ಕನ್ನಡ ಸುದ್ದಿ  /  Sports  /  Cricket News Forget History You Ve Got A Wtc Final To Win Vaughans Gill Vs Kl Rahul Triggers Top Order Debate Prs

KL Rahul: ಭಾರತ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಗೆಲ್ಲಬೇಕೆಂದರೆ ಶುಭ್ಮನ್ ಗಿಲ್​​ ಬದಲಿಗೆ ಕೆಎಲ್​ ರಾಹುಲ್​ರನ್ನು ಆಡಿಸಿ: ಮೈಕಲ್​ ವಾನ್​

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (WTC Final)​ ಪಂದ್ಯದಲ್ಲಿ ಗೆಲ್ಲಬೇಕೆಂದರೆ ಆರಂಭಿಕರಾಗಿ ಕೆಎಲ್​ ರಾಹುಲ್​ ಅವರನ್ನು ಆಡಿಸಬೇಕು ಎಂದು ಇಂಗ್ಲೆಂಡ್​ ತಂಡದ ಮೈಕಲ್​ ವಾನ್ (Michael Vaughan)​, ಭಾರತ ತಂಡದ ಮ್ಯಾನೇಜ್​ಮೆಂಟ್​ಗೆ ಸೂಚಿಸಿದ್ದಾರೆ.​

ಕೆಎಲ್ ರಾಹುಲ್​ ಬೆಂಬಲಕ್ಕೆ ನಿಂತ ಮೈಕಲ್​ ವಾನ್​
ಕೆಎಲ್ ರಾಹುಲ್​ ಬೆಂಬಲಕ್ಕೆ ನಿಂತ ಮೈಕಲ್​ ವಾನ್​

ಜೂನ್​ 7ರಿಂದ ಲಂಡನ್​​​ನ ಓವಲ್​ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (ICC World Test Championship Final) ಪಂದ್ಯಕ್ಕೆ 15 ಸದಸ್ಯರ ಭಾರತ ತಂಡ (Team India) ಪ್ರಕಟಗೊಂಡಿದೆ. ಟೆಸ್ಟ್​ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಅಜಿಂಕ್ಯ ರಹಾನೆ (Ajinkya Rahane)  ಮತ್ತೆ ಕಂಬ್ಯಾಕ್​ ಮಾಡಿದ್ದಾರೆ. ಜೊತೆಗೆ ವಿಕೆಟ್​ ಕೀಪರ್​ ರಿಷಭ್​ ಪಂತ್ (Rishabh Pant)​ ಸ್ಥಾನದಲ್ಲಿ ಶ್ರೀಕರ್​ ಭರತ್ (KS Bharat)​ ಅವಕಾಶ ಪಡೆದಿದ್ದಾರೆ.

ಆದರೆ ಫೈನಲ್​ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬುದು ಗೊಂದಲ ಉಂಟಾಗಿದೆ. ಮುಖ್ಯವಾಗಿ ನಾಯಕ ರೋಹಿತ್​ ಶರ್ಮಾ (Rohit Sharma) ಜೊತೆಗೆ ಇನ್ನಿಂಗ್ಸ್​ ಯಾರು ಆರಂಭಿಸಲಿದ್ದಾರೆ ಎಂಬ ಗೊಂದಲ ಹೆಚ್ಚಾಗಿದೆ. ಈ ಸ್ಥಾನಕ್ಕಾಗಿ ಕೆಎಲ್ ರಾಹುಲ್ (KL Rahul)​ ಮತ್ತು ಶುಭ್ಮನ್ ಗಿಲ್​ (Shubman Gill) ನಡುವ ಪೈಪೋಟಿ ಏರ್ಪಟ್ಟಿದೆ. ಫೈನಲ್​ ಹಣಾಹಣಿಯಲ್ಲಿ ರಾಹುಲ್​ ಬದಲಿಗೆ ಶುಭ್ಮನ್​ಗೆ ಅವಕಾಶ ನೀಡಬೇಕು ಎಂದು ಮಾಜಿ ಕ್ರಿಕೆಟರ್ಸ್​, ಕ್ರಿಕೆಟ್​​ ತಜ್ಞರು ಟೀಮ್​ ಮ್ಯಾನೇಜ್​ಮೆಂಟ್​ಗೆ ಸಲಹೆ ನೀಡುತ್ತಿದ್ದಾರೆ.

ಆದರೆ ಇಂಗ್ಲೆಂಡ್​ ಮಾಜಿ ಕ್ರಿಕೆಟಿಗ ಮೈಕಲ್​ ವಾನ್ (Michael Vaughan)​, ಗಿಲ್​ಗೆ ಬೇಡ ರಾಹುಲ್​ಗೆ ಅವಕಾಶ ನೀಡಿ ಎಂದು ಸೂಚಿಸಿದ್ದಾರೆ. ರಾಹುಲ್​ಗೆ ಬೆಂಬಲ ಸೂಚಿಸಿರುವ ವಾನ್​, ಈ ಬಗ್ಗೆ ಕ್ರಿಕ್‌ಬಜ್‌ ಜೊತೆ ಮಾತನಾಡಿದ್ದಾರೆ. ಇಂಗ್ಲಿಷ್ ಕಂಡೀಷನ್​ಗಳಲ್ಲಿ ಭಾರತ ತಂಡದಲ್ಲಿ ಏಕೈಕ ಬದಲಾವಣೆ ಮಾಡಬೇಕಿದೆ. ಗಿಲ್‌ ಬದಲಿಗೆ ರಾಹುಲ್​​ರನ್ನು ಕರೆ ತರಬೇಕು. ಇಂಗ್ಲೆಂಡ್​ ಪಿಚ್​ಗಳಲ್ಲಿ ಗಿಲ್‌ಗಿಂತ ಉತ್ತಮವಾಗಿ ಆಡುತ್ತಾರೆ ಎಂದು ಹೇಳಿದ್ದಾರೆ.

ಶುಭ್ಮನ್​ ಗಿಲ್​ ಬೊಂಬಾಟ್​ ಆಟದೊಂದಿಗೆ​​ 2023ರ ವರ್ಷವನ್ನು ಆರಂಭಿಸಿದ್ದಾರೆ. ಟೆಸ್ಟ್​ನಲ್ಲಿ ತಮ್ಮ ಸ್ಥಾನವನ್ನೂ ಭದ್ರಪಡಿಸಿಕೊಂಡಿದ್ದಾರೆ. ಶತಕಗಳ ಮೇಲೆ ಶತಕ ಚಚ್ಚಿದ್ದಾರೆ. ಗಿಲ್​ರ ಇದೇ ಫಾರ್ಮ್​ ಶ್ರೀಮಂತ ಲೀಗ್​​​​ ಮುಂದುವರೆದಿದೆ.​​​ ಆದರೆ, ರಾಹುಲ್​ ಅವರ ಕಳಪೆ ಫಾರ್ಮ್​​ ಐಪಿಎಲ್​ನಲ್ಲೂ ಮುಂದುವರೆಸಿದ್ದಾರೆ. ಏಳು ಪಂದ್ಯಗಳಲ್ಲಿ 113.91 ಸ್ಟ್ರೈಕ್​​ರೇಟ್‌ನಲ್ಲಿ 262 ರನ್ ಗಳಿಸಿದ್ದಾರೆ. ಗಿಲ್​ 333 ರನ್​ ಗಳಿಸಿದ್ದಾರೆ.

ಶುಭ್ಮನ್​ ಒಬ್ಬ ಅಪಾಯಕಾರಿ ಆಟಗಾರ. ಆದರೆ ನಾನು ಕೆಲವು ಸಣ್ಣ ತಾಂತ್ರಿಕ ನ್ಯೂನತೆಗಳನ್ನು ನೋಡಿದ್ದೇನೆ. ಆದರೆ ನೀವು ಐತಿಹಾಸಿಕ ಫೈನಲ್​ ಪಂದ್ಯವನ್ನು ಗೆಲ್ಲಬೇಕೆಂದರೆ ರಾಹುಲ್​ರನ್ನೇ ಆಡಿಬೇಕು. ಇತಿಹಾಸವನ್ನು ಮರೆತುಬಿಡಿ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ಅತ್ಯುತ್ತಮ ಆಡುವ 11 ಬಳಗ ಆಯ್ಕೆ ಮಾಡುವ ವಿಚಾರ. ಈ ಬಗ್ಗೆ ಯೋಚಿಸುವುದು ಉತ್ತಮ ಎಂದು ಸೂಚಿಸಿದ್ದಾರೆ ವಾನ್​.

ಶುಭ್ಮನ್​ ಅಥವಾ ರಾಹುಲ್​ ಆಯ್ಕೆ ಕುರಿತು ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಬಗ್ಗೆ ನನಗೆ ಖಚಿತವಿಲ್ಲ. ಭವಿಷ್ಯದ ಸರಣಿಗಳಿಗೆ ಯೋಜನೆ ರೂಪಿಸದೆ, ಐಸಿಸಿ ಟ್ರೋಫಿ ಗೆಲ್ಲುವ ರೀತಿ ಯೋಚಿಸಿ. ಮುಂದೇನು ಅಥವಾ ವೆಸ್ಟ್​ ಇಂಡೀಸ್​ ಸರಣಿಗೆ ಈಗಲೇ ಯೋಚಿಸಿ, ಆರಂಭಿಕರನ್ನು ಗುರುತಿಸಬೇಡಿ. ವಿಶ್ವದ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಫೆಬ್ರುವರಿ ಮತ್ತು ಮಾರ್ಚ್​​ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್​​ ಸರಣಿಯಲ್ಲಿ ಕೆಎಲ್ ರಾಹುಲ್ ತೀವ್ರ ವೈಫಲ್ಯ ಅನುಭವಿಸಿದ ಕಾರಣ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್‌ ಪಂದ್ಯಗಳ ನಂತರ ಕೈಬಿಡಲಾಯಿತು. ಉಳಿದ ಎರಡು ಪಂದ್ಯಗಳಿಗೆ ಅವಕಾಶ ಪಡೆದ ಶುಭ್ಮನ್​ ಶತಕ ಸಿಡಿಸಿ ಮಿಂಚಿದ್ದರು.