ಐಎಸ್‌ಎಲ್ ಫೈನಲ್ ಪಂದ್ಯದ ವೇಳೆ ಪಟಾಕಿ ಸ್ಫೋಟ: ಅಭಿಮಾನಿ, ಕ್ಲಬ್ ಮಾಲೀಕರಿಗೆ ಗಾಯ, ಬೆಂಗಳೂರು ಎಫ್‌ಸಿ ದೂರು ದಾಖಲು
ಕನ್ನಡ ಸುದ್ದಿ  /  ಕ್ರೀಡೆ  /  ಐಎಸ್‌ಎಲ್ ಫೈನಲ್ ಪಂದ್ಯದ ವೇಳೆ ಪಟಾಕಿ ಸ್ಫೋಟ: ಅಭಿಮಾನಿ, ಕ್ಲಬ್ ಮಾಲೀಕರಿಗೆ ಗಾಯ, ಬೆಂಗಳೂರು ಎಫ್‌ಸಿ ದೂರು ದಾಖಲು

ಐಎಸ್‌ಎಲ್ ಫೈನಲ್ ಪಂದ್ಯದ ವೇಳೆ ಪಟಾಕಿ ಸ್ಫೋಟ: ಅಭಿಮಾನಿ, ಕ್ಲಬ್ ಮಾಲೀಕರಿಗೆ ಗಾಯ, ಬೆಂಗಳೂರು ಎಫ್‌ಸಿ ದೂರು ದಾಖಲು

ಐಎಸ್‌ಎಲ್ ಫೈನಲ್ ಪಂದ್ಯದ ವೇಳೆ ಪಟಾಕಿ ಸ್ಫೋಟಗೊಂಡಿದ್ದಕ್ಕೆ ಸಂಬಂಧಿಸಿ ಅಭಿಮಾನಿ ಮತ್ತು ಕ್ಲಬ್ ಮಾಲೀಕರಿಗೆ ಗಾಯವಾಗಿದೆ. ಈ ಬಗ್ಗೆ ಎಐಎಫ್​ಎಫ್​ ಮತ್ತು ಎಫ್​ಎಸ್​ಡಿಎಲ್​ಗೆ ಬೆಂಗಳೂರು ಎಫ್‌ಸಿ ದೂರು ದಾಖಲಿಸಿದೆ.

ಐಎಸ್‌ಎಲ್ ಫೈನಲ್ ಪಂದ್ಯದ ವೇಳೆ ಪಟಾಕಿ ಸ್ಫೋಟ: ಅಭಿಮಾನಿ, ಕ್ಲಬ್ ಮಾಲೀಕರಿಗೆ ಗಾಯ, ಬೆಂಗಳೂರು ಎಫ್‌ಸಿ ದೂರು ದಾಖಲು
ಐಎಸ್‌ಎಲ್ ಫೈನಲ್ ಪಂದ್ಯದ ವೇಳೆ ಪಟಾಕಿ ಸ್ಫೋಟ: ಅಭಿಮಾನಿ, ಕ್ಲಬ್ ಮಾಲೀಕರಿಗೆ ಗಾಯ, ಬೆಂಗಳೂರು ಎಫ್‌ಸಿ ದೂರು ದಾಖಲು

ಕೋಲ್ಕತ್ತಾದಲ್ಲಿ ಶನಿವಾರ (ಏಪ್ರಿಲ್ 12) ನಡೆದ ಇಂಡಿಯನ್ ಸೂಪರ್ ಲೀಗ್​​​ನ (ISL 2024-25) ಮೋಹನ್ ಬಗಾನ್ ಸೂಪರ್ ಜೈಂಟ್ ಮತ್ತು ಬೆಂಗಳೂರು ಎಫ್​ಸಿ (Bengaluru FC) ಫೈನಲ್ ಪಂದ್ಯದ ನಂತರ ಕ್ರೀಡಾಂಗಣಕ್ಕೆ ಪಟಾಕಿಗಳನ್ನು ಎಸೆದ ಕಿಡಿಗೇಡಿಗಳ ಅಜಾಗರೂಕ ಮತ್ತು ಹೇಡಿತನದ ಕೃತ್ಯವನ್ನು ಬೆಂಗಳೂರು ಎಫ್‌ಸಿ ಖಂಡಿಸಿದೆ. ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (AIFF) ಮತ್ತು ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್​ಗೆ (FSDL) ಔಪಚಾರಿಕ ದೂರು ದಾಖಲಿಸಿದೆ.

ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಬಿಎಫ್‌ಸಿ ಅಭಿಮಾನಿಯೊಬ್ಬರ ಕಣ್ಣಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಲಬ್ ಮಾಲೀಕ ಪಾರ್ಥ್ ಜಿಂದಾಲ್ ಸೇರಿ ಇತರ ಅಭಿಮಾನಿಗಳಿಗೆ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಏಪ್ರಿಲ್ 15ರಂದು ಬಿಎಫ್​ಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಆಕ್ರೋಶ ವ್ಯಕ್ತಪಡಿಸಿದೆ. ಎಐಎಫ್​ಎಫ್​ ಮತ್ತು ಎಫ್​ಎಸ್​ಡಿಎಲ್​ಗೆ ಬಿಎಫ್​ಸಿ ಔಪಚಾರಿಕ ದೂರು ದಾಖಲಿಸಿದೆ. ಕ್ರೀಡಾಂಗಣಗಳಲ್ಲಿ ಅಭಿಮಾನಿಗಳ ಸುರಕ್ಷತಾ ಮಾನದಂಡಗಳ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿ ಫೆಡರೇಶನ್ ಮತ್ತು ಲೀಗ್‌ನೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದಿದೆ.

