ಕನ್ನಡ ಸುದ್ದಿ  /  Sports  /  Cricket News Ipl 2023 Chennai Super Kings Vs Gujarat Titans Final To Be Ms Dhonis Last Game Csk Captain Retire Prs

MS Dhoni: ದಾಖಲೆಯ 250ನೇ ಪಂದ್ಯಕ್ಕೆ ಎಂಎಸ್ ಧೋನಿ ಸಜ್ಜು; ಐಪಿಎಲ್​ಗೆ ಇವತ್ತೇ ಗುಡ್​ಬೈ ಹೇಳಲು ನಿರ್ಧರಿಸಿದ್ರಾ ಸಿಎಸ್​ಕೆ ಕ್ಯಾಪ್ಟನ್​?

MS Dhoni: 16ನೇ ಆವೃತ್ತಿಯ ಐಪಿಎಲ್​​ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯವೇ ಎಂಎಸ್​ ಧೋನಿ ಪಾಲಿಗೆ ಕೊನೆ ಐಪಿಎಲ್​ ಪಂದ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಎಂಎಸ್​ ಧೋನಿ
ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಎಂಎಸ್​ ಧೋನಿ

ಮಾರ್ಚ್​ 31ರಂದು ಎಲ್ಲಿ, ಯಾವ ಮೈದಾನದಲ್ಲಿ ಯಾವ ತಂಡಗಳ ನಡುವೆ ಕಾದಾಟದೊಂದಿಗೆ ಪ್ರಸಕ್ತ ಸಾಲಿನ ಐಪಿಎಲ್​ (IPL 2023) ಆರಂಭವಾಗಿತ್ತೋ, ಅದೇ ಮೈದಾನದಲ್ಲಿ ಅದೇ ಎರಡು ತಂಡಗಳ ಮುಖಾಮುಖಿಗೆ ಬಂದು ನಿಂತಿದೆ. ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು (Chennai Super Kings vs Gujarat Titans, Final) ಪ್ರಶಸ್ತಿಗಾಗಿ ಇಂದು ಹೋರಾಟ ನಡೆಸಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium, Ahmedabad) ಈ ಅಂತಿಮ ಹಣಾಹಣಿ ನಡೆಯಲಿದೆ. ಈ ಪಂದ್ಯ ಅನೇಕ ವಿಶೇಷಗಳಿಗೆ ಸಾಕ್ಷಿಯಾಗಲಿದೆ.

ಚೆನ್ನೈ ಸೂಪರ್​​ ಕಿಂಗ್ಸ್​​ ಒಟ್ಟು 10 ಬಾರಿ ಐಪಿಎಲ್​ ಫೈನಲ್​ ಪ್ರವೇಶಿಸಿದೆ. 4 ಬಾರಿ ಟ್ರೋಫಿಯೂ ಗೆದ್ದಿದೆ. ಈಗ 5ನೇ ಕಪ್​ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ ಕಳೆದ ವರ್ಷ ಟ್ರೋಫಿ ಗೆದ್ದ ಗುಜರಾತ್​ ಎರಡನೇ ಚಾಂಪಿಯನ್​ ಪಟ್ಟದ ಮೇಲೆ ಕಣ್ಣು ಹಾಕಿದೆ. ಆದರೆ ಈ ಪಂದ್ಯವೇ ಎಂಎಸ್​ ಧೋನಿ (MS Dhoni) ಪಾಲಿಗೆ ಕೊನೆ ಐಪಿಎಲ್​ ಪಂದ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಟೂರ್ನಿಯ ಆರಂಭದಿಂದಲೂ ಹರಿದಾಡುತ್ತಿದೆ.

ಹೀಗಾಗಿ, ಚೆನ್ನೈ ಮಾತ್ರವಲ್ಲದೆ, ಸಿಎಸ್​​ಕೆ ತಂಡ ಟೂರ್ನಿಯಲ್ಲಿ ಆಡಿದ ಬಹುತೇಕ ಎಲ್ಲಾ ಎದುರಾಳಿ ಮೈದಾನಗಳಲ್ಲಿ ಧೋನಿ ಆಟವನ್ನು ನೋಡಲು ದೊಡ್ಡ ಮಟ್ಟದಲ್ಲಿ ಕ್ರಿಕೆಟ್​ ಫ್ಯಾನ್ಸ್​ ತುಂಬಿ ತುಳುಕಿದ್ದರು. ಆದರೆ ಧೋನಿ ಮಾತ್ರ ನಿವೃತ್ತಿಯ ಗುಟ್ಟು ಬಿಟ್ಟುಕೊಡದೆ, ಈ ಬಗ್ಗೆ ನಿರ್ಧಾರಕ್ಕೆ ಇನ್ನೂ 8 ರಿಂದ 9 ತಿಂಗಳು ಸಮಯ ಇದೆ ಎಂದು ಹೇಳಿದ್ದಾರೆ. ಒಂದು ವೇಳೆ ಧೋನಿ ಮುಂದಿನ ವರ್ಷ ಕಣಕ್ಕಿಳಿಯದಿದ್ದರೆ ಇದೇ ಅವರ ಪಾಲಿಗೆ ಕೊನೆಯ ಐಪಿಎಲ್ ಪಂದ್ಯವಾಗಲಿದೆ.

