ಕನ್ನಡ ಸುದ್ದಿ  /  Sports  /  Cricket News Ipl Kl Rahul Brutally Trolled By Fans Over Tweet After Lucknow Super Giants Defeat To Rajasthan Royals Prs

KL Rahul Troll: ಇಂಗ್ಲೆಂಡ್​ ಟೆಸ್ಟ್​​ ಅನ್ನು T20 ರೀತಿ ಆಡ್ತಿದೆ, ನೀವ್ಯಾಕೆ​ ಟೆಸ್ಟ್ ಥರ T20 ಆಡ್ತೀರಿ; ಕೆಎಲ್ ರಾಹುಲ್‌ಗೆ ಟ್ರೋಲ್ ಬಿಸಿ

ರಾಜಸ್ಥಾನ್​ ರಾಯಲ್ಸ್ (Rajasthan Royals)​ ಎದುರಿನ ಪಂದ್ಯದಲ್ಲಿ ನಿಧಾನವಾಗಿ ಬ್ಯಾಟ್​ ಬೀಸಿದ ಕೆಎಲ್​ ರಾಹುಲ್​ ವಿರುದ್ಧ ಫ್ಯಾನ್ಸ್​ ಟ್ರೋಲ್​ (KL Rahul Troll) ಮಾಡುತ್ತಿದ್ದಾರೆ. ಎರಡು ಜೀವದಾನ ಸಿಕ್ಕರೂ ಅದರ ಲಾಭ ಪಡೆಯದ ರಾಹುಲ್​​, 32 ಎಸೆತಗಳಲ್ಲಿ 39 ರನ್​ ಗಳಿಸಿದರು. ಹಾಗಾಗಿ ಲಕ್ನೋ ತಂಡದ ನಾಯಕ ಟ್ರೋಲ್​ ಬಿಸಿ ಎದುರಿಸುತ್ತಿದ್ದಾರೆ.

ಕೆಎಲ್​ ರಾಹುಲ್​
ಕೆಎಲ್​ ರಾಹುಲ್​ (Twitter)

ಜೈಪುರದ ಸವಾಯಿ ಮಾನ್​ಸಿಂಗ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​, ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಸೂಪರ್ ಗೆಲುವು ದಾಖಲಿಸಿದೆ. ಅದ್ಭುತ ಆರಂಭದ ನಡುವೆಯೂ ಸಂಜು ಪಡೆಯ ಗೆಲುವಿನ ಲೆಕ್ಕಾಚಾರ ