ಕನ್ನಡ ಸುದ್ದಿ  /  Photo Gallery  /  Cricket News Ipl 2023 Gujarat Titans Enters Two Successive Ipl Finals Mumbai Indians Chennai Super Kings Hardik Jra

IPL Finals: ಐಪಿಎಲ್‌ಗೆ ಎಂಟ್ರಿ ಕೊಟ್ಟ ಸತತ ಎರಡನೇ ವರ್ಷವೂ ಫೈನಲ್ ಪ್ರವೇಶ; ಗುಜರಾತ್ ಟೈಟಾನ್ಸ್ ದಾಖಲೆ

  • IPL 2023 Finals: ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸುವ ಮೂಲಕ ಗುಜರಾತ್‌ ಟೈಟಾನ್ಸ್‌ ತಂಡವು ಸತತ ಎರಡನೇ ಆವೃತ್ತಿಯಲ್ಲೂ ಐಪಿಎಲ್‌ ಫೈನಲ್‌ ಪ್ರವೇಶಿಸಿದೆ. ಟೂರ್ನಿಗೆ ಲಗ್ಗೆ ಇಟ್ಟ ಬೆನ್ನಲ್ಲೇ ಭರ್ಜರಿ ಯಶಸ್ಸು ಸಾಧಿಸಿದೆ. ಆ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಮುಂಬೈ ಇಂಡಿಯನ್ಸ್ ಅನ್ನು 62 ರನ್‌ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್, ಭಾನುವಾರದ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಕ್ವಾಲಿಫೈಯರ್‌ ಪಂದ್ಯದಲ್ಲಿ ಶುಬ್ಮನ್ ಗಿಲ್ ಅವರು 60 ಎಸೆತಗಳಲ್ಲಿ 129 ರನ್ ಗಳಿಸುವ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಮೂರನೇ ಶತಕ ಸಿಡಿಸಿದ ಸಾಧನೆ ಮಾಡಿದರು. 
icon

(1 / 6)

ಮುಂಬೈ ಇಂಡಿಯನ್ಸ್ ಅನ್ನು 62 ರನ್‌ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್, ಭಾನುವಾರದ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಕ್ವಾಲಿಫೈಯರ್‌ ಪಂದ್ಯದಲ್ಲಿ ಶುಬ್ಮನ್ ಗಿಲ್ ಅವರು 60 ಎಸೆತಗಳಲ್ಲಿ 129 ರನ್ ಗಳಿಸುವ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಮೂರನೇ ಶತಕ ಸಿಡಿಸಿದ ಸಾಧನೆ ಮಾಡಿದರು. (AFP)

ಕಳೆದ ಆವೃತ್ತಿಯ ಮೂಲಕ ಐಪಿಎಲ್‌ಗೆ ಎಂಟ್ರಿ ಕೊಟ್ಟ ಗುಜರಾತ್‌ ಟೈಟಾನ್ಸ್‌, ಚೊಚ್ಚಲ ಪ್ರಯತ್ನದಲ್ಲೇ ಫೈನಲ್‌ ಪ್ರವೇಶಿಸಿ ಕಪ್‌ ಗೆದ್ದಿತು. ಅದಾದ ಬಳಿಕ ಇದೀಗ ಎರಡನೇ ಆವೃತ್ತಿಯಲ್ಲಿಯೂ ಫೈನಲ್‌ ಪ್ರವೇಶಿಸಿದೆ. ಇದು ಐಪಿಎಲ್‌ ಇತಿಹಾಸದಲ್ಲೇ ಮೊದಲ ದಾಖಲೆ. 
icon

(2 / 6)

ಕಳೆದ ಆವೃತ್ತಿಯ ಮೂಲಕ ಐಪಿಎಲ್‌ಗೆ ಎಂಟ್ರಿ ಕೊಟ್ಟ ಗುಜರಾತ್‌ ಟೈಟಾನ್ಸ್‌, ಚೊಚ್ಚಲ ಪ್ರಯತ್ನದಲ್ಲೇ ಫೈನಲ್‌ ಪ್ರವೇಶಿಸಿ ಕಪ್‌ ಗೆದ್ದಿತು. ಅದಾದ ಬಳಿಕ ಇದೀಗ ಎರಡನೇ ಆವೃತ್ತಿಯಲ್ಲಿಯೂ ಫೈನಲ್‌ ಪ್ರವೇಶಿಸಿದೆ. ಇದು ಐಪಿಎಲ್‌ ಇತಿಹಾಸದಲ್ಲೇ ಮೊದಲ ದಾಖಲೆ. (AFP)