41 ವರ್ಷದ ಧೋನಿ ಹಾಲಿ ಐಪಿಎಲ್​ನಲ್ಲಿ ಗಾಯದ ನಡುವೆಯೂ ಆಡುತ್ತಿದ್ದಾರೆ. ಮೊಣಕಾಲು ಗಾಯವಾದ ಕಾರಣ, ಕೊನೆಯ ಎರಡು ಓವರ್​​ಗಳಲ್ಲಿ ಧೋನಿ ಬ್ಯಾಟಿಂಗ್​ ಮಾಡಲು ಬರುತ್ತಿದ್ದಾರೆ. ಮತ್ತೊಂದೆಡೆ ಸಿಎಸ್​ಕೆಗೆ ಭವಿಷ್ಯದ ನಾಯಕನನ್ನು ಗುರುತಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಧೋನಿ ಭವಿಷ್ಯದ ಬಗ್ಗೆ ಸದ್ಯಕ್ಕೆ ಗೊಂದಲವೂ ಇದೆ. ಇದರ ನಡುವೆ ಇದೇ ಕೊನೆಯ ಪಂದ್ಯ ಆದರೆ ಪ್ರಶಸ್ತಿ ಗೆಲುವಿನ ವಿದಾಯ ಸಿಗುತ್ತಾ ಎಂಬ ಕೌತುಕವೂ ಸೃಷ್ಟಿಯಾಗಿದೆ.

2022ರಲ್ಲಿ ಚೆನ್ನೈನ ಚೆಪಾಕ್​ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಲಿದ್ದೇನೆ ಎಂದು ಹೇಳಿದ್ದರು. ಆದರೆ ಯಾವಾಗ ಎಂದು ಅಂತಿಮಪಡಿಸಿರಲಿಲ್ಲ. ಈಗ ನಿವೃತ್ತಿ ಕುರಿತು ಯೋಚಿಸಲು ಬೇಕಾದಷ್ಟು ಸಮಯ ಇದೆ. ನಾನು ಯಾವಾಗಲೂ ಸಿಎಸ್​ಕೆ ಪರ ಇರುತ್ತೇನೆ ಎಂದು ಹೇಳಿದ್ದಾರೆ. ಇದು ನಿವೃತ್ತಿ ತೆಗೆದುಕೊಳ್ಳುತ್ತಾರಾ ಇಲ್ಲವೇ ಎಂಬುದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿರೋದಂತೂ ಸುಳ್ಳಲ್ಲ.

ಐಪಿಎಲ್​ನಲ್ಲಿ ಧೋನಿ 250ನೇ ಪಂದ್ಯ

ಮಹೇಂದ್ರ ಸಿಂಗ್​ ಧೋನಿ ಇಂದು ಐಪಿಎಲ್​ನಲ್ಲಿ ಮಹತ್ವದ ಪಂದ್ಯವನ್ನು ಆಡಲಿದ್ದಾರೆ. ಫೈನಲ್​ನಲ್ಲಿ ಐತಿಹಾಸಿಕ ಪಂದ್ಯಕ್ಕೂ ಕಾಲಿಡಲಿದ್ದಾರೆ. ಹೌದು ಇಂದು ಧೋನಿ ಶ್ರೀಮಂತ ಲೀಗ್​​ನಲ್ಲಿ 250ನೇ ಪಂದ್ಯವನ್ನು ಆಡಲಿದ್ದಾರೆ. ಆ ಮೂಲಕ ಮಿಲಿಯನ್​ ಡಾಲರ್ ಟೂರ್ನಿಯಲ್ಲಿ ಈ ದಾಖಲೆ ಬರೆದ ಮೊದಲ ಆಟಗಾರ ಎನಿಸಲಿದ್ದಾರೆ.