1 ಕೋಟಿ ಕಾರು ಕೊಟ್ರು ಸಾಕಾಗಲಿಲ್ಲ; ಕಬ್ಬಡಿ ಆಟಗಾರ ದೀಪಕ್ ಹೂಡಾ ವಿರುದ್ಧ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಕೇಸ್
ಕನ್ನಡ ಸುದ್ದಿ  /  ಕ್ರೀಡೆ  /  1 ಕೋಟಿ ಕಾರು ಕೊಟ್ರು ಸಾಕಾಗಲಿಲ್ಲ; ಕಬ್ಬಡಿ ಆಟಗಾರ ದೀಪಕ್ ಹೂಡಾ ವಿರುದ್ಧ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಕೇಸ್

1 ಕೋಟಿ ಕಾರು ಕೊಟ್ರು ಸಾಕಾಗಲಿಲ್ಲ; ಕಬ್ಬಡಿ ಆಟಗಾರ ದೀಪಕ್ ಹೂಡಾ ವಿರುದ್ಧ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಕೇಸ್

Saweety Boora: ಬಾಕ್ಸರ್ ಸವೀಟಿ ಬೂರಾ ಅವರು ಪತಿ ದೀಪಕ್ ಹೂಡಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕಬ್ಬಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್; ಪತ್ನಿಯೇ ದಾಖಲಿಸಿದ್ರು ದೂರು
ಕಬ್ಬಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್; ಪತ್ನಿಯೇ ದಾಖಲಿಸಿದ್ರು ದೂರು

ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಕ್ಸರ್ ಸವೀಟಿ ಬೂರಾ ಅವರು ತಮ್ಮ ಪತಿ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ವೃತ್ತಿಪರ ಕಬ್ಬಡಿ ಆಟಗಾರ ದೀಪಕ್ ಹಾಗೂ ಅವರ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸವೀಟಿ ಮತ್ತು ದೀಪಕ್ 2022ರಲ್ಲಿ ವಿವಾಹವಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪಕ್, ನನ್ನ ಪತ್ನಿ ವಿರುದ್ಧ ಯಾವುದೇ ನೆಗೆಟಿವ್ ಹೇಳಿಕೆ ನೀಡುವುದಿಲ್ಲ. ಆಕೆಯನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹಾಗಾಗಿ ಪ್ರಕರಣಕ್ಕೆ ಮತ್ತೊಂದು ದಿನಾಂಕ ನೀಡಬೇಕೆಂದು ನ್ಯಾಯಾಲಯ ಕೋರಿರುವುದಾಗಿ ಹೇಳಿದ ದೀಪಕ್, ನಾನು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದೇನೆ. ನಂತರದ ದಿನಾಂಕವನ್ನು ಕೋರಿದ್ದೇನೆ. ನಾನು ಖಂಡಿತವಾಗಿಯೂ ಅಲ್ಲಿಗೆ (ಪೊಲೀಸ್ ಠಾಣೆಗೆ) ಹೋಗುತ್ತೇನೆ. ಆದರೆ ನನ್ನ ಹೆಂಡತಿಯ ವಿರುದ್ಧ ನಕಾರಾತ್ಮಕ ಕಾಮೆಂಟ್ ಮಾಡುವುದಿಲ್ಲ. ನನಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ ಎಂದು ಹೂಡಾ ಪಿಟಿಐಗೆ ತಿಳಿಸಿದ್ದಾರೆ. ದೈಹಿಕ ಹಲ್ಲೆ ನಡೆಸುತ್ತಿದ್ದುದಾಗಿ ಸವೀಟಿ ಬೂರಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಬಿಎನ್​ಎಸ್ ಸೆಕ್ಷನ್ 85 ಅಡಿ ದೂರು ದಾಖಲಾಗಿದೆ.

1 ಕೋಟಿ ರೂ ಕಾರು ಕೊಟ್ಟರೂ ಸಾಕಾಗಲಿಲ್ಲ

2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮೆಹಂ ಕ್ಷೇತ್ರದಿಂದ ಬಿಜೆಪಿ ಪರ ಸ್ಪರ್ಧಿಸಿ ಸೋತಿದ್ದ ದೀಪಕ್, ಈ ಹಿಂದೆ 1 ಕೋಟಿ ರೂಪಾಯಿ ಫಾರ್ಚೂನರ್ ಕಾರಿಗೆ ಬೇಡಿಕೆ ಇಟ್ಟಿದ್ದರಂತೆ. ಅದರಂತೆ ಅದನ್ನು ಪೂರೈಸಿದ್ದರೂ ಅವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಫೆಬ್ರವರಿ 25 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿಸಾರ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೀಮಾ ಮಾಹಿತಿ ನೀಡಿದ್ದಾರೆ. ಹೂಡಾ ಅವರಿಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು ಆದರೆ ಅವರು ಇನ್ನೂ ಹಾಜರಾಗಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 85 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಪತಿ ಅಥವಾ ಕುಟುಂಬವು ಮಹಿಳೆಯ ಮೇಲೆ ಕ್ರೌರ್ಯದಿಂದ ವರ್ತಿಸುವುದಕ್ಕೆ ಸಂಬಂಧಿಸಿದೆ. ಅವರ ಕಬಡ್ಡಿ ವೃತ್ತಿಜೀವನದ ವಿಷಯಕ್ಕೆ ಬಂದರೆ, ಅವರು 2016 ರಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು.

ನವಾರ ವಿರುದ್ಧ ಪ್ರಜ್ಞಾನಂದ ಡ್ರಾ

ಪ್ರಾಗ್: ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರು ಪ್ರಾಗ್ ಚೆಸ್ ಟೂರ್ನಿಯ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಚೆಕ್ ಗಣರಾಜ್ಯದ ಡೇವಿಡ್ ನವಾರ ವಿರುದ್ಧ ಡ್ರಾ ಸಾಧಿಸಿ ಅರ್ಧ ಅಂಕ ಗಳಿಸಿದ್ದಾರೆ. ಸಹಸ್ಪರ್ಧಿ ಭಾರತದವರೇ ಆದ ಅರವಿಂದ್ ಚಿದಂಬರಂ ಅವರು ಚೆಕ್ ಗಣರಾಜ್ಯದ ಎನ್​ಗಯೆನ್ ಥಾಯ್ ಡಾಯ್ ವ್ಯಾನ್ ಎದುರು ಡ್ರಾಗೆ ತೃಪ್ತಿಪಟ್ಟುಕೊಂಡರು. ಇದೇ ವೇಳೆ ಜರ್ಮನಿಯ ವಿನ್ಸೆಂಟ್ ಕೇಮರ್ ಅಗ್ರ ಶ್ರೇಯಾಂಕಿತ ಆಟಗಾರ ಚೀನಾದ ವೈಯಿ ಎದುರು ಜಯ ಸಾಧಿಸಿದರು. ಗುರುವಾರ ಟೂರ್ನಿಯಲ್ಲಿ ಜಯ ದಾಖಲಿಸಿದವರ ಪೈಕಿ ಅಮೆರಿಕದ ಸ್ಯಾಮ್ ಶಾಂಕ್​ ಲ್ಯಾಂಡ್​ರವರು ಸೇರಿದ್ದಾರೆ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.