ಕನ್ನಡ ಸುದ್ದಿ  /  Photo Gallery  /  Cricket News Dinesh Karthiks First Wife Betrayed Cricketer With Murali Vijay Then Dk Marriage With Deepika Pallikal Prs

Dinesh Karthik: ಮುರಳಿ ವಿಜಯ್ ಜೊತೆ ಮೊದಲ ಪತ್ನಿ ಪ್ರೇಮ್​ ಕಹಾನಿ, ವಿಚ್ಛೇದನ; ಕುಗ್ಗಿ ಹೋಗಿದ್ದ ಡಿಕೆ ಬಾಳಿಗೆ ಬೆಳಕಾದ ದೀಪಿಕಾ ಪಳ್ಳಿಕಲ್

  • ಟೀಮ್​ ಇಂಡಿಯಾ ಹಾಗೂ ಆರ್​ಸಿಬಿ ತಂಡದ ವಿಕೆಟ್​ ಕೀಪರ್ ದಿನೇಶ್​ ಕಾರ್ತಿಕ್​ ನಿನ್ನೆ (ಜೂನ್​ 1) ತಮ್ಮ ಜನ್ಮದಿನ ಆಚರಿಸಿಕೊಂಡರು. ಅವರು 38ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಮೊದಲ ಪತ್ನಿಯ ಜೊತೆ ಸಂಬಂಧ ಮುರಿದುಕೊಂಡದ್ದು ಹಾಗೂ 2ನೇ ಪತ್ನಿ ದೀಪಿಕಾ ಪಳ್ಳಿಕಲ್​ ಅವರೊಂದಿಗೆ ಪ್ರೇಮಕಥೆಯನ್ನು ಈ ಮುಂದೆ ನೋಡೋಣ.

ಸಂಬಂಧಗಳು ಅಂದರೆ ಇಂದು ನಾಳೆಗೆ ಸೀಮಿತವಲ್ಲ. ಅದೊಂದು ಜೀವನ. ಗಂಡ-ಹೆಂಡತಿ ಸಂಬಂಧಕ್ಕೆ ಎಂದೂ ಸಾವಿಲ್ಲ. ಆದರೆ ಕೆಲವೊಂದು ಎಷ್ಟೇ ಗಟ್ಟಿಯಾಗಿದ್ದರೂ ನೋವು ತರಿಸುತ್ತವೆ. ಇಂತಹ ದುರಂತಗಳು ಕ್ರಿಕೆಟಿಗರ ಜೀವನದಲ್ಲೂ ನಡೆದಿವೆ. ಅಂತಹ ದುರಂತ ಘಟನೆ ನಡೆದಿರುವುದು ದಿನೇಶ್ ಕಾರ್ತಿಕ್ ಜೀವನದಲ್ಲಿ.
icon

(1 / 10)

ಟೀಮ್​ ಇಂಡಿಯಾ ಹಾಗೂ ಆರ್​ಸಿಬಿ ತಂಡದ ಆಪತ್ಭಾಂದವನಾಗಿದ್ದ ದಿನೇಶ್ ಕಾರ್ತಿಕ್​​​ ವೈವಾಹಿಕ ಜೀವನವೂ ಹಳಿ ತಪ್ಪಿತ್ತು. 2007ರಲ್ಲಿ  ಕಾರ್ತಿಕ್ ತಮ್ಮ ಬಾಲ್ಯದ ಗೆಳತಿ ನಿಕಿತಾ ವಂಜಾರಾರನ್ನ ವರಿಸಿದ್ದರು. ಆಗಿನ್ನೂ ಡಿಕೆಗೆ 21 ವರ್ಷವಷ್ಟೆ. ಇಬ್ಬರ ಕುಟುಂಬಸ್ಥರಿಗೂ ಪರಿಚಯ ಮೊದಲಿನಿಂದಲೂ ಇತ್ತು. ಇದೇ ಕಾರಣಕ್ಕೆ ಇಬ್ಬರ ಮದುವೆಗೆ ಪೋಷಕರು ಒಪ್ಪಿದ್ದು.
icon

(2 / 10)

