Jwala Singh: ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ ಎನ್ನುವುದು ಶುದ್ಧ ಸುಳ್ಳು; ಅಚ್ಚರಿ ವಿಷಯ ಬಹಿರಂಗಪಡಿಸಿದ ಬಾಲ್ಯದ ಕೋಚ್ ಜ್ವಾಲಾ ಸಿಂಗ್​-cricket news he didn t sell panipuris yashasvi jaiswal coach jwala singh clafify on rumors sports news in kannada prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Jwala Singh: ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ ಎನ್ನುವುದು ಶುದ್ಧ ಸುಳ್ಳು; ಅಚ್ಚರಿ ವಿಷಯ ಬಹಿರಂಗಪಡಿಸಿದ ಬಾಲ್ಯದ ಕೋಚ್ ಜ್ವಾಲಾ ಸಿಂಗ್​

Jwala Singh: ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ ಎನ್ನುವುದು ಶುದ್ಧ ಸುಳ್ಳು; ಅಚ್ಚರಿ ವಿಷಯ ಬಹಿರಂಗಪಡಿಸಿದ ಬಾಲ್ಯದ ಕೋಚ್ ಜ್ವಾಲಾ ಸಿಂಗ್​

Jwala Singh-Yashasvi Jaiswal: ಜೈಸ್ವಾಲ್ ಆಡಿದಾಗಲೆಲ್ಲಾ ಒಂದು ಸುದ್ದಿ ಸಖತ್​ ಸುದ್ದಿಯಾಗುತ್ತಿದೆ. ಅಂದು ಪಾನಿಪುರಿ ಮಾರುತ್ತಿದ್ದವ ಇಂದು ಸ್ಟಾರ್​ ಕ್ರಿಕೆಟರ್​ ಆಗಿ ಬೆಳೆಯುತ್ತಿದ್ದಾನೆ ಎಂದು ವರದಿಯಾಗುತ್ತಿದೆ. ಆದರೆ, ಇದೆಲ್ಲಾ ಸುಳ್ಳು ಎಂದು ಯಶಸ್ವಿ ಅವರ ಬಾಲ್ಯದ ಕೋಚ್ ಜ್ವಾಲಾ ಸಿಂಗ್ ಬಹಿರಂಗಪಡಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ ಎನ್ನುವುದರ ಕುರಿತು ಸ್ಪಷ್ಟನೆ.
ಯಶಸ್ವಿ ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ ಎನ್ನುವುದರ ಕುರಿತು ಸ್ಪಷ್ಟನೆ.

ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಇದೀಗ ಭಾರತೀಯ ಕ್ರಿಕೆಟ್​​ನಲ್ಲಿ (Indian Cricket) ಹೊಸ ಸೆನ್​ಸೇಷನ್. ಕ್ರಿಕೆಟ್​ ಜಗತ್ತಿನಲ್ಲೂ ಆತನ ಹೆಸರೇ ಟ್ರೆಂಡಿಂಗ್ ಎಂಬುದರಲ್ಲಿ ಸಂದೇಹವಿಲ್ಲ. ಐಪಿಎಲ್ (IPL) ಹಾಗೂ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ (First Class Cricket) ಅತ್ಯುತ್ತಮ ಪ್ರದರ್ಶನದ ಮೂಲಕ ಧೂಳೆಬ್ಬಿಸಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಜೈಸ್ವಾಲ್, ಚೊಚ್ಚಲ ಪಂದ್ಯದಲ್ಲೇ ಶತಕ ಭಾರತ ತಂಡಕ್ಕೆ (Team India) ಭರವಸೆ ಮೂಡಿಸಿದ್ದಾರೆ.

ಐಪಿಎಲ್, ಪ್ರಥಮ ದರ್ಜೆ, ಈಗ ರಾಷ್ಟ್ರೀಯ ತಂಡ.. ಯಾವುದೇ ವೇದಿಕೆಯಲ್ಲಿ ಜೈಸ್ವಾಲ್​ ಅದ್ಭುತ ಪ್ರದರ್ಶನ ತೋರಿದ್ದೇ ಆದರೆ, ಆತನನ್ನು ಪಾನಿಪುರಿ (Panipuri) ಮಾರುತ್ತಿದ್ದ ಹುಡುಗ ಎಂದು ಉಲ್ಲೇಖಿಸಲಾಗುತ್ತಿದೆ. ಉತ್ತರ ಪ್ರದೇಶದಿಂದ ಬಂದು ಮುಂಬೈನಲ್ಲಿ (Uttar Pradesh to Mumbai) ಪಾನಿಪುರಿ ಮಾರುತ್ತಿದ್ದ ಎಂದು ಆತನು ಸಾಧನೆ ಮಾಡಿದಾಗೆಲ್ಲಾ ಈ ಸುದ್ದಿ ಓದಿಯೇ ಇರುತ್ತೀರಿ. ಇದೆಲ್ಲವೂ ಶುದ್ದ ಸುಳ್ಳು ಸುದ್ದಿಯಂತೆ.

