ಕನ್ನಡ ಸುದ್ದಿ  /  Sports  /  Cricket News 20 Crore For Champion Csk How Much Is The Prize For The Runners Up Gujarat Orange Purple Cap Winner Prs

IPL 2023 Prize Money: ಚಾಂಪಿಯನ್​ ಸಿಎಸ್​ಕೆಗೆ 20 ಕೋಟಿ; ರನ್ನರ್​ಅಪ್​, ಆರೆಂಜ್, ಪರ್ಪಲ್ ಕ್ಯಾಪ್ ಗೆದ್ದವರಿಗೆ ಸಿಕ್ಕಿದ್ದೆಷ್ಟು ಬಹುಮಾನ?

ಈ ಆವೃತ್ತಿಯ ಚಾಂಪಿಯನ್​ ಹಾಗೂ ರನ್ನರ್ ಅಪ್ ಸೇರಿದಂತೆ ವಿವಿಧ ಪ್ರಶಸ್ತಿ ಗೆದ್ದಿರುವ ಆಟಗಾರರಿಗೆ ಬಹುಮಾನ ಮೊತ್ತ (IPL 2023 Prize Money) ವಿತರಿಸಲಾಗಿದೆ. ಹಾಗಾದರೆ ಯಾರಿಗೆಷ್ಟು ಬಹುಮಾನದ ಮೊತ್ತ ಸಿಕ್ಕಿದೆ ಎಂಬುದನ್ನು ಈ ಮುಂದೆ ನೋಡೋಣ.

ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್​​
ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್​​

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಫೈನಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​​ ತಂಡವನ್ನು ಮಣಿಸಿದ ಚೆನ್ನೈ ಐದನೇ ಬಾರಿ ಟ್ರೋಫಿ ಗೆದ್ದುಕೊಂಡು ಚರಿತ್ರೆ ಬರೆದಿದೆ. ಆದರೆ ಸತತ 2ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸುವ ಕನಸಿನಲ್ಲಿದ್ದ ಹಾರ್ದಿಕ್​ ಪಡೆ ರನ್ನರ್​​ಅಪ್​ಗೆ ತೃಪ್ತಿಪಟ್ಟುಕೊಂಡಿದೆ.

ಪಂದ್ಯ ಮುಗಿದ ಬೆನ್ನಲ್ಲೇ ಈ ಆವೃತ್ತಿಯ ಚಾಂಪಿಯನ್​ ಹಾಗೂ ರನ್ನರ್ ಅಪ್ ಸೇರಿದಂತೆ ವಿವಿಧ ಪ್ರಶಸ್ತಿ ಗೆದ್ದಿರುವ ಆಟಗಾರರಿಗೆ ಬಹುಮಾನ ಮೊತ್ತ (IPL 2023 Prize Money) ವಿತರಿಸಲಾಗಿದೆ. ಹಾಗಾದರೆ ಯಾರಿಗೆಷ್ಟು ಬಹುಮಾನದ ಮೊತ್ತ ಸಿಕ್ಕಿದೆ ಎಂಬುದನ್ನು ಈ ಮುಂದೆ ನೋಡೋಣ.

ಬಹುಮಾನದ ಮೊತ್ತ ಹೀಗಿದೆ!

