ಕ್ರೀಡಾಪ್ರೇಮಿಗಳೇ ನಿಮಗಿದೋ ಸವಾಲ್; ಮೇಕೆಗಳ ಗುಂಪಿನಲ್ಲಿ ಅಡಗಿರುವ ಇಬ್ಬರು ಆಟಗಾರರನ್ನು ಹುಡುಕಿ
ಕನ್ನಡ ಸುದ್ದಿ  /  ಕ್ರೀಡೆ  /  ಕ್ರೀಡಾಪ್ರೇಮಿಗಳೇ ನಿಮಗಿದೋ ಸವಾಲ್; ಮೇಕೆಗಳ ಗುಂಪಿನಲ್ಲಿ ಅಡಗಿರುವ ಇಬ್ಬರು ಆಟಗಾರರನ್ನು ಹುಡುಕಿ

ಕ್ರೀಡಾಪ್ರೇಮಿಗಳೇ ನಿಮಗಿದೋ ಸವಾಲ್; ಮೇಕೆಗಳ ಗುಂಪಿನಲ್ಲಿ ಅಡಗಿರುವ ಇಬ್ಬರು ಆಟಗಾರರನ್ನು ಹುಡುಕಿ

Optical Illusion: ಮೇಕೆಗಳಿರುವ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಗಮಿನಿಸಿದ್ದೀರೀ ಅಲ್ವಾ? ಹಾಗಾದರೆ ನಿಮ್ಮ ಕಣ್ಣ ಮುಂದೆ ಹಾದು ಹೋಗುತ್ತಿರುವ ಆಟಗಾರರು ಯಾರು? ಪೂರ್ಣ ಸುದ್ದಿ ಓದಿ ಉತ್ತರ ಇದೆ.

ಫುಟ್ಬಾಲ್ ಆಟಗಾರ ಮತ್ತು ಕ್ರಿಕೆಟಿಗನನ್ನು ಪತ್ತೆ ಹಚ್ಚಿ.
ಫುಟ್ಬಾಲ್ ಆಟಗಾರ ಮತ್ತು ಕ್ರಿಕೆಟಿಗನನ್ನು ಪತ್ತೆ ಹಚ್ಚಿ.

ಮೆದುಳಿಗೆ ಮತ್ತು ಕಣ್ಣುಗಳಿಗೆ ಸವಾಲು ಹಾಕುವಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇವುಗಳನ್ನು ಫೋಟೋ ಒಗಟು ಅಥವಾ ಫಜಲ್ ಎಂದೂ ಕರೆಯುತ್ತೇವೆ. ದಿನಕ್ಕೆ ಒಂದೆರೆಡಲ್ಲ, ಹಲವು ಚಿತ್ರಗಳು ನಮಗೆ ಕಾಣ ಸಿಗುತ್ತದೆ. ಕೆಲವರು ಬೇಗನೇ ಉತ್ತರ ಕಂಡುಕೊಂಡರೆ, ಇನ್ನೂ ಹಲವರು ತಲೆಗೆ ಹುಳ ಬಿಟ್ಟುಕೊಳ್ಳುತ್ತಾರೆ. ನಾವು ಇಂದು ಕೊಡುವ ಅಂತಹದ್ದೇ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಾ?

ವೈರಲ್ ಆಗುವ ಚಿತ್ರಗಳಲ್ಲಿ ಪ್ರಾಣಿ ಪಕ್ಷಿಗಳೇ ಇರಬಹುದು, ವಸ್ತುಗಳೇ ಇರಬಹುದು ಅಥವಾ ವ್ಯಕ್ತಿಗಳೇ ಇರಬಹುದು.. ಅವುಗಳನ್ನು ಪತ್ತೆ ಮಾಡುವುದೇ ದೊಡ್ಡ ಸವಾಲು. ಆದರೆ ಕ್ರೀಡಾಪಟುಗಳಿಗೆ ಸಂಬಂಧಿಸಿ ಇಂತಹ ಚಿತ್ರಗಳು ಕಾಣಸಿಗುವುದು ಅಪರೂಪ. ಆದರೀಗ ಕ್ರೀಡಾಭಿಮಾನಿಗಳಿಗೆ ಸಂಬಂಧಿಸಿ ಚಿತ್ರವೊಂದು ವೈರಲ್ ಆಗುತ್ತಿದೆ. ಈ ದೃಷ್ಟಿ ಭ್ರಮೆಯ ಚಿತ್ರ ಕ್ರೀಡಾ ಪ್ರಿಯರ ತಲೆಗೆ ಹುಳ ಬಿಟ್ಟಿದೆ. ಆಪ್ಟಿಕಲ್ ಇಲ್ಯೂಷನ್ ಅಂದರೆ ಕಣ್ಣ ಮುಂದೆ ಉತ್ತರ ಇದ್ದರೂ ಅದನ್ನು ಕಂಡುಹಿಡಿಯುವುದೇ ಆಗಿದೆ.

