ಕನ್ನಡ ಸುದ್ದಿ  /  Sports  /  Cricket News Ex Pak Captain Inzamam Ul Haq Is Best Middle Order Batter Not Sachin Tendulkar Says Virender Sehwag Prs

Sehwag on Inzamam: ಆಪ್ತ ಸಚಿನ್​ ಹೆಸರನ್ನೇ ಮರೆತ ವೀರು; ಇಂಜಮಾಮ್​ ಏಷ್ಯಾದ ಅತ್ಯುತ್ತಮ​ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಎಂದ ಸೆಹ್ವಾಗ್

ಕ್ರಿಕೆಟ್​ ದೇವರೆಂದೇ ಪ್ರಖ್ಯಾತಿ ಪಡೆದಿರುವ ಸಚಿನ್​ ಅವರನ್ನು ಏಷ್ಯಾದ ಅತ್ಯುತ್ತಮ ಬ್ಯಾಟ್ಸ್​ಮನ್​ ಅಲ್ಲವೆಂದು ಸ್ಪೋಟಕ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್​ ಹೇಳಿದ್ದಾರೆ. ಬದಲಿಗೆ ಪಾಕಿಸ್ತಾನ ತಂಡದ ಇಂಜಮಾಮ್ ವುಲ್ ಹಕ್ (Inzamam-ul-Haq) ಹಾಡಿ ಹೊಗಳಿದ್ದಾರೆ.

ಇಂಜಮಾಮ್​ ಉಲ್​ ಹಕ್​ ಏಷ್ಯಾದ ಅತ್ಯುತ್ತಮ​ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಎಂದ ವೀರೇಂದ್ರ ಸೆಹ್ವಾಗ್
ಇಂಜಮಾಮ್​ ಉಲ್​ ಹಕ್​ ಏಷ್ಯಾದ ಅತ್ಯುತ್ತಮ​ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಎಂದ ವೀರೇಂದ್ರ ಸೆಹ್ವಾಗ್

ಸಚಿನ್​ ತೆಂಡೂಲ್ಕರ್, (Sachin Tendulkar) ​ಕ್ರಿಕೆಟ್​​​​​​​​​​​​​​​​ ಸಾಮ್ರಾಜ್ಯದ ಚಕ್ರವರ್ತಿ, ಮಹಾ ಸಾಹಸಿ, ಇತಿಹಾಸ ಪುಟಗಳಲ್ಲಿ ಸಚಿನ್​ ಬರೆದಿದ್ದೇ ವೇದವಾಕ್ಯ, ಶತ್ರುಗಳನ್ನು ಸೆದೆ ಬಡಿದು ಸಾಮ್ರಾಜ್ಯ ವಿಸ್ತರಿಸಿದ ಅಪ್ರತಿಮ ವೀರ ಈ ಶೂರ. ರನ್​​ಗಳು, ಶತಕ, ಅರ್ಧಶತಕ, ಪಂದ್ಯಗಳು.. ಹೀಗೆ ಪ್ರತಿಯೊಂದರಲ್ಲೂ ದಾಖಲೆಗಳ ಮೇಲೆ ದಾಖಲೆ ಬರೆದ ಸಾಧಕ. ಅಸಾಧ್ಯ ಎಂಬುದನ್ನೂ ನೀರು ಕುಡಿದಂತೆ ಸಾಧಿಸಿದ ಛಲಗಾರ.