ಆ ಮೂಲಕ ಗುಜರಾತ್‌ ಟೈಟಾನ್ಸ್‌ ತಂಡವು ದಾಖಲೆಯೊಂದನ್ನು ಬರೆದಿದೆ. ಈ ಹಿಂದೆ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಮಾತ್ರ ಸತತ ಎರಡು ಆವೃತ್ತಿಗಳಲ್ಲಿ ಐಪಿಎಲ್‌ ಫೈನಲ್‌ ಫೈನಲ್‌ ಪ್ರವೇಶಿಸಿವೆ.  ಇದೀಗ ಗುಜರಾತ್‌ ಕೂಡಾ ಆ ಪಟ್ಟಿ ಸೇರಿಕೊಂಡಿದೆ.
icon

(3 / 6)

ಆ ಮೂಲಕ ಗುಜರಾತ್‌ ಟೈಟಾನ್ಸ್‌ ತಂಡವು ದಾಖಲೆಯೊಂದನ್ನು ಬರೆದಿದೆ. ಈ ಹಿಂದೆ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಮಾತ್ರ ಸತತ ಎರಡು ಆವೃತ್ತಿಗಳಲ್ಲಿ ಐಪಿಎಲ್‌ ಫೈನಲ್‌ ಫೈನಲ್‌ ಪ್ರವೇಶಿಸಿವೆ.  ಇದೀಗ ಗುಜರಾತ್‌ ಕೂಡಾ ಆ ಪಟ್ಟಿ ಸೇರಿಕೊಂಡಿದೆ.(PTI)

2017ರ ಕ್ವಾಲಿಫೈಯರ್‌ ಪಂದ್ಯದ ಬಳಿಕ, ಪ್ಲೇ ಆಫ್‌ ಹಂತದಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಇದು ಮೊದಲನೇ ಸೋಲಾಗಿದೆ. ಈ ಹಿಂದೆ ಪ್ಲೇ ಆಫ್‌ ಹಂತಕ್ಕೆ ಎಂಟ್ರಿ ಕೊಟ್ಟ ಬಳಿಕ ರೋಹಿತ್‌ ಶರ್ಮಾ ಪಡೆಯು ಬಲಿಷ್ಠ ಪ್ರದರ್ಶನ ನೀಡಿದೆ.
icon

(4 / 6)

2017ರ ಕ್ವಾಲಿಫೈಯರ್‌ ಪಂದ್ಯದ ಬಳಿಕ, ಪ್ಲೇ ಆಫ್‌ ಹಂತದಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಇದು ಮೊದಲನೇ ಸೋಲಾಗಿದೆ. ಈ ಹಿಂದೆ ಪ್ಲೇ ಆಫ್‌ ಹಂತಕ್ಕೆ ಎಂಟ್ರಿ ಕೊಟ್ಟ ಬಳಿಕ ರೋಹಿತ್‌ ಶರ್ಮಾ ಪಡೆಯು ಬಲಿಷ್ಠ ಪ್ರದರ್ಶನ ನೀಡಿದೆ.(AP)

ಭಾನುವಾರ (ಮೇ 28) ನಡೆಯಲಿರುವ ಐಪಿಎಲ್‌ 16ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ ತಂಡವು, ಎಂಎಸ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. 
icon

(5 / 6)

ಭಾನುವಾರ (ಮೇ 28) ನಡೆಯಲಿರುವ ಐಪಿಎಲ್‌ 16ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ ತಂಡವು, ಎಂಎಸ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. (PTI)

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ನಡುವೆ ಐಪಿಎಲ್‌ ಫೈನಲ್‌ ಪಂದ್ಯ
icon

(6 / 6)

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ನಡುವೆ ಐಪಿಎಲ್‌ ಫೈನಲ್‌ ಪಂದ್ಯ

ಇತರ ಗ್ಯಾಲರಿಗಳು