ಇದೆಲ್ಲಾ ಶುದ್ದ ಸುಳ್ಳು

ಯಶಸ್ವಿ ಜೈಸ್ವಾಲ್ ಬಾಲ್ಯದ ಕೋಚ್ ಜ್ವಾಲಾ ಸಿಂಗ್ (Yashasvi Jaiswal's coach Jwala Singh) ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ಜೈಸ್ವಾಲ್ ಆಡಿದಾಗಲೆಲ್ಲಾ ಒಂದು ಸುದ್ದಿ ಸಖತ್​ ಸುದ್ದಿಯಾಗುತ್ತಿದೆ. ಅಂದು ಪಾನಿಪುರಿ ಮಾರುತ್ತಿದ್ದವ ಇಂದು ಸ್ಟಾರ್​ ಕ್ರಿಕೆಟರ್​ ಆಗಿ ಬೆಳೆಯುತ್ತಿದ್ದಾನೆ ಎಂದು ವರದಿಯಾಗುತ್ತಿದೆ. ಆದರೆ, ಇದೆಲ್ಲಾ ಸುಳ್ಳು. ಆತನೆಂದೂ ಪಾನಿಪುರಿ ಮಾರಿದವನಲ್ಲ ಎಂದು ಜ್ವಾಲಾ ಸಿಂಗ್​ ಅಚ್ಚರಿ ವಿಷಯ ಬಹಿರಂಗಪಡಿಸಿದ್ದಾರೆ.

ಪಾನಿಪುರಿ ಕಥೆ ಸೃಷ್ಟಿಯಾಗಿದ್ದು ಹೇಗೆ?

ಯಶಸ್ವಿ ಜೈಸ್ವಾಲ್ ಜೀವನದಲ್ಲಿ ಪಾನಿಪುರಿ ಎಂಬುದೇ ಇಲ್ಲ ಎಂದು ಹೇಳಿದ್ದಾರೆ. ರಿಪಬ್ಲಿಕ್ ವರ್ಲ್ಡ್ ನಡೆಸಿದ ಸಂದರ್ಶನದಲ್ಲಿ ಜ್ವಾಲಾ ಸಿಂಗ್​ ಮಾತನಾಡಿದ್ದು, ಈ ಬಗ್ಗೆ ಸಂಪೂರ್ಣ ವಿವರ ಕೊಟ್ಟಿದ್ದಾರೆ. ಬಾಲ್ಯದ ಕ್ರಿಕೆಟಿಗನಾಗಿನಿಂದಲೂ ಯಶಸ್ವಿ ಅವರನ್ನು ಸಂದರ್ಶನ ಮಾಡುವಂತೆ ಹಲವು ಮಾಧ್ಯಮಗಳಿಗೆ ಮನವಿ ಮಾಡಿದ್ದೆ. ಆದರೆ ಇದಕ್ಕೆ ಮಾಧ್ಯಮಗಳು ಆಸಕ್ತಿ ತೋರಲಿಲ್ಲ ಎಂದು ಹೇಳಿದ್ದಾರೆ.

ಹಲವು ಬಾರಿ ವಿನಂತಿಸಿದರೂ ಸಂದರ್ಶನ ಮಾಡದ ಮಾಧ್ಯಮಗಳು, ಒಂದು ದಿನ ಆತ ಇಂಗ್ಲೆಂಡ್​​ನಲ್ಲಿದ್ದ ಸಂದರ್ಭದಲ್ಲಿ ಸಂದರ್ಶನಕ್ಕಾಗಿ ಪ್ರಯತ್ನಿಸಿದ್ದವು. ಆಗ ಜೈಸ್ವಾಲ್ ನನಗೆ ಕರೆ ಮಾಡಿ, ಆ ಬಗ್ಗೆ ವಿಷಯ ತಿಳಿಸಿದ. ಸಂದರ್ಶನ ನೀಡುವಂತೆ ಸೂಚಿಸಿದ್ದೆ. ಆದರೆ ಈ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದ ವಿಷಯವನ್ನೇ ಹೆಡ್​ಲೈನ್​ ಮಾಡಿಕೊಳ್ಳಲಾಗುತ್ತಿದೆ ಎಂದು ಜ್ವಾಲಾ ಸಿಂಗ್​ ಮಾಹಿತಿ ನೀಡಿದ್ದಾರೆ.

