ಕನ್ನಡ ಸುದ್ದಿ  /  Sports  /  Cricket News Ipl 2023 Kl Rahul Opens Up About Ms Dhoni Virat Kohli Ms Dhoni Rohit Sharma In The Ranveer Show Prs

KL Rahul: ಕೊಹ್ಲಿ 6 ವರ್ಷ ನಾಯಕನಾದ್ರೂ ಆ ವಿಷಯದಲ್ಲಿ ರೋಹಿತ್ ಜಾಣ; ಆದರೆ ಧೋನಿ ಸ್ಟೈಲೇ ಬೇರೆ; ಮೂವರ ನಾಯಕತ್ವ ವಿವರಿಸಿದ ಕೆಎಲ್ ರಾಹುಲ್

'ರಣ್ವೀರ್ ಶೋ'ನಲ್ಲಿ ಭಾಗವಹಿಸಿದ ಕೆಎಲ್ ರಾಹುಲ್, ಎಂಎಸ್​ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಾಯಕತ್ವದ ಕುರಿತು ಮಾಡನಾಡಿದ್ದಾರೆ. ನಾಯಕತ್ವದಲ್ಲಿ ಒಬ್ಬರಿಗೊಬ್ಬರು ಹೇಗೆ ಭಿನ್ನ ಎಂಬುದನ್ನು ರಾಹುಲ್ ವಿವರಿಸಿದ್ದಾರೆ.

ಧೋನಿ, ರೋಹಿತ್​, ಕೊಹ್ಲಿ ನಾಯಕತ್ವದ ಕುರಿತು ಕೆಎಲ್​ ರಾಹುಲ್ ಮಾತು.
ಧೋನಿ, ರೋಹಿತ್​, ಕೊಹ್ಲಿ ನಾಯಕತ್ವದ ಕುರಿತು ಕೆಎಲ್​ ರಾಹುಲ್ ಮಾತು.

ಮೇ 1ರಂದು ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಸಮಯದಲ್ಲಿ ಗಾಯಗೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್​ ಕ್ಯಾಪ್ಟನ್​ ಕೆಎಲ್ ರಾಹುಲ್ (LSG Captain KL Rahul), 16ನೇ ಆವೃತ್ತಿಯ ಐಪಿಎಲ್​ನಿಂದ (IPL 2023) ಹೊರಬಿದ್ದಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಿಂದಲೂ (WTC Final 2023) ಹೊರಗುಳಿದಿದ್ದಾರೆ.

ಕಾಲಿನ ಗಾಯದ ನಂತರ ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಗಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಗೆ ಆಗಮಿಸಿ ಪುನಃಶ್ಚೇತನ ತರಬೇತಿಗೆ ಒಳಗಾಗಲಿದ್ದಾರೆ. ಇದರ ನಡುವೆ 'ರಣ್ವೀರ್ ಶೋ'ನಲ್ಲಿ ಭಾಗವಹಿಸಿದ ಕೆಎಲ್ ರಾಹುಲ್, ಎಂಎಸ್​ ಧೋನಿ (MS Dhoni), ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ನಾಯಕತ್ವದ ಕುರಿತು ಮಾಡನಾಡಿದ್ದಾರೆ.

ನಾಯಕತ್ವದಲ್ಲಿ ಒಬ್ಬರಿಗೊಬ್ಬರು ಹೇಗೆ ಭಿನ್ನ ಎಂಬುದನ್ನು ರಾಹುಲ್ ವಿವರಿಸಿದ್ದಾರೆ. ನಾನು ಶ್ರೇಷ್ಠ ನಾಯಕರ ನಾಯಕತ್ವದಲ್ಲಿ ಆಡಿದ್ದೇನೆ. ಎಂಎಸ್ ಧೋನಿ ಅವರು ನನ್ನ ಮೊದಲ ನಾಯಕ. ನಾಯಕ ಬೇರೆ ಯಾರೇ ಆಗಿರಲಿ, ತಂಡವನ್ನು ಮುನ್ನಡೆಸುತ್ತಿದ್ದದ್ದು ಧೋನಿ ಅವರೇ. ಶಾಂತಮೂರ್ತಿಯಂತೆ ತಂಡವನ್ನು ಮುನ್ನಡೆಸುತ್ತಿದ್ದರು ಎನ್ನುತ್ತಾರೆ ಕೆಎಲ್​ ರಾಹುಲ್​.