2012ರಲ್ಲಿ ದಿನೇಶ್​ಗೆ ಸುದ್ದಿಯೊಂದು ಸಿಡಿಲಿನಂತೆ ಅಬ್ಬರಿಸಿತು. ಕಾರ್ತಿಕ್​ಗೆ ಗೊತ್ತಿಲ್ಲದಂತೆ, ಸ್ನೇಹಿತ ಹಾಗೂ ತಮಿಳುನಾಡು ಕ್ರಿಕೆಟಿಗ ಮುರಳಿ ವಿಜಯ್​ರೊಂದಿಗೆ​, ಡಿಕೆ ಪತ್ನಿ ನಿಕಿತಾ ವಂಜಾರಾ ಮತ್ತೊಂದು ಮದುವೆಯಾದರು. ಈ ಸಂದರ್ಭದಲ್ಲಿ ಕಾರ್ತಿಕ್​ ತಮಿಳುನಾಡಿದ್ದರು. ಬಹಳ ನೊಂದಿದ್ದ ಡಿಕೆ, ನಿಕಿತಾರಿಂದ ವಿಚ್ಛೇದನ ಪಡೆದರು.
icon

(3 / 10)

ಮುರಳಿ ವಿಜಯ್​ ಮತ್ತು ದಿನೇಶ್​ ಕಾರ್ತಿಕ್​ ಇಬ್ಬರೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ವಿಜಯ್ ಮತ್ತು ಕಾರ್ತಿಕ್ ಉತ್ತಮ ಸ್ನೇಹಿತ. ಆದರೆ ಈ ಸ್ನೇಹ ಹೆಚ್ಚು ದಿನ ಇರಲಿಲ್ಲ. ದಿನೇಶ್​ ಕಾರ್ತಿಕ್​​​ಗೆ ಗೊತ್ತಿಲ್ಲದಂತೆ ವಿಜಯ್ ಮತ್ತು ಡಿಕೆ ಪತ್ನಿ ನಿಕಿತಾ ನಡುವೆ ಅರಳಿದ ಪ್ರೀತಿಯೇ ಇದಕ್ಕೆ ಕಾರಣ. 
icon

(4 / 10)

ದಿನೇಶ್ ಕಾರ್ತಿಕ್​​ ಮೊದಲು ತನ್ನ ಬೆಸ್ಟ್​ ಫ್ರೆಂಡ್​ ಎಂದು ವಿಜಯ್​​​ರನ್ನು ನಿಕಿತಾಗೆ ಪರಿಚಯ ಮಾಡಿಕೊಟ್ಟಿದ್ದರು. 5ನೇ ಆವೃತ್ತಿಯ ಐಪಿಎಲ್​, 2012ರಲ್ಲಿ ಡಿಕೆ ಮುಂಬೈ ಇಂಡಿಯನ್ಸ್ ಪರ ಆಡ್ತಿದ್ದರು. ಆಗ ನಿಕಿತಾ ಪಂದ್ಯಗಳನ್ನು ವೀಕ್ಷಿಸಲು ಮೈದಾನಕ್ಕೆ ಆಗಮಿಸುತ್ತಿದ್ದರು. ಇದೇ ವೇಳೆ ನಿಕಿತಾ ಮತ್ತು ವಿಜಯ್ ಉತ್ತಮ ಸ್ನೇಹಿತರಾದರು. ಡಿಕೆ ಮನೆಗೆ ಊಟಕ್ಕೂ ಬಂದಿದ್ದರು ವಿಜಯ್.
icon

(5 / 10)

ದಿನಗಳು ಕಳೆದಂತೆ ಇಬ್ಬರ ನಡುವೆ ಒಡನಾಟ ಹೆಚ್ಚಾಯಿತು. ಇದು ಪ್ರೀತಿಗೆ ತಿರುಗಿತು. ಈ ವಿಷಯ ತಿಳಿದ ಡಿಕೆ ತೀವ್ರ ಆಘಾತಕ್ಕೆ ಒಳಗಾದರು. ವಿಜಯ್ ಮತ್ತು ನಿಕಿತಾ ನಡುವಿನ ಸಂಬಂಧ ತಿಳಿದ ತಕ್ಷಣ, ಕಾರ್ತಿಕ್​ಗೆ ವಿಚ್ಛೇದನ ನೀಡಿದರು. ಆಗ ನಿಕಿತಾ ತಾಯಿಯಾಗಲಿದ್ದಾರೆ ಎಂದು ತಿಳಿದ ನಂತರ ವಿಜಯ್​​ರನ್ನು ವರಿಸಿದಳು. ಈ ಘಟನೆ ನಂತರ ವಿಜಯ್​-ಕಾರ್ತಿಕ್​ ಮಧ್ಯೆ ದೊಡ್ಡ ಗಲಾಟೆಯಾಗಿತ್ತು.
icon