ಅಂದು ಸಂದರ್ಶನದಲ್ಲಿ ಜೈಸ್ವಾಲ್​ಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಆತನ ಮುಗ್ಧತೆಯಿಂದ ಪಾನಿಪುರಿ ಘಟನೆ ಪ್ರಸ್ತಾಪಿಸಿದ್ದ. ಹಾಗಾಗಿ ಮಾಧ್ಯಮಗಳು ಆಟಗಾರರ ಜೀವನ ಕಥೆಗಳಿಗೆ ಪ್ರಾಮುಖ್ಯತೆ ನೀಡಲು ಪಾನಿಪುರಿ ವಿಷಯವನ್ನೇ ಮುಖ್ಯ ಹೆಡ್​ಲೈನ್​ ಆಗಿ ಬಳಿಸಿಕೊಂಡರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು ಎಂದು ಜ್ವಾಲಾ ಸಿಂಗ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿದಾಗಲೆಲ್ಲಾ, ಪಾನಿಪುರಿ ಮಾರುತ್ತಿದ್ದ ವ್ಯಕ್ತಿಯ ಜೊತೆಗಿನ ಫೋಟೋವೇ ಹೆಚ್ಚು ವೈರಲ್ ಆಗುತ್ತದೆ. ಆದರೆ, ಈ ಫೋಟೋದಲ್ಲಿ ಇರುವ ವ್ಯಕ್ತಿ ಆತನ ತಂದೆ ಅಲ್ಲ. ಪಾನಿಪುರಿ ತಿನ್ನಲು ಹೋದ ಸಂದರ್ಭದಲ್ಲಿ ತೆಗೆದ ಚಿತ್ರ. ಅದೊಂದು ಸಾಂದರ್ಭಿಕ ಚಿತ್ರವಷ್ಟೆ. ಜೈಸ್ವಾಲ್ ಹಾಗೂ ಆತನ ತಂದೆ ಜೀವನೋಪಾಯಕ್ಕಾಗಿ ಪಾನಿಪುರಿ ಮಾರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಆತನಿದ್ದ ಟೆಂಟ್ ಸೋರುತ್ತಿತ್ತು’

2013ರ ಸಂದರ್ಭದಲ್ಲಿ ನನ್ನೊಂದಿಗೆ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾಗ ಪಾನಿಪುರಿ ಮಾರುತ್ತಿರಲ್ಲ. ಜೈಸ್ವಾಲ್ ಮುಂಬೈಗೆ ಬಂದ ಸಂದರ್ಭದಲ್ಲಿ ಟೆಂಟ್​ನಲ್ಲಿದ್ದ. ಈ ಸಂದರ್ಭದಲ್ಲಿ ಕೆಲವೇ ದಿನಗಳ ಕಾಲ ಮಾರಿರಬಹುದು. ಅವರ ಟೆಂಟ್​​ನಲ್ಲಿ ಮೂಲ ಸೌಕರ್ಯಗಳು ಇರಲಿಲ್ಲ, ವಿದ್ಯುತ್, ಸರಿಯಾದ ಆಹಾರ ಇರಲಿಲ್ಲ. ಮಳೆಗಾಲದಲ್ಲಿ ಆತನಿದ್ದ ಟೆಂಟ್ ಸೋರುತ್ತಿತ್ತು ಎಂದು ಜ್ವಾಲಾ ಸಿಂಗ್ ವಿವರಿಸಿದ್ದಾರೆ.

‘ನನ್ನ ಕೈಲಾದಷ್ಟು ಸಹಾಯ ಮಾಡಿದೆ’

ಜೈಸ್ವಾಲ್ ಜೊತೆಗೆ 10 ವರ್ಷಗಳ ಕಾಲ ಸಂಪರ್ಕ ಹೊಂದಿದ್ದೇನೆ. ಆದರೆ, ಈಗಲೂ ಅದನ್ನೇ ಬರೆಯುತ್ತಿದ್ದಾರೆ. ಈ ಹೆಡ್ಡಿಂಗ್​​ಗಳು ಆತನನ್ನು ಕೀಳಾಗಿಸುತ್ತದೆ. ಆತ ಮುಂಬೈ ಬಂದಾಗ, ಪೋಷಕರು ತಿಂಗಳಿಗೆ 1000 ರೂ ಕಳುಹಿಸುತ್ತಿದ್ದರು. ಆತನ ತಂದೆಗೆ ಪೇಂಟ್ ಅಂಗಡಿ ಇದೆ. ಜೈಸ್ವಾಲ್ ಅದ್ಭುತ ಕ್ರಿಕೆಟ್ ಆಡುತ್ತಿದ್ದಾನೆ ಎಂದರೆ, ಅದಕ್ಕೆ ಕಾರಣ ಸರಿಯಾದ ಕೋಚಿಂಗ್. ಆಹಾರ, ವಸತಿ ಎಲ್ಲವನ್ನೂ ಒದಗಿಸಲು ನನ್ನ ಕೈಲಾದಷ್ಟು ನೆರವು ನೀಡಿದ್ದೇನೆ ಎಂದು ಸಂಪೂರ್ಣ ವಿವರ ನೀಡಿದ್ದಾರೆ.

2ನೇ ಟೆಸ್ಟ್ ಪಂದ್ಯಕ್ಕೆ ಸಜ್ಜು

ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಇದೀಗ 2ನೇ ಪಂದ್ಯವು ಟ್ರಿನಿಡಾಡ್​ನ ಕ್ವೀನ್ಸ್​ ಓವಲ್ ಪಾರ್ಕ್​​ನಲ್ಲಿ ನಡೆಯಲಿದೆ. ಇದರೊಂದಿಗೆ ಸರಣಿ ಕ್ಲೀನ್​ ಸ್ವೀಪ್​ ಸಾಧಿಸಲು ಭಾರತ ತಂಡ ಸತತ ಅಭ್ಯಾಸ ನಡೆಸುತ್ತಿದೆ. ಮೊದಲ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರು 350 ಎಸೆತಗಳಲ್ಲಿ 171 ರನ್​ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.