ಕನ್ನಡ ಸುದ್ದಿ  /  Sports  /  Cricket News Ipl 2023 Kolkata Knight Riders Vs Punjab Kings Match Preview And Playing Eleven Update Kkr Vs Pbks Jra

KKR vs PBKS: ಪಂಜಾಬ್, ಕೋಲ್ಕತ್ತಾ ನಡುವೆ ಮಹತ್ವದ ಕಾದಾಟ; ಅಗ್ರ ನಾಲ್ಕು ಸ್ಥಾನಗಳ ಮೇಲೆ ಉಭಯ ತಂಡಗಳ ಕಣ್ಣು

ಸದ್ಯದ ಅಂಕಪಟ್ಟಿಯ ಲೆಕ್ಕಾಚಾರದ ಪ್ರಕಾರ, ಕೆಕೆಆರ್‌ ಮತ್ತು ಪಂಜಾಬ್‌ ತಂಡಗಳು ಪ್ಲೇಆಫ್‌ ಪಟ್ಟಿಯಲ್ಲಿಲ್ಲ. ಹೀಗಾಗಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು, ಮುಂದಿನ ಎಲ್ಲಾ ಪಂದ್ಯಗಳಲ್ಲೂ ಗೆಲುವಿನ ಅಗತ್ಯ ಉಭಯ ತಂಡಗಳಿಗೂ ಇದೆ.

ಪಂಜಾಬ್‌, ಕೋಲ್ಕತ್ತಾ ನಡುವೆ ಪಂದ್ಯ
ಪಂಜಾಬ್‌, ಕೋಲ್ಕತ್ತಾ ನಡುವೆ ಪಂದ್ಯ

ಪ್ಲೇಆಫ್‌ ಹಂತ ಸಮೀಪಿಸುತ್ತಿದ್ದಂತೆಯೇ ಐಪಿಎಲ್ 2023ರ ಆವೃತ್ತಿಯು ರೋಚಕ ಹಂತದತ್ತ ಸಾಗುತ್ತಿದೆ. ಇಂದಿನ ಸೋಮವಾರದ (ಮೇ 8) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌(Punjab Kings) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ಕಣಕ್ಕಿಳಿಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಂದ್ಯ ನಡೆಯಲಿದ್ದು, ಕೆಕೆಆರ್‌ಗೆ ತವರಿನ ಬೆಂಬಲ ಸಿಗಲಿದೆ.

ಸದ್ಯದ ಅಂಕಪಟ್ಟಿಯ ಲೆಕ್ಕಾಚಾರದ ಪ್ರಕಾರ, ಕೆಕೆಆರ್‌ ಮತ್ತು ಪಂಜಾಬ್‌ ತಂಡಗಳು ಪ್ಲೇಆಫ್‌ ಪಟ್ಟಿಯಲ್ಲಿಲ್ಲ. ಹೀಗಾಗಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು, ಮುಂದಿನ ಎಲ್ಲಾ ಪಂದ್ಯಗಳಲ್ಲೂ ಗೆಲುವಿನ ಅಗತ್ಯ ಉಭಯ ತಂಡಗಳಿಗೂ ಇದೆ. ಪಂಜಾಬ್ ವಿರುದ್ಧದ ಮೊದಲ ಪಂದ್ಯವನ್ನು ಪಂಜಾಬ್‌ ಗೆದ್ದಿತ್ತು. ಹೀಗಾಗಿ ತವರಿನಲ್ಲಿ ನಡೆಯಲಿರುವ ಇಂದಿನ ಪಂದ್ಯ ಕೆಕೆಆರ್‌ ಪಾಲಿಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

