ಕನ್ನಡ ಸುದ್ದಿ  /  Sports  /  Cricket News Ipl 2023 Play Off Punjab Kings Vs Rajasthan Royals Fight Playing 11 Picth Report Head To Head Rerord Prs

PBKS vs RR: ನಿರ್ಣಾಯಕ ಫೈಟ್​ನಲ್ಲಿ ಪಂಜಾಬ್​-ರಾಜಸ್ಥಾನ್​ ಸೆಣಸಾಟ; ಪ್ಲೇ ಆಫ್​ ಆಸೆ ಜೀವಂತ ಉಳಿಸಿಕೊಳ್ಳಲು ಉಭಯ ತಂಡಗಳಿಗೂ ಗೆಲುವು ಅನಿವಾರ್ಯ

16ನೇ ಆವೃತ್ತಿಯ ಐಪಿಎಲ್​ನ 66ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ಮತ್ತು ಪಂಜಾಬ್​ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಗಾದರೆ ಸಂಭಾವ್ಯ ತಂಡ, ಪಿಚ್​ ಯಾರಿಗೆ ನೆರವಾಗಲಿದೆ, ಮುಖಾಮುಖಿ ದಾಖಲೆ ಹೇಗಿದೆ, ಪ್ಲೇ ಆಫ್​ ಲೆಕ್ಕಾಚಾರ ಏನು ಎಂಬುದನ್ನು ಈ ವರದಿಯಲ್ಲಿ ನೋಡೋಣ.

ಶಿಖರ್ ಧವನ್​ ಮತ್ತು ಸಂಜು ಸ್ಯಾಮ್ಸನ್​
ಶಿಖರ್ ಧವನ್​ ಮತ್ತು ಸಂಜು ಸ್ಯಾಮ್ಸನ್​

ಕಳೆದ ಮಹತ್ವದ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ಹಾಲಿ ರನ್ನರ್ ಅಪ್​ ರಾಜಸ್ಥಾನ ರಾಯಲ್ಸ್​​ ಮತ್ತು ಪಂಜಾಬ್​ ಕಿಂಗ್ಸ್​​ ತಂಡಗಳು (Punjab Kings vs Rajasthan Royals) ತಮ್ಮ ಅಂತಿಮ ಲೀಗ್​​ ಪಂದ್ಯದಲ್ಲಿ ಇಂದು ಮುಖಾಮುಖಿಯಾಗುತ್ತಿವೆ. ಐಪಿಎಲ್​-16ರ ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಳ್ಳಲು ಉಭಯ ತಂಡಗಳಿಗೂ ಬೃಹತ್​ ಅಂತರದ ಜಯ ಸಾಧಿಸುವ ಅನಿವಾರ್ಯತೆ ಇದೆ. ಸೋತ ತಂಡವು, ಟೂರ್ನಿಯಿಂದ ಅಧಿಕೃತವಾಗಿ ಹೊರ ಬೀಳಲಿದೆ.

ಕಳೆದ ಪಂದ್ಯದಲ್ಲಿ ತವರಿನಲ್ಲಿ ಆರ್​​ಸಿಬಿ ವಿರುದ್ದ 112 ರನ್​ಗಳಿಂದ ಹೀನಾಯ ಸೋಲು ಕಂಡಿದ್ದ ರಾಜಸ್ಥಾನ್​ ತಂಡವು, ಇತರೆ ತಂಡಗಳಿಗಿಂತ ಉತ್ತಮ ರನ್​ರೇಟ್​ ಹೊಂದಿದೆ. ಆದರೆ ಅಂಕ ಗಳಿಕೆಯಲ್ಲಿ ಹಿನ್ನಡೆ ಕಂಡಿದೆ. ಟೂರ್ನಿಯ ಮೊದಲ ಮುಖಾಮುಖಿಯಲ್ಲಿ 5 ರನ್​ ಗಳಿಂದ ಗೆದ್ದುಕೊಂಡಿದ್ದ ಪಂಜಾಬ್​ ಕಿಂಗ್ಸ್ ತಂಡ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಟೂರ್ನಿಯ ಮೊದಲಾರ್ಧ 5 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೂ ಕಾಣಿಸಿಕೊಂಡಿತ್ತು ಸಂಜು ಪಡೆ.

ಆದರೆ, ಸಂಜು ಪಡೆ ಕಳೆದ 8 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಸೋಲು ಕಂಡಿದೆ. ಇನ್ನೂ ಪಂಜಾಬ್​, ಟೂರ್ನಿಯುದ್ದಕ್ಕೂ ತಂಡದ ಸೂಕ್ತ ಸಂಯೋಜನೆ ಕಂಡುಕೊಳ್ಳಲು ಪರದಾಡಿದೆ. ಉತ್ತಮ ರನ್​ರೇಟ್​ ಹೊಂದಿರುವ ರಾಜಸ್ಥಾನ್​, ಪಂಜಾಬ್​ ತಂಡಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಬಲಿಷ್ಠ ಬ್ಯಾಟಿಂಗ್​​ ವಿಭಾಗ ಹೊಂದಿರುವ ರಾಜಸ್ಥಾನ ಈ ಪಂದ್ಯದ ಫೇವರಿಟ್​ ಎನಿಸಿದೆ.

