ಕನ್ನಡ ಸುದ್ದಿ  /  Sports  /  Cricket News If Team India Win World Test Championship 2023 Final Becoming 1st Team Win 3 Formats Icc Trophy Prs

WTC Final 2023: ಡಬ್ಲ್ಯುಟಿಸಿ ಫೈನಲ್‌ ಗೆದ್ದರೆ, ಕ್ರಿಕೆಟ್​ ಇತಿಹಾಸದಲ್ಲಿ ಹೊಸ ಚರಿತ್ರೆ; ಈ ದಾಖಲೆ ಬರೆಯುವ ಮೊದಲ ತಂಡ ಎನಿಸಲಿದೆ ಭಾರತ

ಟೀಮ್​ ಇಂಡಿಯಾ, ಆಸೀಸ್ (India vs Australia) ವಿರುದ್ಧ ಟೆಸ್ಟ್ ಚಾಂಪಿಯನ್‌ಶಿಪ್ (WTC Final 2023) ಗೆದ್ದರೆ, ಏಕದಿನ, ಟಿ20 ಮತ್ತು ಟೆಸ್ಟ್ ಎಂಬ ಮೂರು ಮಾದರಿಗಳಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಭಾರತ ಟೆಸ್ಟ್​ ತಂಡ
ಭಾರತ ಟೆಸ್ಟ್​ ತಂಡ

ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ (ICC World Test Championship final 2023) ಪ್ರವೇಶಿಸಿರುವ ಭಾರತ, ಜೂನ್ 7 ರಿಂದ ಓವಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು (India vs Australia) ಎದುರಿಸಲಿದೆ. ಈ ಬಾರಿಯ ಟೆಸ್ಟ್ ವಿಶ್ವಕಪ್ ಗೆಲ್ಲುವಲ್ಲಿ ಟೀಮ್​ ಇಂಡಿಯಾ  (Team India) ಯಶಸ್ವಿಯಾದರೆ, ಕ್ರಿಕೆಟ್ ಚರಿತ್ರೆಯಲ್ಲಿ ಯಾವುದೇ ತಂಡವೂ ಮಾಡದ ಅಪರೂಪದ ದಾಖಲೆ ಬರೆಯಲಿದೆ. ಈ ಮೂಲಕ 2013ರ ನಂತರ ಐಸಿಸಿ ಟ್ರೋಫಿ ಗೆಲ್ಲದ ಬರ ನೀಗಲಿದೆ.

ವಾಸ್ತವವಾಗಿ ಎಂಎಸ್​ ಧೋನಿ ನಾಯಕತ್ವದಲ್ಲಿ (MS Dhoni Captancy) ಟೀಮ್ ಇಂಡಿಯಾ ಅಂತಿಮವಾಗಿ ಚಾಂಪಿಯನ್ಸ್ ಟ್ರೋಫಿಯನ್ನು (2013) ಎತ್ತಿ ಹಿಡಿದಿತ್ತು. ಆದರೆ ಆ ನಂತರ ಭಾರತಕ್ಕೆ ಐಸಿಸಿ ಟ್ರೋಫಿ ಸಿಗಲಿಲ್ಲ. 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​, 2017ರಲ್ಲಿ ಚಾಂಪಿಯನ್​ ಟ್ರೋಫಿ ಫೈನಲ್​​ನಲ್ಲಿ (ICC Champions Trophy) ರನ್ನರ್​​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ 10 ವರ್ಷಗಳ ಟ್ರೋಫಿ ಗೆಲ್ಲಲು ಪಣತೊಟ್ಟಿದೆ.

ಮೂರು ಮಾದರಿಯಲ್ಲೂ ವಿಶ್ವಕಪ್​

ಟೀಮ್​ ಇಂಡಿಯಾ, ಆಸೀಸ್ ವಿರುದ್ಧ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದರೆ, ಏಕದಿನ, ಟಿ20 ಮತ್ತು ಟೆಸ್ಟ್ ಎಂಬ ಮೂರು ಮಾದರಿಗಳಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ, ಆಸಿಸ್​ ಕೂಡ ಅದೇ ದಾಖಲೆ ಬರೆಯಲಿದೆ. ಹಾಗಾಗಿ ಉಭಯ ತಂಡಗಳು ಅಪರೂಪದ ದಾಖಲೆ ಬರೆಯಲು ಸಕಲ ಸಿದ್ಧತೆ ಮಾಡಿಕೊಂಡಿವೆ.

1984ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. ನಂತರ 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಮೊದಲ ಟಿ20 ವಿಶ್ವಕಪ್ ಗೆದ್ದಿತ್ತು. ಆ ಬಳಿಕ 28 ವರ್ಷಗಳ ಬಳಿಕ 2011ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಮತ್ತೊಮ್ಮೆ ಏಕದಿನ ವಿಶ್ವಕಪ್ ಗೆದ್ದಿತ್ತು. 2021ರಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ ಸೋತು ದಾಖಲೆ ನಿರ್ಮಿಸಲು ವಿಫಲವಾಗಿತ್ತು.

ಡಬ್ಲ್ಯುಟಿಸಿ ಫೈನಲ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್​), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್.ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯದೇವ್ ಉನದ್ಕತ್, ಉಮೇಶ್ ಯಾದವ್.

ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಮುಖೇಶ್ ಕುಮಾರ್

ಡಬ್ಲ್ಯುಟಿಸಿ ಫೈನಲ್‌ಗೆ ಆಸ್ಟ್ರೇಲಿಯಾ ತಂಡ

ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್ (ಉಪನಾಯಕ), ಡೇವಿಡ್ ವಾರ್ನರ್, ಮಾರ್ನಸ್ ಲಬುಶೇನ್​, ಅಲೆಕ್ಸ್ ಕ್ಯಾರಿ (ವಿಕೆಟ್​ ಕೀಪರ್), ಮ್ಯಾಥ್ಯೂ ರೆನ್ಶಾ, , ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಇಂಗ್ಲಿಸ್, ಜೋಶ್ ಹೇಜಲ್​ವುಡ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮಿಚೆಲ್ ಮಾರ್ಶಾನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್.