ಕನ್ನಡ ಸುದ್ದಿ  /  Sports  /  Asian Games 2023 Indian Men Beat Bangladesh And Women Team Beat South Korea In Kabaddi Asian Games News In Kannada Jra

ಭಾರತ ಕಬಡ್ಡಿ ತಂಡಗಳ ಭರ್ಜರಿ ಬೇಟೆ; ಬಾಂಗ್ಲಾ ವಿರುದ್ಧ ಪುರುಷರ ತಂಡ, ದಕ್ಷಿಣ ಕೊರಿಯಾ ವಿರುದ್ಧ ಮಹಿಳಾ ತಂಡಕ್ಕೆ ಜಯ

Asian Games 2023: ದಾಖಲೆಯ ಏಳು ಬಾರಿ ಚಾಂಪಿಯನ್ ಆಗಿರುವ ಭಾರತ ಪುರುಷರ ಕಬಡ್ಡಿ ತಂಡವು, ಎ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 55-18 ಅಂಕಗಳಿಂದ ಭರ್ಜರಿ ಜಯ ಸಾಧಿಸಿದೆ.

ಭಾರತ ವನಿತೆಯರ ಕಬಡ್ಡಿ ತಂಡ
ಭಾರತ ವನಿತೆಯರ ಕಬಡ್ಡಿ ತಂಡ (PTI)

ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತ ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿವೆ. ಎರಡೂ ತಂಡಗಳು ಮಂಗಳವಾರದ ತಮ್ಮ ಗುಂಪು ಹಂತದ ಪಂದ್ಯಗಳಲ್ಲಿ ಬೃಹತ್‌ ಜಯ ಸಾಧಿಸಿವೆ.

ದಾಖಲೆಯ ಏಳು ಬಾರಿ ಚಾಂಪಿಯನ್ ಆಗಿರುವ ಭಾರತ ಪುರುಷರ ಕಬಡ್ಡಿ ತಂಡವು, ಎ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 55-18 ಅಂಕಗಳಿಂದ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಗೆಲುವಿನ ಅಭಿಯಾನ ಆರಂಭಿಸಿದೆ.

ಅತ್ತ ಮಹಿಳೆಯರ ತಂಡವು ತನ್ನ ಗುಂಪು ಹಂತದ ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 56-23 ಅಂಕಗಳ ಅಂತರದಿಂದ ಗೆಲುವು ದಾಖಲಿಸಿದೆ. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ, ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತ ಭಾರತ ತಂಡವು ಚೈನೀಸ್ ತೈಪೆ ವಿರುದ್ಧ 34-34 ಅಂಕಗಳಿಂದ ಅಚ್ಚರಿಯ ಡ್ರಾ ಸಾಧಿಸಿತ್ತು.

2018ರ ಏಷ್ಯನ್‌ ಗೇಮ್ಸ್ ಆವೃತ್ತಿಯಲ್ಲಿ ಕಂಚಿನ ಪದಕಕ್ಕೆ ಕುಸಿದಿದ್ದ ಭಾರತೀಯ ಪುರುಷರ ತಂಡವು‌, ಈ ಬಾರಿ ಚಿನ್ನದ ಪದಕವನ್ನು ಮತ್ತೆ ಪಡೆಯುವ ಪ್ರಯತ್ನದಲ್ಲಿದೆ.

ಬಾಂಗ್ಲಾದೇಶವು ಮೊದಲಾರ್ಧದಲ್ಲಿ ಪವನ್ ಸೆಹ್ರಾವತ್ ಮತ್ತು ಗೋಯತ್ ಅವರನ್ನು ಸೂಪರ್ ಟ್ಯಾಕಲ್ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಭಾರತವು 20 ನಿಮಿಷಗಳಲ್ಲಿ 12 ಅಂಕಗಳ ಮುನ್ನಡೆ ಸಾಧಿಸಿದ್ದರಿಂದ ಬಾಂಗ್ಲಾದೇಶದ ಅಂಕ ಸಾಕಾಗಲಿಲ್ಲ. ದ್ವಿತೀಯಾರ್ಧದಲ್ಲಿ ಭಾರತೀಯರು ತಮ್ಮ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿದರು. ಆ ಬಳಿಕ ಬಾಂಗ್ಲಾದೇಶವು ತಮ್ಮ ದಾಳಿಯಲ್ಲಿ ಎಡವಿತು.

ಪುರುಷರ ವಿಭಾಗದಲ್ಲಿ ಭಾರತ ತಂಡದೊಂದಿಗೆ ಬಾಂಗ್ಲಾದೇಶ, ಚೈನೀಸ್ ತೈಪೆ, ಥಾಯ್ಲೆಂಡ್ ಮತ್ತು ಜಪಾನ್ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಇರಾನ್, ಕೊರಿಯಾ, ಪಾಕಿಸ್ತಾನ ಮತ್ತು ಮಲೇಷ್ಯಾ ಬಿ ಗುಂಪಿನಲ್ಲಿವೆ.

Asian Games: ಚೈನೀಸ್‌ ತೈಪೆ ವಿರುದ್ಧ ಅಚ್ಚರಿಯ ಡ್ರಾ ಸಾಧಿಸಿದ ಭಾರತ ವನಿತೆಯರ ಕಬಡ್ಡಿ ತಂಡ

ಹಾಂಕಾಂಗ್ ವಿರುದ್ಧ 13-0 ಅಂತರದ ಗೆಲುವು; ಸೆಮಿಫೈನಲ್‌ ಲಗ್ಗೆ ಇಟ್ಟ ಭಾರತ ಮಹಿಳೆಯರ ಹಾಕಿ ತಂಡ

ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳೆಯರ ಹಾಕಿ ಪಂದ್ಯದಲ್ಲಿ ಭಾರತ ತಂಡವು (Indian women's hockey team) ಸೆಮಿಫೈನಲ್‌ ಪ್ರವೇಶಿಸಿದೆ. ಹಾಂಗ್‌ಝೌನಲ್ಲಿ ನಡೆದ ಪೂಲ್‌ ಎ ಪಂದ್ಯದಲ್ಲಿ ಹಾಂಕಾಂಗ್‌ ಚೀನಾ (Hong Kong China) ವಿರುದ್ಧ ಭಾರತ ಮಹಿಳಾ ಹಾಕಿ ತಂಡ 13-0 ಅಂತರದ ಭರ್ಜರಿ ಜಯ ಸಾಧಿಸಿದೆ. ಪರುಷರ ತಂಡದಂತೆ ವನಿತೆಯರ ತಂಡ ಕೂಡಾ ಎರಡಂಕಿ ಗೋಲುಗಳನ್ನು ಗಳಿಸಿ ಭರ್ಜರಿ ಪ್ರದರ್ಶನ ನೀಡಿದೆ.