ಕನ್ನಡ ಸುದ್ದಿ  /  Sports  /  Cricket News Ipl 2023 Playoffs Scenarios How Can Rcb Qualify For Play Offs Royal Challengers Bangalore Mi Vs Lsg Jra

IPL 2023 playoffs: ಆರ್‌ಸಿಬಿಗಿದೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶ

Royal Challengers Bangalore: ಮುಂಬೈ ಮತ್ತು ಲಖನೌ ತಂಡಗಳ ನಡುವೆ ಇಂದು ನಿರ್ಣಾಯಕ ಪಂದ್ಯ ನಡೆಯುತ್ತಿದ್ದು, ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಯಾವ ತಂಡ ಮುಂದಿನ ಹಂತ ಪ್ರವೇಶಿಸಲಿದೆ, ಮತ್ತು ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಆರ್‌ಸಿಬಿ ತಂಡ
ಆರ್‌ಸಿಬಿ ತಂಡ (Twitter)

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 34 ರನ್‌ಗಳಿಂದ ಸೋಲಿಸಿತು. ಆ ಮೂಲಕ ಐಪಿಎಲ್ 2023ರ ಪ್ಲೇಆಫ್‌ಗೆ ಅದ್ಧೂರಿಯಾಗಿ ಲಗ್ಗೆ ಇಟ್ಟಿತು. ಈ ಗೆಲುವಿನೊಂದಿಗೆ ಲೀಗ್ ಹಂತ ಪೂರ್ಣಗೊಳ್ಳುವ ವೇಳೆಗೆ ತಂಡವು ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯುವುದು ಖಚಿತವಾಗಿದೆ.

ಈ ಪಂದ್ಯದ ಬೆನ್ನಲ್ಲೇ, ಪ್ಲೇ ಆಫ್‌ ಲೆಕ್ಕಾಚಾರಗಳು ಜೋರಾಗಿವೆ. ಈ ನಡುವೆ ಇಂದು ಮುಂಬೈ ಮತ್ತು ಲಖನೌ ತಂಡಗಳ ನಡುವೆ ನಿರ್ಣಾಯಕ ಪಂದ್ಯ ನಡೆಯುತ್ತಿದ್ದು, ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಯಾವ ತಂಡ ಮುಂದಿನ ಹಂತ ಪ್ರವೇಶಿಸಲಿದೆ, ಮತ್ತು ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಎಷ್ಟಿದೆ ಎಂಬ ಮಾಹಿತಿ ಈ ಸುದ್ದಿಯಲ್ಲಿದೆ.

ಆರ್‌ಸಿಬಿಯು ಪ್ರಸ್ತುತ 12 ಪಂದ್ಯಗಳ ಬಳಿಕ 12 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ತಂಡವು ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಈಗಾಗಲೇ ಎಲಿಮನೇಟ್‌ ಆಗಿರುವ ಹೈದರಾಬಾದ್‌ ಹಾಗೂ ಈಗಾಗಲೇ ಪ್ಲೇ ಆಫ್‌ಗೆ ಪ್ರವೇಸಿರುವ ಗುಜರಾತ್ ತಂಡವನ್ನು ಎದುರಿಸುತ್ತಿದೆ. ಮುಂದಿನ ಹಂತ ಪ್ರವೇಶಿಸಲು ತಂಡವು ಈ ಎರಡೂ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. ಇದೇ ವೇಳೆ ಆರ್‌ಸಿಬಿಯು ಇತರ ತಂಡಗಳ ಫಲಿತಾಂಶಗಳನ್ನು ಕೂಡಾ ಅವಲಂಬಿಸಬೇಕಾಗಿದೆ. ಮತ್ತೊಂದೆಡೆ ತಂಡದ ನೆಟ್ ರನ್ ರೇಟ್‌ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ.

ಸಂಭಾವ್ಯತೆ ಹೀಗಿವೆ

ಒಂದು ವೇಳೆ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದರೆ, ಲೆಕ್ಕಾಚಾರ ಸ್ವಲ್ಪ ಕಷ್ಟವಾಗುತ್ತದೆ. ಹಾಗಂತ ತಂಡ ಪ್ಲೇ ಆಫ್‌ ಪ್ರವೇಶಿಲು ಸಾಧ್ಯವಿಲ್ಲ ಎಂದೇನಿಲ್ಲ. ಮುಂಬೈ ತಂಡವನ್ನು ಲಖನೌ ಸೋಲಿಸಿ, ನಂತರ ರೋಹಿತ್ ಪಡೆಯು ಹೈದರಾಬಾದ್‌ ವಿರುದ್ಧವೂ ಸೋತರೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಿದೆ. ಇಲ್ಲಿ ಕೂಡಾ ನೆಟ್‌ ರನ್ ರೇಟ್‌ ಪ್ರಮುಖ ಅಂಶವಾಗಲಿದೆ. ಏಕೆಂದರೆ ಬೇರೆ ತಂಡಗಳು ಕೂಡಾ ಆರ್‌ಸಿಬಿಯಷ್ಟೇ ಅಂಕಗಳೊಂದಿಗೆ ಸ್ಪರ್ಧೆಯೊಡ್ಡಬಹುದು.

