ಕನ್ನಡ ಸುದ್ದಿ  /  Sports  /  Cricket News I Enjoyed Kohlis Name Chants Naveen Ul Haq Hits Back At Crowd Hostility Social Media Trolls In Ipl 2023 Prs

Naveen Ul Haq: ಕೊಹ್ಲಿ, ಕೊಹ್ಲಿ ಎಂದು ಕೂಗುವುದನ್ನು ನಾನು ತುಂಬಾ ಆನಂದಿಸುತ್ತೇನೆ; ಟ್ರೋಲರ್ಸ್​ಗೆ ನವೀನ್ ಉಲ್ ಹಕ್ ಪರೋಕ್ಷವಾಗಿ ತಿರುಗೇಟು

ಚೆನ್ನೈನಲ್ಲಿ ನಡೆದ ಎಲಿಮಿನೇಟರ್​ ಪಂದ್ಯದಲ್ಲೂ ಕೊಹ್ಲಿ ಕೂಗು ಜೋರಾಗಿತ್ತು. ಆದಾಗ್ಯೂ, ಕೊಹ್ಲಿ, ಕೊಹ್ಲಿ ಘೋಷಣೆಗಳನ್ನು ಆನಂದಿಸಿದೆ ಎಂದು ಯುವ ವೇಗಿ ನವೀನ್​ ಉಲ್​ ಹಕ್​ ಹೇಳಿದ್ದಾರೆ. ಇದು ತನ್ನ ತಂಡಕ್ಕಾಗಿ ಉತ್ತಮವಾಗಿ ಆಡುವ ಉತ್ಸಾಹವನ್ನು ನೀಡುತ್ತದೆ ಎಂದು ಅಚ್ಚರಿಯ ಉತ್ತರ ಕೊಟ್ಟಿದ್ದಾರೆ.

ನವೀನ್​ ಉಲ್​ ಹಕ್​
ನವೀನ್​ ಉಲ್​ ಹಕ್​

ರಶೀದ್ ಖಾನ್ (Rashid Khan) ಯಶಸ್ವಿಯಾದ ನಂತರ ಅಫ್ಘಾನಿಸ್ತಾನ ಕ್ರಿಕೆಟಿಗರು ನಿಯಮಿತವಾಗಿ ಐಪಿಎಲ್​ನತ್ತ (IPL) ಹೆಜ್ಜೆ ಹಾಕಿದರು. ಆದರೆ ಲಕ್ನೋ ಸೂಪರ್ ಜೈಂಟ್ಸ್​ ತಂಡದ ವೇಗಿ ನವೀನ್​ ಉಲ್​ ಹಕ್​ (LSG Bowler Naveen Ul Haq) ಅವರಷ್ಟು ಪ್ರಭಾವ ಬೀರಿದಷ್ಟು ಯಾರಿಂದಲೂ ಸಾಧ್ಯವಾಗಿಲ್ಲ. ಮೈದಾನದ ಹೊರಗೆ ಮತ್ತು ಒಳಗೆ ಆತನದ್ದೇ ಸದ್ದು. ಮೈದಾನದಲ್ಲಿ ವಿರಾಟ್​ ಕೊಹ್ಲಿ (Virat Kohli) ಜೊತೆ ಮಾತಿನ ಚಕಮಕಿ ನಡೆಸಿದ್ದ 23 ವರ್ಷದ ನವೀನ್​ ಉಲ್​​ ಹಕ್, ಈಗ ತನ್ನ ಆತ್ಮವಿಶ್ವಾಸದ ಕುರಿತು ಮಾತನಾಡಿದ್ದಾರೆ.

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​​ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ (LSG vs MI Eliminator Match) ಎರಡನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್, ತಿಲಕ್ ವರ್ಮಾ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ಖೆಡ್ಡಾಕೆ ಕೆಡವುದರ ಮೂಲಕ ಬಲಗೈ ವೇಗಿ ನವೀನ್​, ಅದ್ಭುತ ಪ್ರದರ್ಶನ ತೋರಿದ್ದರು. ಆದರೆ ಬ್ಯಾಟರ್​​ಗಳ ವೈಫಲ್ಯದಿಂದ ಲಕ್ನೋ ಸೋತು ಹೊರ ನಡೆಯಿತು.

ಆದರೂ ನವೀನ್​ ಉಲ್​ ಹಕ್​ ಅವರನ್ನೂ ಮೈದಾನದಲ್ಲಿ ಪ್ರೇಕ್ಷಕರು ಗೇಲಿ ಮಾಡಿದ್ದಾರೆ. ಕೊಹ್ಲಿ, ಕೊಹ್ಲಿ ಎಂದು ಕೂಗಿದರು. ನವೀನ್​​ ಕಾಲೆಳೆಯುವ ಸಲುವಾಗಿಯೇ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಘೋಷಿಸಿದ್ದರು. ಮೇ 1ರಂದು ವಿರಾಟ್​ ಕೊಹ್ಲಿ ಮತ್ತು ನವೀನ್​ ನಡುವೆ ವಾಗ್ವಾದ ನಡೆದಿತ್ತು. ಏಕನಾ ಕ್ರಿಕೆಟ್​ ಮೈದಾನದಲ್ಲಿ ನಡೆದ ಲಕ್ನೋ-ಬೆಂಗಳೂರು ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ಅಂದಿನಿಂದ ನವೀನ್​​ರನ್ನು ಫ್ಯಾನ್ಸ್​, ಗೇಲಿ ಮಾಡುತ್ತಲೇ ಇದ್ದಾರೆ.

ಕೊಹ್ಲಿ ಕುರಿತು ನವೀನ್​ ಮಾತು

ಎಲಿಮಿನೇಟರ್​ ಪಂದ್ಯವನ್ನು ಮುಗಿದ ಬೆನ್ನಲ್ಲೇ ಮಾತನಾಡಿರುವ ನವೀನ್​, ಮೈದಾನದಲ್ಲಿ ಕೊಹ್ಲಿ, ಕೊಹ್ಲಿ ಎಂದು ಕೂಗುವ ಕುರಿತು ಪ್ರತಿಕ್ರಿಯಿಸಿದ್ದಾರೆ. ಚೆನ್ನೈನಲ್ಲಿ ನಡೆದ ಈ ಪಂದ್ಯದಲ್ಲೂ ಕೊಹ್ಲಿ ಕೂಗು ಜೋರಾಗಿತ್ತು. ಆದಾಗ್ಯೂ, ಕೊಹ್ಲಿ, ಕೊಹ್ಲಿ ಘೋಷಣೆಗಳನ್ನು ಆನಂದಿಸಿದೆ ಎಂದು ಯುವ ವೇಗಿ ಹೇಳಿದ್ದಾರೆ. ಏಕೆಂದರೆ ಅದು ತನ್ನ ತಂಡಕ್ಕಾಗಿ ಉತ್ತಮವಾಗಿ ಆಡುವ ಉತ್ಸಾಹವನ್ನು ನೀಡುತ್ತದೆ ಎಂದು ಅಚ್ಚರಿಯ ಉತ್ತರ ಕೊಟ್ಟಿದ್ದಾರೆ.

ತುಂಬಾ ಎಂಜಾಯ್​ ಮಾಡುತ್ತೇನೆ

ಸ್ಟೇಡಿಯಂನಲ್ಲಿ ಕೊಹ್ಲಿ... ಕೊಹ್ಲಿ ಎಂದು ಕೂಗುವುದು ಅಥವಾ ಬೇರೆ ಆಟಗಾರನ ಹೆಸರನ್ನು ಕೂಗುವುದನ್ನು, ಜಪಿಸುವುದನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ನಾನು ಇದನ್ನು ತುಂಬಾ ಎಂಜಾಯ್​ ಮಾಡುತ್ತೇನೆ. ಹಾಗೆಯೇ ಇದು ತಂಡಕ್ಕಾಗಿ ಚೆನ್ನಾಗಿ ಆಡುವ ಉತ್ಸಾಹವನ್ನು ತುಂಬುತ್ತದೆ ಎಂದು ಮುಂಬೈ ಎದುರು 4 ವಿಕೆಟ್​ಗಳ ಅದ್ಭುತ ಸ್ಪೆಲ್​ ನಂತರ ಹೇಳಿದರು.

ನಾನು ಹೊರಭಾಗದ ಅಥವಾ ಹೊರಗಿನ ಶಬ್ದ ಅಥವಾ ಬೇರೆ ಯಾವುದರ ಮೇಲೆ ಕೇಂದ್ರೀಕರಿಸುವುದಿಲ್ಲ. ನಾನು ನನ್ನ ಸ್ವಂತ ಕ್ರಿಕೆಟ್ ಮತ್ತು ನನ್ನ ಸ್ವಂತ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸುತ್ತೇನೆ. ಗುಂಪಿನ ಪಠಣ ಅಥವಾ ಯಾರಾದರೂ ಏನನ್ನಾದರೂ ಹೇಳುವುದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಭಿಮಾನಿಗಳು ಎಷ್ಟೇ ಕಿರುಚಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬರ್ಥದಲ್ಲಿ ತಿಳಿಸಿದ್ದಾರೆ.

ಗಂಭೀರ್​ ಲೆಜೆಂಡರಿ ಆಟಗಾರ

ಇದೇ ವೇಳೆ ಗೌತಮ್​ ಗಂಭೀರ್ ಕುರಿತು ಮಾತನಾಡಿದ ವೇಗಿ, ಗುಣಗಾನ ಮಾಡಿದ್ದಾರೆ. ಅವರು (ಗಂಭೀರ್) ಭಾರತದ ದಂತಕಥೆ. ಅವರಿಗೆ ಭಾರತದಲ್ಲಿ ಅಪಾರ ಗೌರವವಿದೆ. ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಾರ್ಗದರ್ಶಕನಾಗಿ, ತರಬೇತುದಾರನಾಗಿ ಮತ್ತು ಲೆಜೆಂಡರಿ ಕ್ರಿಕೆಟಿಗನಾಗಿ ನಾನು ಅವರನ್ನು ತುಂಬಾ ಗೌರವಿಸುತ್ತೇನೆ ಮತ್ತು ಅವರಿಂದ ಹಲವಾರು ವಿಷಯಗಳನ್ನು ಕಲಿತಿದ್ದೇನೆ ಎಂದು ನವೀನ್​ ಹೇಳಿದ್ದಾರೆ.