ಕನ್ನಡ ಸುದ್ದಿ  /  Sports  /  Cricket News Ipl 2023 Sanju Samson Losses Captaincy Of Rajasthan Royals To Yuzvendra Chahal Indian Premier League Jra

PBKS vs RR: ರಾಜಸ್ಥಾನದ ನಾಯಕ ಚಹಾಲ್; ಪ್ರಸಾರಕ ವಾಹಿನಿಯ ಎಡವಟ್ಟಿನಿಂದ ನಾಯಕತ್ವ ಕಳೆದುಕೊಂಡ ಸ್ಯಾಮ್ಸನ್!

ತಪ್ಪುಗಳು ಎಲ್ಲಾ ಕ್ಷೇತ್ರಗಳಲ್ಲೂ ಸಹಜ. ಆದರೆ, ಕೆಲವೊಮ್ಮೆ ಸಣ್ಣ ತಪ್ಪುಗಳು ಕೂಡಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಅಲ್ಲದೆ ಟ್ರೋಲ್‌ಗಳಿಗೂ ಆಹಾರವಾಗಿಬಿಡುತ್ತದೆ. ಇಲ್ಲಿ ಆಗಿದ್ದು ಕೂಡಾ ಅದೇ.

ಚಹಾಲ್‌, ಸ್ಯಾಮ್ಸನ್
ಚಹಾಲ್‌, ಸ್ಯಾಮ್ಸನ್

ಐಪಿಎಲ್ 2023ರ ಆವೃತ್ತಿಯ ಮೊದಲಾರ್ಧವನ್ನು ಉತ್ತಮವಾಗಿ ಆರಂಭಿಸಿದ್ದ ರಾಜಸ್ಥಾನ್ ರಾಯಲ್ಸ್, ದ್ವಿತಿಯಾರ್ಧದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. 2022ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ತಂಡವು, ಈ ಬಾರಿ ಆಡಿದ ಕೊನೆಯ ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋತಿದೆ. ಇಂದಿನ ಪಂದ್ಯದಲ್ಲಿ ಪ್ಲೇ ಆಫ್‌ ಸ್ಥಾನಕ್ಕಾಗಿ ಹೋರಾಡುತ್ತಿರುವ ತಂಡವು, ಒಂದು ವೇಳೆ ಗೆದ್ದರೂ ಮುಂದಿನ ಹಂತಕ್ಕೆ ಲಗ್ಗೆ ಹಾಕುವುದು ಕಷ್ಟಕರವಾಗಿದೆ.

ಟ್ರೆಂಡಿಂಗ್​ ಸುದ್ದಿ

ಶುಕ್ರವಾರದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಧರ್ಮಶಾಲಾದಲ್ಲಿ ತಂಡ ಆಡುತ್ತಿದೆ. ಈ ಪಂದ್ಯದ ಟಾಸ್‌ ಪ್ರಕ್ರಿಯೆ ವೇಳೆ ನಡೆದ ಸನ್ನಿವೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕೂಡಾ ಟ್ರೋಲ್‌ ವಸ್ತುವಾಗಿ ನೋಡಿದೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಿರೂಪಕರಾದ ಎಂಪುಮೆಲೆಲೊ ಎಂಬಾಂಗ್ವಾ ಅವರು, ಟಾಸ್‌ ಗೆದ್ದ ರಾಜಸ್ಥಾನ್‌ ನಾಯಕ ಸ್ಯಾಮ್ಸನ್‌ ಅವರಲ್ಲಿ ಅವರ ನಿರ್ಧಾರದ ಬಗ್ಗೆ ಕೇಳಿದರು. ಪ್ರಸಾರ ನಿಯಮದ ಪ್ರಕಾರ, ಪರಸ್ಪರ ಸಂಭಾಷಣೆಯ ಸಮಯದಲ್ಲಿ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುವವರ ಹೆಸರನ್ನು ಕೂಡಾ ಪರದೆ ಮೇಲೆ ಹಾಕಬೇಕು. ಅಂತೆಯೇ ಸ್ಯಾಮ್ಸನ್ ನಿರೂಪಕರೊಂದಿಗೆ ಮಾತನಾಡುವಾಗ, ಅವರ ಹೆಸರನ್ನು ಪ್ರಸಾರಕರು ತೋರಿಸಬೇಕಾಗಿತ್ತು. ಆದರೆ‌, ಇಂದು ಸ್ಯಾಮ್ಸನ್‌ ಬದಲಿಗೆ ಬೇರೆ ಹೆಸರು ಕಾಣಿಸಿಕೊಂಡಿದೆ. "ಯಜುವೇಂದ್ರ ಚಹಾಲ್, ರಾಜಸ್ಥಾನ ರಾಯಲ್ಸ್ ನಾಯಕ", ಎಂಬುದಾಗಿ ಕಾಣಿಕೊಂಡಿದೆ.

