ಕನ್ನಡ ಸುದ್ದಿ  /  Sports  /  Bcci To Use <Span Class='webrupee'>₹</span>500 Crore For Upgrading 5 Major Stadiums Ahead Of Odi World Cup Prs

BCCI: ಐದು ಸ್ಟೇಡಿಯಂಗಳ ದುರಸ್ಥಿಗೆ ಬಿಸಿಸಿಐ ನೀಡ್ತಿದೆ ಬರೋಬ್ಬರಿ 500 ಕೋಟಿ! ಯಾಕೆ ಗೊತ್ತಾ?

BCCI: 15 ವರ್ಷಗಳನ್ನು ಪೂರ್ಣಗೊಳಿಸಿರುವ ಐಪಿಎಲ್​​​, ಪ್ರಸ್ತುತ ಯಶಸ್ವಿ 16ನೇ ಆವೃತ್ತಿ ನಡೆಯುತ್ತಿದೆ. 2008ರಲ್ಲಿ ಜನ್ಮ ತಾಳಿದ ಮಿಲಿಯನ್​ ಡಾಲರ್ ಟೂರ್ನಿ ಅತಿ ದೊಡ್ಡ ಕ್ರಿಕೆಟ್​ ಲೀಗ್​ ಎಂದೇ ಬಿಂಬಿಸಿಕೊಂಡಿದೆ. ಈ ನಡುವೆ ವಿಶ್ವದ ಶ್ರೀಮಂತ ಕ್ರಿಕೆಟ್‌ T20 ಲೀಗ್‌ ಆಯೋಜಿಸಲು ಸೌದಿ ಅರೇಬಿಯಾ ಚಿಂತನೆ ನಡೆಸಿದೆ.

ಈಡನ್​ ಗಾರ್ಡನ್​ ಮೈದಾನ
ಈಡನ್​ ಗಾರ್ಡನ್​ ಮೈದಾನ (ICC)

ಪ್ರಸ್ತುತ 16ನೇ ಆವೃತ್ತಿಯ ಐಪಿಎಲ್​ ನಡೆಯುತ್ತಿದೆ. ಇದರ ಬಳಿಕ ಟೀಮ್​​ ಇಂಡಿಯಾ (Team India) ರಾಷ್ಟ್ರೀಯ ಸೇವೆಯಲ್ಲಿ ನಿರತವಾಗಲಿದೆ. ಪ್ರಮುಖವಾಗಿ ಏಕದಿನ ವಿಶ್ವಕಪ್​ಗೆ (ODI World Cup) ಭರ್ಜರಿ ತಯಾರಿ ನಡೆಸಲಿದೆ. ಈ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಶುರುವಾಗಲಿರುವ ಏಕದಿನ ವಿಶ್ವಕಪ್​ಗೆ ಭಾರತವೇ ಆತಿಥ್ಯ ವಹಿಸುತ್ತಿದೆ. ಅದಕ್ಕೂ ಮುನ್ನ ಮೂಲ ಸೌಕರ್ಯಗಳಿಂದ ದೂರವಿರುವ ಕ್ರೀಡಾಂಗಣಗಳ ನವೀಕರಣಕ್ಕೆ ಬಿಸಿಸಿಐ (BCCI) ಬಯಸಿದೆ.

ಪ್ರಸ್ತುತ ಐಪಿಎಲ್​​ನ (IPL) ಪಂದ್ಯಗಳು 12 ಮೈದಾನಗಳಲ್ಲಿ ನಡೆಯುತ್ತಿದೆ. ಆದರೆ ಈ ವೇಳೆ ಮತ್ತು ಅದಕ್ಕೂ ಹಿಂದಿನ ಸರಣಿಗಳಲ್ಲಿ ಪ್ರೇಕ್ಷಕರಿಂದ ದೂರು ಕೇಳಿ ಬಂದಿದೆ. ಸ್ಟೇಡಿಯಂಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಶೌಚಾಲಯ, ಆಸನ, ಲೈಟಿಂಗ್​ ವ್ಯವಸ್ಥೆ ಸೇರಿದಂತೆ ಪ್ರಮುಖ ಸಮಸ್ಯೆಗಳಿಂದ ಕಿರಿಕಿರಿ ಉಂಟಾಗಿದೆ ಎಂದು ಕ್ರಿಕೆಟ್​​ ಪ್ರಿಯರು ಸಾಮಾಜಿಕ ಜಾಲತಾಣಗಳ ದೂರು ಮೂಲಕ ನೀಡಿದ್ದಾರೆ.

ಪ್ರೇಕ್ಷಕರು ನೀಡಿದ ದೂರಿನ ಮೇರೆಗೆ ನವೀಕರಣಕ್ಕಾಗಿ ಬಿಸಿಸಿಐ ಒಟ್ಟು ಐದು ಕ್ರೀಡಾಂಗಣಗಳನ್ನು ಆಯ್ಕೆ ಮಾಡಿಕೊಂಡಿದೆ. ಈ 5 ಕ್ರೀಡಾಂಗಣಗಳ ಮರು ಅಭಿವೃದ್ಧಿಗೆ ಒಟ್ಟು 500 ಕೋಟಿ ರೂಪಾಯಿಗೂ ಖರ್ಚು ಮಾಡಲು ಬಿಸಿಸಿಐ ಮುಂದಾಗಿದೆ. ಏಕದಿನ ವಿಶ್ವಕಪ್​​ ಆರಂಭವಾಗುವುದರೊಳಗೆ ಹೊಸ ಟಚ್ ಕೊಡಲು ನಿರ್ಧರಿಸಿದೆ.

