ಕನ್ನಡ ಸುದ್ದಿ  /  ಕ್ರೀಡೆ  /  Sachin At 50: ಸಚಿನ್ ತೆಂಡೂಲ್ಕರ್ ಕುರಿತ 20 ಕುತೂಹಲಕಾರಿ ಸಂಗತಿಗಳಿವು

Sachin at 50: ಸಚಿನ್ ತೆಂಡೂಲ್ಕರ್ ಕುರಿತ 20 ಕುತೂಹಲಕಾರಿ ಸಂಗತಿಗಳಿವು

ಸಚಿನ್ ತೆಂಡೂಲ್ಕರ್ 1987ರ ವಿಶ್ವಕಪ್‌ ಸಮಯದಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಬಾಲ್‌ಬಾಯ್ ಆಗಿದ್ದರು. ಆ ವೇಳೆ ವಿಶ್ವಕಪ್‌ ಪಂದ್ಯಗಳಿಗೆ ಭಾರತ ಕೂಡಾ ಆತಿಥ್ಯ ವಹಿಸಿತ್ತು. ಆ ನಂತರ ವಿಶ್ವಕಪ್‌ನಲ್ಲಿ ಆಡಿ ಭಾರತಕ್ಕೆ ವರ್ಲ್ಡ್‌ಕಪ್‌ ಗೆದ್ದಿದ್ದು ಇತಿಹಾಸ.

ಸಚಿನ್‌ ತೆಂಡೂಲ್ಕರ್‌ ಕುರಿತ ಆಸಕ್ತಿದಾಯಕ ವಿಷಯಗಳು
ಸಚಿನ್‌ ತೆಂಡೂಲ್ಕರ್‌ ಕುರಿತ ಆಸಕ್ತಿದಾಯಕ ವಿಷಯಗಳು

ಕ್ರಿಕೆಟ್‌ ಲೋಕದ ಅತ್ಯಂತ ಪ್ರಸಿದ್ಧ ಹಾಗೂ ಪರಿಚಿತ ಮುಖ ಸಚಿನ್ ತೆಂಡೂಲ್ಕರ್. ಮಾಸ್ಟರ್ ಬ್ಲಾಸ್ಟರ್ ಇಂದು (ಸೋಮವಾರ ಏಪ್ರಿಲ್ 24) ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು, ಜಾಗತಿಕ ಕ್ರಿಕೆಟ್‌ನ ಅಭಿಮಾನಿಗಳು ದಿಗ್ಗಜನಿಗೆ ಶುಭಾಶಯ ಕೋರುತ್ತಿದ್ದಾರೆ. 'ಕ್ರಿಕೆಟ್ ದೇವರು' ಎಂದೇ ಕರೆಯಲ್ಪಡುವ ಲಿಟಲ್‌ ಮಾಸ್ಟರ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 34,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 100 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ಸಚಿನ್ ಅವರಿಗೆ ಸಿಕ್ಕ ಉನ್ನತ ಗೌರವಗಳು. ಸಚಿನ್‌ ಅವರ ದಾಖಲೆಗಳ ಬಗ್ಗೆ ಈಗಾಗಲೇ ಹಲವರಿಗೆ ತಿಳಿದಿದೆ. ಈಗ ಕ್ರಿಕೆಟ್‌ ದೇವರ ಕುರಿತ ಕೆಲವು ಆಸಕ್ತಿದಾಯಕ ಅಂಶಗಳನ್ನು ಇಲ್ಲಿ ತಿಳಿದುಕೊಳ್ಳಿ.

