ಕನ್ನಡ ಸುದ್ದಿ  /  Sports  /  Cricket News Former Australia Test Captain Brian Booth Dies Cricket Australia Nick Hockley Bob Simpson Jra

Brian Booth: ಆಸ್ಟ್ರೇಲಿಯಾ ಟೆಸ್ಟ್ ತಂಡದ ಮಾಜಿ ನಾಯಕ ಬ್ರಿಯಾನ್ ಬೂತ್ ನಿಧನ

ಬೂತ್‌ ಅವರು ರಾಷ್ಟ್ರೀಯ ಹಾಕಿ ತಂಡದಲ್ಲೂ ಆಡಿದ್ದರು. 1956ರಲ್ಲಿ ನಡೆದ ಮೆಲ್ಬೋರ್ನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು.

ಬ್ರಿಯಾನ್ ಬೂತ್ (ಫೈಲ್ ಫೋಟೋ)
ಬ್ರಿಯಾನ್ ಬೂತ್ (ಫೈಲ್ ಫೋಟೋ) (Cricket.com.au)

ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟ್‌ ತಂಡದ ಮಾಜಿ ನಾಯಕ (Former Australia Test Captain) ಬ್ರಿಯಾನ್ ಬೂತ್ (Brian Booth) ನಿಧನರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಇಂದು (ಶನಿವಾರ) ತಿಳಿಸಿದೆ. 89 ವಯಸ್ಸಿನಲ್ಲಿ ಅವರು ಸಾವನ್ನಪ್ಪಿದ್ದು, ಆಸೀಸ್ ಕ್ರಿಕೆಟ್ ಲೋಕವು ಶ್ರದ್ಧಾಂಜಲಿ ಸಲ್ಲಿಸಿದೆ.

ಈ ಬಗ್ಗೆ ಹೇಳಿಕೆ ಹೊರಡಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯು, ಅವರು "ಅಪಾರ ಗೌರವ ಮತ್ತು ಮೆಚ್ಚುಗೆ ಸಂಪಾದಿಸಿದ ಆಟಗಾರ" ಎಂದು ಹೇಳಿಕೊಂಡಿದೆ.

ಮಧ್ಯಮ ಕ್ರಮಾಂಕದ ಬ್ಯಾಟರ್ 1961ರಿಂದ 1966ರವರೆಗೆ ಆಸ್ಟ್ರೇಲಿಯಾ ಪರ 29 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. 1965-66ರ ಸಮಯದಲ್ಲಿ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯಲ್ಲಿ ನಿಯಮಿತ ನಾಯಕ ಬಾಬ್ ಸಿಂಪ್ಸನ್ ಅನುಪಸ್ಥಿತಿಯಲ್ಲಿ ಎರಡು ಬಾರಿ ನಾಯಕತ್ವವನ್ನೂ ವಹಿಸಿದ್ದರು. 42.21ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿರುವ ಅವರು, ಐದು ಶತಕಗಳನ್ನು ಒಳಗೊಂಡಂತೆ 1773 ರನ್ ಗಳಿಸಿದ್ದಾರೆ.

ಎರಡು ಕ್ರೀಡೆಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ ಖ್ಯಾತಿ ಪಡೆದಿರುವ ಬೂತ್‌, ಹಾಕಿಯಲ್ಲೂ ಆಡಿದ್ದರು. 1956ರಲ್ಲಿ ನಡೆದ ಮೆಲ್ಬೋರ್ನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು.

"ಬ್ರಿಯಾನ್ ಅವರನ್ನು ಕ್ರಿಕೆಟ್ ಸಮುದಾಯ ಮಾತ್ರವಲ್ಲದೆ ಅದರಾಚೆಗಿನ ಜಗತ್ತು ಕೂಡಾ ಅಪಾರವಾಗಿ ಗೌರವಿಸಿದೆ ಮತ್ತು ಪ್ರಶಂಸಿಸಿದೆ" ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿದ್ದಾರೆ.

“ಆಸ್ಟ್ರೇಲಿಯಾ ಪುರುಷರ ಟೆಸ್ಟ್ ತಂಡದ ನಾಯಕತ್ವವನ್ನು 50ಕ್ಕಿಂತ ಕಡಿಮೆ ಆಟಗಾರರು ಮಾತ್ರ ವಹಿಸಿದ್ದಾರೆ. ಬ್ರಿಯಾನ್ ಅವರಲ್ಲಿ ಒಬ್ಬರು. ಅನೇಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅವರು ಕೂಡಾ ಸ್ಥಾನ ಪಡೆದಿದ್ದಾರೆ” ಎಂದು ಹಾಕ್ಲೆ ಹೇಳಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ನ್ಯೂ ಸೌತ್ ವೇಲ್ಸ್‌ ತಂಡದ ಪರ ಆಡಿರುವ ಬೂತ್, 93 ಪಂದ್ಯಗಳಲ್ಲಿ ಆಡಿದ್ದಾರೆ. 43.5ರ ಸರಾಸರಿಯಲ್ಲಿ ಅವರು 5,574 ರನ್ ಗಳಿಸಿದ್ದಾರೆ. ಇದೇ ವೇಳೆ ಮತ್ತು ಎಂಸಿಸಿ (ಮೇರಿಲ್ಬೋನ್ ಕ್ರಿಕೆಟ್ ಕ್ಲಬ್)ನ ಆಜೀವ ಸದಸ್ಯ ಕೂಡಾ ಆಗಿದ್ದರು.

ಇದನ್ನೂ ಓದಿ

Ricky Ponting: ಡಬ್ಲ್ಯೂಟಿಸಿ ಫೈನಲ್ ಕುರಿತು ಭವಿಷ್ಯ ನುಡಿದ ಪಾಂಟಿಂಗ್; ಗೆಲ್ಲುವ ಫೇವರೇಟ್ ಯಾರೆಂದು ಬಹಿರಂಗ

ಐಪಿಎಲ್‌ ಮುಗಿದ ಬೆನ್ನಲ್ಲೇ, ಕ್ರಿಕೆಟ್ ಪ್ರಿಯರ ದೃಷ್ಟಿ ಇಂಗ್ಲೆಂಡ್‌ನತ್ತ ಸಾಗುತ್ತದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವು ಆಂಗ್ಲರ ನಾಡಿನಲ್ಲಿ ನಡೆಯುತ್ತಿದೆ. ವಿಶ್ವ ಕ್ರಿಕೆಟ್‌ನ ಎರಡು ಬಲಿಷ್ಠ ರಾಷ್ಟ್ರಗಳಾದ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ಚಾಂಪಿಯನ್‌ ಪಟ್ಟಕ್ಕಾಗಿ ಜಿದ್ದಿನ ಹೋರಾಟ ನಡೆಯಲಿದೆ. ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲದಿಂದ ಮುಖಾಮುಖಿಯಾಗುತ್ತಿರುವ ಉಭಯ ರಾಷ್ಟ್ರಗಳು ಜೂನ್ 7ರಿಂದ 11ರವರೆಗೆ ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನಲ್ಲಿರುವ ದಿ ಓವಲ್‌ (The Oval) ಮೈದಾನದ‌ಲ್ಲಿ ಮತ್ತೆ ಮುಖಾಮುಖಿಯಾಗುತ್ತಿವೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ODI World Cup: ಏಕದಿನ ವಿಶ್ವಕಪ್​​ ಟೂರ್ನಿಗೆ ಭಾರತಕ್ಕೆ ಬರಲು ಕೊನೆಗೂ ಒಪ್ಪಿದ ಪಾಕಿಸ್ತಾನ; ಐಸಿಸಿಗೆ ದೃಢಪಡಿಸಿದ ಪಿಸಿಬಿ

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ ಭಾರತಕ್ಕೆ ಪ್ರಯಾಣಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ಗೆ ದೃಢಪಡಿಸಿದೆ. ಏಷ್ಯಾಕಪ್ 2023 (Asia Cup 2023) ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಪಾಕಿಸ್ತಾನ ಮತ್ತು ಬಿಸಿಸಿಐ ಜಗಳವಾಡುತ್ತಿರುವ ಸಮಯದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿರುವುದು ವಿಶೇಷ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