ಸದ್ಯ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿರುವ ತಂಡದ ನೆಟ್​ ರನ್‌ ​ರೇಟ್‌ ಬಾರಿ ಏರಿಕೆ ಕಂಡಿದೆ. ತಂಡವು ಮುಂದೆ ಮೇ 18ರಂದು ಹೈದ್ರಬಾದ್‌​ನಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಕಣಕ್ಕಿಳಿಯುತ್ತಿದೆ. ಆ ಬಳಿಕ ಮೇ 21ರಂದು ಚಿನ್ನಸ್ವಾಮಿ ಮೈದಾನದಲ್ಲಿ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಗುಜರಾತ್​ ಟೈಟನ್ಸ್ ವಿರುದ್ಧ ಆಡುತ್ತಿದೆ. ಇವೆರಡಲ್ಲೂ ಗೆದ್ದರೆ, ತಂಡೆ ಪ್ಲೇ ಆಫ್‌ ಪ್ರವೇಶಿಸುವುದು ಬಹುತೇಕ ಖಚಿತ.

ಮುಂಬೈ ಮತ್ತು ಲಖನೌ ಕೈಯಲ್ಲಿ ಆರ್‌ಸಿಬಿ ಪ್ಲೇ ಆಫ್ ಭವಿಷ್ಯ

ಮುಂದಿನ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತರೂ, ಬೇರೆ ತಂಡಗಳ ಸೋಲು ಗೆಲುವಿನ ಮೇಲೆ ಆರ್‌ಸಿಬಿಯ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ. ಸದ್ಯ ತಂಡಕ್ಕೆ ಪ್ರಮುಖ ಸವಾಲು ಆಗಿರೋದು, ಅಂಕಪಟ್ಟಿಯಲ್ಲಿ ತನಗಿಂತ ಮೇಲಿರುವ ಲಖನೌ ಸೂಪರ್ ಜೈಂಟ್ಸ್​ ಮತ್ತು ಮುಂಬೈ ಇಂಡಿಯನ್ಸ್. ಇಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್​ ವಿರುದ್ಧ ಮುಂಬೈ ಗೆದ್ದರೆ, ಫಾಫ್‌ ಪಡೆ ಪ್ಲೇ ಆಫ್‌​ಗೆ ಮತ್ತಷ್ಟು ಹತ್ತಿರವಾಗಲಿದೆ. ಆ ಬಳಿಕ ತನ್ನ ಪಾಲಿನ ಸತತ ಎರಡು ಪಂದ್ಯಗಳನ್ನ ಗೆದ್ದರೆ, 16 ಅಂಕಗಳೊಂದಿಗೆ ನೇರವಾಗಿ ಮುಂದಿನ ಹಂತಕ್ಕೆ ಎಂಟ್ರಿ ಕೊಡಲಿದೆ. ಒಂದು ವೇಳೆ ಇಂದು ಮುಂಬೈ ಗೆದ್ದು, ಮುಂದಿನ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಒಂದರಲ್ಲಿ ಸೋತರೂ ಆರ್‌ಸಿಬಿಗೆ ಕಷ್ಟವಾಗಲಿದೆ. ಅತ್ತ ಲಖನೌ ಮುಂಬೈ ವಿರುದ್ಧ ಸೋತು ಮತ್ತೊಂದು ಪಂದ್ಯದಲ್ಲಿ ಗೆದ್ದರೂ, ಆರ್‌ಸಿಬಿ ಪ್ಲೇ ಆಫ್​ ರೇಸ್‌​ನಿಂದ ಹೊರಬೀಳುವುದು ಖಚಿತ.

ಫಾಫ್‌ ಪಡೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರೋ ಅವಕಾಶ

ಇಂದು ಲಖನೌ ವಿರುದ್ಧ ಮುಂಬೈ ಗೆದ್ದು, ಆರ್‌ಸಿಬಿಯು ಹೈದರಾಬಾದ್‌ ಮತ್ತು ಗುಜರಾತ್‌ ವಿರುದ್ಧದ ಪಂದ್ಯಗಳನ್ನ ಗೆದ್ದರೆ ಅಂಕಪಟ್ಟಿಯಲ್ಲಿ ನಂಬರ್‌ 2 ಸ್ಥಾನಕ್ಕೇರುವ ಅವಕಾಶವಿದೆ. ಆದರೆ, ಇದು ಆರ್‌ಸಿಬಿ ಕೈಯಲ್ಲಿಲ್ಲ. ಇದು ಸಾಧ್ಯವಾಗಬೇಕಾದರೆ, ಚೆನ್ನೈ ಮುಂದಿನ ಪಂದ್ಯದಲ್ಲಿ ಸೋಲಬೇಕು. ಅಲ್ಲದೆ ಮುಂಬೈ ಕೂಡಾ ಮುಂದಿನ ಪಂದ್ಯದಲ್ಲಿ ಸೋಲಬೇಕು. ಹೀಗಾಗಿ ಆರ್‌ಸಿಬಿಯು ಅಗ್ರ ನಾಲ್ಕು ಸ್ಥಾನಗಳಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶ ಕೂಡಾ ಪಡೆದಿದೆ. ಆದರೆ, ಎಲ್ಲಾ ಅಂದುಕೊಂಡಂತೆ ಆದರೆ ಮಾತ್ರ ಇದು ಸಾಧ್ಯವಾಗಲಿದೆ.