IPL 2023 Final: ಉಚಿತ ವೀಕ್ಷಣೆ ಭಾಗ್ಯ ಕೊಟ್ಟು ದಾಖಲೆಯ ವೀಕ್ಷಕರ ಸೆಳೆದ ಜಿಯೋಸಿನಿಮಾ-cricket news ipl 2023 final match viewership breaks world record in jiocinema gujarat titans vs chennai super kings jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2023 Final: ಉಚಿತ ವೀಕ್ಷಣೆ ಭಾಗ್ಯ ಕೊಟ್ಟು ದಾಖಲೆಯ ವೀಕ್ಷಕರ ಸೆಳೆದ ಜಿಯೋಸಿನಿಮಾ

IPL 2023 Final: ಉಚಿತ ವೀಕ್ಷಣೆ ಭಾಗ್ಯ ಕೊಟ್ಟು ದಾಖಲೆಯ ವೀಕ್ಷಕರ ಸೆಳೆದ ಜಿಯೋಸಿನಿಮಾ

  • GT vs CSK IPL Final 2023 : ಐಪಿಎಲ್‌ನ ಪ್ರಸಕ್ತ ಆವೃತ್ತಿಗೆ ತೆರೆಬಿದ್ದಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಈ ಬಾರಿಯ ಫೈನಲ್‌ ಪಂದ್ಯವು ವೀಕ್ಷಕರ ಸಂಖ್ಯೆಯ ದೃಷ್ಟಿಯಿಂದ ದಾಖಲೆ ನಿರ್ಮಿಸಿದೆ.

Gujarat Titans vs Chennai Super Kings: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಯ ಎಸೆತದಲ್ಲಿ ಗುಜರಾತ್ ತಂಡವನ್ನು ಸೋಲಿಸಿ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
icon

(1 / 5)

Gujarat Titans vs Chennai Super Kings: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಯ ಎಸೆತದಲ್ಲಿ ಗುಜರಾತ್ ತಂಡವನ್ನು ಸೋಲಿಸಿ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.(AFP)

ಮೀಸಲು ದಿನದ ಪಂದ್ಯದಲ್ಲೂ ನಡುವೆ ಮಳೆ ಸುರಿಯಿತು. ಆದರೆ ಅಭಿಮಾನಿಗಳ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ. ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಅವರಲ್ಲಿ ಹೆಚ್ಚಿನ ಸಂಖ್ಯೆಯ ಧೋನಿ ಅಭಿಮಾನಿಗಳಿದ್ದರು. ಇದೇ ವೇಳೆ ಪಂದ್ಯವು ನೇರಪ್ರಸಾರದಲ್ಲಿ ದಾಖಲೆ ನಿರ್ಮಿಸಿದೆ.
icon

(2 / 5)

ಮೀಸಲು ದಿನದ ಪಂದ್ಯದಲ್ಲೂ ನಡುವೆ ಮಳೆ ಸುರಿಯಿತು. ಆದರೆ ಅಭಿಮಾನಿಗಳ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ. ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಅವರಲ್ಲಿ ಹೆಚ್ಚಿನ ಸಂಖ್ಯೆಯ ಧೋನಿ ಅಭಿಮಾನಿಗಳಿದ್ದರು. ಇದೇ ವೇಳೆ ಪಂದ್ಯವು ನೇರಪ್ರಸಾರದಲ್ಲಿ ದಾಖಲೆ ನಿರ್ಮಿಸಿದೆ.(AFP)

ಫೈನಲ್‌ ಪಂದ್ಯವನ್ನು ವೀಕ್ಷಿಸಲು ಮೈದಾನದಲ್ಲಿ ಮಾತ್ರ ಜನ ಸೇರಿದ್ದಲ್ಲ. ಡಿಜಿಟಲ್‌ ಹಕ್ಕುಗಳೊಂದಿಗೆ ಪಂದ್ಯದ ನೇರ ಪ್ರಸಾರ ಮಾಡಿದ ಜಿಯೋ ಸಿನಿಮಾದಲ್ಲೂ ದಾಖಲೆಯ ಸಂಖ್ಯೆಯಲ್ಲಿ ಅಭಿಮಾನಿಗಳು ಐಪಿಎಲ್ ಫೈನಲ್ ಪಂದ್ಯವನ್ನು ಎಂಜಾಯ್ ಮಾಡಿದ್ದಾರೆ. ಜಿಯೋ ಸಿನಿಮಾದಲ್ಲಿ 3.2 ಕೋಟಿ ಜನರು ಏಕಕಾಲದಲ್ಲಿ ಪಂದ್ಯವನ್ನು ವೀಕ್ಷಿಸಿ ದಾಖಲೆ ನಿರ್ಮಿಸಿದ್ದಾರೆ. 
icon

(3 / 5)

ಫೈನಲ್‌ ಪಂದ್ಯವನ್ನು ವೀಕ್ಷಿಸಲು ಮೈದಾನದಲ್ಲಿ ಮಾತ್ರ ಜನ ಸೇರಿದ್ದಲ್ಲ. ಡಿಜಿಟಲ್‌ ಹಕ್ಕುಗಳೊಂದಿಗೆ ಪಂದ್ಯದ ನೇರ ಪ್ರಸಾರ ಮಾಡಿದ ಜಿಯೋ ಸಿನಿಮಾದಲ್ಲೂ ದಾಖಲೆಯ ಸಂಖ್ಯೆಯಲ್ಲಿ ಅಭಿಮಾನಿಗಳು ಐಪಿಎಲ್ ಫೈನಲ್ ಪಂದ್ಯವನ್ನು ಎಂಜಾಯ್ ಮಾಡಿದ್ದಾರೆ. ಜಿಯೋ ಸಿನಿಮಾದಲ್ಲಿ 3.2 ಕೋಟಿ ಜನರು ಏಕಕಾಲದಲ್ಲಿ ಪಂದ್ಯವನ್ನು ವೀಕ್ಷಿಸಿ ದಾಖಲೆ ನಿರ್ಮಿಸಿದ್ದಾರೆ. (AFP)

