AB de Villiers: ಬೆಂಗಳೂರಿನ ಕಬ್ಬನ್ ಪಾರ್ಕ್, ಸಿಟಿಆರ್ ಮಸಾಲೆ ದೋಸೆ, ಆಟೋವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ: ಎಬಿ ಡಿವಿಲಿಯರ್ಸ್
ಕರ್ನಾಟಕದ ದತ್ತು ಪುತ್ರ ಎನಿಸಿರುವ ಎಬಿಡಿ ವಿಲಿಯರ್ಸ್ (AB De Villiers), ಬೆಂಗಳೂರಿನಲ್ಲಿ ಏನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಆರ್‌ಸಿಬಿ ಇನ್ಸೈಡರ್ ಶೋನಲ್ಲಿ (RCB Insider Show) ಬಹಿರಂಗಪಡಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪಂದ್ಯಗಳನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಆಟವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಎಬಿಡಿ.. ಎಬಿಡಿ.. ಎಂಬ ಕೂಗು ಚಿನ್ನಸ್ವಾಮಿ ಮೈದಾನದಲ್ಲಿ ಕಾಣೆಯಾಗಿದೆ. ಆರ್‌ಸಿಬಿ (RCB) ಪಂದ್ಯದ ವೇಳೆ ಕೂಗನ್ನು ಅಭಿಮಾನಿಗಳು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಬರಿ ಅಭಿಮಾನಿಗಳು ಮಾತ್ರವಲ್ಲ, ಸ್ವತಃ ಎಬಿ ಡಿವಿಲಿಯರ್ಸ್ (AB de Villiers) ಅವರೇ ಈ ಕೂಗನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆರ್‌ಸಿಬಿ ಇನ್ಸೈಡರ್ ಶೋನಲ್ಲಿ (RCB Insidershow) ಭಾಗವಹಿಸಿದ್ದ ಎಬಿಡಿ, ಮಿಸ್ಟರ್ ನ್ಯಾಗ್ಸ್ ಜೊತೆ ಚಿಟ್ಚಾಟ್ ನಡೆಸಿದ್ದಾರೆ. ಇದೇ ವೇಳೆ ಈ ಮಾತನ್ನು ಹೇಳಿದ್ದಾರೆ ಎಬಿಡಿ. ಅಷ್ಟೇ ಅಲ್ಲದೆ, ಬೆಂಗಳೂರಿನಲ್ಲಿ ಆಟೋದಲ್ಲಿ ಓಡಾಡುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದೂ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ. ಅದ್ಭುತವಾಗಿ ತಿಳಿದುಕೊಂಡಿದ್ದಾರೆ ಸಹ. ಹಾಗಾದರೆ ನೀವು ಅತಿಯಾಗಿ ಇಷ್ಟಪಡುವ ವಿಚಾರ ಯಾವುದು ಎಂಬ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಬಿಡಿ, ಬೆಂಗಳೂರಿನಲ್ಲಿ ತುಂಬಾ ಕೂಲ್ ಆಗಿರುವ ಮುಂಜಾನೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಸುಂದರವಾದ ಕಬ್ಬನ್ ಪಾರ್ಕ್ನಲ್ಲಿ (Cubbon Park) ಲಾಂಗ್ ವಾಕ್ ಮಾಡುವುದನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಸಿಟಿಆರ್ನಲ್ಲಿ ಮಸಾಲೆ ದೋಸೆ (CTR Masala Dosa) ಅಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಅದಕ್ಕೂ ದೂರವಾಗಿದ್ದೇನೆ. ಹಾಗೆಯೇ ಮಲ್ಲೇಶ್ವರಂ ಸಾಯಿರಾಮ್ ಚಾಟ್ಸ್ನಲ್ಲಿ ಮಸಾಲೆ ಪೂರಿ (Malleshwaram Sai Ram Chats Masala Puri) ತಿನ್ನುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಮಸಾಲೆಪೂರಿ ತುಂಬಾ ಅದ್ಭುತವಾಗಿರುತ್ತದೆ. ಜೊತೆಗೆ ಆ ರಸ್ತೆಯಲ್ಲಿ ಹೂವುಗಳ ಸುವಾಸನೆ ಇಷ್ಟ ಆಗುತ್ತದೆ. ಅಷ್ಟೇ ಅಲ್ಲ, ಜಯನಗರದ ಕೂಲ್ ಜಾಯಿಂಟ್‌ನಲ್ಲಿ ಲೈಮ್ ಜ್ಯೂಸ್ (Laim Juice Cool Joint in Jayanagar) ಕುಡಿಯುವುದು ಬಹಳ ಇಷ್ಟ ಎಂದು ಬೆಂಗಳೂರಿನ ನಂಟಿನ ಬಗ್ಗೆ ಮಾತನಾಡಿದ್ದಾರೆ ಆರ್‌ಸಿಬಿ ಮಾಜಿ ಆಟಗಾರ.
ಬೆಂಗಳೂರಿನಲ್ಲಿ ಹೆಚ್ಚಾಗಿ ಯಾವ ವ್ಯಕ್ತಿಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಎಬಿಡಿ, ಆಟೋ ಡ್ರೈವರ್‌ಗಳನ್ನು (Bangalore Auto Drivers) ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಚಿನ್ನಸ್ವಾಮಿ ಸ್ಡೇಡಿಯಂ ಸುತ್ತಮುತ್ತ ಹೋಗುವಾಗ ಆಟೋ ಡ್ರೈವರ್‌ಗಳು ಹೆಚ್ಚಾಗಿ ನೆನಪು ಆಗುತ್ತಾರೆ. ಅವರಿಗೆ ಅದ್ಭುತ ಎನರ್ಜಿ ಇದೆ. ಯಾವಾಗ ನೋಡಿದರೂ ಬಹಳ ಆತುರದಲ್ಲೇ ಹೋಗುತ್ತಾರೆ. ನಾನೂ ಕೂಡ ಹಾಗೇ ಇರುತ್ತೇನೆ ಎಂದಿದ್ದಾರೆ ಎಬಿಡಿ.
ಆರ್‌ಸಿಬಿ ಇನ್ಸೈಡರ್ ಶೋನಲ್ಲಿ ಮಾತನಾಡಿದ ಎಬಿಡಿ ತಮ್ಮ ಆರ್‌ಸಿಬಿ ತಂಡದ ನಂ.17 ಜರ್ಸಿಯನ್ನು ಯಾರಿಗೆ ನೀಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಇಬ್ಬರ ಹೆಸರನ್ನು ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಸೌತ್ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್ (Dewald Brevis) ಅವರಿಗೆ ನನ್ನ ಜರ್ಸಿ ನೀಡಲು ಬಯಸುತ್ತೇನೆ. ಇನ್ನು ಆರ್‌ಸಿಬಿ ತಂಡದಲ್ಲೇ ಯಾರಿಗಾದರೂ ನೀಡುವುದಾದರೆ, ರಜತ್ ಪಟಿದಾರ್ (Rajat Patidar) ಈ ಜರ್ಸಿಯನ್ನು ನೀಡಲು ಇಷ್ಟಪಡುತ್ತೇನೆ. ಆತ ಭವಿಷ್ಯದ ಸೂಪರ್ ಸ್ಟಾರ್ ಆಟಗಾರ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ ಮಾಜಿ ಆಟಗಾರ.