ಕನ್ನಡ ಸುದ್ದಿ  /  Sports  /  Cricket News Ipl 2023 Can I Take Vamika On A Date Kids Placard For Virat Kohli Anushka Sharma S Daughter Fans Fire

Virat Kohli Daughter Vamika: ವಿರಾಟ್ ಅಂಕಲ್.. ವಮಿಕಾ ಜೊತೆ ನಾನು ಡೇಟಿಂಗ್ ಹೋಗ್ಬೋದಾ? ಪುಟ್ಟ ಬಾಲಕನ ಪ್ಲಕಾರ್ಡ್​ಗೆ ಫ್ಯಾನ್ಸ್​ ಗರಂ

‘ಹಾಯ್​​ ವಿರಾಟ್ ಅಂಕಲ್.. ನಾನು ವಮಿಕಾಳನ್ನು ಡೇಟಿಂಗ್​ಗೆ ಕರೆದುಕೊಂಡು ಹೋಗಬಹುದಾ’ ಎಂದು ಕೇಳಿದ್ದಾನೆ. ಅದರ ಕುರಿತು ಪ್ಲಕಾರ್ಡ್​ ಹಿಡಿದ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ. ಕೆಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದರೆ, ಇನ್ನೂ ಕೆಲವರು ಫುಲ್​ ಗರಂ ಆಗಿದ್ದಾರೆ.

ಪುಟ್ಟ ಬಾಲಕ ಹಿಡಿದಿರುವ ಪ್ಲೇಕಾರ್ಡ್​​​
ಪುಟ್ಟ ಬಾಲಕ ಹಿಡಿದಿರುವ ಪ್ಲೇಕಾರ್ಡ್​​​ (Twitter)

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​​ ಲೀಗ್ (IPL 2023)​​ ಬಿರುಸಿನಿಂದ ಸಾಗುತ್ತಿದೆ. ಅಭಿಮಾನಿಗಳ ದಂಡು ಮೈದಾನದತ್ತ ಹರಿದು ಬರುತ್ತಿದೆ. ಮೈದಾನಗಳು ಕಿಕ್ಕಿರಿದು ತುಂಬುತ್ತಿವೆ. ತಮ್ಮ ನೆಚ್ಚಿನ ಆಟಗಾರರಿಗೆ ಪ್ಲೇ ಕಾರ್ಡ್​ಗಳನ್ನು ತೋರಿಸಿ ಬೆಂಬಲ ನೀಡುತ್ತಿದ್ದಾರೆ. ಭಿನ್ನ ಭಿನ್ನ ಪ್ಲ ಕಾರ್ಡ್​ಗಳ ಮೂಲಕ ಗಮನ ಸೆಳೆಯುತ್ತಾರೆ. ಈಗ ಅಂತಹದ್ದೇ ಪ್ಲ ಕಾರ್ಡೊಂದು ಸಖತ್​ ವೈರಲ್ ಆಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಹೌದು. ಪುಟ್ಟ ಬಾಲಕನ ಪ್ಲೇ ಕಾರ್ಡೊಂದು ಸಖತ್​ ವೈರಲ್​ ಆಗುತ್ತಿದೆ. ಅದು ಕೂಡ ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ಅವರ ಮುದ್ದಿನ ಮಗಳು ವಮಿಕಾ ಕುರಿತಂತೆ. ಎರಡು ವರ್ಷದ ವಮಿಕಾ ಕುರಿತು ವಿರುಷ್ಕಾ ಜೋಡಿ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದಾರೆ. ವಮಿಕಾ (Vamika) ಫೋಟೋ, ವಿಡಿಯೋ ಪ್ರಕಟಿಸದಂತೆ ಮಾಧ್ಯಮಗಳಿಗೆ, ಸೋಷಿಯಲ್ ಮೀಡಿಯಾ ಪೇಜ್‌ಗಳಿಗೆ ಈ ಜೋಡಿ ಮನವಿ ಮಾಡಿತ್ತು.

ಆದರೆ, ಪಾಪರಾಜಿಗಳು ಪಂದ್ಯ ಜರುಗುವ ಸಂದರ್ಭದಲ್ಲಿ ಅನುಷ್ಕಾ ಕೈಯಲ್ಲಿದ್ದ ವಮಿಕಾ ವಿಡಿಯೋ ಮಾಡಿದ್ದರು. ಇದು ಭಾರಿ ವೈರಲ್​ ಆಗಿತ್ತು. ಅದಕ್ಕೆ ವಿರೂಷ್ಕ ದಂಪತಿಗಳು ನೋವು ತೋಡಿಕೊಂಡಿದ್ದರು. ಆ ಬಳಿಕ ವಮಿಕಾ ಫೋಟೋ ಹಂಚಿಕೊಂಡಿಲ್ಲ. ಆದರೀಗ ಪುಟ್ಟ ಬಾಲಕನೊಬ್ಬ ತಾನು ವಮಿಕಾ ಜೊತೆ ಡೇಟ್ ಮಾಡಬೇಕು ಅಂತ ಪ್ಲ ಕಾರ್ಡ್​ ಮೂಲಕ ಕೇಳಿದ್ದಾನೆ.