ಗುಜರಾತ್ ನ ಬ್ಯಾಟಿಂಗ್ ಮುಗಿದ ಬಳಿಕ ಆನ್ ಲೈನ್ ವೀಕ್ಷಕರ ಸಂಖ್ಯೆ ಕಡಿಮೆಯಾಯಿತು. ಆದರೆ ಸಿಎಸ್‌ಕೆ ಬ್ಯಾಟಿಂಗ್ ತಡರಾತ್ರಿ ಆರಂಭಗೊಂಡರೂ ಲಕ್ಷಾಂತರ ವೀಕ್ಷಕರು ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸುತ್ತಿದ್ದರು. ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ ಏಕಕಾಲದಲ್ಲಿ 3.2 ಕೋಟಿಗೂ ಹೆಚ್ಚು ಜನರು ಪಂದ್ಯ ವೀಕ್ಷಿಸಿ ದಾಖಲೆ ನಿರ್ಮಾಣವಾಗಿದೆ.
icon

(4 / 5)

ಗುಜರಾತ್ ನ ಬ್ಯಾಟಿಂಗ್ ಮುಗಿದ ಬಳಿಕ ಆನ್ ಲೈನ್ ವೀಕ್ಷಕರ ಸಂಖ್ಯೆ ಕಡಿಮೆಯಾಯಿತು. ಆದರೆ ಸಿಎಸ್‌ಕೆ ಬ್ಯಾಟಿಂಗ್ ತಡರಾತ್ರಿ ಆರಂಭಗೊಂಡರೂ ಲಕ್ಷಾಂತರ ವೀಕ್ಷಕರು ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸುತ್ತಿದ್ದರು. ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ ಏಕಕಾಲದಲ್ಲಿ 3.2 ಕೋಟಿಗೂ ಹೆಚ್ಚು ಜನರು ಪಂದ್ಯ ವೀಕ್ಷಿಸಿ ದಾಖಲೆ ನಿರ್ಮಾಣವಾಗಿದೆ.(AFP)

ಈ ಹಿಂದಿನ ಆವೃತ್ತಿಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಡಿಜಿಟಲ್ ಸ್ಟ್ರೀಮಿಂಗ್‌ ಹಕ್ಕು ಹೊಂದಿತ್ತು. 2019ರಲ್ಲಿ 2.5 ಕೋಟಿ ವೀಕ್ಷಕರನ್ನು ಹಾಟ್‌ಸ್ಟಾರ್ ದಾಖಲಿಸಿತ್ತು.ಇತ್ತೀಚೆಗೆ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 2.57 ಕೋಟಿ ಜನರು ಏಕಕಾಲಕ್ಕೆ ಪಂದ್ಯ ವೀಕ್ಷಿಸಿದ್ದರು. ಉಚಿತವಾಗಿ ಕ್ರಿಕೆಟ್ ವೀಕ್ಷಿಸುವ ಅವಕಾಶ ನೀಡಿದ ಜಿಯೋ ಸಿನಿಮಾ, ಐಪಿಎಲ್ ಫೈನಲ್ ಪಂದ್ಯದ ಮೂಲಕ 3.2 ಕೋಟಿಗೂ ಹೆಚ್ಚು ವೀಕ್ಷಕರನ್ನು ಪಡೆದಿದೆ. ಏಕಕಾಲದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಡಿಜಿಟಲ್ ವೇದಿಕೆಯು ವಿಶ್ವ ದಾಖಲೆ ನಿರ್ಮಿಸಿದೆ.
icon

(5 / 5)

ಈ ಹಿಂದಿನ ಆವೃತ್ತಿಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಡಿಜಿಟಲ್ ಸ್ಟ್ರೀಮಿಂಗ್‌ ಹಕ್ಕು ಹೊಂದಿತ್ತು. 2019ರಲ್ಲಿ 2.5 ಕೋಟಿ ವೀಕ್ಷಕರನ್ನು ಹಾಟ್‌ಸ್ಟಾರ್ ದಾಖಲಿಸಿತ್ತು.ಇತ್ತೀಚೆಗೆ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 2.57 ಕೋಟಿ ಜನರು ಏಕಕಾಲಕ್ಕೆ ಪಂದ್ಯ ವೀಕ್ಷಿಸಿದ್ದರು. ಉಚಿತವಾಗಿ ಕ್ರಿಕೆಟ್ ವೀಕ್ಷಿಸುವ ಅವಕಾಶ ನೀಡಿದ ಜಿಯೋ ಸಿನಿಮಾ, ಐಪಿಎಲ್ ಫೈನಲ್ ಪಂದ್ಯದ ಮೂಲಕ 3.2 ಕೋಟಿಗೂ ಹೆಚ್ಚು ವೀಕ್ಷಕರನ್ನು ಪಡೆದಿದೆ. ಏಕಕಾಲದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಡಿಜಿಟಲ್ ವೇದಿಕೆಯು ವಿಶ್ವ ದಾಖಲೆ ನಿರ್ಮಿಸಿದೆ.(PTI)


ಇತರ ಗ್ಯಾಲರಿಗಳು