ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2023 Final: ಜಡೇಜಾರನ್ನು ಎತ್ತಿ ಅಪ್ಪಿಕೊಂಡು ಭಾವುಕರಾದ ಮಾಹಿ; ಐಪಿಎಲ್‌ನ ಅತ್ಯುತ್ತಮ ಕ್ಷಣ ಎಂದ ಅಭಿಮಾನಿಗಳು

IPL 2023 final: ಜಡೇಜಾರನ್ನು ಎತ್ತಿ ಅಪ್ಪಿಕೊಂಡು ಭಾವುಕರಾದ ಮಾಹಿ; ಐಪಿಎಲ್‌ನ ಅತ್ಯುತ್ತಮ ಕ್ಷಣ ಎಂದ ಅಭಿಮಾನಿಗಳು

  • MS Dhoni lifts Ravindra Jadeja: ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಸಿಎಸ್‌ಕೆ ಆಲ್‌ರೌಂಡರ್‌ ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿದರು. ಆ ಮೂಲಕ ಚೆನ್ನೈ ತಂಡ ಐದನೇ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಲು ಕಾರಣರಾದರು.

ರವೀಂದ್ರ ಜಡೇಜಾ ಹೀರೋ ಆಗಿದ್ದಾರೆ. ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಚಾಂಪಿಯನ್‌ ಪಟ್ಟ ತಂದುಕೊಟ್ಟರು. ಕೊನೆಯ ಎರಡು ಎಸೆತಗಳಲ್ಲಿ ಗೆಲುವಿಗೆ 10 ರನ್ ಅಗತ್ಯವಿದ್ದಾಗ ಜಡೇಜಾ ಮ್ಯಾಜಿಕ್‌ ಮಾಡಿದರು. 
icon

(1 / 8)

ರವೀಂದ್ರ ಜಡೇಜಾ ಹೀರೋ ಆಗಿದ್ದಾರೆ. ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಚಾಂಪಿಯನ್‌ ಪಟ್ಟ ತಂದುಕೊಟ್ಟರು. ಕೊನೆಯ ಎರಡು ಎಸೆತಗಳಲ್ಲಿ ಗೆಲುವಿಗೆ 10 ರನ್ ಅಗತ್ಯವಿದ್ದಾಗ ಜಡೇಜಾ ಮ್ಯಾಜಿಕ್‌ ಮಾಡಿದರು. (AFP)

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ಟೈಟಾನ್ಸ್ ಪರ ವೃದ್ಧಿಮಾನ್ ಸಹಾ ಅರ್ಧಶತಕ ಸಿಡಿಸಿ ಮಿಂಚಿದರು.
icon

(2 / 8)

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ಟೈಟಾನ್ಸ್ ಪರ ವೃದ್ಧಿಮಾನ್ ಸಹಾ ಅರ್ಧಶತಕ ಸಿಡಿಸಿ ಮಿಂಚಿದರು.(PTI)

ಗುಜರಾತ್ ಟೈಟಾನ್ಸ್ ಬ್ಯಾಟರ್ ಸಾಯಿ ಸುದರ್ಶನ್ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದರು. ಆದರೆ, 90ರನ್‌ಗಳ ಗಡಿ ದಾಟಿ ಔಟಾದರು. ಮೂಲತಃ ಚೆನ್ನೈನವರಾದ ಸಾಯಿ, ಚೆನ್ನೈ ತಂಡಕ್ಕೆ ಕಂಟಕರಾದರು.
icon

(3 / 8)

ಗುಜರಾತ್ ಟೈಟಾನ್ಸ್ ಬ್ಯಾಟರ್ ಸಾಯಿ ಸುದರ್ಶನ್ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದರು. ಆದರೆ, 90ರನ್‌ಗಳ ಗಡಿ ದಾಟಿ ಔಟಾದರು. ಮೂಲತಃ ಚೆನ್ನೈನವರಾದ ಸಾಯಿ, ಚೆನ್ನೈ ತಂಡಕ್ಕೆ ಕಂಟಕರಾದರು.(PTI)

