ಭಾರತದ 28 ಶಟ್ಲರ್‌ಗಳಿಗೆ ಬಿಎಐ ಧನಸಹಾಯ; ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲು ನೆರವು
BAI to fund 28 shuttlers: ಭಾರತದ ಹಲವು ಶಟ್ಲರ್‌ಗಳಿಗೆ ಧನಸಹಾಯ ನೀಡಲು ಬಿಎಐ ನಿರ್ಧರಿಸಿದೆ. ಆಯ್ಕೆಯಾದ ಆಟಗಾರರಿಗೆ ಎರಡು ಸೂಪರ್ 300 ಈವೆಂಟ್‌ಗಳು ಸೇರಿದಂತೆ ಮೂರು ಪಂದ್ಯಾವಳಿಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.
ಈ ವರ್ಷ (2024) ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡುವ ಸಲುವಾಗಿ ಭಾರತದ 28 ಶಟ್ಲರ್‌ಗಳಿಗೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ಧನಸಹಾಯ ನೀಡಲು ನಿರ್ಧರಿಸಿದೆ. ಹಿರಿಯ ರಾಷ್ಟ್ರೀಯ ಪುರುಷರ ಮತ್ತು ಮಹಿಳಾ ವಿಭಾಗ ಚಾಂಪಿಯನ್‌ಗಳಾದ ಚಿರಾಗ್ ಸೇನ್ ಮತ್ತು ಅನ್ಮೋಲ್ ಖಾರ್ಬ್ ಸೇರಿದಂತೆ ಹಲವು ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ.
ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ 26ರಿಂದ 75ನೇ ಸ್ಥಾನದಲ್ಲಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರರು ಮತ್ತು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸದ ಹಿರಿಯ ಆಟಗಾರರು ಈ ಅವಕಾಶದಿಂದ ನೆರವು ಪಡೆಯಲಿದ್ದಾರೆ. ಗ್ರಾಮೀಣ ವಿದ್ಯುದ್ದೀಕರಣ ನಿಗಮ (REC)ದೊಂದಿಗೆ ಬಿಎಐ ಸಹಭಾಗಿತ್ವದಿಂದ ಈ ಧನಸಹಾಯ ದೊರೆಯಲಿದೆ.
“ರಾಷ್ಟ್ರೀಯ ಶಿಬಿರದ ಭಾಗವಾಗಿರದಿದ್ದರೂ ದೇಶದ ಭರವಸೆಯ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅಗತ್ಯ ಬೆಂಬಲ ನೀಡಲು ಬಿಎಐ ಬದ್ಧವಾಗಿದೆ” ಎಂದು BAI ಕಾರ್ಯದರ್ಶಿ ಸಂಜಯ್ ಮಿಶ್ರಾ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಸೈಕ್ಲಿಂಗ್ ಕಲರವಕ್ಕೆ ಸಜ್ಜಾದ ಸೈಕ್ಲಿಂಗ್ ತವರು ವಿಜಯಪುರ; ಜನವರಿ 9ರಿಂದ ರಾಷ್ಟ್ರೀಯ ಚಾಂಪಿಯನ್‌ಶಿಪ್
ಧನಸಹಾಯಕ್ಕೆ ಆಯ್ಕೆಯಾದ ಆಟಗಾರರಿಗೆ ಎರಡು ಸೂಪರ್ 300 ಈವೆಂಟ್‌ಗಳು ಸೇರಿದಂತೆ ಮೂರು ಪಂದ್ಯಾವಳಿಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಓರ್ಲಿಯನ್ಸ್ ಮಾಸ್ಟರ್ಸ್ ಮತ್ತು ಸ್ವಿಸ್ ಓಪನ್ ಸೇರಿದಂತೆ ಒಟ್ಟು ಎಂಟು ಪಂದ್ಯಾವಳಿಗಳಿಂದ ಮೂರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ BAI ಪ್ರತಿ ಶಟ್ಲರ್‌ಗಳಿಗೆ ಸಂಪೂರ್ಣ ಹಣಕಾಸಿನ ನೆರವು ನೀಡುತ್ತದೆ.
