ಕನ್ನಡ ಸುದ್ದಿ  /  Sports  /  Cricket News I Go Step By Step Mohammad Amir Opens Up On Prospect Of Playing Ipl After Getting British Citizenship Prs

Mohammad Amir: ಇಂಗ್ಲೆಂಡ್​​​​ ತಂಡಕ್ಕಾಗಿ ಆಡಲ್ಲ; ಅವಕಾಶ ಸಿಕ್ಕರೆ ಬ್ರಿಟಿಷ್ ಪೌರತ್ವದಿಂದ ಐಪಿಎಲ್​ ಆಡುತ್ತೇನೆ ಎಂದ ಪಾಕ್ ವೇಗಿ ಅಮೀರ್

Mohammad Amir: ನಾನು ಪಾಕಿಸ್ತಾನಕ್ಕಾಗಿ ಕ್ರಿಕೆಟ್ ಆಡಿರುವ ಕಾರಣ ಇಂಗ್ಲೆಂಡ್ ಪರ ಕಣಕ್ಕಿಳಿಯಲು ಬಯಸುವುದಿಲ್ಲ. ಐಪಿಎಲ್ ಬಗ್ಗೆ ಇನ್ನೂ ಯೋಚಿಸಿಲ್ಲ. ಆದರೆ, ಅದಕ್ಕೆ ಇನ್ನೂ ಒಂದು ವರ್ಷ ಬಾಕಿ ಇದ್ದು, ನಾನು ಒಂದೊಂದೇ ಹೆಜ್ಜೆ ಇಡಲು ಬಯಸುತ್ತೇನೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್

ಭಾರತದ ಇಂಡಿಯನ್​ ಪ್ರೀಮಿಯರ್ ಲೀಗ್​​​​ನಲ್ಲಿ (IPL) ಪಾಕಿಸ್ತಾನದ ಕ್ರಿಕೆಟಿಗರನ್ನು (Pakistan Cricketers) ನಿಷೇಧಿಸಲಾಗಿದೆ. 2008ರ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಕೆಲವು ಪಾಕಿಸ್ತಾನ ಆಟಗಾರರು ಭಾಗವಹಿಸಿದ್ದರು, ಆದರೆ, ಉಭಯ ದೇಶಗಳ ನಡುವಿನ ಸಂಬಂಧವು ಸಂಪೂರ್ಣವಾಗಿ ಹದಗೆಟ್ಟ ನಂತರ, ಅವರನ್ನು ಮಿಲಿಯನ್​ ಡಾಲರ್ ಟೂರ್ನಿಯಿಂದ ನಿಷೇಧಿಸಲಾಯಿತು.

ಟ್ರೆಂಡಿಂಗ್​ ಸುದ್ದಿ

ವಿಶ್ವದ ಅತ್ಯಂತ ಶ್ರೀಮಂತ ಮತ್ತು ದೊಡ್ಡ ಕ್ರಿಕೆಟ್ ಲೀಗ್​ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗುತ್ತಿಲ್ಲ ಎಂಬ ನೋವಿನಿಂದ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು (PCB)​ ಪಿಎಸ್‌ಎಲ್ (ಪಾಕ್ ಸೂಪರ್ ಲೀಗ್) ಅನ್ನು ವಿಶ್ವದ ಅತ್ಯುತ್ತಮ ಲೀಗ್ ಎಂದು ಹೇಳಿಕೊಳ್ಳುತ್ತಿದೆ. ಆದರೀಗ 16 ವರ್ಷಗಳ ನಂತರ, ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್ (Mohammad Amir), ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲು ವಿವಿಧ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.

2016ರಲ್ಲಿ ಬ್ರಿಟನ್ ಯುವತಿ, ವಕೀಲ ನರ್ಜೀಸ್ ಖಾನ್ ಅವರನ್ನು ವಿವಾಹವಾದ ಮೊಹಮ್ಮದ್ ಅಮೀರ್, ಪ್ರಸ್ತುತ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ. 2020ರಲ್ಲಿ ಇಂಗ್ಲೆಂಡ್‌ಗೆ ತೆರಳಿದ ಮೊಹಮ್ಮದ್ ಅಮೀರ್, ಮುಂದಿನ ವರ್ಷ ಬ್ರಿಟಿಷ್ ಪೌರತ್ವ (British citizenship) ಪಡೆಯುವಲ್ಲಿ ಯಶಸ್ವಿಯಾಗಲಿದ್ದಾರೆ. ಇದರ ಬೆನ್ನಲ್ಲೇ ಐಪಿಎಲ್​​ನಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

‘ಶಾರೂಕ್​ ಜೊತೆ ಮಾತನಾಡಿಲ್ಲ’

ಮುಂದಿನ ವರ್ಷ ಬಂದರೆ ಅಮೀರ್​, ಇಂಗ್ಲೆಂಡ್​​ನಲ್ಲಿ ನೆಲೆಸಿ 4 ವರ್ಷ ಪೂರ್ತಿಯಾಗುತ್ತದೆ. ಆ ಬಳಿಕ ಇಂಗ್ಲೆಂಡ್​ ಪರ ಆಡುವ ಅವಕಾಶ ಪಡೆಯಲಿದ್ದಾರೆ. ಈಗಾಗಲೇ ಅವರೇ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಲ್ಲ ಎಂದಿದ್ದಾರೆ. ಆದರೆ ಐಪಿಎಲ್​ ಆಡುವ ಕನಸು ಕಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಕೆಕೆಆರ್​ ಫ್ರಾಂಚೈಸಿ ಮಾಲೀಕ ಶಾರೂಕ್​ ಖಾನ್ ಅವರೊಂದಿಗೆ ಮಾತನಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜಾನಾ ಎಂಬ ಮಾಧ್ಯಮದವರು ಪ್ರಶ್ನಿಸಿದ್ದರು. ಆದರೆ ನಾನು ಶಾರೂಖ್ ಅವರೊಂದಿಗೆ ಎಂದಿಗೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಅವಕಾಶ ಸಿಕ್ಕಾಗ ಬಳಸಿಕೊಳ್ಳುತ್ತೇನೆ’

'ನಾನು ಪಾಕಿಸ್ತಾನಕ್ಕಾಗಿ ಕ್ರಿಕೆಟ್ ಆಡಿರುವ ಕಾರಣ ಇಂಗ್ಲೆಂಡ್ ಪರ ಕಣಕ್ಕಿಳಿಯಲು ಬಯಸುವುದಿಲ್ಲ. ಐಪಿಎಲ್ ಬಗ್ಗೆ ಇನ್ನೂ ಯೋಚಿಸಿಲ್ಲ. ಅದಕ್ಕಿನ್ನೂ ಒಂದು ವರ್ಷ ಬಾಕಿ ಇದೆ. ನಾನು ಒಂದೊಂದೇ ಹೆಜ್ಜೆ ಇಡಲು ಬಯಸುತ್ತೇನೆ. ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿರಲ್ಲ. ಈಗಿನಿಂದಲೇ ಐಪಿಎಲ್ 2024ರಲ್ಲಿ ಆಡಬೇಕು ಎಂದು ಕನಸು ಕಾಣುವುದು ಸರಿಯಲ್ಲ. ಪಾಸ್ ಪೋರ್ಟ್ ಸಿಕ್ಕಾಗ ಸಿಕ್ಕ ಉತ್ತಮ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇನೆ' ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಪ್ರತಿಕ್ರಿಯಿಸಿದ್ದಾರೆ.

ಪಾಕ್​ ಕ್ರಿಕೆಟರ್ಸ್​​​ಗೂ ಆಸೆ ಇದೆ!

ARY ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಮಾತು ಮುಂದುವರೆಸಿದ ಅಮೀರ್​​, ಪಾಕಿಸ್ತಾನದ ಕ್ರಿಕೆಟಿಗರಿಗೂ ಐಪಿಎಲ್​ ಆಡಬೇಕೆಂಬ ಬಯಕೆ ಹೊಂದಿದ್ದಾರೆ. ಆದರೆ ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ ಎಂದು ಹೇಳಿದ್ದಾರೆ. ಬ್ರಿಟಿಷ್​ ಪೌರತ್ವ ಸಿಕ್ಕ ಬಳಿಕ ಬೇರೆ ಬೇರೆ ಲೀಗ್​​ಗಳಲ್ಲೂ ಕಣಕ್ಕಿಳಿಯುವ ಅವಕಾಶ ಇದೆ. ಹಾಗಾಗಿ 2024ರ ಐಪಿಎಲ್​​ಗೂ ಮುನ್ನ ಜರುಗಲಿರುವ ಮಿನಿ ಹರಾಜಿಗೆ ಅಮೀರ್ ಹೆಸರು ನೋಂದಾಯಿಸಿಕೊಂಡರೂ ಅಚ್ಚರಿ ಇಲ್ಲ.

2020ರಲ್ಲಿ ನಿವೃತ್ತಿ

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರನ್ನು ಔಟ್ ಮಾಡಿದ ಮೊಹಮ್ಮದ್ ಅಮೀರ್, ಪಿಸಿಬಿ ಅಧಿಕಾರಿಗಳೊಂದಿಗಿನ ಸಂಘರ್ಷದ ನಂತರ 2020ರ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಬ್ಯಾನ್​ ಆಗಿದ್ದರು

ಪಾಕಿಸ್ತಾನ ತಂಡದ ಪರ 36 ಟೆಸ್ಟ್, 61 ಏಕದಿನ ಹಾಗೂ 50 ಟಿ20 ಪಂದ್ಯಗಳನ್ನಾಡಿರುವ ಮೊಹಮ್ಮದ್ ಅಮೀರ್, ಒಟ್ಟು 259 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಹೊತ್ತಿದ್ದ ಅಮೀರ್, ಐದು ವರ್ಷಗಳ ಬಳಿಕ 2015ರಲ್ಲಿ ತಂಡಕ್ಕೆ ಕಂಬ್ಯಾಕ್ ಮಾಡಿದ್ದರು.

ಸಂಬಂಧಿತ ಲೇಖನ