ಕನ್ನಡ ಸುದ್ದಿ  /  Photo Gallery  /  Afghanistan Registers Historic Win By 6 Wickets Hosts Beat Pakistan First Time Ever To Take A Lead In Series

Pak vs Afg: ಪಾಕಿಸ್ತಾನ​ ವಿರುದ್ಧ ಆಫ್ಘನ್​ಗೆ ಐತಿಹಾಸಿಕ ಗೆಲುವು

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಮೊದಲ ಟಿ20 ಪಂದ್ಯ, ಮಾರ್ಚ್​ 24ರಂದು ನಡೆಯಿತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಆದರೆ ಅಫ್ಘಾನ್​​​ನ ಈ ಗೆಲುವು ಚರಿತ್ರೆಯ ಪುಟಗಳಲ್ಲಿ ಸೇರಿದೆ. ಟಿ20 ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಪಾಕ್​ ವಿರುದ್ಧ ಗೆದ್ದಿದೆ.

ಅಫ್ಘಾನಿಸ್ತಾನ ಕ್ರಿಕೆಟ್​ ತಂಡವು ಹೊಸ ಮೈಲಿಗಲ್ಲು ತಲುಪಿದೆ. ಪಾಕಿಸ್ತಾನ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡಿದೆ. ಅಂತಾರಾಷ್ಟ್ರೀಯ ಇದೇ ಮೊದಲ ಬಾರಿಗೆ ಪಾಕಿಸ್ತಾನ ಎದುರು ಗೆದ್ದು ಚರಿತ್ರೆ ಸೃಷ್ಟಿಸಿದೆ. ಮಾರ್ಚ್​​ 24 ಅಫ್ಘಾನಿಸ್ತಾನ ಪಾಲಿಗೆ ಅವಿಸ್ಮರಣೀಯ ದಿನ.!
icon

(1 / 6)

ಅಫ್ಘಾನಿಸ್ತಾನ ಕ್ರಿಕೆಟ್​ ತಂಡವು ಹೊಸ ಮೈಲಿಗಲ್ಲು ತಲುಪಿದೆ. ಪಾಕಿಸ್ತಾನ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡಿದೆ. ಅಂತಾರಾಷ್ಟ್ರೀಯ ಇದೇ ಮೊದಲ ಬಾರಿಗೆ ಪಾಕಿಸ್ತಾನ ಎದುರು ಗೆದ್ದು ಚರಿತ್ರೆ ಸೃಷ್ಟಿಸಿದೆ. ಮಾರ್ಚ್​​ 24 ಅಫ್ಘಾನಿಸ್ತಾನ ಪಾಲಿಗೆ ಅವಿಸ್ಮರಣೀಯ ದಿನ.!( Afghanistan Cricket Board/Twitter)

ಯುಎಇ ಶಾರ್ಜಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್​ ನಡೆಸಿತು. ಆಫ್ಘಾನಿಸ್ತಾನ ಬೌಲರ್​​​ಗಳ ಮಾರಕ ದಾಳಿಗೆ ನಡುಗಿದ ಪಾಕ್​, 20 ಓವರ್​​​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 92 ರನ್​ ಗಳಿಸಲಷ್ಟೇ ಶಕ್ತವಾಯಿತು.
icon

(2 / 6)

ಯುಎಇ ಶಾರ್ಜಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್​ ನಡೆಸಿತು. ಆಫ್ಘಾನಿಸ್ತಾನ ಬೌಲರ್​​​ಗಳ ಮಾರಕ ದಾಳಿಗೆ ನಡುಗಿದ ಪಾಕ್​, 20 ಓವರ್​​​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 92 ರನ್​ ಗಳಿಸಲಷ್ಟೇ ಶಕ್ತವಾಯಿತು.(Afghanistan Cricket Board/Twitter)

ಪಾಕಿಸ್ತಾನ ಬ್ಯಾಟರ್​​​ಗಳು ವೈಫಲ್ಯ ಅನುಭವಿಸಿದರೆ, ಆಫ್ಘನ್​ ಬೌಲರ್​ಗಳು ದರ್ಬಾರ್​ ನಡೆಸಿದರು. ಫಜಲ್ಹಕ್ ಫಾರೂಕಿ, ಮುಜೀಬ್​​, ಮೊಹಮ್ಮದ್​ ನಬಿ ತಲಾ 2 ವಿಕೆಟ್​ ಪಡೆದು ಮಿಂಚಿದರು. ಅಜ್ಮತುಲ್ಲಾ ಒಮರ್ಜಾಯ್, ರಶೀದ್​ ಖಾನ್, ನವೀನ್​ ಉಲ್​ ಹಕ್​ ತಲಾ 1 ವಿಕೆಟ್​ ಪಡೆದರು.
icon

(3 / 6)

ಪಾಕಿಸ್ತಾನ ಬ್ಯಾಟರ್​​​ಗಳು ವೈಫಲ್ಯ ಅನುಭವಿಸಿದರೆ, ಆಫ್ಘನ್​ ಬೌಲರ್​ಗಳು ದರ್ಬಾರ್​ ನಡೆಸಿದರು. ಫಜಲ್ಹಕ್ ಫಾರೂಕಿ, ಮುಜೀಬ್​​, ಮೊಹಮ್ಮದ್​ ನಬಿ ತಲಾ 2 ವಿಕೆಟ್​ ಪಡೆದು ಮಿಂಚಿದರು. ಅಜ್ಮತುಲ್ಲಾ ಒಮರ್ಜಾಯ್, ರಶೀದ್​ ಖಾನ್, ನವೀನ್​ ಉಲ್​ ಹಕ್​ ತಲಾ 1 ವಿಕೆಟ್​ ಪಡೆದರು.(Afghanistan Cricket Board/Twitter)

ಪಾಕಿಸ್ತಾನ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ಆರಂಭದಲ್ಲೇ ಮೊದಲ ಮೂರು ವಿಕೆಟ್​ ಕಳೆದುಕೊಂಡಿತು. ಬಳಿಕ ಮಾಜಿ ನಾಯಕ ಮೊಹಮ್ಮದ್​ ನಬಿ, ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿ ಪಂದ್ಯಕ್ಕೆ ಗೆಲುವಿನ ಮಾಲೆ ತೊಡಿಸಿದರು. ಆ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಫ್ಘನ್​ 1-0ರಲ್ಲಿ ಸರಣಿ ಮುನ್ನಡೆ ಪಡೆದಿದೆ.
icon

(4 / 6)

ಪಾಕಿಸ್ತಾನ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ಆರಂಭದಲ್ಲೇ ಮೊದಲ ಮೂರು ವಿಕೆಟ್​ ಕಳೆದುಕೊಂಡಿತು. ಬಳಿಕ ಮಾಜಿ ನಾಯಕ ಮೊಹಮ್ಮದ್​ ನಬಿ, ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿ ಪಂದ್ಯಕ್ಕೆ ಗೆಲುವಿನ ಮಾಲೆ ತೊಡಿಸಿದರು. ಆ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಫ್ಘನ್​ 1-0ರಲ್ಲಿ ಸರಣಿ ಮುನ್ನಡೆ ಪಡೆದಿದೆ.(Afghanistan Cricket Board/Twitter)

ಪಾಕಿಸ್ತಾನ ತಂಡವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಕಾರಣ, ಯುವ ಆಟಗಾರರೇ ಆಫ್ಘಾನಿಸ್ತಾನ ಸರಣಿಗೆ ಆಯ್ಕೆಯಾಗಿದ್ದಾರೆ. ಬಾಬರ್ ಅಜಮ್, ಮೊಹಮ್ಮದ್​ ರಿಜ್ವಾನ್​, ಶಾನ್ ಮಸೂದ್​, ಶಾಹೀನ್​ ಶಾ ಅಫ್ರೀದಿ ಸೇರಿದಂತೆ ಪ್ರಮುಖರಿಗೆ ರೆಸ್ಟ್​ ನೀಡಲಾಗಿದೆ. ಶದಾಬ್​ ಖಾನ್ ನಾಯಕತ್ವ ವಹಿಸಿಕೊಂಡಿದ್ದಾರೆ.
icon

(5 / 6)

ಪಾಕಿಸ್ತಾನ ತಂಡವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಕಾರಣ, ಯುವ ಆಟಗಾರರೇ ಆಫ್ಘಾನಿಸ್ತಾನ ಸರಣಿಗೆ ಆಯ್ಕೆಯಾಗಿದ್ದಾರೆ. ಬಾಬರ್ ಅಜಮ್, ಮೊಹಮ್ಮದ್​ ರಿಜ್ವಾನ್​, ಶಾನ್ ಮಸೂದ್​, ಶಾಹೀನ್​ ಶಾ ಅಫ್ರೀದಿ ಸೇರಿದಂತೆ ಪ್ರಮುಖರಿಗೆ ರೆಸ್ಟ್​ ನೀಡಲಾಗಿದೆ. ಶದಾಬ್​ ಖಾನ್ ನಾಯಕತ್ವ ವಹಿಸಿಕೊಂಡಿದ್ದಾರೆ.(Afghanistan Cricket Board/Twitter)

ಪಾಕಿಸ್ತಾನ ತಂಡವನ್ನು ಶದಾಬ್​ ಖಾನ್ ಮುನ್ನಡೆಸಿದರೆ, ಆಫ್ಘಾನಿಸ್ತಾನ ತಂಡಕ್ಕೆ ರಶೀದ್​ ಖಾನ್​ ನಾಯಕತ್ವ ವಹಿಸಿಕೊಂಡಿದ್ದರು. ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ನ ನಂತರ ಮೊಹಮ್ಮದ್ ನಬಿ ನಾಯಕತ್ವದಿಂದ ಕೆಳಗಿಳಿದಿದ್ದರು. ಆಗ ರಶೀದ್​ಗೆ ಪಟ್ಟ ಕಟ್ಟಲಾಗಿತ್ತು. ಇದೀಗ ರಶೀದ್​, ಪಾಕಿಸ್ತಾನ ತಂಡವನ್ನು ಸೋಲಿಸಿದ ಆಫ್ಘನ್​​ನ ಮೊದಲ ನಾಯಕ ಎಂಬ ದಾಖಲೆಗೆ ಒಳಗಾಗಿದ್ದಾರೆ.
icon

(6 / 6)

ಪಾಕಿಸ್ತಾನ ತಂಡವನ್ನು ಶದಾಬ್​ ಖಾನ್ ಮುನ್ನಡೆಸಿದರೆ, ಆಫ್ಘಾನಿಸ್ತಾನ ತಂಡಕ್ಕೆ ರಶೀದ್​ ಖಾನ್​ ನಾಯಕತ್ವ ವಹಿಸಿಕೊಂಡಿದ್ದರು. ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ನ ನಂತರ ಮೊಹಮ್ಮದ್ ನಬಿ ನಾಯಕತ್ವದಿಂದ ಕೆಳಗಿಳಿದಿದ್ದರು. ಆಗ ರಶೀದ್​ಗೆ ಪಟ್ಟ ಕಟ್ಟಲಾಗಿತ್ತು. ಇದೀಗ ರಶೀದ್​, ಪಾಕಿಸ್ತಾನ ತಂಡವನ್ನು ಸೋಲಿಸಿದ ಆಫ್ಘನ್​​ನ ಮೊದಲ ನಾಯಕ ಎಂಬ ದಾಖಲೆಗೆ ಒಳಗಾಗಿದ್ದಾರೆ.(Afghanistan Cricket Board/Twitter)


ಇತರ ಗ್ಯಾಲರಿಗಳು