IPL 2023: ಐಪಿಎಲ್‌ನ ಈವರೆಗಿನ ಎಲ್ಲಾ 15 ಆವೃತ್ತಿಗಳ ವಿನ್ನರ್ಸ್ ಹಾಗೂ ರನ್ನರ್ಸ್ ಪಟ್ಟಿ ಇಲ್ಲಿದೆ
IPL Winners and Runners list: ಇಂದು ಐಪಿಎಲ್‌ನ 16ನೇ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದ್ದು, ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಒಂದು ತಂಡ ಚಾಂಪಿಯನ್ ಆಗಲಿದೆ. ಇದುವರೆಗೆ 2008ರಿಂದ 2022ರವರೆಗಿನ ನಡೆದ ಐಪಿಎಲ್ ಸೀಸನ್‌ನಲ್ಲಿ ಕಪ್ ಗೆದ್ದವರ ಪಟ್ಟಿಯನ್ನು ನೋಡೋಣ.
ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್ ಟೂರ್ನಮೆಂಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ಜಾಗತಿಕ ಮಟ್ಟದಲ್ಲಿ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಪ್ರತಿವರ್ಷ ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ಈ ಕ್ರೀಡಾಜಾತ್ರೆಯಲ್ಲಿ ವಿಶ್ವದ ಬಲಿಷ್ಠ ಕ್ರಿಕೆಟರ್‌ಗಳು ಭಾಗಿಯಾಗುತ್ತಾರೆ.
ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 15 ಆವೃತ್ತಿಗಳು ನಡೆದಿವೆ. ಪ್ರಸಕ್ತ ವರ್ಷ 16ನೇ ಆವೃತ್ತಿ ನಡೆಯುತ್ತಿದ್ದು, ವಿಜೇತ ತಂಡ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಈ ಹಿಂದೆ ನಡೆದ ಆವೃತ್ತಿಗಳ ಲೆಕ್ಕಾಚಾರದ ಪ್ರಕಾರ, ಮುಂಬೈ ಇಂಡಿಯನ್ಸ್ ತಂಡವು ದುಬಾರಿ ಲೀಗ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸು ಗಳಿಸಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ತಂಡವು ಐದು ಬಾರಿ ಕಪ್ ಗೆದ್ದಿದ್ದರೆ, ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದೆ. ಅಲ್ಲದೆ ದಾಖಲೆಯ ಹತ್ತು ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 2012 ಮತ್ತು 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಎರಡು ಬಾರಿ ಟ್ರೋಫಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯ ಮೂರನೇ ಅತ್ಯಂತ ಯಶಸ್ವಿ ಫ್ರಾಂಚೈಸಿಯಾಗಿದೆ.
2008ರ ಐಪಿಎಲ್‌ನ ಉದ್ಘಾಟನಾ ಆವೃತ್ತಿ ನಡೆಯಿತು. ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಬೀಗಿತು. ಕಳೆದ ಬಾರಿಯ, ಅಂದರೆ 2022ರಲ್ಲಿ ಎರಡು ಹೊಸ ತಂಡಗಳು ಮಿಲಿಯನ್ ಡಾಲರ್ ಟೂರ್ನಿಗೆ ಲಗ್ಗೆ ಹಾಕಿದವು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಎಂಟ್ರಿ ಕೊಟ್ಟ ಗುಜರಾತ್ ಟೈಟಾನ್ಸ್ ತಂಡವು, ತನ್ನ ಚೊಚ್ಚಲ ಋತುವಿನಲ್ಲೇ ಟ್ರೋಫಿ ಗೆದ್ದು ಸಂಭ್ರಮಿಸಿತು. ಸದ್ಯ ಮತ್ತೊಂದು ಬಾರಿ ತಂಡವು ಫೈನಲ್ ಪ್ರವೇಶಿಸಿದ್ದು, ಸತತ ಎರಡನೇ ಕಪ್ ಗೆಲ್ಲುವ ಉತ್ಸಾಹದಲ್ಲಿದೆ.
