ಕನ್ನಡ ಸುದ್ದಿ  /  ಕ್ರೀಡೆ  /  Ipl 2024: ಭಾರತದ ಅಭಿಮಾನಿಗಳಿಗೆ ಕಹಿ ಸುದ್ದಿ; ಮುಂದಿನ ವರ್ಷದ ಐಪಿಎಲ್ ಟೂರ್ನಿ​​ ವಿದೇಶಕ್ಕೆ ಸ್ಥಳಾಂತರ? ಇಲ್ಲಿದೆ ಕಾರಣ

IPL 2024: ಭಾರತದ ಅಭಿಮಾನಿಗಳಿಗೆ ಕಹಿ ಸುದ್ದಿ; ಮುಂದಿನ ವರ್ಷದ ಐಪಿಎಲ್ ಟೂರ್ನಿ​​ ವಿದೇಶಕ್ಕೆ ಸ್ಥಳಾಂತರ? ಇಲ್ಲಿದೆ ಕಾರಣ

IPL 2024 Shift: ಭಾರತದ ಸಾರ್ವತ್ರಿಕ ಚುನಾವಣೆಯು ಮೇ ತಿಂಗಳಲ್ಲಿ ವಿವಿಧ ಹಂತಗಳಲ್ಲಿ ಪ್ರಾರಂಭವಾಗುವುದರಿಂದ, ಐಪಿಎಲ್​ ಪಂದ್ಯಗಳನ್ನು ಬಿಸಿಸಿಐ ಭಾರತದ ಹೊರಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ಮುಂದಿನ ವರ್ಷದ ಐಪಿಎಲ್ ಟೂರ್ನಿ​​ ವಿದೇಶಕ್ಕೆ ಸ್ಥಳಾಂತರ?
ಮುಂದಿನ ವರ್ಷದ ಐಪಿಎಲ್ ಟೂರ್ನಿ​​ ವಿದೇಶಕ್ಕೆ ಸ್ಥಳಾಂತರ?

ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಇಂಡಿಯನ್ ಪ್ರೀಮಿಯರ್​ ಲೀಗ್​​ನ (IPL 2024) ಮುಂದಿನ ಆವೃತ್ತಿಯು ಭಾರತದಲ್ಲಿ ನಡೆಯಲ್ಲ. ಬದಲಿಗೆ ವಿದೇಶದಲ್ಲಿ ಜರುಗುವ ಸಾಧ್ಯತೆ ಇದೆ. ಹೌದು, ಹೀಗಂತ ಮಾಧ್ಯಮಗಳು ವರದಿ ಮಾಡಿವೆ. ಬಿಸಿಸಿಐ ತೆಗೆದುಕೊಳ್ಳಲಿರುವ ಈ ನಿರ್ಧಾರಕ್ಕೆ ಕಾರಣ ಮುಂದಿನ ವರ್ಷ ಜರುಗಲಿರುವ ಸಾರ್ವತ್ರಿಕ ಚುನಾವಣೆ.

ಭಾರತದಲ್ಲಿ ಲೋಕಸಭಾ ಚುನಾವಣೆಯು (Lokha Sabha Election 2024) 2024ರಲ್ಲಿ ನಡೆಯುವ ಐಪಿಎಲ್ ಸಂದರ್ಭದಲ್ಲೇ ಜರುಗುವ ಸಾಧ್ಯಾಸಾಧ್ಯತೆ ಹೆಚ್ಚಿದೆ. ಇದೇ ಕಾರಣದಿಂದ ಟೂರ್ನಿಯನ್ನು ವಿದೇಶಕ್ಕೆ ಶಿಫ್ಟ್​ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಜೊತೆಗೆ ಐಪಿಎಲ್​ ವೇಳಾಪಟ್ಟಿ ಕೂಡ ಸಾಕಷ್ಟು ಬದಲಾವಣೆ ತರಲು ಚರ್ಚೆ ನಡೆಸಿದೆ. ಮತ್ತೊಂದೆಡೆ ಟಿ20 ವಿಶ್ವಕಪ್​ಗೂ (T20 World Cup 2024) ದಿನಾಂಕ ನಿಗದಿಯಾಗಿದ್ದು, ಜೂನ್​ 4ರಿಂದ ಪ್ರಾರಂಭವಾಗಲಿದೆ.

ಹಾಗಾಗಿ, ಐಪಿಎಲ್​ ಅನ್ನು ಸೀಮಿತ ವಿಂಡೋದಲ್ಲಿ ನಡೆಸಲು ಬಿಸಿಸಿಐ ಚಿಂತಿಸಿದೆ. ಐಪಿಎಲ್​ 2024 ಮಾರ್ಚ್ 22ರಂದು ಪ್ರಾರಂಭವಾಗಿ ಮೇ 19ರಂದು ಕೊನೆಗೊಳಿಸಲು ಬಿಸಿಸಿಐ ವಲಯದಲ್ಲಿ ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತದ ಸಾರ್ವತ್ರಿಕ ಚುನಾವಣೆಯು ಮೇ ತಿಂಗಳಲ್ಲಿ ವಿವಿಧ ಹಂತಗಳಲ್ಲಿ ಪ್ರಾರಂಭವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಮೇ 19ರಂದು ಫೈನಲ್ ಸಾಧ್ಯತೆ?