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ಮೀಸಲು ದಿನದಂದು ನಡೆದ ಐಪಿಎಲ್ ಫೈನಲ್‌ ಪಂದ್ಯಕ್ಕೂ ಮಳೆ ಅಡ್ಡಿಯಾಯ್ತು. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ, ಮೈದಾನದ ಸಿಬ್ಬಂದಿ ಪಿಚ್‌ಗೆ ಕವರ್‌ ಹಾಕಿದ್ದರು.
icon

(4 / 8)

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ಮೀಸಲು ದಿನದಂದು ನಡೆದ ಐಪಿಎಲ್ ಫೈನಲ್‌ ಪಂದ್ಯಕ್ಕೂ ಮಳೆ ಅಡ್ಡಿಯಾಯ್ತು. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ, ಮೈದಾನದ ಸಿಬ್ಬಂದಿ ಪಿಚ್‌ಗೆ ಕವರ್‌ ಹಾಕಿದ್ದರು.(ANI)

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆರಂಭಿಕ ಆಟಗಾರ ಡಿವೊನ್ ಕಾನ್ವೇ 47 ರನ್‌ ಗಳಿಸಿದರು. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
icon

(5 / 8)

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆರಂಭಿಕ ಆಟಗಾರ ಡಿವೊನ್ ಕಾನ್ವೇ 47 ರನ್‌ ಗಳಿಸಿದರು. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.(AFP)

ಅಜಿಂಕ್ಯಾ ರಹಾನೆ ಆಟದ ವೈಖರಿ
icon

(6 / 8)

ಅಜಿಂಕ್ಯಾ ರಹಾನೆ ಆಟದ ವೈಖರಿ(AFP)

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರ ಅಂಬಾಟಿ ರಾಯುಡು, 19 ರನ್‌ ಗಳಿಸಿದರು. ಈ ಪಂದ್ಯವು ಐಪಿಎಲ್‌ನಲ್ಲಿ ಅವರ ಕೊನೆಯ ಪಂದ್ಯವಾಗಿದೆ.
icon

(7 / 8)

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರ ಅಂಬಾಟಿ ರಾಯುಡು, 19 ರನ್‌ ಗಳಿಸಿದರು. ಈ ಪಂದ್ಯವು ಐಪಿಎಲ್‌ನಲ್ಲಿ ಅವರ ಕೊನೆಯ ಪಂದ್ಯವಾಗಿದೆ.(AFP)

ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್, ಚಾಂಪಿಯನ್‌ ಪಟ್ಟ ಅಲಂಕರಿಸಿತು. ಕೊನೆಯ ಎರಡು ಎಸೆತಗಳಲ್ಲಿ ಹತ್ತು ರನ್‌ ಸಿಡಿಸಿದ ರವೀಂದ್ರ ಜಡೇಜಾ ಪಂದ್ಯದ ಹೀರೋ ಆದರು. ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, ರವೀಂದ್ರ ಜಡೇಜಾ ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು. ಈ ಫೋಟೋ ಪಂದ್ಯದ ಅದ್ಭುತ ಕ್ಷಣ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.
icon

(8 / 8)

ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್, ಚಾಂಪಿಯನ್‌ ಪಟ್ಟ ಅಲಂಕರಿಸಿತು. ಕೊನೆಯ ಎರಡು ಎಸೆತಗಳಲ್ಲಿ ಹತ್ತು ರನ್‌ ಸಿಡಿಸಿದ ರವೀಂದ್ರ ಜಡೇಜಾ ಪಂದ್ಯದ ಹೀರೋ ಆದರು. ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, ರವೀಂದ್ರ ಜಡೇಜಾ ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು. ಈ ಫೋಟೋ ಪಂದ್ಯದ ಅದ್ಭುತ ಕ್ಷಣ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.(AP)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು