ಕನ್ನಡ ಸುದ್ದಿ  /  Sports  /  Cricket News Big Blow For Team India Ravichandran Ashwin Misses Pbks Vs Rr Clash With Back Injury Ahead Of Wtc Final Prs

WTC Final 2023: ಡಬ್ಲ್ಯೂಟಿಸಿ ಫೈನಲ್‌ಗೂ ಮುನ್ನ ಟೀಮ್ ಇಂಡಿಯಾಗೆ ಮತ್ತೊಂದು ದೊಡ್ಡ ಆಘಾತ; ಗಾಯಗೊಂಡ ಸ್ಟಾರ್ ಆಲ್‌ರೌಂಡರ್

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇದೆ. ಇದರ ನಡುವೆ ಇಂಜುರಿ ಭೂತ ಟೀಮ್​ ಇಂಡಿಯಾಗೆ ಬಿಟ್ಟೂ ಬಿಡದೆ ಕಾಡ್ತಿದೆ. ಇದೀಗ ಈ ಪಟ್ಟಿಗೆ ಮತ್ತೊಬ್ಬರು ಸೇರಿದ್ದಾರೆ.

ಭಾರತ ಟೆಸ್ಟ್ ತಂಡ
ಭಾರತ ಟೆಸ್ಟ್ ತಂಡ

16ನೇ ಆವೃತ್ತಿಯ ಐಪಿಎಲ್​ (IPL 2023) ನಂತರ ಟೀಮ್​​ ಇಂಡಿಯಾ (Team India) ಸತತ 2ನೇ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ (ICC World Test Championship Final)​​ ಪಂದ್ಯವನ್ನು ಆಡಲಿದೆ. ಮೊದಲ ಆವೃತ್ತಿಯಲ್ಲಿ ಫೈನಲ್​​ನಲ್ಲಿ ನ್ಯೂಜಿಲೆಂಡ್ (New Zealand)​ ಎದುರು ಸೋತಿದ್ದ ಟೀಮ್ ಇಂಡಿಯಾ, ಇದೀಗ 2ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು (Australia Team) ಎದುರಿಸಲು ಸಜ್ಜಾಗಿದೆ.

ಈ ಗ್ರ್ಯಾಂಡ್ ಫೈನಲ್ ಪಂದ್ಯಕ್ಕೆ ಈಗಾಗಲೇ ಎರಡೂ ತಂಡಗಳನ್ನು ಪ್ರಕಟಿಸಲಾಗಿದೆ. ಆದರೆ, ಫೈನಲ್ ಪಂದ್ಯಕ್ಕೂ ಮುನ್ನವೇ ಹಲವು ಆಟಗಾರರು ಗಾಯಗೊಂಡಿರುವುದು ಟೀಮ್​ ಇಂಡಿಯಾಕ್ಕೆ ಹಿನ್ನಡೆ ಉಂಟು ಮಾಡಿದೆ. ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಈಗಾಗಲೇ ಗಾಯದ ಸಮಸ್ಯೆಯಿಂದಾಗಿ (KL Rahul Injury) ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿದಿದ್ದಾರೆ.

ರಾಹುಲ್ ಬದಲಿಗೆ ಇಶಾನ್ ಕಿಶನ್​ಗೆ (Ishan Kishan) ತಂಡದಲ್ಲಿ ಅವಕಾಶ ನೀಡಲಾಗಿದೆ. ಮತ್ತೊಂದೆಡೆ ಶಾರ್ದೂಲ್ ಠಾಕೂರ್ (Shardul Thakur) ಮತ್ತು ಜಯದೇವ್ ಉನಾದ್ಕತ್ (Jaydev Unadkat) ಕೂಡ ಗಾಯಗೊಂಡಿದ್ದಾರೆ. ಇವರಿಬ್ಬರ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಆಘಾತಗಳಿಂದ ಚೇತರಿಸಿಕೊಳ್ಳುವ ಮುನ್ನವೇ ಟೀಮ್​ ಇಂಡಿಯಾ ಹಿನ್ನಡೆ ಅನುಭವಿಸಿದೆ.

ಅಶ್ವಿನ್​​​ಗೆ ಗಾಯದ ಸಮಸ್ಯೆ

ಟೀಮ್​ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಆರ್ ಅಶ್ವಿನ್ (Ravichandran Ashwin) ಗಾಯದ ಸಮಸ್ಯೆಯಿಂದಾಗಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಬೆನ್ನಿನ ಗಾಯದಿಂದಾಗಿ ರಾಜಸ್ಥಾನ್​ ರಾಯಲ್ಸ್​ ತಂಡದ ಅಶ್ವಿನ್ (R Ashwin Injury) ಧರ್ಮಶಾಲಾದಲ್ಲಿ ನಡೆದ ಐಪಿಎಲ್​ನ 66ನೇ ಪಂದ್ಯದಿಂದ ಹೊರಗುಳಿದಿದ್ದರು. ಅಶ್ವಿನ್ ಬದಲಿಗೆ ಆ್ಯಡಂ ಝಂಪಾ (Adam Zampa) ಅವರನ್ನು ತಂಡಕ್ಕೆ ಕರೆ ತರಲಾಯಿತು. ಅಶ್ವಿನ್ ಗಾಯದ ತೀವ್ರತೆ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.

ಆದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಮುನ್ನ ಟೀಮ್​ ಇಂಡಿಯಾಗೆ ಇದು ಖಂಡಿತವಾಗಿಯೂ ಆತಂಕಕಾರಿ ವಿಷಯವಾಗಿದೆ. ಈ ಗಾಯದಿಂದ ಅಶ್ವಿನ್ ಶೀಘ್ರ ಗುಣಮುಖರಾಗಲಿ ಎಂದು ಕ್ರಿಕೆಟ್ ಅಭಿಮಾನಿಗಳು ಹಾರೈಸಿದ್ದಾರೆ.

WTC ಫೈನಲ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕೆಎಸ್ ಭರತ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.

WTC ಫೈನಲ್‌ಗೆ ಆಸ್ಟ್ರೇಲಿಯಾ ತಂಡ

ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚೆಲ್ ಮಾರ್ಶ್​, ಮಿಚೆಲ್ ಸ್ಟಾರ್ಫಿ, ಮ್ಯಾಥ್ಯೂ ರೆನ್ಶಾ.