Virat Kohli: ಪಂದ್ಯ ಸೋತರೇನಂತೆ, ವಿರಾಟ್ ಶತಕಕ್ಕೆ ದಾಖಲೆಗಳೆಲ್ಲಾ ಛಿದ್ರ; ರೆಕಾರ್ಡ್ ಮಾಡೋದ್ರಲ್ಲಿ ಆರ್‌ಸಿಬಿಯೇ ಟಾಪ್
- Virat Kohli Second Century In IPL 2023 : ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ದೈತ್ಯ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದರು. ಕೇವಲ 61 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 101 ರನ್ ಗಳಿಸಿದರು. ಆ ಮೂಲಕ ಹಲವು ದಾಖಲೆ ಬರೆದರು.
- Virat Kohli Second Century In IPL 2023 : ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ದೈತ್ಯ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದರು. ಕೇವಲ 61 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 101 ರನ್ ಗಳಿಸಿದರು. ಆ ಮೂಲಕ ಹಲವು ದಾಖಲೆ ಬರೆದರು.
(1 / 8)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್, ಐಪಿಎಲ್‌ನಲ್ಲಿ ಏಳನೇ ಶತಕ ಸಿಡಿಸಿದರು. ಆ ಮೂಲಕ ಆರ್‌ಸಿಬಿ ತಂಡದ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ ಅವರ ದೀರ್ಘಕಾಲದ ಇಂಡಿಯನ್ ಪ್ರೀಮಿಯರ್ ಲೀಗ್ ದಾಖಲೆಯನ್ನು ಮುರಿದರು.
(2 / 8)
ಇದು ಪ್ರಸಕ್ತ ಋತುವಿನಲ್ಲಿ ಕೊಹ್ಲಿ ಅವರ ಸತತ ಎರಡನೇ ಶತಕವಾಗಿದೆ. 34 ವರ್ಷದ ಬ್ಯಾಟರ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಹಿಂದಿನ ಪಂದ್ಯದಲ್ಲೂ 100 ರನ್ ಗಳಿಸಿದ್ದರು.
(3 / 8)
ಕ್ರಿಸ್ ಗೇಲ್ ಅವರು ಈ ಹಿಂದೆ ರಾಯಲ್ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾಗ ಪಂದ್ಯಾವಳಿಯ 2018ರ ಆವೃತ್ತಿಯಲ್ಲಿ ಲೀಗ್‌ನಲ್ಲಿ ತಮ್ಮ ಆರನೇ ಮತ್ತು ಅಂತಿಮ ಶತಕ ಸಿಡಿಸಿದ್ದರು. ಕುತೂಹಲಕಾರಿ ಎಂಬಂತೆ, ಈ ಋತುವಿಗಿಂತ ಹಿಂದೆ, ಕೊಹ್ಲಿ ಅವರ ಕೊನೆಯ ಶತಕವು 2019ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬಂದಿತ್ತು. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ಯಶಸ್ವಿ ರನ್ ಚೇಸ್ ವೇಳೆ ಮೂರಂಕಿ ಗಡಿ ದಾಟಿ ಐಪಿಎಲ್ ಶತಕದ ಬರ ನೀಗಿಸಿದರು.
(4 / 8)
ಇದು ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ 8ನೇ ಶತಕವಾಗಿದೆ. ಆಸ್ಟ್ರೇಲಿಯಾದ ಮೂವರು ಆಟಗಾರರಾದ ಡೇವಿಡ್ ವಾರ್ನರ್, ಆರೋನ್ ಫಿಂಚ್ ಮತ್ತು ಮೈಕೆಲ್ ಕ್ಲಿಂಗರ್ ಕೊಹ್ಲಿಯಂತೆಯೇ ಎಂಟು ಟಿ20 ಶತಕಗಳನ್ನು ಸಿಡಿಸಿದ್ದಾರೆ.
(5 / 8)
ಈ ಶತಕದೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಶಿಖರ್ ಧವನ್ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಾಗ ಮೊದಲ ಬಾರಿಗೆ ಈ ಸಾಧನೆ ಮಾಡಿದರು. ಕಳೆದ ಆವೃತ್ತಿಯಲ್ಲಿ ಜೋಸ್ ಬಟ್ಲರ್ ಕೂಡಾ ಸತತ ಶತಕ ಸಿಡಿಸಿದ್ದರು. ವಿರಾಟ್ ಬಳಿಕ ಕಳೆದ ಪಂದ್ಯದಲ್ಲಿ ಶುಬ್ಮನ್ ಗಿಲ್ ಕೂಡಾ ಸತತ ಎರಡು ಶತಕ ಸಿಡಿಸಿದರು.
(6 / 8)
ಪ್ರಸಕ್ತ ಆವೃತ್ತಿಯಲ್ಲಿ ಕೊಹ್ಲಿ ಮತ್ತು ಫಾಫ್ ಜೋಡಿಯು ಬರೋಬ್ಬರಿ 939 ರನ್‌ಗಳ ಜೊತೆಯಾಟವಾಡಿದ್ದಾರೆ. ಇದು ಈವರೆಗಿನ ಐಪಿಎಲ್ ಆವೃತ್ತಿಗಳಲ್ಲಿ ಎರಡನೇ ಅತ್ಯುತ್ತಮ ಜೊತೆಯಾಟ. 2016ರ ಆವೃತ್ತಿಯಲ್ಲಿ ವಿರಾಟ್ ಹಾಗೂ ಎಬಿಡಿ ಕೂಡಾ 939 ರನ್‌ಗಳ ಜೊತೆಯಾಟವಾಡಿದ್ದರು. ಈ ಎರಡೂ ದಾಖಲೆ ಆರ್‌ಸಿಬಿ ತಂಡದಲ್ಲಿದ್ದು, ಎರಡರಲ್ಲೂ ವಿರಾಟ್ ಇದ್ದಾರೆ. ಅಲ್ಲದೆ ಅವರ ಜೊತೆಗಾರರು ದಕ್ಷಿಣ ಆಫ್ರಿಕಾ ದಿಗ್ಗಜರು ಎನ್ನುವುದು ವಿಶೇಷ.(all photos- iplt20.com)
(7 / 8)
ವಿರಾಟ್ ಕೊಹ್ಲಿ ಅವರ ಅದ್ಭುತ ಶತಕದಿಂದಾಗಿ ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಒಂದೆಡೆ ತಂಡ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ ಗಟ್ಟಿಯಾಗಿ ನಿಂತು ತಂಡಕ್ಕೆ ರನ್ ಗಳಿಸಿದರು.
ಇತರ ಗ್ಯಾಲರಿಗಳು