PKL 11: ಪ್ರೊ ಕಬಡ್ಡಿ ಲೀಗ್ ಪಾಯಿಂಟ್ಸ್ ಟೇಬಲ್‌ನಲ್ಲಿ ದೊಡ್ಡ ಬದಲಾವಣೆ: ಎಷ್ಟನೇ ಸ್ಥಾನದಲ್ಲಿದೆ ಬೆಂಗಳೂರು ಬುಲ್ಸ್
ಪ್ರೊ ಕಬಡ್ಡಿ ಲೀಗ್‌ನಲ್ಲಿ ಪುಣೇರಿ ಪಲ್ಟಾನ್ ಸೋತರೂ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯು ಮುಂಬಾ ಈ ಋತುವಿನ ಮೊದಲ ಗೆಲುವನ್ನು ದಾಖಲಿಸಿದೆ ಮತ್ತು ಏಳನೇ ಸ್ಥಾನದಲ್ಲಿದೆ. ತಮಿಳ್ ತಲೈವಾಸ್ ತನ್ನ ಎರಡನೇ ಗೆಲುವಿನ ನಂತರ ನಾಲ್ಕನೇ ಸ್ಥಾನದಲ್ಲಿದೆ.
ಅಕ್ಟೋಬರ್ 23 ರಂದು ಪ್ರೊ ಕಬಡ್ಡಿ ಲೀಗ್‌ನಲ್ಲಿ ಎರಡು ಪ್ರಮುಖ ಪಂದ್ಯಗಳು ಮುಗಿದ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಮಹತ್ವದ ಬದಲಾವಣೆ ಆಗಿದೆ. 11ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವು ಹಾಲಿ ಚಾಂಪಿಯನ್ ಪುಣೇರಿ ಪಲ್ಟಾನ್ ವಿರುದ್ಧ 35-30 ಅಂತರದಲ್ಲಿ ಹಾಗೂ 12ನೇ ಪಂದ್ಯದಲ್ಲಿ ಯು ಮುಂಬಾ 33-27 ಅಂತರದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು. ಈ ಎರಡು ಪಂದ್ಯಗಳ ನಂತರ ಪಾಯಿಂಟ್ಸ್ ಪಟ್ಟಿ ಹೇಗಿದೆ ಎಂಬುದನ್ನು ನೋಡೋಣ.
ಪುಣೇರಿ ಪಲ್ಟಾನ್ ಸೋತರೂ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯು ಮುಂಬಾ ಈ ಋತುವಿನ ಮೊದಲ ಗೆಲುವನ್ನು ದಾಖಲಿಸಿದೆ ಮತ್ತು ಏಳನೇ ಸ್ಥಾನದಲ್ಲಿದೆ. ತಮಿಳ್ ತಲೈವಾಸ್ ತನ್ನ ಎರಡನೇ ಗೆಲುವಿನ ನಂತರ ನಾಲ್ಕನೇ ಸ್ಥಾನದಲ್ಲಿದೆ. ಬೆಂಗಳೂರು ಬುಲ್ಸ್ ಆಡಿದ 3 ಪಂದ್ಯಗಳ ನಂತರ ಕೇವಲ ಒಂದು ಅಂಕ ಪಡೆದು ಹತ್ತನೇ ಸ್ಥಾನದಲ್ಲಿದೆ.
