ಕನ್ನಡ ಸುದ್ದಿ  /  ಕ್ರೀಡೆ  /  ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

Aman Sehrawat : ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಪ್ಯಾರಿಸ್ ಒಲಿಂಪಿಕ್ಸ್ ಕೋಟಾವನ್ನು ಲಾಕ್ ಮಾಡಿದ್ದಾರೆ. ಆದರೆ ದೀಪಕ್ ಪುನಿಯಾ ವಿಶ್ವ ಅರ್ಹತಾ ಪಂದ್ಯಗಳಲ್ಲಿ ಮೊದಲ ಸುತ್ತಿನಲ್ಲಿ ಸೋತು ಒಲಿಂಪಿಕ್ ಟಿಕೆಟ್ ಕಳೆದುಕೊಂಡರು.

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ಗೆ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ
ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ಗೆ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ವಿಶ್ವ ಕುಸ್ತಿ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ (World Olympic qualifier in Istanbul) ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಏಷ್ಯನ್ ಚಾಂಪಿಯನ್ ಹಾಗೂ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಭಾರತದ ಪರ 2024ರ ಪ್ಯಾರಿಸ್ ಒಲಿಂಪಿಕ್ಸ್​​ಗೆ ಟಿಕೆಟ್ ಪಡೆದುಕೊಂಡಿದ್ದಾರೆ. 

ಟ್ರೆಂಡಿಂಗ್​ ಸುದ್ದಿ

ಅಮನ್ ಪುರುಷರ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಏಕೈಕ ಕುಸ್ತಿಪಟು ಎನಿಸಿದ್ದಾರೆ. ಆದರೆ, ಇದೇ ಅರ್ಹತಾ ಪಂದ್ಯಗಳಲ್ಲಿ ಭಾರತದ ಕುಸ್ತಿಪಟುಗಳಾದ ಜೈದೀಪ್‌ ಅಹ್ಲಾವತ್ ಮತ್ತು ಸುಜೀತ್ ಕಲ್ಕಲ್ ತಮ್ಮ ವಿಭಾಗಗಳ ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಕಾರಣ ಪ್ಯಾರಿಸ್ ಒಲಿಂಪಿಕ್ಸ್​​ಗೆ ಅರ್ಹತೆ ಪಡೆಯಲು ವಿಫಲರಾದರು.

ಭಾರತ ತಂಡದಲ್ಲಿ ಅಪಾರ ಅನುಭವಕ್ಕೆ ಹೆಸರುವಾಸಿಯಾಗಿರುವ ದೀಪಕ್ ಪೂನಿಯಾ, ಚೀನಾದ ಮೊದಲ ಸುತ್ತಿನಲ್ಲಿ ಚೀನಾದ ಜುಶೆನ್ ಲಿನ್ ವಿರುದ್ಧ ಸೋತ ನಂತರ ಪ್ಯಾರಿಸ್​​​ಗೆ ಟಿಕೆಟ್ ಗಿಟ್ಟಿಸಿಕೊಳ್ಳಳು ವಿಫಲರಾದರು.ದೀಪಕ್ ಪುನಿಯಾ (86 ಕೆಜಿ), ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಅತಿ ಕಡಿಮೆ ಅಂತರದಿಂದ ಕಳೆದುಕೊಂಡಿದ್ದರು.

12-2 ರಿಂದ ಗೆದ್ದ ಅಮನ್

ಹಿರಿಯ ಏಷ್ಯನ್ ಚಾಂಪಿಯನ್‌ಷಿಪ್ ಪ್ರಶಸ್ತಿ ವಿಜೇತ ಹಾಗೂ ಅಂಡರ್​- 23 ವಿಶ್ವ ಚಾಂಪಿಯನ್ ಅಮನ್ 57 ಕೆ.ಜಿ. ವಿಭಾಗದ ಸೆಮೀಸ್​​ನಲ್ಲಿ 12–2 ಅಂಕಗಳ ಅಂತರದಿಂದ ಉತ್ತರ ಕೊರಿಯಾದ ಚೊಂಗ್ಸಾಂಗ್ ಹಾನ್ ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. ಹೀಗಾಗಿ ಪ್ಯಾರಿಸ್​ ಒಲಿಂಪಿಕ್ಸ್​​ಗೆ ಪುರುಷರ ವಿಭಾಗದಲ್ಲಿ ಆಯ್ಕೆಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

65 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಅಮೆರಿಕದ ಜೈನ್ ಅಲೆನ್ ರೆಥರ್ಫೋರ್ಡ್ ವಿರುದ್ಧ ಸುಜಿತ್ ಅವರು ಶರಣಾದರು. ಇದರೊಂದಿಗೆ ಪ್ಯಾರಿಸ್ ಟಿಕೆಟ್ ಕಳೆದುಕೊಂಡರು. 74 ಕೆ.ಜಿ ರಿಪಿಚೇಜ್ ಸುತ್ತಿನ ಸ್ಪರ್ಧೆಯಲ್ಲಿ ತುರ್ಕಮೆನಿಸ್ತಾನದ ಅರ್ಸ್ಲಾನ್ ಅಮನ್ಮಿರಾಡೋವ್ ವಿರುದ್ಧ ಗೆದ್ದಿದ್ದ ಜೈದೀಪ್, ತಮ್ಮ ತವರಿನ ನೆಚ್ಚಿನ ಕುಸ್ತಿಪಟು ಡೆಮಿರ್ಟಾಸ್ ವಿರುದ್ಧ 1-2 ಅಂಕಗಳ ಅಂತರದಿಂದ ಸೋಲಿಗೆ ಶರಣಾದರು.

ಮುನ್ನಡೆ ಸಾಧಿಸಿಯೂ ಸೋತ ದೀಪಕ್

ಇದೇ ವೇಳೆ ದೀಪಕ್ ಪುನಿಯಾ 86 ಕೆಜಿ ವಿಭಾಗದಲ್ಲಿ ಕೋಟಾವನ್ನು ಕಳೆದುಕೊಂಡರು. ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ತನ್ನ ಮೊದಲ ಬೌಟ್‌ನಲ್ಲಿ ಒಂದು ಹಂತದಲ್ಲಿ 0-3 ಮುನ್ನಡೆ ಸಾಧಿಸಿದ್ದರೂ 6-4 ರಿಂದ ಚೀನಾದ ಜುಶೆನ್ ಲಿನ್‌ಗೆ ಶರಣಾದರು.

ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ಜುಲೈ 26 ರಿಂದ ಶುರುವಾಗುವ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಭಾರತದ ಆರು ಕುಸ್ತಿಪಟುಗಳು ಅರ್ಹತೆ ಪಡೆದಿದ್ದಾರೆ. ಈ ಪೈಕಿ ಐವರು ಮಹಿಳಾ ಕುಸ್ತಿಪಟುಗಳಿರುವುದು ವಿಶೇಷ. ಒಲಿಂಪಿಕ್ಸ್​ಗೆ ಭಾರತದ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ ಪಡೆದಿರುವುದು ಇದೇ ಮೊದಲು.

ಅರ್ಹತಾ ಸುತ್ತಿನ 68 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ರೊಮೇನಿಯಾದ ಅಲೆಕ್ಸಾಂಡ್ರಾ ಏಂಜೆಲ್ ವಿರುದ್ಧ ಮೇಲುಗೈ ಸಾಧಿಸಿದ ನಂತರ 5ನೇ ಭಾರತೀಯ ಮಹಿಳಾ ಕುಸ್ತಿಪಟುವಾಗಿ ನಿಶಾ ದಹಿಯಾ ಅವರು ಒಲಿಂಪಿಕ್ಸ್​ಗೆ ಅರ್ಹತೆ ಪಡೆದರು.

ವಿಶ್ವ ಅಂಡರ್​-23 ಕಂಚಿನ ಪದಕ ವಿಜೇತೆ ಮತ್ತು ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ನಿಶಾ ದಹಿಯಾ ಅವರು, ಏಂಜೆಲ್ ಅವರನ್ನು 8-4 ಪಾಯಿಂಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿ ಒಲಿಂಪಿಕ್ ಕೋಟಾವನ್ನು ಖಚಿತಪಡಿಸಿಕೊಂಡರು.