ಇಂತಹ ಕ್ರಮಗಳು ಜೀವಗಳಿಗೆ ಅಪಾಯವನ್ನು ಉಂಟು ಮಾಡುವುದಲ್ಲದೆ, ನಮ್ಮ ಸುಂದರ ಆಟದ ಮನೋಭಾವಕ್ಕೆ ವಿರುದ್ಧವಾಗಿವೆ. ಕ್ರೀಡಾಂಗಣಗಳು ಯಾವಾಗಲೂ ಸುರಕ್ಷಿತ ಸ್ಥಳವಾಗಿರಬೇಕು. ಅಂತಹ ಕೃತ್ಯಗಳಿಗೆ ಫುಟ್‌ಬಾಲ್‌ನಲ್ಲಿ ಅಥವಾ ಎಲ್ಲಿಯೂ ಸ್ಥಾನವಿಲ್ಲ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಪಾರ್ಥ ಜಿಂದಾಲ್ ಆಕ್ರೋಶ

ಕ್ಲಬ್ ಮಾಲೀಕರು ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಕುರಿತು ಹಂಚಿಕೊಂಡು ಪ್ರಶ್ನಿಸಿದ್ದಾರೆ. ಬೆಂಗಳೂರು ಎಫ್​ಸಿ ತಂಡವನ್ನು ನಾನು ಹುರಿದುಂಬಿಸುತ್ತಿರುವಾಗ ಕ್ರೀಡಾಂಗಣದಲ್ಲಿ ಪಟಾಕಿ ಸಿಡಿದಿದೆ. ಕೋಲ್ಕತ್ತಾದಲ್ಲಿ ನಾವು ನಿರೀಕ್ಷಿಸಬಹುದಾದ ಭದ್ರತೆ ಇದೇನಾ? ಎಂದು ಕೇಳಿದ್ದಾರೆ. ಬಿಎಫ್​ಸಿ ಬಗ್ಗೆ ಹೆಮ್ಮೆ ಇದೆ. ನಾವು ಕ್ರೀಡಾ ಮನೋಭಾವವನ್ನು ನಂಬುತ್ತೇವೆ. ಕ್ರೀಡಾಂಗಣದಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡಿರುವುದನ್ನು ನೋಡಿ ಗಾಬರಿಯಾಯಿತು ಎಂದು ಪಾರ್ಥ ಜಿಂದಾಲ್ ಬರೆದಿದ್ದಾರೆ.

ಮೋಹನ್ ಬಗಾನ್​ಗೆ ಗೆಲುವು, ಬಿಎಫ್​ಸಿಗೆ ನಿರಾಸೆ

ಬೆಂಗಳೂರು ಎಫ್‌ಸಿ ಕನಸು ಮತ್ತೊಮ್ಮೆ ಭಗ್ನವಾಗಿದೆ. 2023ರ ಫಲಿತಾಂಶವೇ ಮತ್ತೊಮ್ಮೆ ಪುನರಾವರ್ತನೆಯಾಗಿದೆ. ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಮಣಿಸಿದ ಮೋಹನ್ ಬಗಾನ್ ಸೂಪರ್ ಜೈಂಟ್ ತಂಡವು ಮತ್ತೊಮ್ಮೆ ಐಎಸ್‌ಎಲ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಅತ್ತ ಎರಡನೇ ಬಾರಿಗೆ ಐಎಸ್‌ಎಲ್‌ ಚಾಂಪಿಯನ್‌ ಆಗಿ ಮಿಂಚುವ ಬೆಂಗಳೂರು ಎಫ್‌ಸಿ ಕನಸು ನುಚ್ಚುನೂರಾಗಿದೆ.

ಕೋಲ್ಕತ್ತಾದ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೋಹನ್‌ ಬಗಾನ್‌ ತಂಡವು 2-1 ಅಂತರದಲ್ಲಿ ಗೆದ್ದು ಬೀಗಿದೆ. ಕಿಕ್ಕಿರಿದು ತುಂಬಿದ್ದ ತವರಿನ ಅಭಿಮಾನಿಗಳ ನಿರಂತರ ಬೆಂಬಲದ ನಡುವೆ ತವರಿನ ತಂಡ ಗೆದ್ದು ಬೀಗಿದೆ. ಪಂದ್ಯದ ನಿಗದಿತ ಅವಧಿಯಲ್ಲಿ 1-1 ಅಂತರದಿಂದ ಅಂಕ ಸಮಬಲವಾಗಿತ್ತು. ಹೀಗಾಗಿ ಹೆಚ್ಚುವರಿ ಅವಧಿ ನೀಡಲಾಯ್ತು. ಆ ಸಮಯದಲ್ಲಿ ಮತ್ತೊಂದು ಗೋಲು ಕಲೆಹಾಕಿದ ತಂಡ ಜಯಭೇರಿ ಬಾರಿಸಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.