 • ಸಚಿನ್‌ ಅವರ ತಂದೆ ರಮೇಶ್ ತೆಂಡೂಲ್ಕರ್, ಪ್ರಸಿದ್ಧ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್(Sachin Dev Burman) ಅವರ ಹೆಸರನ್ನು ಸಚಿನ್‌ಗೆ ಇಡುತ್ತಾರೆ. ಅವರ ತಂದೆಗೆ ಬರ್ಮನ್ ಫೇವರೆಟ್‌ ಅಂತೆ.
 • ತೆಂಡೂಲ್ಕರ್ ಅವರಿಗೆ ಇಬ್ಬರು ಅಣ್ಣಂದಿರು ಹಾಗೂ ಒಬ್ಬರು ಅಕ್ಕ ಇದ್ದಾರೆ. ನಾಲ್ಕು ಮಕ್ಕಳಲ್ಲಿ ಸಚಿನ್‌ ಕೊನೆಯವರು. ಸಚಿನ್ ತೆಂಡೂಲ್ಕರ್ ಓರ್ವ ಕ್ರಿಕೆಟಿಗನಾಗುವಲ್ಲಿ ಅವರ ಸಹೋದರ ಅಜಿತ್ ತೆಂಡೂಲ್ಕರ್ ಪ್ರಮುಖ ಪಾತ್ರ ವಹಿಸಿದ್ದಾರಂತೆ.
 • ತಮ್ಮ 14ನೇ ವಯಸ್ಸಿನಲ್ಲಿ, ಸಚಿನ್‌ 326 ರನ್ ಗಳಿಸಿದ ದಾಖಲೆ ಮಾಡಿದ್ದಾರೆ. ಶಾಲೆಯ ಪಂದ್ಯವೊಂದರಲ್ಲಿ ವಿನೋದ್ ಕಾಂಬ್ಳಿ ಅವರೊಂದಿಗೆ 664 ರನ್‌ಗಳ ವಿಶ್ವ ದಾಖಲೆಯ ಜೊತೆಯಾಟ ಆಡಿದ್ದಾರೆ.
 • ದಿಗ್ಗಜ ಕ್ರಿಕೆಟಿಗ ಗವಾಸ್ಕರ್ ಅವರು, ತೆಂಡೂಲ್ಕರ್‌ಗೆ ತಮ್ಮ ಅಲ್ಟ್ರಾ-ಲೈಟ್ ಪ್ಯಾಡ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಅವುಗಳು U-15 ರಾಷ್ಟ್ರೀಯ ಶಿಬಿರದಲ್ಲಿ ಕಳವಾದವು.
 • ಸಚಿನ್ ತೆಂಡೂಲ್ಕರ್‌ ತಮ್ಮ ಪತ್ನಿ ಅಂಜಲಿಯನ್ನು 1990ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಭೇಟಿಯಾದರು. ಆಗ ಅವರಿಗೆ 17 ವರ್ಷ ವಯಸ್ಸು. ಸಚಿನ್ ತಮ್ಮ 22ನೇ ವಯಸ್ಸಿನಲ್ಲಿ, ಅಂದರೆ 1995ರ ಮೇ 24ರಂದು ವಿವಾಹವಾದರು.
 • 1989ರ ನವೆಂಬರ್ ತಿಂಗಳಲ್ಲಿ ಪಾಕಿಸ್ತಾನದ ವಿರುದ್ಧ ಸಚಿನ್ ತಮ್ಮ 16ನೇ ವಯಸ್ಸಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. 1990ರಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
 • ಸಚಿನ್‌ ಏಕದಿನ ಕ್ರಿಕೆಟ್‌ಗೆ ಪಾಕಿಸ್ತಾನ ವಿರುದ್ಧವೇ ಪದಾರ್ಪಣೆ ಮಾಡುತ್ತಾರೆ. ತಮ್ಮ ಚೊಚ್ಚಲ ಪಂದ್ಯದಲ್ಲೇ ಅವರು ಡಕೌಟ್‌ ಆಗಿ ಶೂನ್ಯಕ್ಕೆ ನಿರ್ಗಮಿಸುತ್ತಾರೆ.
 • ಸಚಿನ್ ಅವರ ಮೊದಲ ಕಾರು ಮಾರುತಿ-800. ಆ ಕಾರನ್ನು ಸಾಲ ಮಾಡಿ ಖರೀದಿಸಿದ್ದರು. ಸಚಿನ್ ಆ ಬಳಿಕ BMWನ ಬ್ರಾಂಡ್ ಅಂಬಾಸಿಡರ್ ಆಗಿದ್ದು ರೋಮಾಂಚಕ.
 • ಮಾಸ್ಟರ್ ಬ್ಲಾಸ್ಟರ್ ತಮ್ಮ 200ನೇ ಟೆಸ್ಟ್ ಪಂದ್ಯವನ್ನು ಆಡಿದ ನಂತರ 2013ರ ನವೆಂಬರ್ ತಿಂಗಳಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾದರು.
 • ಸಚಿನ್‌ ಒಟ್ಟು 664 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ‌ ಬರೋಬ್ಬರಿ 34,357 ರನ್ ಗಳಿಸಿದ್ದಾರೆ.