ಯಶಸ್ವಿ ಜೈಸ್ವಾಲ್​ ಬಲ

ರಾಜಸ್ಥಾನ ತಂಡದ ಬ್ಯಾಟಿಂಗ್​ ಶಕ್ತಿ ಎನಿಸಿರುವ ಯಶಸ್ವಿ ಜೈಸ್ವಾಲ್​ ಅವರೇ ತಂಡಕ್ಕೆ ಆಧಾರವಾಗಿದ್ದಾರೆ. ತಂಡದ ಗರಿಷ್ಠ ಸ್ಕೋರರ್​ ಕೂಡ ಆಗಿದ್ದಾರೆ. ಜೋಸ್​ ಬಟ್ಲರ್, ಸಂಜು ಸ್ಯಾಮ್ಸನ್ ಆಗಾಗ್ಗೆ ಅಬ್ಬರಿಸಿದರೆ, ಉಳಿದವರಿಂದ ಅಂತಹ ಪ್ರದರ್ಶನವೂ ಬಂದಿಲ್ಲ. ಬೌಲಿಂಗ್​ ಚಹಲ್ ಹೊರತುಪಡಿಸಿ ಇತರೆ ಬೌಲರ್​ಗಳು ವಿಕೆಟ್​ ಪಡೆಯಲು ಪರದಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪಂಜಾಬ್​ ತಂಡದಲ್ಲೂ ಲಿಯಾಮ್​ ಲಿವಿಂಗ್​ಸ್ಟೋನ್​ ಹೊರತುಪಡಿಸಿ ಯಾರೂ ಅಬ್ಬರಿಸುತ್ತಿಲ್ಲ. ಬೌಲಿಂಗ್​​ ವಿಭಾಗವೂ ಅತ್ಯಂತ ಕಳಪೆಯಾಗಿದೆ.

ಪ್ಲೇ ಆಫ್​ ಲೆಕ್ಕಾಚಾರ

ರಾಜಸ್ಥಾನ - ಪಂಜಾಬ್​ ಆಡಿರುವ 13 ಪಂದ್ಯಗಳಲ್ಲಿ 6 ಗೆಲುವು, 7 ಸೋಲಿನೊಂದಿಗೆ ತಲಾ 12 ಅಂಕ ಕಲೆ ಹಾಕಿದೆ. ರನ್​ರೇಟ್​ ಆಧಾರದಲ್ಲಿ ಆರ್​ಆರ್​​​ (+0.140), ಪಂಜಾಬ್​ಗಿಂತ (-0.256) ಮುಂದಿದೆ. ರಾಜಸ್ಥಾನ ತಂಡ ಗೆಲುವು ಸಾಧಿಸಿದರೆ ಅದರ ಭವಿಷ್ಯ ಆರ್​ಸಿಬಿ ಮತ್ತು ಮುಂಬೈ ತಂಡಗಳ ಅಂತಿಮ ಲೀಗ್​​ ಪಂದ್ಯದ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ. ಪಂಜಾಬ್​ಗೆ ಬೃಹತ್​​ ಅಂತರದ ಗೆಲುವಿನ ಅಗತ್ಯ ಇದೆ. ಮುಂಬೈ ಅಥವಾ ಆರ್​ಸಿಬಿ ಕೊನೆಯ ಪಂದ್ಯದಲ್ಲಿ ಗೆದ್ದರೆ, ಇವರೆಡರಲ್ಲಿ ಯಾವ ತಂಡ ಗೆದ್ದರೂ ಪ್ಲೇ ಆಫ್​ಗೇರಲ್ಲ.

ಉಭಯ ತಂಡಗಳ ಮುಖಾಮುಖಿ 

ಪಂಜಾಬ್​ ಮತ್ತು ರಾಜಸ್ಥಾನ ತಂಡಗಳು ಒಟ್ಟು 25 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಪಂಜಾಬ್​ 11 ಗೆಲುವು, ರಾಜಸ್ಥಾನ 14 ಗೆಲುವು ಸಾಧಿಸಿದೆ.

ಪಿಚ್​ ರಿಪೋರ್ಟ್​

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನವು ಬ್ಯಾಟಿಂಗ್ ಸ್ನೇಹಿಯಾಗಿದೆ. ಬ್ಯಾಟರ್​​ಗಳು ನಿರಾಯಾಸವಾಗಿ ರನ್ ಗಳಿಸಲಿದ್ದಾರೆ. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳಿಗೂ ಕೊಂಚ ಮಟ್ಟಿಗೆ ನೆರವಾಗಲಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ 

ಪಂಜಾಬ್​ ಕಿಂಗ್ಸ್​​ ಸಂಭಾವ್ಯ ತಂಡ

ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್), ಸ್ಯಾಮ್ ಕರನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ನಾಥನ್ ಎಲ್ಲಿಸ್, ರಿಷಿ ಧವನ್, ಆರ್ಷ್‌ದೀಪ್ ಸಿಂಗ್.

ರಾಜಸ್ಥಾನ್​ ರಾಯಲ್ಸ್​ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್​ ಕೀಪರ್​), ಜೋ ರೂಟ್, ದೇವದತ್ ಪಡಿಕ್ಕಲ್/ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಕೆಎಂ ಆಸಿಫ್, ಯುಜ್ವೇಂದ್ರ ಚಹಲ್.