ಬಿಸಿಸಿಐ ನವೀಕರಣ ಮಾಡಲು ಬಯಸಿರುವ ಕ್ರೀಡಾಂಗಣಗಳ ಪೈಕಿ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣವೂ ಒಂದು. ಫೆಬ್ರವರಿ - ಮಾರ್ಚ್‌ನಲ್ಲಿ ಭಾರತ - ಆಸ್ಟ್ರೇಲಿಯಾ ಮಧ್ಯೆ ನಡೆದ ಬಾರ್ಡರ್- ಗವಾಸ್ಕರ್ ಸರಣಿಯ ಸಂದರ್ಭದಲ್ಲಿ ಕ್ರಿಕೆಟರ್​ ಪ್ರಿಯರು ಸ್ಟೇಡಿಯಂಗಳ ಶೌಚಾಲಯಗಳ ಬಗ್ಗೆ ದೂರು ನೀಡಿದ್ದರು. ಅದಕ್ಕಾಗಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ದುರಸ್ಥಿತಿಗೆ ಬಿಸಿಸಿಐ 100 ಕೋಟಿ ಮೀಸಲಿಟ್ಟಿದೆ.

ಮುಂಬೈನ ವಾಂಖೆಡೆಗೆ ಮೈದಾನದ ನವೀಕರಣಕ್ಕೆ 78 ಕೋಟಿ 82 ಲಕ್ಷ ಮೀಸಲಿಡಲಾಗಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದ ಅಭಿವೃದ್ಧಿಗೆ 117 ಕೋಟಿ 17 ಲಕ್ಷ ಅನುದಾನ ಕೊಡಲಾಗಿದೆ. ಪಿಟಿಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಮರು ನವೀಕರಣಕ್ಕೆ ಆಯ್ಕೆಯಾದ ಕ್ರೀಡಾಂಗಣಗಳಲ್ಲಿ ಭಾರತದ ಕ್ರಿಕೆಟ್​ ಕಾಶಿ ಈಡನ್ ಗಾರ್ಡನ್ಸ್ ಮೈದಾನವೂ ಇದೆ. ಈಡನ್‌ ಗಾರ್ಡನ್​ ದುರಸ್ಥಿಗೆ 127.82 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ.

ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣಕ್ಕೆ 79.46 ಕೋಟಿ ನೀಡುತ್ತಿದೆ. ಐಸಿಸಿ ಏಕದಿನ ವಿಶ್ವಕಪ್​ಗೆ ಒಟ್ಟು 12 ಕ್ರೀಡಾಂಗಣಗಳನ್ನು ಗುರುತಿಸಲಾಗಿದೆ. ಐದು ಮೈದಾನಗಳ ಹೊರತಾಗಿ ಚೆಪಾಕ್​ ಮೈದಾನ, ಧರ್ಮಶಾಲಾ, ಗುವಾಹಟಿ, ಚಿನ್ನಸ್ವಾಮಿ ಮೈದಾನ, ಲಕ್ನೋ, ಇಂದೋರ್‌ ಮೈದಾನದಲ್ಲೂ ಏಕದಿನ ವಿಶ್ವಕಪ್​ ಟೂರ್ನಿಯ ಪಂದ್ಯಗಳೂ ನಡೆಯಲಿವೆ.

ಇಂದಿನ ಪ್ರಮುಖ ಕ್ರೀಡಾ ಸುದ್ದಿ

IPLಗಿಂತಲೂ ದೊಡ್ಡ ಟಿ20 ಲೀಗ್​​ ಆಯೋಜಿಸಲು ಸೌದಿ ಅರೇಬಿಯಾ ಚಿಂತನೆ; ಬಿಸಿಸಿಐ ಅವಕಾಶ ಕೊಟ್ಟರೆ ಕಣಕ್ಕಿಳಿಯಲಿದ್ದಾರೆ ಕೊಹ್ಲಿ-ರೋಹಿತ್?

ವಿಶ್ವದ ಶ್ರೀಮಂತ ಕ್ರಿಕೆಟ್​ ಮಂಡಳಿ ಎನಿಸಿರುವ ಬಿಸಿಸಿಐ ಕನಸಿನ ಕೂಸು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜಗತ್ತಿನ ರಿಚೆಸ್ಟ್​​ ಕ್ರಿಕೆಟ್​ ಲೀಗ್​ ಎಂದು ಖ್ಯಾತಿ ಪಡೆದಿದೆ. ಈಗಾಗಲೇ 15 ವರ್ಷಗಳನ್ನು ಪೂರ್ಣಗೊಳಿಸಿರುವ ಐಪಿಎಲ್​​​, ಪ್ರಸ್ತುತ ಯಶಸ್ವಿ 16ನೇ ಆವೃತ್ತಿ ನಡೆಯುತ್ತಿದೆ. 2008ರಲ್ಲಿ ಜನ್ಮ ತಾಳಿದ ಮಿಲಿಯನ್​ ಡಾಲರ್ ಟೂರ್ನಿ ಅತಿ ದೊಡ್ಡ ಕ್ರಿಕೆಟ್​ ಲೀಗ್​ ಎಂದೇ ಬಿಂಬಿಸಿಕೊಂಡಿದೆ. ಇದರ ನಡುವೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ T20 ಲೀಗ್‌ ಆಯೋಜಿಸಲು ಸೌದಿ ಅರೇಬಿಯಾ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.