ಪಕ್ಷಿಗಳ ಜಿಮ್ನಾಸ್ಟಿಕ್‌; ಪ್ಯಾರಿಸ್ ಒಲಿಂಪಿಕ್ಸ್ 4ನೇ ದಿನ ಗೂಗಲ್ ಡೂಡಲ್ ಗೌರವ ಸಲ್ಲಿಸಿದ್ದು ಈ ಕ್ರೀಡೆಗೆ
ಕನ್ನಡ ಸುದ್ದಿ  /  ಕ್ರೀಡೆ  /  ಪಕ್ಷಿಗಳ ಜಿಮ್ನಾಸ್ಟಿಕ್‌; ಪ್ಯಾರಿಸ್ ಒಲಿಂಪಿಕ್ಸ್ 4ನೇ ದಿನ ಗೂಗಲ್ ಡೂಡಲ್ ಗೌರವ ಸಲ್ಲಿಸಿದ್ದು ಈ ಕ್ರೀಡೆಗೆ

ಪಕ್ಷಿಗಳ ಜಿಮ್ನಾಸ್ಟಿಕ್‌; ಪ್ಯಾರಿಸ್ ಒಲಿಂಪಿಕ್ಸ್ 4ನೇ ದಿನ ಗೂಗಲ್ ಡೂಡಲ್ ಗೌರವ ಸಲ್ಲಿಸಿದ್ದು ಈ ಕ್ರೀಡೆಗೆ

ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ರೀಡಾಕೂಟವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಆಟಗಾರರನ್ನು ಗೌರವಿಸಲು ಗೂಗಲ್‌ ಕೂಡಾ ಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ತನ್ನ ಡೂಡಲ್‌ ಐಕಾನ್‌ನಲ್ಲಿ ಇಂದು ಜಿಮ್ನಾಸ್ಟಿಕ್‌ ಕ್ರೀಡೆ ಮತ್ತು ಜಿಮ್ನಾಸ್ಟ್‌ಗಳನ್ನು ಗೌರವಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್ 4ನೇ ದಿನ ಗೂಗಲ್ ಡೂಡಲ್ ಗೌರವ ಸಲ್ಲಿಸಿದ್ದು ಈ ಕ್ರೀಡೆಗೆ
ಪ್ಯಾರಿಸ್ ಒಲಿಂಪಿಕ್ಸ್ 4ನೇ ದಿನ ಗೂಗಲ್ ಡೂಡಲ್ ಗೌರವ ಸಲ್ಲಿಸಿದ್ದು ಈ ಕ್ರೀಡೆಗೆ

ಜಾಗತಿಕ ಮಟ್ಟದಲ್ಲಿ ಈಗ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ್ದೇ ಸುದ್ದಿ. ವಿಶ್ವದಲ್ಲೇ ಅತಿದೊಡ್ಡ ಕ್ರೀಡಾ ಹಬ್ಬವಾಗಿರುವ ಒಲಿಂಪಿಕ್ಸ್‌ನಲ್ಲಿ ವಿಶ್ವದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಜುಲೈ 26ರಂದು ಉದ್ಘಾಟನೆಗೊಂಡ ಕ್ರೀಡಾಕೂಟವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹೀಗಾಗಿ ಸತತ ನಾಲ್ಕನೇ ದಿನವೂ ಒಲಿಂಪಿಕ್ಸ್‌ ಕ್ರೀಡಾಕೂಟದ ಕುರಿತಾಗಿ ಗೂಗಲ್‌ ಕೂಡಾ ತನ್ನ ಡೂಡಲ್‌ ಅನ್ನು ಬದಲಿಸಿದೆ. ಜುಲೈ 27ರಂದು ಸ್ಕೇಟ್‌​ಬೊರ್ಡಿಂಗ್‌ಗೆ ನಮನ ಸಲ್ಲಿಸಿದ್ದ ಗೂಗಲ್, ಆ ಬಳಿಕ ಜುಲೈ 28ರ ಭಾನುವಾರ ಫುಟ್ಬಾಲ್ ಸ್ಪರ್ಧೆಯ ಥೀಮ್‌ನೊಂದಿಗೆ ಡೂಡಲ್ ಸಿದ್ಧಪಡಿಸಿತ್ತು. ಸ್ಪರ್ಧೆಗಳು ಆರಂಭಗೊಂಡ ನಾಲ್ಕನೇ ದಿನವಾದ ಇಂದು ಜಿಮ್ನಾಸ್ಟಿಕ್‌ ಕ್ರೀಡೆಗೆ ಗೌರವ ಸಲ್ಲಿಸಿದೆ.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಜಿಮ್ನಾಸ್ಟ್‌ಗಳನ್ನು ಗೌರವಿಸಲು, ಜುಲೈ 29ರ ಐಕಾನ್‌ನಲ್ಲಿ ಜಿಮ್ನಾಸ್ಟಿಕ್‌ ಅನ್ನು ಚಿತ್ರಿಸಿದೆ. ಪ್ಯಾರಿಸ್‌ನ ಬೆರ್ಸಿ ಅರೆನಾದಲ್ಲಿ ಜುಲೈ 27ರಿಂದ ಆಗಸ್ಟ್ 5ರವರೆಗೆ ನಡೆಯಲಿರುವ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳಿಗೆ ಅರ್ಪಿಸಿದೆ. ಪ್ರತಿನಿತ್ಯ ಒಂದೊಂದು ಕ್ರೀಡೆಗಳನ್ನು ಗೂಗಲ್‌ ಗೌರವಿಸುತ್ತಿದೆ.