16ನೇ ಆವೃತ್ತಿಯು ಮಾರ್ಚ್ 31ರಿಂದ ಮೇ 29ರವರೆಗೂ ನಡೆದಿತ್ತು. ಈಗ ಚುನಾವಣೆ ಮತ್ತು ಟಿ20 ವಿಶ್ವಕಪ್​ ಕಾರಣ ಐಪಿಎಲ್​​ ವಿಂಡೋ ಕೆಲವು ದಿನಗಳ ಕಾಲ ಕುಗ್ಗಿಸಲು ತೀರ್ಮಾನಿಸಿದೆ. ಐಪಿಎಲ್-2023 58 ದಿನಗಳ ವಿಂಡೋ ಹೊಂದಿತ್ತು. ಆದರೆ, ಐಸಿಸಿ ಟೂರ್ನಿ ಆಯೋಜನೆಯ ಒಂದು ವಾರಕ್ಕೂ ಮುನ್ನ ಯಾವುದೇ ಲೀಗ್​​ಗಳು ನಡೆಯಬಾರದು ಎಂಬ ಆದೇಶ ಇದೆ. ಹಾಗಾಗಿ, ಮಾರ್ಚ್​ 22ಕ್ಕೆ ಆರಂಭಗೊಂಡು ಮೇ 19ರಂದು ಐಪಿಎಲ್​ ಫೈನಲ್ ನಡೆಯುವ ಸಾಧ್ಯತೆ ಇದೆ.

ಐಪಿಎಲ್​ಗೂ ಮುನ್ನ ಭಾರತ, ಇಂಗ್ಲೆಂಡ್​​ ವಿರುದ್ಧ ಟೆಸ್ಟ್​ ಸರಣಿ ಆಡಲಿದ್ದು, ಈ ಸರಣಿ ಮಾರ್ಚ್ 11ಕ್ಕೆ ಮುಕ್ತಾಯವಾಗಲಿದೆ. ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ, ಆಟಗಾರರು ಐಪಿಎಲ್‌ಗೆ ತೆರಳುತ್ತಾರೆ. T20 ವಿಶ್ವಕಪ್‌ಗೂ ಮುನ್ನ ಭಾರತ, ಶ್ರೀಲಂಕಾ ವಿರುದ್ಧವೂ ಆಡಲಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ. ಹಾಗಾಗಿ ಇವೆಲ್ಲವನ್ನೂ ನೋಡಿಕೊಂಡು ಐಪಿಎಲ್​ ಆಯೋಜನೆಗೆ ಮಾಸ್ಟರ್​ ಪ್ಲಾನ್​ ಹಾಕುತ್ತಿದೆ ಬಿಸಿಸಿಐ. ಯಾವುದಕ್ಕೆ ಎಷ್ಟು ಸಮಯಬೇಕು, ಆಟಗಾರರು ಲಭ್ಯರಾಗುತ್ತಾರಾ? ಇಲ್ಲವೇ ಎಂಬುದನ್ನು ಯೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಚುನಾವಣೆಯಿಂದ 2 ಬಾರಿ ಸ್ಥಳಾಂತರ

ಈ ಹಿಂದೆಯೂ 2009ರ ಹಾಗೂ 2014ರ ಲೋಕಸಭಾ ಚುನಾವಣಾ ವೇಳೆ ವಿದೇಶದಲ್ಲಿ ಐಪಿಎಲ್​ ಆಯೋಜಿಸಲಾಗಿತ್ತು. ಇದೀಗ ಮತ್ತೊಮ್ಮೆ ಇದೇ ಕಾರಣದಿಂದ ಮುಂಬರುವ ಐಪಿಎಲ್​ ಅನ್ನು ವಿದೇಶಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. 2019ರಲ್ಲಿ ಇದೇ ಸಮಸ್ಯೆಯನ್ನು ಎದುರಿಸಿತ್ತು. ಆದರೆ, ಆಗ ಅದ್ಭುತ ಮತ್ತು ನಾಜೂಕಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಂಡಿತ್ತು. ಆದರೀಗ ಚುನಾವಣೆ ಜೊತೆಗೆ ಸರಣಿಗಳು, ಟಿ20 ವಿಶ್ವಕಪ್ ಇರುವುದು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಸಂಭಾವ್ಯ ಸ್ಥಳಗಳು

ಬಿಸಿಸಿಐಗೆ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲಿ ನಡೆಸಲು ಸಾಧ್ಯವಾಗದಿದ್ದರೆ, ಯುಎಇಗೆ ದ್ವಿತೀಯಾರ್ಧ ಟೂರ್ನಿಯನ್ನು ಸ್ಥಳಾಂತರಿಸುವ ಯೋಜನೆಯೂ ಬಿಸಿಸಿಐ ಮುಂದಿದೆ. ವೆಸ್ಟ್ ಇಂಡೀಸ್ ಅಥವಾ ಯುಎಸ್ಎಗೆ ಸ್ಥಳಾಂತರವಾದರೂ ಅಚ್ಚರಿ ಇಲ್ಲ. ಯಾಕೆಂದರೆ ಟಿ20 ವಿಶ್ವಕಪ್​ ಯುಎಸ್ ಮತ್ತು ವೆಸ್ಟ್ ಇಂಡೀಸ್​ನಲ್ಲೇ ನಡೆಯುವ ಕಾರಣ ಪರಿಸ್ಥಿತಿಗೆ ಒಗ್ಗಿಕೊಳ್ಳಲು ಸಹಾಯಮಾಡುತ್ತದೆ. ಆದರೆ ಇದು ಸಮಯದ ವ್ಯತ್ಯಾಸದಿಂದಾಗಿ ಪ್ರಸಾರಕರಿಗೆ ಕಷ್ಟವಾಗುತ್ತದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.