Wrestlers Protest: ಕುಸ್ತಿಪಟುಗಳ ಬೆನ್ನಿಗೆ ನಿಂತ 1983 ವಿಶ್ವಕಪ್ ಗೆದ್ದ ಬ್ಯಾಚ್; ನನಗೆ ಸಂಬಂಧ ಇಲ್ಲ ಎಂದ ಕಪಿಲ್​ದೇವ್​ ಸಹ ಆಟಗಾರ ಬಿನ್ನಿ
ಕನ್ನಡ ಸುದ್ದಿ  /  ಕ್ರೀಡೆ  /  Wrestlers Protest: ಕುಸ್ತಿಪಟುಗಳ ಬೆನ್ನಿಗೆ ನಿಂತ 1983 ವಿಶ್ವಕಪ್ ಗೆದ್ದ ಬ್ಯಾಚ್; ನನಗೆ ಸಂಬಂಧ ಇಲ್ಲ ಎಂದ ಕಪಿಲ್​ದೇವ್​ ಸಹ ಆಟಗಾರ ಬಿನ್ನಿ

Wrestlers Protest: ಕುಸ್ತಿಪಟುಗಳ ಬೆನ್ನಿಗೆ ನಿಂತ 1983 ವಿಶ್ವಕಪ್ ಗೆದ್ದ ಬ್ಯಾಚ್; ನನಗೆ ಸಂಬಂಧ ಇಲ್ಲ ಎಂದ ಕಪಿಲ್​ದೇವ್​ ಸಹ ಆಟಗಾರ ಬಿನ್ನಿ

1983 ವಿಶ್ವಕಪ್​ ವಿಜೇತ ತಂಡದ ಆಟಗಾರರು (1983 World Cup Winning Batch), ಹೇಳಿಕೆ ಬಿಡುಗಡೆ ಮಾಡುವ ಮೂಲಕ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದಾರೆ. ಈ ಬ್ಯಾಚ್​ನ ಆಟಗಾರ ಮತ್ತು ಪ್ರಸ್ತುತ ಬಿಸಿಸಿಐ ಅಧ್ಯಕ್ಷ ರೋಜರ್​​ ಬಿನ್ನಿ (BCCI President Roger Binny), ನನಗೂ ಈ ಹೇಳಿಕೆಗೂ ಸಂಬಂಧವಿಲ್ಲ ಎಂದಿದ್ದಾರೆ.

 ಕುಸ್ತಿಪಟುಗಳ ಬೆನ್ನಿಗೆ ನಿಂತ 1983 ವಿಶ್ವಕಪ್ ವಿಜೇತ ಭಾರತ ತಂಡ
ಕುಸ್ತಿಪಟುಗಳ ಬೆನ್ನಿಗೆ ನಿಂತ 1983 ವಿಶ್ವಕಪ್ ವಿಜೇತ ಭಾರತ ತಂಡ

1983ರಲ್ಲಿ ಏಕದಿನ ವಿಶ್ವಕಪ್ (1983 World Cup) ವಿಜೇತ ಕಪಿಲ್​ ದೇವ್ (Kapil Dev)​ ನೇತೃತ್ವದ ಭಾರತ ತಂಡವು ದೆಹಲಿಯಲ್ಲಿ ನಡೆಸುತ್ತಿರುವ ಭಾರತೀಯ ಕುಸ್ತಿಪಟುಗಳ ಪ್ರತಿಭಟನೆಗೆ (Wrestlers Protest) ಬೆಂಬಲ ವ್ಯಕ್ತಪಡಿಸಿದೆ. ಕಪಿಲ್ ದೇವ್ ನಾಯಕತ್ವದ ಅಂದಿನ ಭಾರತ ತಂಡದ ಆಟಗಾರರು ಹೇಳಿಕೆ ಬಿಡುಗಡೆ ಮೂಲಕ ಕುಸ್ತಿಪಟುಗಳ ಬೆನ್ನಿಗೆ ನಿಂತಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ ಎಂದು ಮಾಜಿ ಕ್ರಿಕೆಟಿಗರು ಭರವಸೆ ವ್ಯಕ್ತಪಡಿಸಿದ್ದಾರೆ.

ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಸೇರಿದಂತೆ ಹಲವು ಕುಸ್ತಿಪಟುಗಳು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ (WFI Chief Brij Bhushan Sharan Singh) ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳೆದ 40 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಸ್ತಿಪಟುಗಳಿಗೆ ರೈತರು, ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಇದೀಗ 1983 ವಿಶ್ವಕಪ್​ ವಿಜೇತದ ಬ್ಯಾಚ್​ ಹೇಳಿಕೆ ನೀಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಈ ಬ್ಯಾಚ್​ನ ಆಟಗಾರ ಮತ್ತು ಪ್ರಸ್ತುತ ಬಿಸಿಸಿಐ ಅಧ್ಯಕ್ಷ ರೋಜರ್​​ ಬಿನ್ನಿ (BCCI President Roger Binny), ನನಗೂ ಈ ಹೇಳಿಕೆಗೂ ಸಂಬಂಧವಿಲ್ಲ ಎಂದಿದ್ದಾರೆ.

ಹೇಳಿಕೆಯಲ್ಲಿ ಏನಿದೆ?

ಚಾಂಪಿಯನ್ ಕುಸ್ತಿಪಟುಗಳನ್ನು ಇಂತಹ ಪರಿಸ್ಥಿತಿಯಲ್ಲಿ ನೋಡುವುದು ತುಂಬಾ ಕೆಟ್ಟದಾಗಿದೆ. ದುಃಖಿತರಾಗಿದ್ದೇವೆ. ವಿಚಲಿತರಾಗಿದ್ದೇವೆ. ಈ ಪದಕಗಳು ನಮ್ಮ ಕುಸ್ತಿಪಟುಗಳಿಗೆ ಸುಲಭವಾಗಿ ಬಂದಿಲ್ಲ. ಇದಕ್ಕಾಗಿ ದೇಶಕ್ಕಾಗಿ ಸಮರ್ಪಣಾ ಭಾವ ತೋರಿ ಪದಕ ಗೆದ್ದಿದ್ದಾರೆ. ಆದಷ್ಟು ಬೇಗ ಕುಸ್ತಿಪಟುಗಳ ಸಮಸ್ಯೆಯನ್ನು ಬಗೆಹರಿಸಬೇಕು. ಇದೇ ಸಮಯದಲ್ಲಿ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯಲು ಸಿದ್ಧರಾಗಿರುವುದು ಅತ್ಯಂತ ಕಳವಳಕಾರಿ ಅಂಶ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

ಹಲವು ವರ್ಷಗಳ ಶ್ರಮ, ಪರಿಶ್ರಮ, ತ್ಯಾಗ ಬಲಿದಾನದ ಫಲವಾಗಿ ಲಭಿಸಿದ ಪದಕಗಳನ್ನು ಬಿಸಾಡಬೇಡಿ. ಈ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳದಂತೆ ನಾವು ಅವರನ್ನು ಒತ್ತಾಯಿಸುತ್ತೇವೆ. ಅವರ ಕುಂದುಕೊರತೆಗಳನ್ನು ತ್ವರಿತವಾಗಿ ಆಲಿಸಿ ಪರಿಹರಿಸಲಾಗುವುದು ಎಂದು ನಾವು ಉತ್ಸಾಹದಿಂದ ಭಾವಿಸುತ್ತೇವೆ. ದೇಶದ ಕಾನೂನು ಮೇಲುಗೈ ಸಾಧಿಸಲಿ ಎಂದು ಹೇಳಿಕೆಯಲ್ಲಿದೆ. ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ ಮತ್ತು ಇರ್ಫಾನ್ ಪಠಾಣ್ ಗಣ್ಯ ಕುಸ್ತಿಪಟುಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ವಿವಾದದ ಬಗ್ಗೆ ಸಕ್ರಿಯ ಕ್ರಿಕೆಟಿಗರು ಇನ್ನೂ ಪ್ರತಿಕ್ರಿಯಿಸಿಲ್ಲ.

ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ

ಏತನ್ಮಧ್ಯೆ ಆ ತಂಡದ ಸದಸ್ಯರಾಗಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು 1983ರ ವಿಶ್ವಕಪ್ ವಿಜೇತ ತಂಡ ಬಿಡುಗಡೆ ಮಾಡಿದ ಜಂಟಿ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಈ ಹೇಳಿಕೆಯಲ್ಲಿ ಸಹಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಸ್ತಿಪಟುಗಳ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂಬುದು ನನ್ನ ನಂಬಿಕೆ. ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ಹೇಳಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.