GIF ಸ್ವರೂಪದಲ್ಲಿರುವ ಗೂಗಲ್ ಡೂಡಲ್ ಕಿರುಚಿತ್ರದಲ್ಲಿ, ಜಿಮ್ನಾಸ್ಟಿಕ್ ಬೀಮ್‌ನಲ್ಲಿ ಪಕ್ಷಿಯೊಂದು ಜಿಮ್ನಾಸ್ಟ್‌ಗಳು ಮಾಡುವಂತೆ ಮನರಂಜನಾ ಚಲನೆಗಳನ್ನು ಪ್ರದರ್ಶಿಸುವುದನ್ನು ನೋಡಬಹುದು. ಹಿನ್ನೆಲೆಯಲ್ಲಿ ಬೆಕ್ಕೊಂದು ಹಕ್ಕಿಗೆ 10 ಅಂಕ ಕೊಡುವುದನ್ನು ಈ ಕಿರುಚಿತ್ರ ಒಳಗೊಂಡಿದೆ.

ಇಂದಿನ ಗೂಗಲ್ ಡೂಡಲ್ ಇಲ್ಲಿ ನೋಡಿ

ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ದಿನದಂದು ಕೂಡಾ ಗೂಗಲ್ ತನ್ನ ಐಕಾನ್ ಅನ್ನು ಬದಲಿಸಿತ್ತು. ಪಕ್ಷಿಗಳಿರುವ ಅನಿಮೇಟೆಡ್ ಪಾತ್ರಗಳೊಂದಿಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವವರನ್ನು ಗೌರವಿಸಲು ಮುಂದಾಯ್ತು.

ಜುಲೈ 26ರಂದು ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ಸಿಕ್ಕಿತು. ಉದ್ಘಾಟನಾ ಸಮಾರಂಭದಲ್ಲಿ 200ಕ್ಕೂ ಹೆಚ್ಚು ಒಲಿಂಪಿಕ್‌ ಅಸೋಸಿಯೇಷನ್‌ಗಳ ಆಟಗಾರರು ಸೀನ್ ನದಿ ಮೇಲೆ ದೋಣಿಯಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದರು. ಇದೇ ಮೊದಲ ಬಾರಿಗೆ ಉದ್ಘಾಟನಾ ಕಾರ್ಯಕ್ರಮ ನೀರಿನ ಮೇಲೆ ನಡೆಯಿತು.

ಕ್ರೀಡಾಕೂಟದಲ್ಲಿ ಚೀನಾ ಮೊದಲ ಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿತು. ಅತ್ತ ಭಾರತ ದೇಶವು ಎರಡನೇ ದಿನ ಮೊದಲ ಪದಕಕ್ಕೆ ಮುತ್ತಿಟ್ಟಿತು. 10 ಮೀಟರ್‌ ಏರ್‌ ಪಿಸ್ತೂಲ್‌ ಮಹಿಳೆಯರ ವಿಭಾಗದಲ್ಲಿ ಮನು ಭಾಕರ್‌ ಕಂಚಿನ ಪದಕಕ್ಕೆ ಮುತ್ತಿಟ್ಟರು. ಇದರೊಂದಿಗೆ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್‌ ಎನಿಸಿಕೊಂಡರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.