ಅಚಾತುರ್ಯದಿಂದ ಆದ ತಪ್ಪಿನ ಬಗ್ಗೆ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯನ್ನು ಟ್ರೋಲ್‌ ಮಾಡಿದೆ. ಒಂದು ವರ್ಷದ ಹಳೆಯ ಟ್ವೀಟ್ ಅನ್ನು ಮತ್ತೆ ಹಂಚಿಕೊಂಡಿರುವ ಫ್ರಾಂಚೈಸಿಯು, ಸ್ಟಾರ್‌ ಸ್ಪೋರ್ಟ್ಸ್‌ ಅಚಾತುರ್ಯದಿಂದ ಮಾಡಿರುವ ಪ್ರಮಾದಕ್ಕಾಗಿ ಕಟುವಾಗಿ ಟೀಕಿಸಿದೆ. "@StarSportsIndia ನೀವು ಮೊದಲಿಗರಲ್ಲ" ಎಂದು ಟ್ವೀಟ್‌ ಮಾಡಿದೆ.

ತಪ್ಪುಗಳು ಎಲ್ಲಾ ಕ್ಷೇತ್ರಗಳಲ್ಲೂ ಸಹಜ. ಆದರೆ, ಕೆಲವೊಮ್ಮೆ ಸಣ್ಣ ತಪ್ಪುಗಳು ಕೂಡಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಅಲ್ಲದೆ ಟ್ರೋಲ್‌ಗಳಿಗೂ ಆಹಾರವಾಗಿಬಿಡುತ್ತದೆ.

ಮಹತ್ವದ ಪಂದ್ಯದಲ್ಲಿ ಟಾಸ್‌ ಸೋತು ಮೊದಲಿಗೆ ಬ್ಯಾಟಿಂಗ್‌ ನಡೆಸಿದ ಶಿಖರ್‌ ಧವನ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌ ತಂಡವು, ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ. ರಾಜಸ್ಥಾನದ ಬೌಲರ್‌ ನವದೀಪ್‌ ಸೈನಿ ನಿರಂತರ ದಾಳಿಯ ನಡುವೆಯೂ ಸ್ಥಿರ ಪ್ರದರ್ಶನ ಮುಂದುವರೆಸಿದ ಆತಿಥೇಯರು, 5 ವಿಕೆಟ್‌ ಕಳೆದುಕೊಂಡು 187 ರನ್‌ ಗಳಿಸಿದ್ದಾರೆ. ಆ ಮೂಲಕ ರಾಜಸ್ಥಾನಕ್ಕೆ ಬೃಹತ್‌ ಗುರಿ ನೀಡಿದ್ದಾರೆ.

ಬ್ಯಾಟಿಂಗ್‌ ಆರಂಭಿಸಿದ ಪಂಜಾಬ್‌ ತಂಡವು ಆರಂಭದಲ್ಲೇ ಆಘಾತ ಎದುರಿಸಿತು. ಶತಕವೀರ ಪ್ರಭ್‌ಸಿಮ್ರಾನ್‌ ಸಿಂಗ್‌ ಕೇವಲ 2 ರನ್‌ ಗಳಿಸಿ ಔಟಾದರು. ಮೊದಲ ಓವರ್‌ನಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ, ಅಥರ್ವಟೈಡೆ ತುಸು ಚೇತರಿಕೆ ತಂದುಕೊಟ್ಟರು. ಅಬ್ಬರದಾಟಕ್ಕೆ ಮುಂದಾದ ಅವರು, 19 ರನ್‌ ಗಳಿಸಿ ಸೈನಿಗೆ ವಿಕೆಟ್‌ ಒಪ್ಪಿಸಿದರು. ಅದಾದ ಬೆನ್ನಲ್ಲೇ ನಾಯಕ ಧವನ್‌ ಕೂಡಾ ಜಂಪಾ ಮ್ಯಾಜಿಕ್‌ಗೆ ಬಲಿಯಾದರು. ಕೊನೆಯ ಪಂದ್ಯದಲ್ಲಿ ಸ್ಫೋಟಿಸಿದ್ದ ಲಿವಿಂಗ್‌ಸ್ಟನ್‌ಗೂ ನವದೀಪ್‌ ಸೈನಿ ಕಂಟಕರಾದರು. ಒಂದಂಕಿ ಮೊತ್ತಕ್ಕೆ ಇಂಗ್ಲೆಂಡ್‌ ದೈತ್ಯ ವಿಕೆಟ್‌ ಒಪ್ಪಿಸಿದರು.