ಕನ್ನಡ ಸುದ್ದಿ  /  Sports  /  Cricket News Gt Vs Csk Ipl 2023 Fast Bowler Tushar Deshpande Slams Twitter Troll After He Calls Him Run Machine Prs

Tushar Deshpande: ಇವನು ನಿಜವಾದ ರನ್​ಮಷಿನ್​ ಎಂದು ವ್ಯಂಗ್ಯವಾಡಿದ ನೆಟ್ಟಿಗ; ಧಮ್​ ಇದ್ರೆ ಮೈದಾನಕ್ಕೆ ಬಾ ಎಂದ ವೇಗಿ ತುಷಾರ್​ ದೇಶಪಾಂಡೆ

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದುಬಾರಿ ಬೌಲರ್​ ಎನಿಸಿರುವ ತುಷಾರ್​ ದೇಶಪಾಂಡೆ (Fast Bowler Tushar Deshpande) ಅವರನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಹೀಗೆ ಟ್ರೋಲ್​ ಮಾಡಿದ್ದ ನೆಟ್ಟಿಗನೊಬ್ಬನಿಗೆ ತುಷಾರ್​​ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ನೆಟ್ಟಿಗನೊಬ್ಬನಿಗೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ ತುಷಾರ್​ ದೇಶಪಾಂಡೆ.
ನೆಟ್ಟಿಗನೊಬ್ಬನಿಗೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ ತುಷಾರ್​ ದೇಶಪಾಂಡೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಫೈನಲ್​ಗೇರಿದೆ. ಐಪಿಎಲ್​ನಲ್ಲಿ 10 ಬಾರಿ ಪ್ರಶಸ್ತಿ ಸುತ್ತಿಗೇರಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಮೇ 23 ರಂದು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ತಂಡವನ್ನು 15 ರನ್​ಗಳಿಂದ ಸಿಎಸ್​ಕೆ ಮಣಿಸಿತು. ಚೆನ್ನೈನ ಚೆಪಾಕ್​ ಮೈದಾನದಲ್ಲಿ ನಡೆದ ಹೈವೋಲ್ಟೇಜ್​ ಕದನದಲ್ಲಿ ಶಿಷ್ಯ ಹಾರ್ದಿಕ್​ ಪಾಂಡ್ಯ ವಿರುದ್ಧ ಐಪಿಎಲ್​​ನಲ್ಲಿ ಗುರು ಎಂಎಸ್​ ಧೋನಿ ಮೊದಲ ಗೆಲುವಿನ ನಗೆ ಬೀರಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ್ದ ಚೆನ್ನೈ ಸೂಪರ್ ಕಿಂಗ್ಸ್​ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಸ್ಪಿನ್​ ಪಿಚ್​ನಲ್ಲಿ ರನ್​ ಗಳಿಸಲು ಪರದಾಡಿದ ಸಿಎಸ್​ಕೆಗೆ ಋತುರಾಜ್​ ಗಾಯಕ್ವಾಡ್​ ಮತ್ತು ಡೆವೋನ್​ ಕಾನ್ವೆ ಅವರ ಜವಾಬ್ದಾರಿಯುತ ಇನ್ನಿಂಗ್ಸ್​ ನೆರವಾಯಿತು. ಗಾಯಕ್ವಾಡ್​ 60 ರನ್​, ಕಾನ್ವೆ 40 ರನ್​ ಗಳಿಸಿದರು. ಆದರೆ ಉಳಿದ ಬ್ಯಾಟರ್​​​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್​ ದಾರಿ ಹಿಡಿದರು. ಅಂತಿಮವಾಗಿ ಸಿಎಸ್​ಕೆ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸಿತು.

ಈ ಗುರಿ ಬೆನ್ನತ್ತಿದ ಗುಜರಾತ್​​ಗೆ ಯಾರೊಬ್ಬರೂ ನೆರವಾಗಲಿಲ್ಲ. ಸಿಎಸ್​​ಕೆ ಬೌಲರ್​ಗಳು ಆರಂಭದಿಂದಲೂ ದಾಳಿ ನಡೆಸಿದರು. ಪಂದ್ಯವನ್ನು ಎಲ್ಲೂ ಕೈ ಜಾರದಂತೆ ನೋಡಿಕೊಂಡರು. ಇದರ ನಡುವೆಯೂ ವೇಗದ ಬೌಲರ್​ ತುಷಾರ್ ದೇಶಪಾಂಡೆ ಅತಿ ದುಬಾರಿ ಬೌಲರ್​ ಎನಿಸಿದರು. ಶುಭ್ಮನ್​ ಗಿಲ್​ ಮತ್ತು ರಶೀದ್​ ಖಾನ್​ ಹೋರಾಟ ನಡೆಸಿದರೂ ಗೆಲುವು ಗುಜರಾತ್​ ತಂಡಕ್ಕೆ ಸಿಗಲಿಲ್ಲ. ಅಂತಿಮ ಗುಜರಾತ್​ ತನ್ನೆಲ್ಲಾ ವಿಕೆಟ್​​ ಕಳೆದುಕೊಂಡು 157 ರನ್​ ಗಳಿಸಲಷ್ಟೇ ಶಕ್ತವಾಯಿತು.

