಮ್​​ಚರಣ್​​ ಈಗ ಕೊಹ್ಲಿ ಪಾತ್ರದಲ್ಲಿ ನಟಿಸುವ ಬಗ್ಗೆ ತುಟಿ ಬಿಚ್ಚಿದ್ದಾರೆ. ಆದರೆ ಇವರಷ್ಟೇ ಅಲ್ಲದೆ ಕೊಹ್ಲಿ ಪಾತ್ರದಲ್ಲಿ ನಟಿಸಬಲ್ಲ ಸಾಮರ್ಥ್ಯ ಇರುವ ನಟರು ಇದ್ದಾರೆ. ಅವರಿಗೆ ವಿರಾಟ್​​ ಪಾತ್ರ ಅದ್ಭುತವಾಗಿ ಸೂಟ್​ ಆಗುತ್ತದೆ ಎಂಬುದು ಸಿನಿಮಾ ಜಗತ್ತಿನಲ್ಲಿ ದೊಡ್ಡ ಟಾಕ್​ ನಡೀತಿದೆ. ಇದು ಚರ್ಚೆ ಇವತ್ತಿನದಲ್ಲ, ಈ ಹಿಂದಿನಿಂದಲೂ ದೊಡ್ಡಗಾಗಿಯೇ ಬಿರುಗಾಳಿಯಂತೆಯೇ ಹಬ್ಬಿದೆ. ಹಾಗಾದ್ರೆ ಕೊಹ್ಲಿ ಪಾತ್ರದಲ್ಲಿ ನಟಿಸಬಲ್ಲ ಐವರು ನಟರು ಯಾರು.? ಈ ಮುಂದೆ ನೋಡೋಣ.!

1. ವಿಜಯ್​​ ದೇವರಕೊಂಡ

ವಿಜಯ್​ ದೇವರಕೊಂಡ 33 ವರ್ಷದ ತೆಲುಗು ನಟ. ಬ್ಯಾಕ್ ಟು ಬ್ಯಾಕ್ ಹಿಟ್‌ ಸಿನಿಮಾಗಳೊಂದಿಗೆ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕೊಹ್ಲಿಯ ಪಾತ್ರವನ್ನು ನಿರ್ವಹಿಸಬಲ್ಲ ಅತ್ಯಂತ ಜನಪ್ರಿಯ ನಟ ಎನಿಸಿದ್ದಾರೆ. ಕ್ರಿಕೆಟ್​​ ಮೇಲೆ ಅಪಾರ ಪ್ರೀತಿ ಹೊಂದಿರುವ ವಿಜಯ್​​, ಅಗ್ರೆಸ್ಸಿವ್​, ಡಿಫ್ರೆಂಟ್​ ಮ್ಯಾನರಿಸಂ ಹೊಂದಿದ್ದಾರೆ. ಹೆಚ್ಚಾಗಿ ಕ್ರೀಡೆಗಳ ಕುರಿತ ಚಿತ್ರಗಳನ್ನೇ ಮಾಡಿರುವ ದೇವರಕೊಂಡ, ಕೊಹ್ಲಿ ಬಾಡಿ ಲಾಂಗ್ವೇಜ್​ಗೆ ಪಕ್ಕಾ ಸೂಟ್​​ ಆಗುತ್ತಾರೆ ಎಂಬುದು ಸಿನಿ ರಸಿಕರ ಮಾತು.

2. ಕಾರ್ತಿಕ್​ ಆರ್ಯನ್​​

ಸಂದರ್ಶನವೊಂದರಲ್ಲಿ ಯಾವ ಕ್ರಿಕೆಟಿಗನ ಬಯೋಪಿಕ್‌ನಲ್ಲಿ ನಟಿಸಲು ಬಯಸುತ್ತೀರಿ ಎಂದು ಕೇಳಿದಾಗ, ಒಂದು ಸೆಕೆಂಡ್ ಯೋಚಿಸದೆ ವಿರಾಟ್ ಕೊಹ್ಲಿ ಎಂದು ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​​ ಹೇಳಿದ್ದರು. ಸ್ಲಿಮ್​, ಫಿಟ್​ ಆ್ಯಂಡ್​ ಫೈನ್​​ ಆಗಿರುವ ಕಾರ್ತಿಕ್ ಅವರ ನೆಚ್ಚಿನ ಕ್ರಿಕೆಟಿಗ ಕೊಹ್ಲಿಯಂತೆ. ಕ್ರಿಕೆಟ್​ ಆಡುವುದರಲ್ಲೂ ಪಂಟರ್​​ ಕಾರ್ತಿಕ್​. ಸಿನಿಮಾ ಶೂಟಿಂಗ್​​ ನಡುವೆಯೂ ಕ್ರಿಕೆಟ್​ ಪಂದ್ಯ ನಡೆಯುತ್ತಿದ್ದರೆ, ಬಿಡುವು ಮಾಡಿಕೊಂಡು ಪಂದ್ಯ ನೋಡುತ್ತಾರೆ. ಕ್ರಿಕೆಟ್​ ಅಂದರೆ ಅಷ್ಟು ಹುಚ್ಚು ಇದ್ಯಂತೆ.

