India vs West Indies: ನಿರ್ಣಾಯಕ 3ನೇ ಟಿ20 ಪಂದ್ಯದಲ್ಲಿ ಮೊದಲು ಬೌಲಿಂಗ್ ಅವಕಾಶ ಪಡೆದ ಟೀಂ ಇಂಡಿಯಾ; ಯಶಸ್ವಿ ಜೈಸ್ವಾಲ್ ಪಾದಾರ್ಪಣೆ
ಟಿ20 ಸರಣಿಯನ್ನು ಜೀವಂತವಾಗಿಸಿಕೊಳ್ಳುವ ನಿರ್ಣಾಯಕ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡುವ ಅವಕಾಶ ಪಡೆದಿದೆ.
ಗಯಾನಾ( ವೆಸ್ಟ್ ಇಂಡೀಸ್): ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (India vs West Indies) ಮೊದಲು ಬೌಲಿಂಗ್ ಮಾಡುವ ಅವಕಾಶ ಪಡೆದಿದೆ.
ಇವತ್ತಿನ ಪಂದ್ಯದಲ್ಲಿ ಇಶಾನ್ ಕಿಶನ್‌ಗೆ ಕೊಕ್ ನೀಡಲಾಗಿದ್ದು, ಯಶಸ್ವಿ ಜೈಸ್ವಾಲ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಿದ್ದಾರೆ.
ಸ್ಟಾರ್ ಬ್ಯಾಟರ್‌ಗಳು ಪದೇ ಪದೆ ವಿಫಲವಾಗುತ್ತಿರುವುದು ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿಂಡೀಸ್ ವಿರುದ್ಧದ ಸರಣಿಯನ್ನು ಜೀವಂತವಾಗಿಸಬೇಕಾದರೆ ಇಂದು (ಆಗಸ್ಟ್ 8, ಮಂಗಳವಾರ) ಗಯಾನಾದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬ್ಯಾಟರ್‌ಗಳು ಅಬ್ಬರಿಸಬೇಕಾಗಿದೆ. ಬೌಲರ್‌ಗಳ ಪಾತ್ರವೂ ಮಹತ್ವದ್ದಾಗಿದ್ದು, ಕಡಿಮೆ ಮೊತ್ತಕ್ಕೆ ವಿಂಡೀಸ್ ತಂಡವನ್ನು ಕಟ್ಟಿಹಾಕಬೇಕಿದೆ.
ಮೊದಲ ಎರಡು ಪಂದ್ಯಗಳಲ್ಲಿ ಆರಂಭಿಕ ಬ್ಯಾಟರ್‌ಗಳು ಉತ್ತಮ ರನ್ ಪೇರಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಇವತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಆಡುವ 11ರ ಬಳಗದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಇಶಾನ್ ಕಿಶನ್ 27 ಮತ್ತು 6, ಶುಭಮನ್ ಗಿಲ್ 3 ಮತ್ತು 7 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಕಿಶನ್‌ಗೆ ಇವತ್ತಿನ ಪಂದ್ಯದಲ್ಲಿ ಅವಕಾಶ ನೀಡಿಲ್ಲ. ಬದಲಾಗಿ ಯಶಸ್ವಿ ಜೈಸ್ವಾಲ್ ಮತ್ತು ಕುಲ್ದೀಪ್ ಯಾದವ್‌ಗೆ ಸ್ಥಾನ ನೀಡಲಾಗಿದೆ.
ಟೀಂ ಇಂಡಿಯಾದ ಆಡುವ 11ರ ಬಳಗ
ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್, ಮುಕೇಶ್ ಕುಮಾರ್,
ಬೆಂಚ್ - ಇಶಾನ್ ಕಿಶನ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್, ಅವೇಶ್ ಖಾನ್
ವೆಸ್ಟ್ ಇಂಡೀಸ್‌ನ ಆಡುವ 11ರ ಬಳಗ
ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸಲ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹಿಟ್ಮೆಯರ್, ರೊಮಾರಿಯಾ ಶೆಫರ್ಡ್, ರೋಸ್ಟರ್ ಚೇಸ್, ಅಕೇಲ್ ಹೊಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್,
ಬೆಂಚ್ - ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಶಾಯ್ ಹೋಪ್, ಒಶಾನೆ ಥಾಮಸ್