Fake Account: ಕ್ಷಮಿಸಿ ವಿರಾಟ್ ಕೊಹ್ಲಿ ಸರ್; ನವೀನ್ ಉಲ್ ಹಕ್ ಟ್ವೀಟ್ ವೈರಲ್; ಅಸಲಿಯಲ್ಲ, ನಕಲಿ ಖಾತೆಯಿಂದ ಪೋಸ್ಟ್
ವಿರಾಟ್ ಕೊಹ್ಲಿಗೆ ನವೀನ್ ಉಲ್ ಹಕ್ ಅವರು ಕ್ಷಮೆಯಾಚಿಸಿರುವ ಕುರಿತು ಮತ್ತೊಂದು ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂಬುದು ತಿಳಿದು ಬಂದಿದೆ.

ಮೇ 1ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB Match) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ (Naveen ul Haq vs Virat Kohli) ನಡುವೆ ಜೋರು ಮಾತಿನ ಚಕಮಕಿ ನಡೆದಿತ್ತು. ಈ ಘಟನೆ ನಡೆದು 25 ದಿನಗಳಾದರೂ, ನವೀನ್ ಉಲ್ ಹಕ್ ಈಗಲೂ ಟ್ರೋಲ್ ಆಗುತ್ತಲೇ ಇದ್ದಾರೆ. ಈ ವೇಗಿ ಹೋದಲೆಲ್ಲಾ, ಮೈದಾನದಲ್ಲಿ ಫ್ಯಾನ್ಸ್ ಕೊಹ್ಲಿ... ಕೊಹ್ಲಿ... ಎಂದು ಕೂಗುವ ಗೇಲಿ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನವೀನ್, ಮೈದಾನದಲ್ಲಿ ಕೊಹ್ಲಿ... ಕೊಹ್ಲಿ ಎಂದು ಕೂಗುವುದನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ನಾನು ಇದನ್ನು ಸಖತ್ ಎಂಜಾಯ್ ಮಾಡುತ್ತೇನೆ. ಇದರಿಂದ ನನಗೆ ಹೆಚ್ಚು ಉತ್ಸಾಹ ಬರುತ್ತದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೆ ಕೊಹ್ಲಿಗೆ ನವೀನ್ ಕ್ಷಮೆಯಾಚಿಸಿರುವ ಕುರಿತು ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ ಎಂಬುದು ತಿಳಿದು ಬಂದಿದೆ.
ನವೀನ್ ಉಲ್ ಹಕ್ ಎಂಬ ಟ್ವಿಟರ್ ಖಾತೆಯಲ್ಲಿ ಕ್ಷಮಿಸಿ ವಿರಾಟ್ ಕೊಹ್ಲಿ ಸರ್ ಎಂದು ಪೋಸ್ಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಟ್ವೀಟ್‌ನಲ್ಲಿ ನವೀನ್ ಉಲ್ ಹಕ್, ವಿರಾಟ್ ಕೊಹ್ಲಿಗೆ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಇನ್ನೂ ಎರಡು ಮೂರು ಟ್ವೀಟ್ಗಳನ್ನೂ ಮಾಡಲಾಗಿದೆ.
ನವೀನ್ ತಮ್ಮ ಟ್ವೀಟ್‌ನಲ್ಲಿ ಕೊಹ್ಲಿಯೊಂದಿಗೆ ಜಗಳವಾಡಿದ್ದು, ನನ್ನ ಜೀವನದ ದೊಡ್ಡ ತಪ್ಪು. ಇದರಲ್ಲಿ ನನ್ನದೇ ತಪ್ಪಿದೆ ಎಂದಿದ್ದಾರೆ. ನವೀನ್ ಉಲ್ ಹಕ್ ಅವರು ಕ್ಷಮೆ ಕೇಳಿದ್ದು, ಕೊಹ್ಲಿ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಬಾಬರ್ ಅಜಂಗಿಂತ ಕೊಹ್ಲಿ ಉತ್ತಮ ಎಂಬ ಪೋಸ್ಟ್ ಅನ್ನೂ ಮಾಡಿದ್ದಾರೆ.
ಪರಿಶೀಲಿಸದ ಅಭಿಮಾನಿಗಳು
ಈ ಪೋಸ್ಟ್ ನೋಡುತ್ತಿದ್ದಂತೆ ಕೊಹ್ಲಿ ಫ್ಯಾನ್ಸ್, ಫುಲ್ ಖುಷ್ ಆಗಿದ್ದಾರೆ. ಕಳೆದ ಹಲವು ದಿನಗಳಿಂದ ಟ್ರೋಲ್, ಗೇಲಿ ಮಾಡುತ್ತಿದ್ದ ಫ್ಯಾನ್ಸ್ ಈಗ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ನವೀನ್-ಉಲ್-ಹಕ್ ಪಾಠ ಕಲಿತಿದ್ದಾರೆ ಎಂದು ಕಮೆಂಟ್ಗಳಲ್ಲಿ ಉತ್ತರ ನೀಡುತ್ತಿದ್ದಾರೆ. 23ರ ಹರೆಯದ ವೇಗಿಯನ್ನು ಅಭಿಮಾನಿಗಳು ಕ್ಷಮಿಸಿರುವ ರೀತಿ, ಪ್ರತಿಕ್ರಿಯೆ ಕೊಡುತ್ತಿದ್ದಾರೆ.
ಇದು ನಕಲಿ ಖಾತೆ
ಹೌದು.. ವಿರಾಟ್ ಕೊಹ್ಲಿಗೆ ನವೀನ್ ಉಲ್ ಹಕ್ ಕ್ಷಮೆಯಾಚಿಸಿಲ್ಲ. ಇದು ಬೇರೊಬ್ಬರು ನವೀನ್ ಹೆಸರಿನಲ್ಲಿ ತೆರೆದಿರುವ ಖಾತೆಯಾಗಿದೆ. ಆದರೆ ನವೀನ್ರ ಅಧಿಕೃತ ಖಾತೆಯ ನವೀನ್ ಉಲ್ ಹಕ್ ಮುರಿದ್ ಎಂಬ ಹೆಸರಿನಲ್ಲಿದೆ. ಈ ಖಾತೆಯಲ್ಲಿ 1 ಲಕ್ಷ 15 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಇದ್ದು, ಇದನ್ನೇ ಆಫ್ಘನ್ ವೇಗಿ ಬಳಸುತ್ತಿದ್ದಾರೆ. ಆದರೆ, ನಕಲಿ ಖಾತೆಗೆ 3071 ಫಾಲೋವರ್ಸ್ ಇರುವುದು ಕಂಡು ಬಂದಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್
ಎಲಿಮಿನೇಟರ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ನವೀನ್ , ಮುಂಬೈ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳನ್ನೇ ಖೆಡ್ಡಾಕೆ ಕೆಡವಿದರು. ರೋಹಿತ್ ಶರ್ಮಾ, ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್, ತಿಲಕ್ ವರ್ಮಾ ವಿಕೆಟ್ ಉರುಳಿಸಿದರು. 4 ಓವರ್ಗಳಲ್ಲಿ 38 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು.

ವಿಭಾಗ