ದುಬಾರಿ ಬೌಲಿಂಗ್​ ತುಷಾರ್​ ದೇಶಪಾಂಡೆ

ಸಿಎಸ್​ಕೆ ಬೌಲರ್​ಗಳು ಗುಜರಾತ್​ ತಂಡಕ್ಕೆ ಕಡಿವಾಣ ಹಾಕಿದರೆ, ಮತ್ತೊಂದೆಡೆ ವೇಗಿ ತುಷಾರ್​ ದೇಶಪಾಂಡೆ ರನ್ ಲೀಕ್​ ಮಾಡಿದರು. ತಂಡದಲ್ಲಿ ಕೊಂಚ ಆತಂಕವನ್ನೂ ಹೆಚ್ಚಿಸಿದರು. 4 ಓವರ್​ಗಳಲ್ಲಿ 43 ರನ್​ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಇದರಿಂದ ಹೆಚ್ಚು ಟ್ರೋಲ್​ ಆಗುತ್ತಿದ್ದಾರೆ. ನೆಟ್ಟಿಗರು ನಿಂದಿಸುತ್ತಿದ್ದಾರೆ. ಹೀಗೆ ಟ್ರೋಲ್​ ಮಾಡಿದ ನೆಟ್ಟಿಗನೊಬ್ಬನಿಗೆ ತುಷಾರ್​ ದೇಶಪಾಂಡೆ ಸವಾಲು ಹಾಕಿದ್ದಾರೆ. ಧಮ್​ ಇದ್ದರೆ ಮೈದಾನಕ್ಕೆ ಬಾ ಎಂದು ತಿರುಗೇಟು ನೀಡಿದ್ದಾರೆ.

ನೆಟ್ಟಿಗನ ಪೋಸ್ಟ್​ ಏನು?

ಗುಜರಾಜ್​ ಟೈಟಾನ್ಸ್​​​ ವಿರುದ್ಧ ನೀಡಿದ ತುಷಾರ್​ ಕಳಪೆ ಪ್ರದರ್ಶನವನ್ನು ರಾಕ್​ ಲೇ ಎಂಬ ಹೆಸರಿನ ಟ್ವಿಟರ್ ಅಕೌಂಟ್​​​ನಲ್ಲಿ ಟೀಕಿಸಲಾಗಿದೆ. ಪ್ರತಿ ಪಂದ್ಯದಲ್ಲೂ 40+ ರನ್​ ಬಿಟ್ಟು ಕೊಡುತ್ತಾನೆ. ಇವನು ರನ್​ ಮೆಷಿನ್​ ಎಂದು ಪಂದ್ಯದ ಬೌಲಿಂಗ್​ ಕಾರ್ಡ್​ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಆ ಮೂಲಕ ವ್ಯಂಗ್ಯವಾಡಿದ್ದಾರೆ.

ತಿರುಗೇಟು ಹೀಗಿತ್ತು?

ವ್ಯಂಗ್ಯದ ಪೋಸ್ಟ್​ ಮಾಡಿದ್ದ ನೆಟ್ಟಿಗನಿಗೆ ತುಷಾರ್​ ದೇಶಪಾಂಡೆ ಖಡಕ್​ ತಿರುಗೇಟು ನೀಡಿದ್ದಾರೆ. ಆಟಗಾರನಾಗಿ ಮೈದಾನಕ್ಕೆ ಬರುವ ಧಮ್​ ಬರುವ ಕಮೆಂಟ್​ ಮಾಡಿ. ನಿನ್ನ ಕೈಯಲಿ ಬೌಂಡರಿ ಲೈನ್​ ಕ್ರಾಸ್​ ಮಾಡೋಕು ಆಗಲ್ಲ. ಬೇಕಾದರೆ ಬೆಟ್​ ಕಟ್ಟುತ್ತೇನೆ ಎಂದು ಸರಿಯಾಗಿ ಮುಟ್ಟಿನೋಡುಕೊಳ್ಳುವಂತೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಫ್ಯಾನ್ಸ್​​ ಬೆಂಬಲ ಸೂಚಿಸಿದ್ದಾರೆ. ಇಂತಹವರನ್ನೆಲ್ಲಾ ನೋಡಿಯೂ ನೋಡದಂತೆ ಮುಂದೆ ಸಾಗಿ ಎಂದು ಸಲಹೆ ನೀಡಿದ್ದಾರೆ.