  • ವಿಜೇತ​ (ಚೆನ್ನೈ ಸೂಪರ್ ಕಿಂಗ್ಸ್)​​ ತಂಡಕ್ಕೆ 20
  • ರನ್ನರ್​​​ಅಪ್​ (ಗುಜರಾತ್​ ಟೈಟಾನ್ಸ್)​​ ತಂಡಕ್ಕೆ 13 ಕೋಟಿ
  • 3ನೇ ಸ್ಥಾನ (ಮುಂಬೈ ಇಂಡಿಯನ್ಸ್) ತಂಡಕ್ಕೆ 7 ಕೋಟಿ
  • 4ನೇ ಸ್ಥಾನ (ಲಕ್ನೋ ಸೂಪರ್ ಜೈಂಟ್ಸ್) ತಂಡಕ್ಕೆ 6.5 ಕೋಟಿ
  • ಆರೆಂಜ್​ ಕ್ಯಾಪ್​ (ಶುಭ್ಮನ್​ ಗಿಲ್​​) 15 ಲಕ್ಷ
  • ಪರ್ಪಲ್​ ಕ್ಯಾಪ್​​ (ಮೊಹಮ್ಮದ್​ ಶಮಿ) 15 ಲಕ್ಷ
  • ಅತ್ಯಂತ ಮೌಲ್ಯಯುತ ಆಟಗಾರ (ಶುಭ್ಮನ್​ ಗಿಲ್​​) 12 ಲಕ್ಷ
  • ಫೇರ್​ ಪ್ಲೇ ಅವಾರ್ಡ್​​ (ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ) 10 ಲಕ್ಷ
  • ಉದಯೋನ್ಮುಖ ಆಟಗಾರ (ಯಶಸ್ವಿ ಜೈಸ್ವಾಲ್​) 20 ಲಕ್ಷ
  • ಈ ಆವೃತ್ತಿಯ ಬೆಸ್ಟ್​ ಕ್ಯಾಚ್​ (ರಶೀದ್ ಖಾನ್​) 10 ಲಕ್ಷ
  • ಸೂಪರ್​ ಸ್ಟ್ರೈಕರ್​​​ ಅವಾರ್ಡ್​ (ಗ್ಲೇನ್ ಮ್ಯಾಕ್ಸ್​ವೆಲ್​) 10 ಲಕ್ಷ
  • ಪ್ಲೇಯರ್ ಆಫ್​ ದಿ ಮ್ಯಾಚ್​ (ಡೆವೋನ್​ ಕಾನ್ವೆ) 1 ಲಕ್ಷ
  • ಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರ (ಫಾಫ್​ ಡು ಪ್ಲೆಸಿಸ್​) 12 ಲಕ್ಷ

2008-09ರಲ್ಲಿ ಪ್ರಶಸ್ತಿ ಮೊತ್ತ ಹೀಗಿತ್ತು

ಈ ಶ್ರೀಮಂತ ಲೀಗ್​ ಮೊದಲ ಎರಡು ಸೀಸನ್​ಗಳಲ್ಲಿ ವಿಜೇತ ತಂಡವು 4.8 ಕೋಟಿ ರೂಪಾಯಿಗಳನ್ನು ಪಡೆದರೆ, ರನ್ನರ್ ಅಪ್ ತಂಡವು 2.4 ಕೋಟಿ ರೂಪಾಯಿ ಪಡೆಯುತ್ತಿತ್ತು.

ರನ್​ ಹೊಳೆ ಹರಿಸುತ್ತಿರುವ ಶುಭ್ಮನ್​​ರನ್ನು ಭಾರತದ ಬ್ಯಾಟಿಂಗ್​ ದಿಗ್ಗಜರಾದ ಸಚಿನ್​ ತೆಂಡೂಲ್ಕರ್ (Sachin Tendulkar)​, ವಿರಾಟ್​ ಕೊಹ್ಲಿ (Virat Kohli) ಅವರ ಉತ್ತಾರಾಧಿಕಾರಿ ಎಂದು ಕರೆಯಲಾಗುತ್ತಿದೆ. ಇದಕ್ಕೂ ಮೊದಲು ಸಚಿನ್​ vs ಕೊಹ್ಲಿ ಎಂಬ ಚರ್ಚೆಗಳು ನಡೆಯುತ್ತಿದ್ದವು. ಪ್ರಸ್ತುತ ಕೊಹ್ಲಿ vs ಗಿಲ್​ ಎಂಬ ಚರ್ಚೆಗಳು ಜೋರಾಗಿವೆ. ಮಾಜಿ ಕ್ರಿಕೆಟರ್​ಗಳು ಕೊಹ್ಲಿಗೆ ಗಿಲ್​ರನ್ನು ಹೋಲಿಸುತ್ತಿದ್ದಾರೆ. ತನ್ನನ್ನು ದಿಗ್ಗಜರಿಗೆ ಹೋಲಿಸುತ್ತಿರುವ ಕುರಿತು ಶುಭ್ಮನ್​ ಗಿಲ್, ಮೌನ ಮುರಿದಿದ್ದಾರೆ. ಇದರ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.