ಇಂದು ಐಪಿಎಲ್‌ನ ಪ್ರಸಕ್ತ ಸೀಸನ್‌ನ ಫೈನಲ್ ಪಂದ್ಯ ನಡೆಯಲಿದ್ದು, ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಒಂದು ತಂಡ ಚಾಂಪಿಯನ್ ಆಗಲಿದೆ. ಹಾಗಿದ್ದರೆ, 2008 ರಿಂದ 2023ರವರೆಗಿನ ಐಪಿಎಲ್ ಆವೃತ್ತಿಯ ವಿನ್ನರ್ ಹಾಗೂ ರನ್‌ರ್ ಅಪ್ ತಂಡಗಳು ಯಾವುವು ಎಂಬುದನ್ನು ನೋಡೋಣ…
ಆವೃತಿ | ವಿನ್ನರ್ | ರನ್ನರ್ ಅಪ್ |
2008 | ರಾಜಸ್ಥಾನ್ ರಾಯಲ್ಸ್ | ಚೆನ್ನೈ ಸೂಪರ್ ಕಿಂಗ್ಸ್ |
2009 | ಡೆಕ್ಕನ್ ಚಾರ್ಜಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು |
2010 | ಚೆನ್ನೈ ಸೂಪರ್ ಕಿಂಗ್ಸ್ | ಮುಂಬೈ ಇಂಡಿಯನ್ಸ್ |
2011 | ಚೆನ್ನೈ ಸೂಪರ್ ಕಿಂಗ್ಸ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು |
2012 | ಕೋಲ್ಕತ್ತಾ ನೈಟ್ ರೈಡರ್ಸ್ | ಚೆನ್ನೈ ಸೂಪರ್ ಕಿಂಗ್ಸ್ |
2013 | ಮುಂಬೈ ಇಂಡಿಯನ್ಸ್ | ಚೆನ್ನೈ ಸೂಪರ್ ಕಿಂಗ್ಸ್ |
2014 | ಕೋಲ್ಕತ್ತಾ ನೈಟ್ ರೈಡರ್ಸ್ | ಕಿಂಗ್ಸ್ ಇಲೆವೆನ್ ಪಂಜಾಬ್ |
2015 | ಮುಂಬೈ ಇಂಡಿಯನ್ಸ್ | ಚೆನ್ನೈ ಸೂಪರ್ ಕಿಂಗ್ಸ್ |
2016 | ಸನ್‌ರೈಸರ್ಸ್ ಹೈದರಾಬಾದ್ | ರಾಯಲ್ ಚಾಲೆಂಜರ್ಸ್ ಬೆಂಗಳುರು |
2017 | ಮುಂಬೈ ಇಂಡಿಯನ್ಸ್ | ರೈಸಿಂಗ್ ಪುಣೆ ಸೂಪರ್ಜೈಂಟ್ಸ್ |
2018 | ಚೆನ್ನೈ ಸೂಪರ್ ಕಿಂಗ್ಸ್ | ಸನ್‌ರೈಸರ್ಸ್ ಹೈದರಾಬಾದ್ |
2019 | ಮುಂಬೈ ಇಂಡಿಯನ್ಸ್ | ಚೆನ್ನೈ ಸೂಪರ್ ಕಿಂಗ್ಸ್ |
2020 | ಮುಂಬೈ ಇಂಡಿಯನ್ಸ್ | ಡೆಲ್ಲಿ ಕ್ಯಾಪಿಟಲ್ಸ್ |
2021 | ಚೆನ್ನೈ ಸೂಪರ್ ಕಿಂಗ್ಸ್ | ಕೋಲ್ಕತ್ತಾ ನೈಟ್ ರೈಡರ್ಸ್ |
2022 | ಗುಜರಾತ್ ಟೈಟಾನ್ಸ್ | ರಾಜಸ್ಥಾನ್ ರಾಯಲ್ಸ್ |
ವಿಭಾಗ