ಕನ್ನಡ ಸುದ್ದಿ  /  Sports  /  Cricket News Australia 450 Run India All Out 65 Mitchell Marsh S Bold Prediction For 2023 Odi World Cup Summit Clash Prs

ODI World Cup: ಆಸ್ಟ್ರೇಲಿಯಾ 450 ರನ್​, ಭಾರತ 65ಕ್ಕೆ ಆಲೌಟ್; ಏಕದಿನ ವಿಶ್ವಕಪ್ ಫೈನಲ್​​ನ ಭವಿಷ್ಯ ನುಡಿದ ಮಿಚೆಲ್ ಮಾರ್ಷ್

ODI World Cup: ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಆಸಿಸ್​ 450 ರನ್​ ಬಾರಿಸಲಿದೆ. ಭಾರತ 65ಕ್ಕೆ ಆಲ್​​ಔಟ್​ ಆಗಲಿದೆ ಎಂದು ಮಿಚೆಲ್​ ಮಾರ್ಷ್​ ಭವಿಷ್ಯ ನುಡಿದಿದ್ದಾರೆ.

ಮಿಚೆಲ್​ ಮಾರ್ಷ್​​
ಮಿಚೆಲ್​ ಮಾರ್ಷ್​​ (ICC Twitter)

ಐಸಿಸಿ ಏಕದಿನ ವಿಶ್ವಕಪ್ (ODI World Cup 2023)​​ ಆರಂಭಕ್ಕೆ ಇನ್ನೂ ಐದು ತಿಂಗಳ ಕಾಲ ಸಮಯವಿದೆ. ಈ ಮೆಗಾ ಟೂರ್ನಿಗೆ 12 ವರ್ಷಗಳ ನಂತರ ಭಾರತವು ಆತಿಥ್ಯ ವಹಿಸುತ್ತಿದೆ. 2013ರ ಬಳಿಕ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದ ಭಾರತ, ಈ ಬಾರಿಯಾದರೂ ಟ್ರೋಫಿ ಬರ ನೀಗಿಸುವ ಆತ್ಮ ವಿಶ್ವಾಸದಲ್ಲಿದೆ. ಪ್ರಸ್ತುತ ಟೀಮ್​ ಇಂಡಿಯಾದ ಆಟಗಾರರು ಐಪಿಎಲ್​​ನಲ್ಲಿ (IPL 2023) ಬ್ಯುಸಿಯಾಗಿದ್ದಾರೆ. ಬಿಸಿಸಿಐ ಟೂರ್ನಿಗೆ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮತ್ತೊಂದೆಡೆ ಪಾಕಿಸ್ತಾನವು ಭಾರತಕ್ಕೆ ಬರುತ್ತಾ ಇಲ್ಲವೋ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಹಾಗೆಯೇ ಉಳಿದ ತಂಡಗಳು ಭರ್ಜರಿ ಸಿದ್ಧತೆ ನಡೆಸಿಕೊಳ್ಳುತ್ತಿವೆ. ಇದರ ನಡುವೆಯೇ ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್​ ಮಿಚೆಲ್​ ಮಾರ್ಷ್​​ ಸಂಚಲನ ಹೇಳಿಕೆಯೊಂದನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಟೀಮ್​ ಇಂಡಿಯಾ 65 ರನ್​ಗಳಿಗೆ ಆಲೌಟ್ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

2019ರ ಏಕದಿನ ವಿಶ್ವಕಪ್​ ಫೈನಲ್​ನ ಸೂಪರ್ ಓವರ್​ನಲ್ಲಿ ಇಂಗ್ಲೆಂಡ್​ ರೋಮಾಂಚನ ಗೆಲುವು ಸಾಧಿಸಿತು. ಆದರೆ ಇಂಗ್ಲೆಂಡ್​ ಅನ್ನು ಹಾಲಿ ಚಾಂಪಿಯನ್​ ಪಟ್ಟದಿಂದ ತೊಲಗಿಸಲು ಮುಂದಾದ ಆಸ್ಟ್ರೇಲಿಯಾ, 2015ರ ಬಳಿಕ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 2015ರ ಟೂರ್ನಿಯಂತೆಯೇ ಈ ಬಾರಿಯೂ ಪ್ರಶಸ್ತಿ ಗೆಲ್ಲುತ್ತೇವೆ ಎಂದು ಆಲ್ ರೌಂಡರ್ ಮಿಚೆಲ್ ಮಾರ್ಷ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಮಿಚೆಲ್​ ಮಾರ್ಷ್​, 2015ರಲ್ಲಿ ಐಪಿಎಲ್ 2023ರ ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸುತ್ತಿರುವ ಮಿಚೆಲ್ ಮಾರ್ಷ್, 2023ರ ಏಕದಿನ ವಿಶ್ವಕಪ್ ಫೈನಲ್‌ ಕುರಿತು ಭಂಡ ಧೈರ್ಯದ ಭವಿಷ್ಯ ನುಡಿದಿದ್ದಾರೆ. ಟೀಮ್​ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್​ ಫೈನಲ್​ ಪ್ರವೇಶಿಸಲಿದೆ. ಆದರೆ ಆಸ್ಟ್ರೇಲಿಯಾ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಫೈನಲ್​ ಪಂದ್ಯದಲ್ಲಿ ಉಭಯ ತಂಡಗಳು ಎಷ್ಟು ಸ್ಕೋರ್ ಮಾಡಲಿವೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಫೈನಲ್​​​ನಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್​ ನಡೆಸಲಿದೆ. 50 ಓವರ್​​ಗಳಲ್ಲಿ ಕೇವಲ 2 ವಿಕೆಟ್​ ಕಳೆದುಕೊಂಡು 450 ರನ್​ ಗಳಿಸುತ್ತೇವೆ. ಇದಕ್ಕೆ ಪ್ರತಿಯಾಗಿ ಟೀಮ್​ ಇಂಡಿಯಾ ಕೇವಲ 65 ರನ್​ಗಳಿಗೆ ಆಲೌಟ್​ ಆಗಲಿದೆ ಎಂದು ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಕುರಿತು ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಜೊತೆಗೆ ಭಾರತದ ಕ್ರಿಕೆಟ್​ ಅಭಿಮಾನಿಗಳನ್ನು ಕೆರಳಿಸಿದೆ. ಜೊತೆಗೆ ಮಿಚೆಲ್​ ಮಾರ್ಷ್​ ವಿರುದ್ಧ ಕಿಡಿಕಾರಿದ್ದಾರೆ.

ಏಕದಿನ ವಿಶ್ವಕಪ್​ಗೆ ಸಂಬಂಧಿಸಿದ ಸುದ್ದಿ

Ind vs Pak: ಏಕದಿನ ವಿಶ್ವಕಪ್‌; ಭಾರತ-ಪಾಕಿಸ್ತಾನ ಹೈವೋಲ್ಟೇಜ್​ ಕದನಕ್ಕೆ ಡೇಟ್​ ಫಿಕ್ಸ್​​; ನಮ್ಮ ದೇಶಕ್ಕೆ ಬರಲು ಪಿಸಿಬಿ ಒಪ್ಪಿಗೆ

2023ರ ಏಕದಿನ ವಿಶ್ವಕಪ್‌ಗಾಗಿ ಭಾರತ ಪ್ರವಾಸ ಮಾಡಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (PCB) ಒಪ್ಪಿಕೊಂಡಿದೆ. ಈ ಹಿಂದೆ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದ ಪಿಸಿಬಿ, ಬಿಸಿಸಿಐ ಮುಂದೆ ತಲೆಬಾಗಿದಂತಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು (England vs New Zealand) ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.