ಪ್ರೊ ಕಬಡ್ಡಿ ಲೀಗ್ ಸೀಸನ್-11 ಪಾಯಿಂಟ್ಸ್ ಟೇಬಲ್:
1) ಪುಣೇರಿ ಪಲ್ಟನ್ - 3 ಪಂದ್ಯಗಳ ನಂತರ 11 ಅಂಕಗಳು
2) ಜೈಪುರ ಪಿಂಕ್ ಪ್ಯಾಂಥರ್ಸ್ - 2 ಪಂದ್ಯಗಳ ನಂತರ 10 ಅಂಕಗಳು
3) ಯುಪಿ ಯೋಧಾಸ್ - 2 ಪಂದ್ಯಗಳ ನಂತರ 10 ಅಂಕಗಳು
4) ತಮಿಳ್ ತಲೈವಾಸ್ - 2 ಪಂದ್ಯಗಳ ನಂತರ 10 ಅಂಕಗಳು
5) ದಬಾಂಗ್ ದೆಹಲಿ KC - ಎರಡು ಪಂದ್ಯಗಳ ನಂತರ 6 ಅಂಕಗಳು
6) ಗುಜರಾತ್ ಜೈಂಟ್ಸ್ - 2 ಪಂದ್ಯಗಳ ನಂತರ 6 ಅಂಕಗಳು
7) ಯು ಮುಂಬಾ - 2 ಪಂದ್ಯಗಳ ನಂತರ 5 ಅಂಕಗಳು
8) ತೆಲುಗು ಟೈಟಾನ್ಸ್ - 3 ಪಂದ್ಯಗಳ ನಂತರ 5 ಅಂಕಗಳು
9) ಬೆಂಗಾಲ್ ವಾರಿಯರ್ಸ್ - ಒಂದು ಪಂದ್ಯದ ನಂತರ ಒಂದು ಅಂಕ
10) ಬೆಂಗಳೂರು ಬುಲ್ಸ್ - 3 ಪಂದ್ಯಗಳ ನಂತರ ಒಂದು ಅಂಕ
11) ಹರಿಯಾಣ ಸ್ಟೀಲರ್ಸ್ - ಒಂದು ಪಂದ್ಯದ ನಂತರ 0 ಅಂಕಗಳು
12) ಪಾಟ್ನಾ ಪೈರೇಟ್ಸ್ - ಒಂದು ಪಂದ್ಯದ ನಂತರ 0 ಅಂಕಗಳು
ಪ್ರೊ ಕಬಡ್ಡಿ ಲೀಗ್ ಸೀಸನ್-11 ರ ಟಾಪ್ 5 ರೈಡರ್‌ಗಳು:
1) ಅರ್ಜುನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್) - 2 ಪಂದ್ಯಗಳಲ್ಲಿ 34 ರೇಡ್ ಅಂಕಗಳು
2) ಪವನ್ ಕುಮಾರ್ ಸೆಹ್ರಾವತ್ (ತೆಲುಗು ಟೈಟಾನ್ಸ್) - 3 ಪಂದ್ಯಗಳಲ್ಲಿ 29 ರೇಡ್ ಅಂಕಗಳು
3) ಪರ್ದೀಪ್ ನರ್ವಾಲ್ (ಬೆಂಗಳೂರು ಬುಲ್ಸ್) - 3 ಪಂದ್ಯಗಳಲ್ಲಿ 28 ರೇಡ್ ಅಂಕಗಳು
4) ಸುರೇಂದರ್ ಗಿಲ್ (ಯುಪಿ ಯೋಧಾಸ್) - 2 ಪಂದ್ಯಗಳಲ್ಲಿ 19 ರೇಡ್ ಪಾಯಿಂಟ್‌ಗಳು
5) ನರೇಂದ್ರ ಕಾಂಡೋಲಾ (ತಮಿಳು ತಲೈವಾಸ್) - 2 ಪಂದ್ಯಗಳಲ್ಲಿ 19 ರೇಡ್ ಅಂಕಗಳು
ಪ್ರೊ ಕಬಡ್ಡಿ ಲೀಗ್ ಸೀಸನ್-11 ರ ಟಾಪ್ 5 ಡಿಫೆಂಡರ್‌ಗಳು:
1) ಗೌರವ್ ಖತ್ರಿ (ಪುನೇರಿ ಪಲ್ಟನ್) - 3 ಪಂದ್ಯಗಳಲ್ಲಿ 14 ಟ್ಯಾಕಲ್ ಪಾಯಿಂಟ್‌ಗಳು
2) ಸೋಂಬಿರ್ (ಗುಜರಾತ್ ಜೈಂಟ್ಸ್) - 2 ಪಂದ್ಯಗಳಲ್ಲಿ 11 ಟ್ಯಾಕಲ್ ಪಾಯಿಂಟ್‌ಗಳು
3) ಸುಮಿತ್ ಸಾಂಗ್ವಾನ್ (ಯುಪಿ ಯೋಧಾಸ್) - 2 ಪಂದ್ಯಗಳಲ್ಲಿ 11 ಟ್ಯಾಕಲ್ ಪಾಯಿಂಟ್‌ಗಳು
4) ಅಮನ್ (ಪುನೇರಿ ಪಲ್ಟನ್) - 3 ಪಂದ್ಯಗಳಲ್ಲಿ 10 ಟ್ಯಾಕಲ್ ಪಾಯಿಂಟ್‌ಗಳು
5) ಸುರಿಂದರ್ ಸಿಂಗ್ ಡೆಹಾಲ್ (ಬೆಂಗಳೂರು ಬುಲ್ಸ್) - 3 ಪಂದ್ಯಗಳಲ್ಲಿ 8 ಟ್ಯಾಕಲ್ ಪಾಯಿಂಟ್‌ಗಳು