ಆಟಗಾರರ ಸಂಪೂರ್ಣ ಪಟ್ಟಿ
ಪುರುಷರ ಸಿಂಗಲ್ಸ್
1. ಸತೀಶ್ ಕುಮಾರ್ ಕರುಣಾಕರನ್ (ವಿಶ್ವ ರ‍್ಯಾಂಕ್ 51)
2. ಎಸ್ ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ (71)
3. ಸಮೀರ್ ವರ್ಮಾ (74)
4. ಚಿರಾಗ್ ಸೇನ್ (ಸೀನಿಯರ್ ನ್ಯಾಷನಲ್ಸ್ ಚಾಂಪಿಯನ್)
5. ತರುಣ್ ಮನ್ನೆಪಲ್ಲಿ (ಸೀನಿಯರ್ ನ್ಯಾಷನಲ್ಸ್ ರನ್ನರ್ ಅಪ್)
ಮಹಿಳಾ ಸಿಂಗಲ್ಸ್
1. ಆಕರ್ಷಿ ಕಶ್ಯಪ್ (ವಿಶ್ವ ರ‍್ಯಾಂಕ್ 40)
2. ಮಾಳವಿಕಾ ಬನ್ಸೋಡ್ (52)
3. ಉನ್ನತಿ ಹೂಡಾ(ವಿಶ್ವ ರ‍್ಯಾಂಕ್ 56)
4. ತಾನ್ಯಾ ಹೇಮಂತ್ (ವಿಶ್ವ ರ‍್ಯಾಂಕ್ 69)
5. ತಸ್ನಿಮ್ ಮಿರ್ (73)
6. ಇಮಾದ್ ಫಾರೂಕಿ ಸಮಿಯಾ (74)
7. ಅನ್ಮೋಲ್ ಖಾರ್ಬ್ (ಹಿರಿಯ ರಾಷ್ಟ್ರೀಯ ಚಾಂಪಿಯನ್)
8. ತನ್ವಿ ಶರ್ಮಾ (ಹಿರಿಯ ರಾಷ್ಟ್ರೀಯ ರನ್ನರ್ ಅಪ್)
ಪುರುಷರ ಡಬಲ್ಸ್
1. ಹರಿಹರನ್ ಅಂಶಕರುಣನ್/ ರುಬನ್ ಕುಮಾರ್ ರೆತಿನಸಬಾಪತಿ (70)
2. ಪಿಎಸ್ ರವಿಕೃಷ್ಣ/ ಶಂಕರ್ ಪ್ರಸಾದ್ ಉದಯಕುನಾರ್ (75)
3. ಸೂರಜ್ ಗೋಲಾ/ ಪೃಥ್ವಿ ಕೃಷ್ಣಮೂರ್ತಿ ರಾಯ್ (ಸೀನಿಯರ್ ನ್ಯಾಷನಲ್ಸ್ ಚಾಂಪಿಯನ್ಸ್)
ಇದನ್ನೂ ಓದಿ | ಸಾಕ್ಷಿ, ಬಜರಂಗ್, ವಿನೇಶ್ ವಿರುದ್ಧ ಜೂನಿಯರ್ ಕುಸ್ತಿಪಟುಗಳ ಪ್ರತಿಭಟನೆ; ರಸ್ಲಿಂಗ್ ಚಟುವಟಿಗೆ ಪುನರಾರಂಭಕ್ಕೆ ಒತ್ತಾಯ
ಮಹಿಳಾ ಡಬಲ್ಸ್
1. ಅಶ್ವಿನಿ ಭಟ್ ಕೆ/ ಶಿಖಾ ಗೌತಮ್ (49)
2. ರುತಪರ್ಣ ಪಾಂಡಾ/ ಶ್ವೇತಪರ್ಣ ಪಾಂಡಾ (52)
3. ಸಿಮ್ರಾನ್ ಸಿಂಗ್/ ರಿತಿಕಾ ಥಾಕರ್ (63)
4. ಪ್ರಿಯಾ ಕೊಂಜೆಂಗ್ಬಾಮ್/ ಶ್ರುತಿ ಮಿಶ್ರಾ (ಹಿರಿಯ ರಾಷ್ಟ್ರೀಯ ಚಾಂಪಿಯನ್ಸ್)
ಮಿಶ್ರ ಡಬಲ್ಸ್
1. ಸತೀಶ್ ಕುಮಾರ್ ಕರುಣಾಕರನ್/ಆದ್ಯ ವರಿಯತ್ (64).
ವಿಡಿಯೋ ನೋಡಿ | Kaatera : ದುಬೈನಲ್ಲೂ ಡಿಬಾಸ್ ಅಭಿನಯದ ಕಾಟೇರನ ಅಬ್ಬರ ; ಸಿನಿಮಾ ನೋಡಿ ಖುಷಿ ಪಟ್ಟ ಕನ್ನಡಿಗರು
ವಿಭಾಗ