ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ 15ನೇ ಸ್ಥಾನಕ್ಕೇರಿದ ಲಕ್ಷ್ಯ ಸೇನ್‌; ಪ್ಯಾರಿಸ್ ಒಲಿಂಪಿಕ್ಸ್‌ ಕನಸು ಜೀವಂತ
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ 15ನೇ ಸ್ಥಾನಕ್ಕೇರಿದ ಲಕ್ಷ್ಯ ಸೇನ್‌; ಪ್ಯಾರಿಸ್ ಒಲಿಂಪಿಕ್ಸ್‌ ಕನಸು ಜೀವಂತ

ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ 15ನೇ ಸ್ಥಾನಕ್ಕೇರಿದ ಲಕ್ಷ್ಯ ಸೇನ್‌; ಪ್ಯಾರಿಸ್ ಒಲಿಂಪಿಕ್ಸ್‌ ಕನಸು ಜೀವಂತ

Lakshya Sen:‌ ಒಲಿಂಪಿಕ್ಸ್ ಕ್ರೀಡಾಕೂಟದ ಅರ್ಹತಾ ಶ್ರೇಯಾಂಕದಲ್ಲಿ 15ನೇ ಸ್ಥಾನ ಗಳಿಸಿರುವ ಭಾರತದ ಪ್ರಮುಖ ಬ್ಯಾಡ್ಮಿಂಟನ್‌ ಆಟಗಾರ ಲಕ್ಷ್ಯ ಸೇನ್, ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡುವ ಭರವಸೆಯಲ್ಲಿದ್ದಾರೆ.

ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ 15ನೇ ಸ್ಥಾನಕ್ಕೇರಿದ ಲಕ್ಷ್ಯ ಸೇನ್‌
ಒಲಿಂಪಿಕ್ ಅರ್ಹತಾ ಶ್ರೇಯಾಂಕದಲ್ಲಿ 15ನೇ ಸ್ಥಾನಕ್ಕೇರಿದ ಲಕ್ಷ್ಯ ಸೇನ್‌ (AFP)

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ (Lakshya Sen), ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶ ಹೆಚ್ಚಿಸಿದೆ. ಇತ್ತೀಚಿನ ಒಲಿಂಪಿಕ್ಸ್ ಕ್ರೀಡಾಕೂಟದ ಅರ್ಹತಾ ಶ್ರೇಯಾಂಕದಲ್ಲಿ 15ನೇ ಸ್ಥಾನ ಗಳಿಸಿರುವ ಭಾರತದ ಪ್ರಮುಖ ಬ್ಯಾಡ್ಮಿಂಟನ್‌ ಆಟಗಾರ, ಜಾಗತಿಕ ಕ್ರೀಡಾಕೂಟದಲ್ಲಿ ಆಡುವ ಭರವಸೆಯಲ್ಲಿದ್ದಾರೆ. ಕಳೆದ ವಾರ ಅಂತ್ಯವಾದ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ್ದ 22 ವರ್ಷದ ಆಟಗಾರ, 2022ರ ನವೆಂಬರ್‌ನಲ್ಲಿ ವಿಶ್ವದ ಆರನೇ ಶ್ರೇಯಾಂಕ ತಲುಪಿದ್ದರು. ಅದು ಅವರ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾಗಿತ್ತು.

ಕಳೆದ ವರ್ಷದ ಏಪ್ರಿಲ್‌ ತಿಂಗಳಲ್ಲಿ ವಿಶ್ವದ ನಂಬರ್‌ 25ನೇ ಶ್ರೇಯಾಂಕಕ್ಕೆ ಕುಸಿದ ಆಟಗಾರ, ಆಗಸ್ಟ್ ವೇಳೆಗೆ 11ನೇ ಸ್ಥಾನಕ್ಕೇರಿದರು. ಮತ್ತೆ ಸೋಲುಗಳ ಬಳಿಕ ಈ ವರ್ಷದ ಆರಂಭದಲ್ಲಿ 20ಕ್ಕೆ ಕುಸಿದರು. ‌

ಮಲೇಷ್ಯಾ ಸೂಪರ್ 1000 ಮತ್ತು ಇಂಡಿಯಾ ಸೂಪರ್ 750 ಟೂರ್ನಿಯಲ್ಲಿ ಮೊದಲ ಸುತ್ತಿನ ಸೋತು ನಿರ್ಗಮಿಸಿದ ಆಟಗಾರ, ಒಲಿಂಪಿಕ್ ಕ್ರೀಡಾಕೂಟದ ಅರ್ಹತೆಯಲ್ಲಿ ವಿಶ್ವದ ನಂಬರ್‌ 19ರ ಸ್ಥಾನದಲ್ಲಿದ್ದರು. ಆದರೆ ಕಳೆದ ವಾರ ‌ ಪ್ಯಾರಿಸ್‌ನಲ್ಲಿ ನಡೆದ ಸೂಪರ್ 750 ಈವೆಂಟ್‌ನಲ್ಲಿ ಸೆಮಿಫೈನಲ್ ತಲಲುಪಿದ ಬಳಿಕ ತಮ್ಮ ಅಂಕವನ್ನು ಹೆಚ್ಚಿಸಿಕೊಂಡರು.

ಇದನ್ನೂ ಓದಿ | ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಆಸ್ಕರ್‌ ಅವಾರ್ಡ್ ಘೋಷಿಸಲು ನಗ್ನವಾಗಿ ಬಂದ WWE ಸ್ಟಾರ್ ಜಾನ್ ಸೆನಾ; ವಿಡಿಯೋ ವೈರಲ್

2021ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಆಟಗಾರ, ಮಂಗಳವಾರ ಬಿಡುಗಡೆಯಾದ ಬಿಡಬ್ಲ್ಯುಎಫ್ ವಿಶ್ವ ಶ್ರೇಯಾಂಕದಲ್ಲಿ ವಿಶ್ವದ 15ನೇ ಸ್ಥಾನಕ್ಕೆ ಏರಿದರು. ಏಪ್ರಿಲ್ ಅಂತ್ಯದ ವೇಳೆಗೆ ವಿಶ್ವದ ಅಗ್ರ 16 ಶ್ರೇಯಾಂಕದಲ್ಲಿರುವ ಆಟಗಾರರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ.

ಪ್ಯಾರಿಸ್‌ನಲ್ಲಿ ನಡೆದ ಫ್ರೆಂಚ್‌ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿವಿ ಸಿಂಧು, 60742 ಅಂಕಗಳೊಂದಿಗೆ ಪ್ಯಾರಿಸ್‌ ಒಲಂಪಿಕ್ಸ್ ಅರ್ಹತೆಯಲ್ಲಿ 13ನೇ ಶ್ರೇಯಾಂಕ ಪಡೆದಿದ್ದಾರೆ.

ಇದನ್ನೂ ಓದಿ | ಫ್ರೆಂಚ್ ಓಪನ್ 2024: ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತದ ಸಾತ್ವಿಕ್​ರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.