ಕೆಕೆಆರ್‌ ತಂಡವು ಪ್ರಸ್ತುತ ಆವೃತ್ತಿಯಲ್ಲಿ ಗೆಲುವಿಗಾಗಿ ಹೋರಾಡುತ್ತಿದೆ. ಕೆಕೆಆರ್‌ಗೆ ಹೋಲಿಸಿದರೆ, ಪಂಜಾಬ್‌ ಒಂದು ಪಂದ್ಯ ಹೆಚ್ಚು ಗೆದ್ದಿದೆ. ಸದ್ಯ ಉಭಯ ತಂಡಗಳು ಕೂಡಾ ತಲಾ ಹತ್ತು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಪಂಜಾಬ್‌ ಐದು ಪಂದ್ಯಗಳಲ್ಲಿ ಗೆದ್ದಿದ್ದರೆ, ಕೋಲ್ಕತ್ತಾ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಂಕಪಟ್ಟಿಯಲ್ಲಿ ಉಭಯ ತಂಡಗಳು ಕ್ರಮವಾಗಿ 7 ಮತ್ತು 8 ಸ್ಥಾನದಲ್ಲಿದೆ.

ಕೆಕೆಆರ್ ತಂಡದ ಅಪ್ಡೇಟ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸದ್ಯಕ್ಕೆ ಯಾವುದೇ ಗಾಯದ ಆತಂಕವಿಲ್ಲ. ಹೀಗಾಗಿ ತಂಡವು ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಸಿದ ತಂಡವನ್ನೇ ಪಂಜಾಬ್‌ ವಿರುದ್ಧವೂ ಕಣಕ್ಕಿಳಿಸಬಹುದು. ನಾಲ್ವರು ವಿದೇಶಿ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ತಂಡದ ಆಡುವ ಬಳಗದಲ್ಲಿ ಸ್ಥಿರವಾಗಿ ಆಡಲಿದ್ದಾರೆ. ಇದೇ ವೇಳೆ ಸುಯಾಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಸಾಧ್ಯತೆ ಇದೆ.

ಪಂಜಾಬ್‌ ತಂಡ

ಪಂಜಾಬ್ ಕಿಂಗ್ಸ್ ತಂಡವು ಆಡಿದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 214 ರನ್ ಗಳಿಸಿದ ಹೊರತಾಗಿಯೂ ಸೋತಿತು. ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದು, ಬೌಲಿಂಗ್‌ನಲ್ಲಿ ಸುಧಾರಿಸಬೇಕಿದೆ. ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ 66 ರನ್‌ ಬಿಟ್ಟುಕೊಟ್ಟು ದುಬಾರಿಯಯಾದರು. ಇತರ ಬೌಲರ್‌ಗಳು ಕೂಡಾ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ.

ಶಿಖರ್ ಧವನ್ ತಂಡಕ್ಕೆ ಮರಳಿರುವುದು ಅವರ ಬ್ಯಾಟಿಂಗ್ ಅನ್ನು ಮತ್ತೆ ಬಲಪಡಿಸಿದೆ. ಆದರೆ PBKS ಒಂದೆರಡು ಬದಲಾವಣೆಗಳನ್ನು ಮಾಡಬಹುದು. ಶಿಖರ್ ಧವನ್ ತಂಡಕ್ಕೆ ಮರಳಿರುವುದು ತಂಡದ ಬ್ಯಾಟಿಂಗ್ ಲೈನಪ್‌ ಅನ್ನು ಮತ್ತಷ್ಟು ಬಲಪಡಿಸಿದೆ, ಆದರೆ PBKS ಒಂದೆರಡು ಬದಲಾವಣೆಗಳನ್ನು ಮಾಡಬಹುದು. ನಥನ್ ಎಲ್ಲಿಸ್ ಮತ್ತು ಅಥರ್ವ ಟೈಡೆಗೆ ಇಂದು ಅವಕಾಶ ಸಿಗಬಹುದು. ಹೀಗಾಗಿ ರಿಷಿ ಧವನ್, ಹರ್‌ಪ್ರೀತ್ ಬ್ರಾರ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.

ಕೆಕೆಆರ್‌ ಸಂಭಾವ್ಯ ಆಡುವ ಬಳಗ

ರಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವತಿ, ಸುಯಾಶ್ ಶರ್ಮಾ

ಪಂಜಾಬ್‌ ಕಿಂಗ್ಸ್‌ ಸಂಬಾವ್ಯ ಆಡುವ ಬಳಗ

ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್