ಕನ್ನಡ ಸುದ್ದಿ  /  ಕ್ರೀಡೆ  /  Kyle Mayers: ನಾನು ಕೊಹ್ಲಿಗೆ ವೀರಾಭಿಮಾನಿ; ಐಪಿಎಲ್​​ನ ಲಕ್ನೋ ಪಂದ್ಯದ ವೇಳೆ ವಿರಾಟ್ ಜೊತೆಗಿನ ವಾಗ್ವಾದಕ್ಕೆ ಮೇಯರ್ಸ್ ಪ್ರತಿಕ್ರಿಯೆ

Kyle Mayers: ನಾನು ಕೊಹ್ಲಿಗೆ ವೀರಾಭಿಮಾನಿ; ಐಪಿಎಲ್​​ನ ಲಕ್ನೋ ಪಂದ್ಯದ ವೇಳೆ ವಿರಾಟ್ ಜೊತೆಗಿನ ವಾಗ್ವಾದಕ್ಕೆ ಮೇಯರ್ಸ್ ಪ್ರತಿಕ್ರಿಯೆ

ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಇತ್ತೀಚೆಗೆ ಈ ಜಗಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಇಬ್ಬರಲ್ಲಿ ಯಾರು ಇಷ್ಟ?' ಎಂಬ ಪ್ರಶ್ನೆಗೆ ಕೈಲ್ ಮೇಯರ್ಸ್ 'ವಿರಾಟ್ ಕೊಹ್ಲಿ' ಎಂದು ಉತ್ತರಿಸಿದ್ದಾರೆ.

ನಾನು ಕೊಹ್ಲಿಗೆ ವೀರಾಭಿಮಾನಿ; ಐಪಿಎಲ್​​ನ ಲಕ್ನೋ ಪಂದ್ಯದ ವೇಳೆ ವಿರಾಟ್ ಜೊತೆಗಿನ ವಾಗ್ವಾದಕ್ಕೆ ಮೇಯರ್ಸ್ ಪ್ರತಿಕ್ರಿಯೆ
ನಾನು ಕೊಹ್ಲಿಗೆ ವೀರಾಭಿಮಾನಿ; ಐಪಿಎಲ್​​ನ ಲಕ್ನೋ ಪಂದ್ಯದ ವೇಳೆ ವಿರಾಟ್ ಜೊತೆಗಿನ ವಾಗ್ವಾದಕ್ಕೆ ಮೇಯರ್ಸ್ ಪ್ರತಿಕ್ರಿಯೆ

16ನೇ ಆವೃತ್ತಿಯ ಐಪಿಎಲ್​​ ಹೆಚ್ಚು ಸದ್ದು ಮಾಡಲು ವಿರಾಟ್ ಕೊಹ್ಲಿ-ಗೌತಮ್ ಗಂಭೀರ್​ ನಡುವಿನ ವಿವಾದವೂ ಒಂದು ಕಾರಣ. ಮೇ 1ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್​ ಜೈಂಟ್ಸ್​ ಎದುರಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಲಕ್ನೋ ತಂಡದ ಆಟಗಾರ ಕೈಲ್​​ ಮೇಯರ್ಸ್​, ಕೊಹ್ಲಿ ಜೊತೆ ವಾಗ್ವಾದ ನಡೆದಿತ್ತು.

ಟ್ರೆಂಡಿಂಗ್​ ಸುದ್ದಿ

ಗುರಾಯಿಸಿದ್ದೇಕೆ ಎಂದು ಕೈಲ್ ಮೇಯರ್ಸ್ ಪಂದ್ಯದ ಬಳಿಕ ಕೊಹ್ಲಿ ಬಳಿ ಕೇಳಿದ್ದರು. ಅದಕ್ಕುತ್ತರಿಸಿದ್ದ ವಿರಾಟ್, ನೀನೇಕೆ ನನ್ನನ್ನು ಗುರಾಯಿಸಿದೆ ಎಂದು ಮರು ಪ್ರಶ್ನೆ ಹಾಕಿದ್ದರು. ಇವರಿಬ್ಬರ ಮಾತಿನ ಚಕಮಕಿ ವೇಳೆ ಎಲ್​ಎಸ್​ಜಿ ತಂಡದ ಮೆಂಟರ್​​ ಗೌತಮ್ ಗಂಭೀರ್​ ಮಧ್ಯ ಪ್ರವೇಶಿಸಿ, ಮತ್ತಷ್ಟು ಕೆಣಕಿದ್ದರು. ಇದು ಜೋರು ವಾಗ್ವಾದಕ್ಕೆ ಕಾರಣವಾಗಿತ್ತು. ಬಳಿಕ ಇಬ್ಬರಿಗೂ ಭಾರಿ ದಂಡ ವಿಧಿಸಲಾಯಿತು.

ಈ ಪಂದ್ಯದ ಬಳಿಕ ನಡೆದ ಈ ಹೈ ಡ್ರಾಮಾವನ್ನು ಅಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಈಗ ಇದೇ ಸುದ್ದಿ ಬೆಳಕಿಗೆ ಬಂದಿದೆ. ವಿವಾದದ ಪ್ರಮುಖ ರೂವಾರಿಯಾಗಿದ್ದ ವೆಸ್ಟ್​ ಇಂಡೀಸ್ ತಂಡದ ಕೈಲ್ ಮೇಯರ್ಸ್​ ಈ ಬಗ್ಗೆ ಮಾತನಾಡಿದ್ದು, ನಾನು ಕೊಹ್ಲಿಗೆ ವೀರಾಭಿಮಾನಿ ಎಂದು ಹೇಳಿದ್ದಾರೆ. ಅಂದು ಕೊಹ್ಲಿ ಜೊತೆ ಜಗಳ ಮಾಡಿದ ಕ್ರಿಕೆಟಿಗನೇ ಅಭಿಮಾನಿ ಎಂದಿರುವುದು ಅಭಿಮಾನಿಗಳ ಮನ ಗೆದ್ದಿದ್ದಾರೆ.

ಕೊಹ್ಲಿಯೇ ಉತ್ತಮ

ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಇತ್ತೀಚೆಗೆ ಈ ಜಗಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಇಬ್ಬರಲ್ಲಿ ಯಾರು ಇಷ್ಟ?' ಎಂಬ ಪ್ರಶ್ನೆಗೆ ಕೈಲ್ ಮೇಯರ್ಸ್ 'ವಿರಾಟ್ ಕೊಹ್ಲಿ' ಎಂದು ಉತ್ತರಿಸಿದ್ದಾರೆ. ನಮ್ಮಿಬ್ಬರ ಯಾವುದೇ ಭಿನ್ನಾಬಿಪ್ರಾಯಗಳು . ವಾಸ್ತವವಾಗಿ ವಿರಾಟ್ ಕೊಹ್ಲಿಯಂತಹ ಆಟಗಾರನನ್ನು ಬೇಗ ಔಟ್ ಮಾಡಬೇಕೆಂಬುದು ಎಲ್ಲಾ ತಂಡಗಳ ಬಯಕೆ ಎಂದು ಮೇಯರ್ಸ್ ಪ್ರತಿಕ್ರಿಯಿಸಿದ್ದಾರೆ.

ಕೊಹ್ಲಿಗೆ ವೀರಾಭಿಮಾನಿ

ಐಪಿಎಲ್ ಸಮಯದಲ್ಲಿ ನಿಮ್ಮ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ಸಂಭಾಷಣೆ, ಕೊಹ್ಲಿ ಅಗ್ರೆಸ್ಸಿವ್​ ಕುರಿತ ಪ್ರಶ್ನೆಗೆ ಉತ್ತರಿಸಿದ ಮೇಯರ್ಸ್, ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಅವರ ಆಕ್ರಮಣಕಾರಿ ವರ್ತನೆಗೆ ನಾನು ದೊಡ್ಡ ಅಭಿಮಾನಿ. ಕೆಲವೊಮ್ಮೆ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಲು ಅಗ್ರೆಸ್ಸಿವ್​ ಅಗತ್ಯ ಇದೆ. ಇದರಿಂದ ಉಳಿದ ಆಟಗಾರರಿಗೂ ಉತ್ಸಾಹ ಹೆಚ್ಚುತ್ತದೆ. ಜೋಷ್ ಬರುತ್ತದೆ. ತಂಡದ ಗೆಲುವಿಗಾಗಿ, ಕೊಹ್ಲಿ ಏನು ಬೇಕಾದರೂ ಮಾಡಲು ಹಿಂದೆ ಮುಂದೆ ನೋಡಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಮೇಯರ್ಸ್.

ಕೊಹ್ಲಿ ಜೊತೆ ನವೀನ್ ಕೋಳಿ ಜಗಳ

ಆದರೆ ಈ ಪಂದ್ಯದಲ್ಲಿ ನವೀನ್​ ಉಲ್ ಹಕ್ ಕೂಡ ಕೊಹ್ಲಿ ವಿರುದ್ಧ ಸಮರ ಸಾರಿದ್ದರು. ಪಂದ್ಯ ಮುಗಿದ ನಂತರ ಕೈ ಕುಲುಕುವ ವೇಳೆ ಕೊಹ್ಲಿ-ನವೀನ್​ಗೂ ವಾಗ್ದಾದ ಏರ್ಪಟ್ಟಿತ್ತು. ಆದರೆ ಇವರಿಬ್ಬರ ವಾಗ್ವಾದ ಐಪಿಎಲ್​ ಮುಗಿಯುವವರೆಗೂ ಇತ್ತು. ಮುಂಬೈ ಎದುರಿನ ಪಂದ್ಯದಲ್ಲಿ ಕೊಹ್ಲಿ ಬೇಗನೇ ಔಟಾಗುತ್ತಿದ್ದಂತೆ ನವೀನ್, ಪಂದ್ಯ ವೀಕ್ಷಿಸುತ್ತಿರುವ ಟಿವಿ ಪರದೆಯ ಚಿತ್ರವನ್ನು ಹಂಚಿಕೊಂಡು ಸ್ವೀಟ್ ಮ್ಯಾಂಗೋಸ್ ಬೇಕಾ ಎಂದು ಕಿಂಡಲ್ ಮಾಡಿದ್ದರು. ಆದರೆ ಕೊಹ್ಲಿ ಸುಮ್ಮನಿದ್ದರೂ, ಅಭಿಮಾನಿಗಳು ಸರಯಾಗಿ ಜಾಡಿಸಿದ್ದರು.