 • ತೆಂಡೂಲ್ಕರ್ ಅವರು ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಬಾರಿ ಮಾತ್ರ ಸ್ಟಂಪ್ ಔಟ್ ಆಗಿದ್ದಾರೆ. ಅದು ಇಂಗ್ಲೆಂಡ್ ಬೌಲರ್ ಆಶ್ಲೇ ಗೈಲ್ಸ್ ಅವರಿಂದ.
 • ಸಚಿನ್‌ ತೆಂಡೂಲ್ಕರ್‌ ಕ್ರಿಕೆಟ್‌ನಷ್ಟೇ ಟೇಬಲ್ ಟೆನ್ನಿಸ್‌ ಆಟದಲ್ಲಿಯೂ ಎತ್ತಿದ ಕೈ. ಟೇಬಲ್‌ ಟೆನ್ನಿಸ್‌ ಆಟದಲ್ಲಿ ಸಚಿನ್‌ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಯುವರಾಜ್ ಸಿಂಗ್‌ ಹೇಳಿದ್ದಾರೆ.
 • ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ ಆಟಗಾರನಾಗಿ ಬರೋಬ್ಬರಿ 90 ಮೈದಾನಗಳಲ್ಲಿ ಆಡಿದ್ದಾರೆ.
 • 1988ರಲ್ಲಿ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ತೆಂಡೂಲ್ಕರ್ ಪಾಕಿಸ್ತಾನದ ಪರ ಬದಲಿ ಫೀಲ್ಡರ್ ಆಗಿ ಆಡಿದ್ದರು. ಪಾಕಿಸ್ತಾನದ ಕ್ರಿಕೆಟಿಗರಾದ ಜಾವೇದ್ ಮಿಯಾಂದಾದ್ ಮತ್ತು ಅಬ್ದುಲ್ ಖಾದಿರ್ ಊಟದ ವಿರಾಮದ ಸಮಯದಲ್ಲಿ ಮೈದಾನವನ್ನು ತೊರೆದಿದ್ದರು. ಈ ವೇಳೆ ಬದಲಿ ಫೀಲ್ಡರ್‌ ಆಗಿ ತೆಂಡೂಲ್ಕರ್ ಆಡಿದ್ದರಂತೆ. ಈ ಬಗ್ಗೆ ಅವರು ತಮ್ಮ ಆತ್ಮಚರಿತ್ರೆ 'ಪ್ಲೇಯಿಂಗ್ ಇಟ್ ಮೈ ವೇ(Playing It My Way)'ನಲ್ಲಿ ಬರೆದಿದ್ದಾರೆ.
 • ಏಕದಿನ ಪಂದ್ಯದಲ್ಲಿ ಥರ್ಡ್ ಅಂಪೈರ್ ಮೂಲಕ ಮೊದಲು ಔಟಾದ ಆಟಗಾರ ಸಚಿನ್.‌
 • ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಸಚಿನ್.‌ ಅದು 2010ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಗೆದ್ದಿದ್ದರು.
 • ಸಚಿನ್ ತೆಂಡೂಲ್ಕರ್ 1987ರ ವಿಶ್ವಕಪ್‌ ಸಮಯದಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಬಾಲ್‌ಬಾಯ್ ಆಗಿದ್ದರು. ಆ ವೇಳೆ ವಿಶ್ವಕಪ್‌ ಪಂದ್ಯಗಳಿಗೆ ಭಾರತ ಕೂಡಾ ಆತಿಥ್ಯ ವಹಿಸಿತ್ತು. ಆ ನಂತರ ವಿಶ್ವಕಪ್‌ನಲ್ಲಿ ಆಡಿ ಭಾರತಕ್ಕೆ ವರ್ಲ್ಡ್‌ಕಪ್‌ ಗೆದ್ದಿದ್ದು ಇತಿಹಾಸ.
 • ರಣಜಿ, ದುಲೀಪ್ ಮತ್ತು ಇರಾನಿ ಟ್ರೋಫಿಯಲ್ಲಿ ಪದಾರ್ಪಣೆ ಮಾಡಿದ ಪಂದ್ಯಗಳಲ್ಲೇ ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ತೆಂಡೂಲ್ಕರ್ ಅವರದ್ದು.
 • ತೆಂಡೂಲ್ಕರ್ ಅವರ ನೆಚ್ಚಿನ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ.
 • ಕ್ರಿಕೆಟ್ ದೇವರು 2013ರಲ್ಲಿ ವಾಂಖೆಡೆ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು.