Kannada News  /  Sports  /  All You Need To Know About New Selection Criteria Dexa
ಅಭ್ಯಾಸ ಅವಧಿಯಲ್ಲಿ ಟೀಂ ಇಂಡಿಯಾ
ಅಭ್ಯಾಸ ಅವಧಿಯಲ್ಲಿ ಟೀಂ ಇಂಡಿಯಾ (AP)

What is DEXA: ಆಟಗಾರರ ಆಯ್ಕೆಗೆ ಬಿಸಿಸಿಐ ಹೊಸ ಮಾನದಂಡ; ಎನಿದು ಡೆಕ್ಸಾ ಟೆಸ್ಟ್? ಸಂಪೂರ್ಣ ವಿವರ ಇಲ್ಲಿದೆ

02 January 2023, 14:46 ISTHT Kannada Desk
02 January 2023, 14:46 IST

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಮತ್ತು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಕ್ರಮಗಳ ಕುರಿತು ಚರ್ಚೆಗಳು ನಡೆದವು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯು ಇಂದು(ಭಾನುವಾರ) ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರೊಂದಿಗೆ ಪರಿಶೀಲನಾ ಸಭೆ(review meeting) ನಡೆಸಿತು. 2022ರಲ್ಲಿ ಟೀಂ ಇಂಡಿಯಾದ ಪ್ರದರ್ಶನಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಟ್ರೆಂಡಿಂಗ್​ ಸುದ್ದಿ

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಕ್ರಮಗಳ ಕುರಿತು ಚರ್ಚೆಗಳು ನಡೆದವು.

ಸಭೆಯ ಅಂತ್ಯದ ಬಳಿಕ ಬಿಸಿಸಿಐನಿಂದ ಆಯ್ಕೆ ಮಾನದಂಡಗಳ ಪರಿಷ್ಕರಣೆ ಮತ್ತು ಕೆಲಸದ ಹೊರೆ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಹಲವು ಕ್ರಮಗಳನ್ನು ಘೋಷಿಸಲಾಯಿತು. 'ಯೋ-ಯೋ' ಟೆಸ್ಟ್ ಪುನರಾಗಮನದ ಸುಳಿವು ಸಿಕ್ಕಿದ್ದು, ಇದೇ ವೇಳೆ ಆಟಗಾರರ ಫಿಟ್ನೆಸ್‌ ತಪಾಸಣೆ ಮತ್ತು ಆಟಗಾರರ ಆಯ್ಕೆ ಮಾನದಂಡದ ಭಾಗವಾಗಿ 'DEXA'ವನ್ನು ಘೋಷಿಸಲಾಯಿತು.

ಡೆಕ್ಸಾ (DEXA) ಎಂದರೇನು?

ಡೆಕ್ಸಾ ಅಥವಾ ಡ್ಯುಯಲ್ ಎನರ್ಜಿ ಎಕ್ಸ್-ರೇ ಅಬ್ಸಾರ್ಪ್ಟಿಯೊಮೆಟ್ರಿ (Dual Energy X-ray Absorptiometry) ಎಂಬುದು ಮೂಳೆ ಸಾಂದ್ರತೆಯನ್ನು ಅಳೆಯುವ ಪರೀಕ್ಷೆಯಾಗಿದೆ. ಆಟಗಾರರ ಮೂಳೆಯ ಬಲ ಅಥವಾ ಸಾಮರ್ಥ್ಯವನ್ನು ಅಳೆಯಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಲ್ಲದೆ ಈ ತಪಾಸಣೆಯ ಮೂಲಕ ಮೂಳೆಯಲ್ಲಿ ಸಂಭವನೀಯ ಮುರಿತದ ಮಾಹಿತಿಯನ್ನು ಸಹ ನಿಖರವಾಗಿ ಪಡೆಯಬಹುದು. ಅಂದರೆ, ತಪಾಸಣೆ ನಡೆದ ನಂತರದ ದಿನಗಳಲ್ಲಿ ಆಟಗಾರನ ಮೂಳೆ ಮುರಿತಕ್ಕೊಳಗಾಗುವ ಸಾಧ್ಯತೆ ಇದೆಯೋ ಇಲ್ಲವೋ ಎಂಬುದು ಕೂಡಾ ಈ ಡೆಕ್ಸಾ ಪರೀಕ್ಷೆಯ ಮೂಲಕ ಮುಂಚಿತವಾಗಿ ತಿಳಿದುಬರುತ್ತದೆ.

