Kannada News  /  Sports  /  Asian Games 2023 China Beat India In Football Opener Hangzhou India Vs China Rahul Kp Football News In Kannada Jra

ಉದ್ಘಾಟನಾ ಪಂದ್ಯದಲ್ಲೇ ಭಾರತ ಫುಟ್ಬಾಲ್ ತಂಡಕ್ಕೆ ಸೋಲು; ಆತಿಥೇಯ ಚೀನಾಗೆ 5-1 ಗೋಲುಗಳ ಜಯ

ಚೀನಾ ವಿರುದ್ಧ ಭಾರತಕ್ಕೆ ಸೋಲು
ಚೀನಾ ವಿರುದ್ಧ ಭಾರತಕ್ಕೆ ಸೋಲು
Jayaraj • HT Kannada
Sep 19, 2023 07:23 PM IST

India vs China: ಭಾರತದ ಪರ ರಾಹುಲ್ ಕೆಪಿ ಮಾತ್ರ ಏಕೈಕ ಗೋಲು ಗಳಿಸುವಲ್ಲಿ ಯಶಸ್ವಿಯಾದರು.

ಏಷ್ಯನ್‌ ಗೇಮ್ಸ್‌ನ ಮೊದಲ ಪಂದ್ಯದಲ್ಲೇ ಭಾರತ ಫುಟ್ಬಾಲ್‌ ತಂಡವು ಆತಿಥೇಯ ಚೀನಾ ವಿರುದ್ಧ ಹೀನಾಯ ಸೋಲು ಕಂಡಿದೆ. ಹ್ಯಾಂಗ್‌ಝೌನಲ್ಲಿ ಮಂಗಳವಾರ ನಡೆದ ಏಷ್ಯನ್ ಗೇಮ್ಸ್ 2023ರ ಮೊದಲ ಪಂದ್ಯದಲ್ಲಿ, ಚೀನಾ ತಂಡವು ಭಾರತವನ್ನು 5-1 ಗೋಲುಗಳಿಂದ ಸೋಲಿಸಿತು.

ಟ್ರೆಂಡಿಂಗ್​ ಸುದ್ದಿ

ಚೀನಾ ಪರ ಕಿಯಾಂಗ್‌ಲಾಂಗ್ ಟಾವೊ ಎರಡು ಗೋಲು ಗಳಿಸಿದರೆ, ಗಾವೊ ತಿಯಾನಿ, ವೈಜುನ್ ಡೈ ಮತ್ತು ಹಾವೊ ಫಾಂಗ್ ತಲಾ ಒಂದು ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಭಾರತದ ಪರ ರಾಹುಲ್ ಕೆಪಿ ಮಾತ್ರ ಏಕೈಕ ಗೋಲು ಗಳಿಸುವಲ್ಲಿ ಯಶಸ್ವಿಯಾದರು.

ಆತಿಥೇಯರ ಪರ ಗಾವೊ ತಿಯಾನಿ 17ನೇ ನಿಮಿಷದಲ್ಲಿ ಗೋಲು ಗಳಿಸಿ ಪಾಶ್ಚಿಮಾತ್ಯರಿಗೆ ಮೊದಲ ಮುನ್ನಡೆ ತಂದುಕೊಟ್ಟರು. ಆ ಬಳಿಕ ಡೈ ವೈಜುನ್ 51ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿದರು. 72 ಮತ್ತು 75ನೇ ನಿಮಿಷದಲ್ಲಿ ಟಾವೊ ಕಿಯಾಂಗ್‌ಲಾಂಗ್ ಎರಡು ಗೋಲು ಕಲೆ ಹಾಕಿದರು. ದ್ವಿತಿಯಾರ್ಧದಲ್ಲಿ ಹಾವೊ ಫಾಂಗ್ 90ನೇ ನಿಮಿಷದಲ್ಲಿ ಗೋಲು ಗಳಿಸಿದರು. ಭಾರತದ ಪರ ರಾಹುಲ್ ಕೆಪಿ ಮೊದಲಾರ್ಧದ 45 ನಿಮಿಷದಲ್ಲಿ ಭಾರತಕ್ಕೆ ಏಕೈಕ ಮುನ್ನಡೆ ತಂದುಕೊಟ್ಟರು.

ಸೋಲಿಗೆ ಪ್ರಮುಖ ಕಾರಣ

ವಾತಾವರಣ ಮತ್ತು ತರಬೇತಿಗೆ ಸಮಯದ ಕೊರತೆಯು, ಭಾರತದ ಸೋಲಿನಲ್ಲಿ ಎದ್ದು ಕಾಣುತ್ತಿದೆ. ಬಹಳಷ್ಟು ಆಟಗಾರರು ಮೈದಾನದ ತೇವಾಂಶದ ಕಾರಣದಿಂದಾಗಿ ಸೆಳೆತದಿಂದ ಬಳಲುತ್ತಿದ್ದರು. ಭಾರತ ತಂಡದ ಆಟಗಾರರಲ್ಲಿ ಬಹುತೇಕ ಆಟಗಾರರಯ ತಾವು ಪ್ರತಿನಿಧಿಸುವ ಐಎಸ್‌ಎಲ್‌ (ISL) ಕ್ಲಬ್‌ಗಳ ಮೊದಲ ಆಯ್ಕೆಯ ಬದಲಿ ಆಟಗಾರರಲ್ಲ (substitutes). ಮತ್ತೊಂದೆಡೆ, ಪಂದ್ಯಕ್ಕೆ ತಂಡದ ಫಿಟ್‌ನೆಸ್ ಒಂದು ದೊಡ್ಡ ಸಮಸ್ಯೆಯಾಗಿತ್ತು ಎಂಬುದು ಸ್ಪಷ್ಟವಾಗಿದೆ.

ಭಾರತ ತಂಡದ ನಾಯಕ ಸುನಿಲ್ ಛೆಟ್ರಿ ಅವರು 85 ನಿಮಿಷಗಳ ಕಾಲ ಪಿಚ್‌ನಲ್ಲಿದ್ದರು. ಆದರೆ, ತಂಡದ ಪರ ಗೋಲು ಗಳಿಸಲು ಅವರಿಂದ ಸಾಧ್ಯವಾಗಲಿಲ್ಲ.

ಚೀನಾ ವಿರುದ್ಧದ ಸೋಲಿನ ನಂತರ ಭಾರತವು ಗುರುವಾರ ಬಾಂಗ್ಲಾದೇಶ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದೆ. ಅದಾದ ಬಳಿಕ ಮುಂದಿನ ಭಾನುವಾರ ಮಯನ್ಮಾರ್ ವಿರುದ್ಧ ಮತ್ತೊಂದು ಪಂದ್ಯ ನಡೆಯಲಿದೆ. ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಭಾರತ ಈಗ ಉಳಿದಿರುವ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಮಯನ್ಮಾರ್ ತಂಡಗಳನ್ನು ಸೋಲಿಸಬೇಕಾಗಿದೆ. ಈ ಗುಂಪಿನ ಇನ್ನೊಂದು ಪಂದ್ಯದಲ್ಲಿ ಮಯನ್ಮಾರ್ ತಂಡವು ಈಗಾಗಲೇ ಬಾಂಗ್ಲಾದೇಶವನ್ನು 4-2 ಅಂತರದಿಂದ ಸೋಲಿಸಿದೆ.