David Warner: ವೀರೇಂದ್ರ ಸೆಹ್ವಾಗ್ ದಾಖಲೆ ನುಚ್ಚುನೂರು ಮಾಡಿದ ಡೇವಿಡ್ ವಾರ್ನರ್; ದಿಗ್ಗಜರ ಪಟ್ಟಿಗೂ ಪ್ರವೇಶಿಸಿದ ಆಸಿಸ್ ಬ್ಯಾಟರ್
- ಆ್ಯಷಸ್ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಭಾರತದ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದಿದ್ದಾರೆ.
- ಆ್ಯಷಸ್ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಭಾರತದ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದಿದ್ದಾರೆ.
(1 / 7)
ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 2 ವಿಕೆಟ್ಗಳಿಂದ ಗೆದ್ದು ಬೀಗಿದೆ. ಆ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಸರಣಿ ಮುನ್ನಡೆ ಪಡೆದುಕೊಂಡಿದೆ.(Action Images via Reuters)
(2 / 7)
ಇನ್ನು ಈ ಪಂದ್ಯದಲ್ಲಿ ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
(3 / 7)
ಟೆಸ್ಟ್ ಕ್ರಿಕೆಟ್ನಲ್ಲಿ ಡೇವಿಡ್ ವಾರ್ನರ್ ಆರಂಭಿಕರಾಗಿ ಅಧಿಕ ರನ್ ಗಳಿಸಿದ್ದಾರೆ. ಆ ಮೂಲಕ ಭಾರತ ತಂಡದ ಓಪನರ್ ವೀರೇಂದ್ರ ಸೆಹ್ವಾಗ್ರನ್ನು ಹಿಂದಿಕ್ಕಿದ್ದಾರೆ. ಓಪನರ್ ಆಗಿ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ.
(4 / 7)
ಟೆಸ್ಟ್‌ನಲ್ಲಿ ಓಪನರ್ ಆಗಿ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ದಿಗ್ಗಜ ಆಟಗಾರರೇ ಇದ್ದಾರೆ. ಭಾರತದ ಸುನಿಲ್ ಗವಾಸ್ಕರ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಇಂಗ್ಲೆಂಡ್‌ನ ಅಲೆಸ್ಟರ್ ಕುಕ್, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ನಂತರ ಡೇವಿಡ್ ವಾರ್ನರ್ ಪಡೆದುಕೊಂಡಿದ್ದಾರೆ.
(5 / 7)
ಮೊದಲ ಟೆಸ್ಟ್ ಪಂದ್ಯದಲ್ಲಿ 9 ಮತ್ತು 36 ರನ್ ಗಳಿಸಿದರು. ಆ ಮೂಲಕ ಟೆಸ್ಟ್‌ನಲ್ಲಿ 8208 ರನ್ ಗಳಿಸಿದ್ದು, 8207 ರನ್ ಗಳಿಸಿದ್ದ ಸೆಹ್ವಾಗ್ರನ್ನು ಹಿಂದಿಕ್ಕಿದ್ದಾರೆ.
(6 / 7)
ಟೆಸ್ಟ್‌ನಲ್ಲಿ ಆರಂಭಿಕರಾಗಿ ಅಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಅಲೆಸ್ಟರ್ ಕುಕ್, ಅಗ್ರಸ್ಥಾನದಲ್ಲಿದ್ದಾರೆ. 11,845 ರನ್ ಸಿಡಿಸಿದ್ದಾರೆ. ಗವಾಸ್ಕರ್ 9,607 ರನ್, ಗ್ರೇಮ್ ಸ್ಮಿತ್ 9030 ರನ್, ಮ್ಯಾಥ್ಯೂ ಹೇಡನ್ 8,625 ರನ್ ಗಳಿಸಿದ್ದಾರೆ.
ಇತರ ಗ್ಯಾಲರಿಗಳು