ಧೋನಿ ಕ್ರೀಸ್‌ನ ಹೊರಗಿನ ಪ್ರತಿಯೊಬ್ಬ ಆಟಗಾರರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದರು. ಅಂತಹ ಬಾಂಧವ್ಯ ಏರ್ಪಟ್ಟರೆ, ಈ ಹುಡುಗರು ಅಂತಹ ವ್ಯಕ್ತಿಗಾಗಿ ಯಾವುದೇ ಯುದ್ಧವನ್ನಾದರೂ ಮಾಡುತ್ತಾರೆ. ಮತ್ತು ಎಷ್ಟೇ ಕಷ್ಟವಾದರೂ ಅವರ ಪರ ನಿಲ್ಲುತ್ತಾರೆ. ಇದು ನಾನು ಧೋನಿಯಿಂದ ಕಲಿತ ಪಾಠಗಳು ಎಂದು ರಾಹುಲ್​ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಸುಮಾರು ಆರು ವರ್ಷಗಳ ಕಾಲ ಟೀಮ್​ ಇಂಡಿಯಾ ನಾಯಕತ್ವ ವಹಿಸಿದ್ದರು. ಅವರ ಅಂಕಿ-ಅಂಶಗಳು ಅಸಾಧಾರಣ. ಸಮರ್ಪಣೆ, ಆಕ್ರಮಣಶೀಲತೆ... ಅವರ ಇನ್ನೊಂದು ಹಂತ. ಕೊಹ್ಲಿ ಯಾವಾಗಲೂ ಒಬ್ಬ ಅದ್ಭುತ ನಾಯಕನಾಗಿ ತಂಡವನ್ನು ಮುನ್ನಡೆಸಲು ಬಯಸುತ್ತಾರೆ. ಕೊಹ್ಲಿ ಆಟವು ಶ್ರೇಷ್ಠ ಆಟಗಾರನಾಗುವುದು ಹೇಗೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ನಾವು ಕೊಹ್ಲಿಯಿಂದ ಸಾಕಷ್ಟು ಸ್ಫೂರ್ತಿ ಪಡೆದಿದ್ದೇವೆ. ಉತ್ತಮವಾಗಿ ಆಡಲು ಪ್ರಯತ್ನಿಸಿದ್ದೇವೆ. ಫಿಟ್​ನೆಸ್ ಮತ್ತು ಡಯಟ್ ವಿಚಾರದಲ್ಲಿ ಕೊಹ್ಲಿ ತುಂಬಾ ಶಿಸ್ತಿನ ಮನುಷ್ಯ. ತಂಡದಲ್ಲಿರುವ ಎಲ್ಲರೂ ತನ್ನಂತೆಯೇ ಇರುವಂತೆ ನೋಡಿಕೊಳ್ಳುತ್ತಾರೆ ಎಂದು ಕೊಹ್ಲಿ ನಾಯಕತ್ವದ ಕುರಿತು ಆಸಕ್ತಿರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ರೋಹಿತ್ ಶರ್ಮಾ ಎದುರಾಳಿ ಆಟಗಾರನ ಮೇಲೆ ಹೇಗೆ ದಾಳಿ ನಡೆಸಬೇಕು, ಅವರನ್ನು ಹೇಗೆ ಔಟ್ ಮಾಡಬೇಕು, ಬೌಲಿಂಗ್​ ತಂತ್ರದಲ್ಲಿ ಏನು ತಪ್ಪಾಗಿದೆ ಎಂಬುದನ್ನು ಸಹ ನಮಗೆ ತಿಳಿಸುತ್ತಾರೆ. ಆಟವನ್ನು ಅರ್ಥಮಾಡಿಕೊಳ್ಳುವಲ್ಲಿ ರೋಹಿತ್ ಶರ್ಮಾ ತುಂಬಾ ವಿಭಿನ್ನ. ಈ ಮೂವರು ನಾಯಕರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ ಎಂದು ಟೀಮ್​ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ಕ್ರೀಡಾ​ ಸುದ್ದಿಗಳನ್ನು ಪ್ರಕಟಿಸಿದ ಪುಟದಲ್ಲಿ ಪಂಜಾಬಿ ಕೇಸರಿ ಎಂಬ ನಿಯತಕಾಲಿಕೆ ಗೌತಮ್​ ಗಂಭೀರ್ ಅವರನ್ನು ಭಸ್ಮಾಸುರ ಎಂದು ಕರೆಯುವ ಲೇಖನ ಪ್ರಕಟಿಸಿದೆ. 'ಸಂಸದ ಗೌತಮ್ ಗಂಭೀರ್ ನಾಪತ್ತೆಯಾಗಿದ್ದಾರೆ' ಎಂಬ ಪೋಸ್ಟರ್‌ಗಳು ದೆಹಲಿಯ ಬೀದಿಗಳಲ್ಲಿ ಕಾಣಿಸಿಕೊಂಡಿವೆ ಎಂದು ಪಂಜಾಬಿ ಕೇಸರಿ ಲೇಖನ ಪ್ರಕಟಿಸಿದೆ. ಇದೀಗ ಈ ಮ್ಯಾಗಜೀನ್​ ವಿರುದ್ಧ ಗಂಭೀರ್ 2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.