ಸ್ಕ್ಯಾನ್ ಎರಡು ವಿಧದ ಕಿರಣಗಳನ್ನು ಉತ್ಪಾದಿಸುತ್ತದೆ. ಇದರಲ್ಲಿ ಒಂದು ಹೆಚ್ಚಿನ ಶಕ್ತಿ ಮತ್ತೊಂದು ಕಡಿಮೆ ಶಕ್ತಿಯ ಕಿರಣಗಳು. ಎರಡೂ ಕಿರಣಗಳು ಮೂಳೆಯ ಮೂಲಕ ಹಾದುಹೋಗುತ್ತವೆ. ಕ್ಷ ಕಿರಣಗಳ ಮೂಲಕ ಇದನ್ನು ಮಾಡಲಾಗುತ್ತದೆ. ಹತ್ತು ನಿಮಿಷಗಳ ಒಳಗೆ ಪೂರ್ಣಗೊಳ್ಳುವ ಈ ತಪಾಸಣೆಯಲ್ಲಿ ಆಟಗಾರನ ದೈಹಿಕ ಕ್ಷಮತೆಯ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಅಲ್ಲದೆ ಈ ತಪಾಸಣೆಯಲ್ಲಿ ಆಟಗಾರನಿಗೆ ಯಾವುದೇ ರೀತಿಯಲ್ಲೂ ನೋವಾಗುವುದಿಲ್ಲ.

ಈ ನಡುವೆ ಕೋವಿಡ್ 19 ಬಯೋ ಬಬಲ್‌ನಲ್ಲಿ ಆಡುವಾಗ ಆಟಗಾರರಿಗೆ ಹೆಚ್ಚು ಆಯಾಸವಾಗುತ್ತದೆ ಎಂದು ಯೋ-ಯೋ ಟೆಸ್ಟ್‌ಗಳನ್ನು ಈ ಹಿಂದೆ ಬಿಸಿಸಿಐ ರದ್ದುಗೊಳಿಸಿತ್ತು. ಇನ್ನು ಮುಂದೆ ಇಂತಹ ಯಾವುದೇ ಬಯೋ ಬಬಲ್‌ ನಿರ್ಬಂಧಗಳಿಲ್ಲದೆ ಭಾರತ ತಂಡದಲ್ಲಿ ಯೋ ಯೋ ಟೆಸ್ಟ್‌ ಕಂಬ್ಯಾಕ್‌ ಮಾಡಲಿದೆ.

ಇದರೊಂದಿಗೆ ಬಿಸಿಸಿಐ ಉದಯೋನ್ಮುಖ ಆಟಗಾರರಿಗಾಗಿ ಹೊಸ ನಿಯಮವನ್ನು ಕೂಡ ನಿರ್ದೇಶಿಸಿದೆ. "ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಅರ್ಹತೆ ಪಡೆಯಲು ದೇಶೀಯ ದೇಶೀಯ ಕ್ರಿಕೆಟ್‌ ಆಡಬೇಕಾಗುತ್ತದೆ" ಎಂದು BCCI ಹೇಳಿಕೆ ತಿಳಿಸಿದೆ.

ಗಮನಿಸಬಹುದಾದ ಇತರೆ ಸುದ್ದಿಗಳು

Indian cricket Team Schedule 2023: ಏಕದಿನ ವಿಶ್ವಕಪ್, ಏಷ್ಯಾಕಪ್.. 2023ರಲ್ಲಿ ಟೀಂ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇದು

2022ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮಿಶ್ರ ಫಲಿತಾಂಶಗಳನ್ನು ನೀಡಿದೆ. ದಕ್ಷಿಣ ಆಫ್ರಿಕಾದ ಕೈಯಲ್ಲಿ ಟೆಸ್ಟ್ ಸರಣಿ ಸೋಲಿನೊಂದಿಗೆ ವರ್ಷ ಪ್ರಾರಂಭವಾಯಿತು. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ನೊಂದಿಗೆ ಕೊನೆಗೊಂಡಿತು. ಈ ಹಿನ್ನೆಲೆಯಲ್ಲಿ ಹೊಸ ವರ್ಷ 2023ರಲ್ಲಿ ಭಾರತ ಕ್ರಿಕೆಟ್ ತಂಡದ ಸಂಪೂರ್ಣ ವೇಳಾಪಟ್ಟಿಯನ್ನು ನೋಡೋಣ. ಈ ವರ್ಷವೂ ಏಷ್ಯಾಕಪ್, ಏಕದಿನ ವಿಶ್ವಕಪ್ ಮತ್ತು ಮಹಿಳಾ ಟಿ20 ವಿಶ್ವಕಪ್‌ನಂತಹ ಮೆಗಾ ಟೂರ್ನಿಗಳಿವೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