ಮನುಷ್ಯನ ಮೆದುಳು ಯಾವ ವಿಷಯಗಳನ್ನು ಗ್ರಹಿಸುತ್ತದೆ ಅಥವಾ ಚಿತ್ರಗಳನ್ನು ಹೇಗೆ ನೋಡುತ್ತಿದೆ ಎಂಬುದು ಮುಖ್ಯವಾಗುತ್ತದೆ. ಕೆಲವೊಮ್ಮೆ ನಾವು ಗ್ರಹಿಸುವುದಕ್ಕೂ ಮತ್ತು ನಾವು ನೋಡುವುದಕ್ಕೂ ವಿಭಿನ್ನವಾಗಿರುವುದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎನ್ನುತ್ತೇವೆ. ಇದು ಇದ್ದದ್ದು ಇಲ್ಲದ ಹಾಗೆ ನಮಗೆ ಕಾಣಿಸುತ್ತದೆ. ಇದು ನೆಟ್ಟಿಗರಿಗೆ ಸಾಕಷ್ಟು ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ. ಸದ್ಯ ಫೋಟೋವೊಂದು ಕ್ರೀಡಾಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ.

ನಿಮ್ಮ ಮುಂದಿರುವ ಸವಾಲು

ಮೇಕೆಗಳಿರುವ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಗಮಿನಿಸಿದ್ದೀರೀ ಅಲ್ವಾ? ಹಾಗಾದರೆ ಯಾವ ಆಟಗಾರರು ನಿಮ್ಮ ಕಣ್ಣ ಮುಂದೆ ಹಾದು ಹೋಗುತ್ತಿರುವ ಆಟಗಾರರು ಯಾರು? ನಿಂತ ಮೇಕೆಗಳ ಗುಂಪಿನಲ್ಲಿ ಅಡಗಿರುವುದು ಇಬ್ಬರು ಆಟಗಾರರು. ಒಬ್ಬರು ಫುಟ್ಬಾಲ್ ಕ್ಷೇತ್ರದಲ್ಲಿ ವಿಶ್ವಕ್ಕೆ ಪರಿಚಿತ. ಮತ್ತೊಬ್ಬರು ಕ್ರಿಕೆಟ್​ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಹಾಗಾದರೆ ಅವರಿಬ್ಬರು ಯಾರು ಎಂಬುದನ್ನು ಗುರುತಿಸಬಲ್ಲಿರಾ?

ಸುಳಿವುಗಳು

ಫುಟ್ಬಾಲ್ ಆಟಗಾರನ ಪತ್ತೆ ಹಚ್ಚಲು ಸುಳಿವು: 2022ರಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್ ಗೆದ್ದ ತಂಡದ ನಾಯಕ, ಅಂತಾರಾಷ್ಟ್ರೀಯ ಫುಟ್ಬಾಲ್​ನಲ್ಲಿ ಅತ್ಯಧಿಕ ಗೋಲು ಗಳಿಸಿದ ವಿಶ್ವದ ಮೂರನೇ ಆಟಗಾರ. ಮೇಜರ್ ಲೀಗ್​ ಸಾಕರ್ ಕಪ್​ನಲ್ಲಿ ಇಂಟರ್ ಮಿಯಾಮಿ ತಂಡದ ಆಟಗಾರ. ದಾಖಲೆಯ ಎಂಟನೇ ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಆಟಗಾರ. ಈ ಸುಳಿವುಗಳಿಂದ ಫುಟ್ಬಾಲ್ ಆಟಗಾರನನ್ನು ಗುರುತಿಸಿ.

ಕ್ರಿಕೆಟ್​ ಆಟಗಾರನ ಪತ್ತೆ ಹಚ್ಚಲು ಸುಳಿವು: ಭಾರತ ತಂಡದ ಆಟಗಾರ ಮತ್ತು ನಾಯಕ, 2023ರ ಏಕದಿನ ವಿಶ್ವಕಪ್​ನಲ್ಲಿ ಭಾರತವನ್ನು ಫೈನಲ್​ಗೇರಿಸಿದ್ದರು, ಕೊಹ್ಲಿ ಬಳಿಕ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಭಾರತ ತಂಡದ ಆರಂಭಿಕ ಆಟಗಾರ, ಐಪಿಎಲ್​ನಲ್ಲಿ ಈತನ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಈ ಸುಳಿವುಗಳಿಂದ ನಿಮಗೊಂದು ಅಂದಾಜು ಸಿಕ್ಕಿದೆ ಅಲ್ವಾ?

ಇಲ್ಲಿದೆ ನೋಡಿ ಉತ್ತರ

  1. ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ
  2. ಕ್ರಿಕೆಟಿಗ ರೋಹಿತ್​ ಶರ್ಮಾ

ಹೌದು.. ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಮತ್ತು ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅವರು ಈ ಚಿತ್ರದಲ್ಲಿ ಮೇಕೆಗಳು ನಿಂತಿರುವ ಈ ಚಿತ್ರದಲ್ಲಿ ಇಬ್ಬರು ಕಾಣ ಸಿಗುತ್ತಾರೆ. ಪ್ರಾಣಿಗಳ ಸೆಟ್ಟಿಂಗ್ ನಡುವೆ ಇಬ್ಬರನ್ನೂ ಮರೆ ಮಾಡಲಾಗಿದೆ. ಇಂತಹ ಇನ್ನಷ್ಟು ಸುದ್ದಿಗಳಿಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್ ​ಸೈಟ್ ಅನ್ನು ಓದುತ್ತಿರಿ.

ಲಿಯೊನೆಲ್ ಮೆಸ್ಸಿ ಮತ್ತು ರೋಹಿತ್ ಶರ್ಮಾ.
ಲಿಯೊನೆಲ್ ಮೆಸ್ಸಿ ಮತ್ತು ರೋಹಿತ್ ಶರ್ಮಾ.

(This copy first appeared in Hindustan Times Kannada website. To read more like this please logon to kannada.hindustantime.com)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.