(6 / 10)

ಕರಾಳ ಘಟನೆಯಿಂದ ದಿನೇಶ್​ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಆದರೆ ಈ ಬೆಳವಣಿಗೆ ನಡೆದು 2 ವರ್ಷಗಳ ಬಳಿಕ ದಿನೇಶ್​ ಕಾರ್ತಿಕ್​ ಬದುಕು ಬದಲಿಸಿದ್ದು, ಅಂತಾರಾಷ್ಟ್ರೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್. ಚಿನ್ನ ಸೇರಿದಂತೆ ಪದಕಗಳನ್ನು ಗೆದ್ದಿದ್ದಾರೆ. ಆಗಸ್ಟ್ 2015ರಲ್ಲಿ ದೀಪಿಕಾ ಪಳ್ಳಿಕಲ್​ ಮತ್ತು ದಿನೇಶ್ ಮದುವೆಯಾದರು. ಇವರಿಬ್ಬರದ್ದೂ ಕೂಡ ಪ್ರೇಮ ವಿವಾಹ ಎಂಬುದು ವಿಶೇಷ.
icon

(7 / 10)

ಜಿಮ್​​ನಲ್ಲಿ ಪರಿಚಯಕ್ಕೂ ಮುನ್ನ ದಿನೇಶ್​ ಕಾರ್ತಿಕ್​ ಮೇಲೆ ಕೆಟ್ಟ ಅಭಿಪ್ರಾಯ ಇತ್ತು. ಆದರೆ ಅವರ ಪರಿಚಯದ ನಂತರ ಡಿಕೆ ಮೇಲಿದ್ದ ಅಭಿಪ್ರಾಯ ಬದಲಾಗಿತ್ತು. ಬಳಿಕ ಇಬ್ಬರ ನಡುವೆ ಸ್ನೇಹ ಹೆಚ್ಚಾಯಿತು. ಬಳಿಕ ಒಂದು ವರ್ಷದೊಳಗೆ ಡಿಕೆ, ದೀಪಿಕಾಗೆ ಪ್ರಪೋಸ್​ ಮಾಡಿದ್ದರು. ಆದರೆ ದೀಪಿಕಾ ಮೊದಲು ಒಪ್ಪದೆ ಕಾಯಿಸಿದ್ದರು.
icon

(8 / 10)

ಇಬ್ಬರದ್ದೂ ಅನ್ಯ ಧರ್ಮವಾದ್ದರಿಂದ ಎರಡೂ ಕುಟುಂಬಗಳು ಒಪ್ಪಿರಲಿಲ್ಲ. ಇಬ್ಬರು ಸಹ ಎರಡೂ ಕುಟುಂಬಗಳನ್ನು ಒಪ್ಪಿಸಲು ಹರಸಾಹಸ ಪಡಡಬೇಕಾಯಿತು. ಹಲವು ತಿಂಗಳ ನಂತರ ಹೋರಾಟದ ಫಲವಾಗಿ ಎರಡೂ ಕುಟುಂಬಗಳು ಒಪ್ಪಿದರು. ಮೆಹೆಂದಿ ಮತ್ತು ಸಂಗೀತ ಸೇರಿದಂತೆ ಅದ್ಧೂರಿಯಾಗೇ ಮದುವೆ ನಡೆಸಿಕೊಟ್ಟರು.
icon

(9 / 10)

ಸದ್ಯ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ವರ್ಷವಷ್ಟೇ ಅವಳಿ ಮಕ್ಕಳಿಗೆ ಪೋಷಕರಾದರು. ಈಗ ದಿನೇಶ್ ಕಾರ್ತಿಕ್ ತಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷವಾಗಿದ್ದಾರೆ, ಅವರು ಕ್ರಿಕೆಟ್‌ ನಲ್ಲೂ ಹೊಸ ಮೈಲಿಗಲ್ಲು ಸಾಧಿಸುತ್ತಿದ್ದಾರೆ.
icon

(10 / 10)

ಇತರ ಗ್ಯಾಲರಿಗಳು