‘ಹಾಯ್​​ ವಿರಾಟ್ ಅಂಕಲ್.. ನಾನು ವಮಿಕಾಳನ್ನು ಡೇಟಿಂಗ್​ಗೆ ಕರೆದುಕೊಂಡು ಹೋಗಬಹುದಾ’ ಎಂದು ಕೇಳಿದ್ದಾನೆ. ಅದರ ಕುರಿತು ಪ್ಲೇ ಕಾರ್ಡ್​ ಹಿಡಿದ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ. ಕೆಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದರೆ, ಇನ್ನೂ ಕೆಲವರು ಫುಲ್​ ಗರಂ ಆಗಿದ್ದಾರೆ. ಆತನ್ನಿನ್ನು ಪುಟ್ಟ ಬಾಲಕ. ಪ್ರಪಂಚದ ಜ್ಞಾನ ತಿಳಿದಿಲ್ಲ. ಅಂತಹ ಬಾಲಕನಿಗೆ ಹೀಗೆ ಬರೆದುಕೊಡುವುದು ತಪ್ಪು. ಇದೆಲ್ಲಾ ಪ್ರಚಾರದ ಗೀಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಷಕರಿಗೆ ತರಾಟೆ ತೆಗೆದುಕೊಂಡ ಫ್ಯಾನ್ಸ್​

ಈ ಸಲ ಕಪ್ ನಮ್ದೇ ಎಂಬುದು ಆರ್​​ಸಿಬಿ ಅಭಿಮಾನಿಗಳ ಘೋಷಣೆ. ಆದರೆ, ಆರ್​ಸಿಬಿ ಆರಂಭದಲ್ಲಿ ಅಬ್ಬರಿಸಿ ಈಗ ಮುಗ್ಗರಿಸುತ್ತಿದೆ. ಆಡಿದ 5 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು ಬೀಗಿದೆ. ಅದರಲ್ಲೂ ಚೆನ್ನೈ ಸೂಪರ್​ ಕಿಂಗ್ಸ್​ ಎದುರು ಸೋತಿದ್ದು, ಆರ್​ಸಿಬಿ ಫ್ಯಾನ್ಸ್​ಗೆ ತೀವ್ರ ನಿರಾಸೆಯಾಗಿದೆ. ಆರ್​ಸಿಬಿ-ಸಿಎಸ್​ಕೆ (RCB vs CSK) ನಡುವಿನ ರೋಚಕ ಪಂದ್ಯದಲ್ಲಿ 3-4 ವರ್ಷದ ಪುಟ್ಟ ಪೋರನೊಬ್ಬ ಪ್ಲ ಕಾರ್ಡ್ ಹಿಡಿದು ಕ್ಯಾಮಾರಗೆ ಫೋಸ್ ಕೊಟ್ಟಿದ್ದ. 'ಹಾಯ್, ವಿರಾಟ್ ಅಂಕಲ್ ಕ್ಯಾನ್ ಐ ಟೇಕ್ ವಮಿಕಾ ಆನ್ ಎ ಡೇಟ್' ಅಂತ ಆ ಬೋರ್ಡ್​​​​ನಲ್ಲಿ ಬರೆದಿತ್ತು. ಕೂಡಲೇ ಈ ಫೋಟೋ ಎಲ್ಲೆಡೆ ವೈರಲ್ ಆಯ್ತು.

ಈ ಫೋಟೋ ನೋಡಿದ ಫ್ಯಾನ್ಸ್​ ಪೋಷಕರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಆ ಪುಟ್ಟ ಬಾಲಕನಿಗೆ ಡೇಟ್ ಅಂದರೆ ಏನು ಎಂಬ ಕಲ್ಪನೆಯೂ ಇರುವುದಿಲ್ಲ. ವಮಿಕಾಗೆ ಇನ್ನೂ ಕೇವಲ 2 ವರ್ಷ. ಅಂತ ಮುಗ್ಧ ಮನಸ್ಸಿಗೆ ಪೋಷಕರು ತಮ್ಮ ವಿಕೃತತೆಯ ಮಸಿ ಹಾಕಿದ್ದಾರೆ. ಪ್ರಚಾರದ ಕಾರಣಕ್ಕಾಗಿ ಪುಟಾಣಿಯ ಮನಸ್ಸಿಗೆ ವಿಷ ತುಂಬುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮಕ್ಕಳನ್ನು ಬೆಳೆಸುವ ವಿಧಾನ ಇದಲ್ಲ. ಅತಿಯಾದ ಪ್ರಚಾರದ ಹುಚ್ಚಿನಿಂದ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದಿದ್ದಾರೆ.. ಈ ಪೋಸ್ಟನ್ನು ಡಾ ನಿಮೋ ಯಾದವ್ ಅನ್ನುವವರು ಶೇರ್ ಮಾಡಿದ್ದು, ಪೋಷಕರಿಗೆ ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ.