ODI World Cup: ಬೆಂಗಳೂರಿನಲ್ಲಿ ನಡೆಯಲಿವೆ ಪಾಕಿಸ್ತಾನ ಪಂದ್ಯಗಳು; ಚಿನ್ನಸ್ವಾಮಿಯಲ್ಲಿ ಭಾರತಕ್ಕೆ ಒಂದೇ ಪಂದ್ಯ, ನಿರಾಸೆಯಲ್ಲಿ ಫ್ಯಾನ್ಸ್
ಕನ್ನಡ ಸುದ್ದಿ  /  ಕ್ರೀಡೆ  /  Odi World Cup: ಬೆಂಗಳೂರಿನಲ್ಲಿ ನಡೆಯಲಿವೆ ಪಾಕಿಸ್ತಾನ ಪಂದ್ಯಗಳು; ಚಿನ್ನಸ್ವಾಮಿಯಲ್ಲಿ ಭಾರತಕ್ಕೆ ಒಂದೇ ಪಂದ್ಯ, ನಿರಾಸೆಯಲ್ಲಿ ಫ್ಯಾನ್ಸ್

ODI World Cup: ಬೆಂಗಳೂರಿನಲ್ಲಿ ನಡೆಯಲಿವೆ ಪಾಕಿಸ್ತಾನ ಪಂದ್ಯಗಳು; ಚಿನ್ನಸ್ವಾಮಿಯಲ್ಲಿ ಭಾರತಕ್ಕೆ ಒಂದೇ ಪಂದ್ಯ, ನಿರಾಸೆಯಲ್ಲಿ ಫ್ಯಾನ್ಸ್

ICC World Cup: ಭಾರತದ ಅತ್ಯಂತ ಸುಸಜ್ಜಿತ ಕ್ರಿಕೆಟ್‌ ಮೈದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ. ಇದರಲ್ಲಿ ಒಂದು ಪಂದ್ಯದಲ್ಲಿ ಭಾರತ ಕೂಡಾ ಆಡಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐದು ವಿಶ್ವಕಪ್‌ ಪಂದ್ಯಗಳು ನಡೆಯಲಿವೆ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐದು ವಿಶ್ವಕಪ್‌ ಪಂದ್ಯಗಳು ನಡೆಯಲಿವೆ

ಕ್ರಿಕೆಟ್‌ ವಿಶ್ವಕಪ್‌ಗೆ (ICC World Cup 2023) ಜಗತ್ತು ಸಿದ್ಧವಾಗುತ್ತಿದೆ. ಒಂದು ದಶಕದ ಬಳಿಕ ಭಾರತದ ಆತಿಥ್ಯದಲ್ಲಿ ಕ್ರಿಕೆಟ್‌ನ ಅದ್ಧೂರಿ ಹಾಗೂ ಪ್ರತಿಷ್ಠಿತ ಪಂದ್ಯಾವಳಿಯು ನಡೆಯುತ್ತಿದೆ. ದೇಶದ ಹತ್ತು ಕ್ರೀಡಾಂಗಣಗಳು ವಿಶ್ವದ ಬಲಿಷ್ಠ ತಂಡಗಳನ್ನೊಳಗೊಂಡ ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗುತ್ತಿವೆ. 2011ರ ಬಳಿಕ ಇದೇ ಮೊದಲ ಬಾರಿಗೆ 2023ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಸಿಕ್ಕಿದ್ದು, ಭರ್ಜರಿ ಸಂಭ್ರಮಕ್ಕೆ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ವರ್ಷದ ಏಕದಿನ ವಿಶ್ವಕಪ್ ಅಕ್ಟೋಬರ್ 5ರಂದು ಆರಂಭವಾಗಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮೊದಲ ಪಂದ್ಯದಲ್ಲಿ‌ ಮುಖಾಮುಖಿಯಾಗಲಿವೆ. ಆತಿಥೇಯ ಭಾರತವು 2023ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಭಾರತದ ಮೊದಲ ಪಂದ್ಯ ನಡೆಯಲಿದೆ. ಅಕ್ಟೋಬರ್ 15ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಬ್ಲಾಕ್ ಬಸ್ಟರ್ ಪಂದ್ಯ ನಡೆಯಲಿದೆ.

ಮುಂಬಯಿ ಹಾಗೂ ಕೋಲ್ಕೊತಾದಲ್ಲಿ ಸೆಮಿಫೈನಲ್ ಪಂದ್ಯಗಳು ನಡೆದರೆ, ಅಹಮದಾಬಾದ್‌ನಲ್ಲಿ ಫೈನಲ್‌ ಪಂದ್ಯ ನಡೆಯುತ್ತಿವೆ. ಒಟ್ಟು 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಚೆನ್ನೈ, ಅಹಮದಾಬಾದ್, ದೆಹಲಿ, ಪುಣೆ, ಧರ್ಮಶಾಲಾ, ಲಖನೌ, ಮುಂಬೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಪಂದ್ಯಗಳು ನಡೆಯಲಿವೆ.

ಬೆಂಗಳೂರಿನಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ?

ಭಾರತದ ಅತ್ಯಂತ ಸುಸಜ್ಜಿತ ಕ್ರಿಕೆಟ್‌ ಮೈದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿವೆ. ಇದರಲ್ಲಿ ಒಂದು ಪಂದ್ಯದಲ್ಲಿ ಭಾರತ ಕೂಡಾ ಆಡಲಿದೆ. ಉಳಿದಂತೆ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಎರಡು ಪಂದ್ಯಗಳನ್ನು ಉದ್ಯಾನ ನಗರಿಯಲ್ಲಿ ಆಡಿದರೆ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳು ತಲಾ ಒಂದು ಪಂದ್ಯವನ್ನು ಬೆಂಗಳೂರಿನಲ್ಲಿ ಆಡುತ್ತಿವೆ.

ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳು

ಪಾಕಿಸ್ತಾನ vs ಆಸ್ಟ್ರೇಲಿಯಾ: ಅಕ್ಟೋಬರ್​ 20

ಇಂಗ್ಲೆಂಡ್ vs​ ಕ್ವಾಲಿಫೈಯರ್​ 1, ಅಕ್ಟೋಬರ್​ 26

ನ್ಯೂಜಿಲ್ಯಾಂಡ್​ vs ಪಾಕಿಸ್ತಾನ ​ 2: ನವೆಂಬರ್ 4

ನ್ಯೂಜಿಲ್ಯಾಂಡ್​ vs ಕ್ವಾಲಿಫೈಯರ್​ 2: ನವೆಂಬರ್​ 9

ಭಾರತ vs ಕ್ವಾಲಿಫೈಯರ್​ 1: ನವೆಂಬರ್​ 11

ಟೂರ್ನಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿವೆ. ಹೈದರಾಬಾದ್, ಗುವಾಹಟಿ ಮತ್ತು ತಿರುವನಂತಪುರಂ ಮೈದಾನಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಿವೆ.

ಭಾರತದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಅಕ್ಟೋಬರ್‌ 8: ಭಾರತ vs ಆಸ್ಟ್ರೇಲಿಯಾ, ಚೆನ್ನೈ

ಅಕ್ಟೋಬರ್‌ 11: ಭಾರತ vs ಅಫ್ಘಾನಿಸ್ತಾನ, ದೆಹಲಿ

ಅಕ್ಟೋಬರ್ 15: ಭಾರತ vs ಪಾಕಿಸ್ತಾನ, ಅಹಮದಾಬಾದ್

ಅಕ್ಟೋಬರ್ 19: ಭಾರತ vs ಬಾಂಗ್ಲಾದೇಶ, ಪುಣೆ

ಅಕ್ಟೋಬರ್ 22: ಭಾರತ vs ನ್ಯೂಜಿಲ್ಯಾಂಡ್, ಧರ್ಮಶಾಲಾ

ಅಕ್ಟೋಬರ್‌ 29: ಭಾರತ vs ಇಂಗ್ಲೆಂಡ್, ಲಖನೌ

ನವೆಂಬರ್‌ 2: ಭಾರತ vs ಕ್ವಾಲಿಪೈಯರ್‌ 2, ಮುಂಬೈ

ನವೆಂಬರ್ 5: ಭಾರತ vs ದಕ್ಷಿಣ ಆಫ್ರಿಕಾ, ಕೋಲ್ಕತ್ತಾ

ನವೆಂಬರ್ 11: ಭಾರತ vs ಕ್ವಾಲಿಫೈಯರ್‌, 1 ಬೆಂಗಳೂರು

ದೇಶದಲ್ಲೇ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನಕ್ಕಿದೆ. ಬೆಂಗಳೂರಿನಲ್ಲಿ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇದ್ದು, ಮಳೆ ನಿಂತ ಕೇವಲ 15ರಿಂದ 20 ನಿಮಿಷದಲ್ಲಿ ಮೈದಾನವು ಪಂದ್ಯ ನಡೆಸಲು ಸಜ್ಜಾಗುತ್ತದೆ. ಇಲ್ಲಿನ ಸಬ್‌ಏರ್‌ ವ್ಯವಸ್ಥೆ ಮತ್ತು ನಿರ್ವಾತ ಚಾಲಿತ(vacuum-powered) ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರು ಬೇಗನೆ ತೆರವಾಗುತ್ತದೆ. ಅಂದರೆ, ಸಾಮಾನ್ಯವಾಗಿ ಮೈದಾನಕ್ಕೆ ಬೀಳುವ ನೀರು ತೆರವಾಗಲು ತೆಗೆದುಕೊಳ್ಳುವ ಸಮಯಕ್ಕಿಂತ 36 ಪಟ್ಟು ವೇಗವಾಗಿ ಈ ವ್ಯವಸ್ಥೆಯು ನೀರನ್ನು ತೆರವುಗೊಳಿಸುತ್ತದೆ. ನಿಮಿಷಕ್ಕೆ ಬರೋಬ್ಬರಿ 10,000 ಲೀಟರ್‌ ನೀರನ್ನು ಈ ವಿಧಾನದ ಮೂಲಕ ಹೊರಹಾಕಬಹುದು.

Whats_app_banner