ಅಬ್ಬಾ.. ಸಚಿನ್​ ಬಗ್ಗೆ ಎಷ್ಟು ಹೇಳಿದರೂ ಸಾಲದು. ಹೇಳುತ್ತಾ, ಹೋದರೆ ವರ್ಣಿಸಲು ಹೊಸ ಶಬ್ದನಿಘಂಟೇ ಬೇಕು. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಭಾರತೀಯ ಕ್ರಿಕೆಟ್​​ಗೆ ಸಿಕ್ಕ ಒಂದು ಅಪರೂಪದ ಮುತ್ತು. ಕ್ರಿಕೆಟ್​ ದೇವರೆಂದೇ ಪ್ರಖ್ಯಾತಿ ಪಡೆದಿರುವ ಸಚಿನ್​ ಅವರನ್ನು ಏಷ್ಯಾದ ಅತ್ಯುತ್ತಮ ಬ್ಯಾಟ್ಸ್​ಮನ್​ ಅಲ್ಲವೆಂದು ಸ್ಪೋಟಕ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag)​ ಹೇಳಿದ್ದಾರೆ. ಬದಲಿಗೆ ಪಾಕಿಸ್ತಾನ ತಂಡದ ಆಟಗಾರರನ್ನು ಹಾಡಿ ಹೊಗಳಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್​ ಉಲ್​ ಹಕ್​ ಅವರು ಸಚಿನ್​ಗಿಂತಲೂ ಬೆಸ್ಟ್​ ಬ್ಯಾಟ್ಸ್​​ಮನ್ ಎಂದು ಹೇಳಿದ್ದಾರೆ ಸೆಹ್ವಾಗ್​. ಸಚಿನ್​​ ಜೊತೆಗೆ ಇನ್ನಿಂಗ್ಸ್​ ಆರಂಭಿಸುತ್ತಿದ್ದ ವೀರು, ಅವರ ಬಗ್ಗೆ ಇಂಚಿಂಚೂ ಮಾಹಿತಿ ತಿಳಿದಿದ್ದರೂ, ದಿಗ್ಗಜ ಬ್ಯಾಟ್ಸ್​ಮನ್​ನನ್ನು ಕಡೆಗಣಿಸಿದ್ದು ಸರಿಯಿಲ್ಲ ಎಂದು ಫ್ಯಾನ್ಸ್​​ ಕಿಡಿಕಾರಿದ್ದಾರೆ.

ಸೆಹ್ವಾಗ್​ ಹೇಳಿದ್ದೇನು?

ಎಲ್ಲರೂ ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡುತ್ತಾರೆ. ಆದರೆ ಇಂಜಮಾಮ್ ವುಲ್ ಹಕ್ ಏಷ್ಯಾದ ಅತಿ ದೊಡ್ಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಂದು ನಾನು ಹೇಳುತ್ತೇನೆ. ಸಚಿನ್‌ಗೆ ಯಾರೊಂದಿಗೂ ಪೈಪೋಟಿ ಇಲ್ಲ, ಎಲ್ಲಕ್ಕಿಂತ ಮಿಗಿಲಾದವರು. ಸಚಿನ್ ಪಾಜಿಯನ್ನು ಬಿಟ್ಟರೆ ಅತ್ಯುತ್ತಮ ಆಟಗಾರ, ಎಂದರೆ ಮೊದಲು ನನ್ನ ನೆನಪಿಗೆ ಬರುವುದು ಇಂಜಮಾಮ್. ನಾನು ಹೇಳಿದ್ದು ಮಧ್ಯಮ ಕ್ರಮಾಂಕದ ಆಟಗಾರ ಎಂದು ಹೇಳಿದ್ದಾರೆ.

ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಕುಮಾರ್ ಸಂಗಾಕ್ಕಾರ, ಮಹೇಲಾ ಜಯವರ್ಧನೆ ಮುಂತಾದವರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ್ದಾರೆ. ಆದರೆ, ಶ್ರೀಲಂಕಾ, ಭಾರತ ಮತ್ತು ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳಲ್ಲಿ ಇಂಜಮಾಮ್ ವುಲ್ ಹಕ್ ಅವರು ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯಾರಿಲ್ಲ. ಅವರಿಗಿಂತ ಉತ್ತಮ ಬ್ಯಾಟರ್ ಅನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ.

