ಕನ್ನಡ ಸುದ್ದಿ  /  Sports  /  Border Gavaskar Trophy India Vs Australia 2nd Test Preview

India vs Australia 2nd Test: ಶ್ರೇಯಸ್ ಕಮ್‌ಬ್ಯಾಕ್, ಪೂಜಾರಾ ನೂರನೇ ಟೆಸ್ಟ್; ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದ ಆಸೀಸ್

“ನಾನು ಯುವಕನಾಗಿದ್ದಾಗ ಭಾರತದ ಪರ ಆಡಲು ಬಯಸಿದ್ದೆ. ಆದರೆ ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಎಂದಿಗೂ ಯೋಚಿಸಲಿಲ್ಲ. ಟೆಸ್ಟ್ ಕ್ರಿಕೆಟ್ ಕ್ರೀಡೆಯ ಪ್ರಮುಖ ಸ್ವರೂಪವಾಗಿದೆ. ಇದು ಜೀವನದಂತೆಯೇ ನಿಮಗೆ ಸವಾಲಾಗಿದೆ. ಎಲ್ಲಾ ಯುವಕರಿಗೆ, ನಾನು ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಲು ಶ್ರಮಿಸುವಂತೆ ಪ್ರೋತ್ಸಾಹಿಸುತ್ತೇನೆ. ಈ ಪ್ರಯಾಣದುದ್ದಕ್ಕೂ ನನಗೆ ಬೆಂಬಲ ನೀಡಿದ ನನ್ನ ಪತ್ನಿ, ನನ್ನ ಕುಟುಂಬ, ಬಿಸಿಸಿಐನಲ್ಲಿರುವ ಎಲ್ಲರಿಗೂ ಮತ್ತು ನನ್ನ ಎಲ್ಲಾ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಪೂಜಾರ ನೂರನೇ ಟೆಸ್ಟ್‌ ಪಂದ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ

ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಎರಡನೇ ಟೆಸ್ಟ್‌ ಪಂದ್ಯವು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಟೀಮ್‌ ಇಂಡಿಯಾದಲ್ಲಿ ಇಂದು ಒಂದು ಬದಲಾವಣೆಯಾಗಿದ್ದು, ಶ್ರೇಯಸ್‌ ಅಯ್ಯರ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

ಎರಡನೇ ಟೆಸ್ಟ್‌ಗೂ ಆಸೀಸ್‌ ಬಲಿಷ್ಠರಾದ ಮಿಚೆಲ್ ಸ್ಟಾರ್ಕ್ ಮತ್ತು ಕ್ಯಾಮರೂನ್ ಗ್ರೀನ್ ಲಭ್ಯವಿಲ್ಲ. ಮತ್ತೊಂದೆಡೆ ಮ್ಯಾಟ್ ರೆನ್ಶಾ ಬದಲಿಗೆ ಟ್ರಾವಿಸ್ ಹೆಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಮ್ಯಾಥ್ಯೂ ಕುಹ್ನೆಮನ್ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದು, ಅವರ ಮೂಲಕ ಆಸ್ಟ್ರೇಲಿಯಾ ಮೂರನೇ ಸ್ಪಿನ್ನರ್ ಅನ್ನು‌ ತಂಡಕ್ಕೆ ಕರೆತಂದಿದೆ.

ಕಳೆದ ಪಂದ್ಯವನ್ನು ಗಾಯದಿಂದಾಗಿ ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್ ಅವರು ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಸ್ಥಾನ ಕಳೆದುಕೊಂಡಿದ್ದಾರೆ. ಇಂದು ಚೇತೇಶ್ವರ ಪೂಜಾರಾಗೆ ನೂರನೇ ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯವಾಗಿದ್ದು, ಶುಕ್ರವಾರದಂದು ಭಾರತೀಯ ಟೆಸ್ಟ್ ದಿಗ್ಗಜರ ಗುಂಪನ್ನು ಪೂಜಾರ ಸೇರಿಕೊಂಡಿದ್ದಾರೆ. 35 ವರ್ಷ ವಯಸ್ಸಿನ ಆಟಗಾರ 100ನೇ ಟೆಸ್ಟ್ ಕ್ಯಾಪ್ ಗಳಿಸಿದ 13ನೇ ಭಾರತೀಯ ಆಟಗಾರನಾಗಿದ್ದಾರೆ. 2010ರ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ ಪೂಜಾರ, ಇಂದಿಗೆ ನೂರು ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ ಸಾಧನೆ ಮಾಡಿದ್ದಾರೆ. ಇದು ಕೂಡಾ ಆಸೀಸ್‌ ವಿರುದ್ಧವೇ ಆಗುತ್ತಿದೆ.

ಭಾರತವು ಈಗಾಗಲೇ ಮೊದಲ ಟೆಸ್ಟ್‌ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿದ್ದು, ಉತ್ತಮ ಆರಂಭದೊಂದಿಗೆ ಎರಡನೇ ಪಂದ್ಯವನ್ನು ಕೂಡಾ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಆ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡು, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆಯುವ ಇರಾದೆ ಹೊಂದಿದೆ. ಮತ್ತೊಂದೆಡೆ ಮೊದಲ ಟೆಸ್ಟ್‌ನಲ್ಲಿ ನಿರಾಶಾದಾಯಕ ಸೋಲು ಕಂಡಿರುವ ಆಸ್ಟ್ರೇಲಿಯವು, ಕೆಲವೊಂದು ಬದಲಾಣೆ ಮೂಲಕ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರ ಸ್ಪಿನ್ ದಾಳಿಯನ್ನು ಎದುರಿಸಲು ಇಂದು ಕಾಂಗರೂ ಪಾಳಯ ಯಾವ ತಂತ್ರ ಅನುಸರಿಸತ್ತದೆ ಎಂದು ನೋಡಬೇಕಿದೆ.

“ನಾನು ಯುವಕನಾಗಿದ್ದಾಗ ಭಾರತದ ಪರ ಆಡಲು ಬಯಸಿದ್ದೆ. ಆದರೆ ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಎಂದಿಗೂ ಯೋಚಿಸಲಿಲ್ಲ. ಟೆಸ್ಟ್ ಕ್ರಿಕೆಟ್ ಕ್ರೀಡೆಯ ಪ್ರಮುಖ ಸ್ವರೂಪವಾಗಿದೆ. ಇದು ಜೀವನದಂತೆಯೇ ನಿಮಗೆ ಸವಾಲಾಗಿದೆ. ಎಲ್ಲಾ ಯುವಕರಿಗೆ, ನಾನು ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಲು ಶ್ರಮಿಸುವಂತೆ ಪ್ರೋತ್ಸಾಹಿಸುತ್ತೇನೆ. ಈ ಪ್ರಯಾಣದುದ್ದಕ್ಕೂ ನನಗೆ ಬೆಂಬಲ ನೀಡಿದ ನನ್ನ ಪತ್ನಿ, ನನ್ನ ಕುಟುಂಬ, ಬಿಸಿಸಿಐನಲ್ಲಿರುವ ಎಲ್ಲರಿಗೂ ಮತ್ತು ನನ್ನ ಎಲ್ಲಾ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಪೂಜಾರ ನೂರನೇ ಟೆಸ್ಟ್‌ ಪಂದ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

ಭಾರತ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್‌ ಕೀಪರ್), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ (ವಿಕೆಟ್‌ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಟಾಡ್ ಮರ್ಫಿ, ನಾಥನ್ ಲಿಯಾನ್, ಮ್ಯಾಥ್ಯೂ ಕುಹ್ನೆಮನ್