3. ಶಾಹೀದ್​​ ಕಪೂರ್​​

ಖ್ಯಾತ ಬಾಲಿವುಡ್ ನಟ ಶಾಹಿದ್ ಕಪೂರ್ ಕ್ರಿಕೆಟ್​​​ಗೆ ಸಂಬಂಧಿಸಿದ ಜೆರ್ಸಿ ಚಿತ್ರದಲ್ಲಿ ಸಾಕಷ್ಟು ನೇಮ್​​ಫೇಮ್​ ಪಡೆದಿದ್ದಾರೆ. ಈ ಚಿತ್ರದಲ್ಲಿ ಅವರ ನಟನೆಗೆ ಪ್ರಶಂಸೆಗೆ ಒಳಗಾದರು. ಹಾಗಾಗಿ ವಿರಾಟ್ ಕೊಹ್ಲಿ ಜೀವನಚರಿತ್ರೆ ಚಿತ್ರದಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತಾರೆ ಎಂಬುದು ಹಲವು ನಿರ್ದೇಶಕರ ಚರ್ಚೆಯಾಗಿದೆ. ಕೊಹ್ಲಿ ತನ್ನ ನೆಚ್ಚಿನ ಕ್ರಿಕೆಟಿಗನಾಗಿದ್ದು, ಅವರ ವ್ಯಕ್ತಿತ್ವವನ್ನೇ ಫಾಲೋ ಮಾಡುತ್ತಿದ್ದಾರೆ. ಜೆರ್ಸಿಗಾಗಿ ಸತತ ಐದು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದೆ ಎಂದು ಶಾಹೀದ್​ ಈ ಹಿಂದೆ ಹೇಳಿದ್ದರು. ಆಕ್ರಮಣಕಾರಿ ವ್ಯಕ್ತಿಯೂ ಆಗಿರುವ ಶಾಹೀದ್​, ಕೊಹ್ಲಿ ಪಾತ್ರಕ್ಕೆ ಬೇಗನೇ ಹೊಂದಿಕೊಳ್ಳುತ್ತಾರೆ ಎಂದು ಬಾಲಿವುಡ್​ ನಿರ್ದೇಶಕರು ಹೇಳಿದ್ದೂ ಇದೆ.

4. ಸಿದ್ಧಾರ್ಥ್​​

ದಕ್ಷಿಣ ಭಾರತದ ಸ್ಟಾರ್ ಸಿದ್ಧಾರ್ಥ್​​ಗೆ ಕ್ರಿಕೆಟ್​ ಅಂದರೆ ಪಂಚಪ್ರಾಣ. ಅವರ ನೆಚ್ಚಿನ ಕ್ರಿಕೆಟಿಗ ರಾಹುಲ್​ ದ್ರಾವಿಡ್​ ಆದರೂ, ಕೊಹ್ಲಿ ಬ್ಯಾಟಿಂಗ್​ ಅಂದರೆ ತುಂಬಾ ಇಷ್ಟವಂತೆ. ಕ್ರಿಕೆಟ್​ ಅನ್ನು ಆರಾಧಿಸುತ್ತೇನೆ. ಧೋನಿ, ಕೊಹ್ಲಿ ಬ್ಯಾಟಿಂಗ್​ ಅನ್ನೂ ಇತ್ತೀಚೆಗೆ ತುಂಬಾ ಮಿಸ್​​ ಮಾಡಿಕೊಳ್ಳುತ್ತಿದ್ದೇನೆ ಎಂದು 2021ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಕ್ರಿಕೆಟ್​ ಮೇಲಿನ ಹುಚ್ಚಿನ ಜೊತೆಗೆ ಸೆಲೆಬ್ರೆಟಿ ಕ್ರಿಕೆಟ್​ ಲೀಗ್​​ನಲ್ಲೂ ಸಿದ್ಧಾರ್ಥ್​ ಆಡಿದ್ದರು.

5. ಅಂಗದ್ ಬೇಡಿ

39 ವರ್ಷದ ಅಂಗದ್, ಭಾರತದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ಅವರ ಪುತ್ರ. ಅವರು ಭಾರತೀಯ ಕ್ರಿಕೆಟ್ ಡ್ರಾಮಾ ಸಿರೀಸ್​ ಇನ್​​ಸೈಡ್​​​ ಎಡ್ಜ್‌ನಲ್ಲಿ ಅರವಿಂದ್ ವಸಿಷ್ಟ್ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿಸಿಸಿಐ ಮತ್ತು ಫ್ರಾಂಚೈಸಿ ಲೀಗ್‌ನಲ್ಲಿನ ಭ್ರಷ್ಟಾಚಾರವನ್ನು ಎತ್ತಿ ತೋರಿಸುವ ಈ ಸಿರೀಸ್​​​​ ಸಖತ್​ ಹಿಟ್​​ ಆಗಿದೆ. ಅಂಗದ್​​​ U-16 ಮತ್ತು U-19ನಲ್ಲಿ ಡೆಲ್ಲಿ ತಂಡದ ಕ್ರಿಕೆಟ್ ಆಡಿದ್ದಾರೆ. 2019 ರಲ್ಲಿ ದಿ ಜೋಯಾ ಫ್ಯಾಕ್ಟರ್ ಚಿತ್ರದಲ್ಲಿ ಕ್ರಿಕೆಟಿಗನ ಪಾತ್ರ ನಿರ್ವಹಿಸಿದ್ದಾರೆ. ಅಂಗದ್ ವಿರಾಟ್‌ಗೆ ಸಮನಾದ ಮೈಕಟ್ಟು ಮತ್ತು ವ್ಯಕ್ತಿತ್ವವನ್ನು ಹೊಂದಿದ್ದಾರೆ. ನಟ ಕ್ರಿಕೆಟಿಗನ ಪಾತ್ರಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ ಎಂಬುದು ಸಿನಿ ನಿರ್ಮಾಪಕರ ಮಾತು.

ಕೊಹ್ಲಿ ಬಯೋಪಿಕ್​ನಲ್ಲಿ ನಟಿಸಲು ಇದೀಗ ಈ ಲೀಸ್ಟ್​ಗೆ ರಾಮ್​ಚರಣ್​ ಸೇರಿಕೊಂಡಿದ್ದು, ಯಾರಿಗೆ ಆ ಅದೃಷ್ಟ ಒಲಿಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.