2003-04ರ ಅವಧಿಯಲ್ಲಿ ಇಂಜಮಾಮ್ ಪ್ರತಿ ಓವರ್‌ಗೆ 8 ರನ್ ಗಳಿಸುತ್ತಿದ್ದರು. ಅವರು ತಮ್ಮ ಬ್ಯಾಟಿಂಗ್ ಜೊತೆಗಾರನಿಗೆ ಭಯಪಡಬೇಡಿ, ಸುಲಭವಾಗಿ ಹೊಡೆಯೋಣ ಎಂದು ಹೇಳುತ್ತಿದ್ದರು. ಆ ಆತ್ಮವಿಶ್ವಾಸ ನೋಡಿ ನನಗೆ ಆಶ್ಚರ್ಯವಾಯಿತು. ಹೇಳಿದಂತೆ 10 ಓವರ್​ಗಳಲ್ಲಿ 80 ರನ್ ಗಳಿಸುತ್ತಿದ್ದರು. ಉಳಿದ ಆಟಗಾರರು ಎಷ್ಟೇ ನರ್ವಸ್ ಆಗಿದ್ದರೂ ಇಂಜಮಾಮ್ ಯಾವಾಗಲೂ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಿದ್ದರು ಎನ್ನುತ್ತಾರೆ ಸೆಹ್ವಾಗ್​.

ಘಟನೆಯೊಂದನ್ನು ನೆನೆದ ವೀರು

2005ರಲ್ಲಿ ಡ್ಯಾನಿಶ್ ಕೆನರಿಯಾ ಬೌಲಿಂಗ್​ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದೆ. 2 ಓವರ್​​​ಗಳ ಕಾಲ ರಕ್ಷಣಾ ಆಟವಾಡಿದೆ. ಅದರ ನಂತರ ನಾನು ಇಂಜಮಾಮ್ ಕಡೆಗೆ ತಿರುಗಿ ನೋಡಿದೆ. ಆಗ ನನ್ನ ಕಾಲುಗಳು ನೋಯುತ್ತಿವೆ ಎಂದು ಹೇಳಿದೆ. ಅದಕ್ಕೆ ಉತ್ತರಿಸಿದ ಇಂಜಮಾಮ್​ ಅದಕ್ಕೆ ನಾನೇನು ಮಾಡಲಿ ಎಂದರು. ಸಿಕ್ಸರ್​ ಬಾರಿಸುತ್ತೇನೆ. ಅಲ್ಲಿರುವ ಫೀಲ್ಡರ್​ ಅನ್ನು ಒಳಗೆ ಕರೆದುಕೊಳ್ಳುವಂತೆ ಸೂಚಿಸಿದೆ. ಅದಕ್ಕೆ ಇಂಜಮಾಮ್​ ನಕ್ಕರು.

ನಾನು ಸಿಕ್ಸರ್​ ಬಾರಿಸಿದಲ್ಲ ಎಂದರೆ ನೀನು ಮತ್ತೆ ಆ ಫಿಲ್ಡರ್ ಅನ್ನು ಹಿಂದಕ್ಕೆ ಕಳುಹಿಸು ಎಂದೆ. ಅದಕ್ಕೊಪ್ಪಿದ ಇಂಜಿ ಭಾಯ್​, ಫೀಲ್ಡರ್ ಅನ್ನು ಮುಂದಕ್ಕೆ ಕರೆದುಕೊಂಡರು. ಫೀಲ್ಡರ್​ ಮುಂದಕ್ಕೆ ಬಂದ ಬರು ಎಸೆತದಲ್ಲೇ ಸಿಕ್ಸರ್​ ಬಾರಿಸಿದ್ದೆ. ಫೀಲ್ಡರ್​ ಬದಲಿಸಿದ್ದರಿಂದ ದಾನಿಶ್​ ಕನೇರಿಯಾಗೆ ಕೋಪ ಬಂದಿತು. ನೀವು ಫೀಲ್ಡರ್​ ಅನ್ನು ಬದಲಿಸಿದ್ದು ಯಾಕೆ ಎಂದು ಕನೇರಿಯಾ, ಇಂಜಮಾಮ್​ ಅವರನ್ನು ಕೇಳಿದರು. ಸೈಲೆಂಟಾಗಿ ಬೌಲಿಂಗ್​ ಮಾಡು ಹೋಗು ಎಂದು ಅವರು ಕಳಿಸಿದ್ದರು. ಆ ಘಟನೆ ನನಗಿನ್ನೂ ನೆನಪಿದೆ ಎಂದು ಸೆಹ್ವಾಗ್​ ಘಟನೆಯೊಂದರ ಬಗ್ಗೆ ವಿವರಿಸಿದರು.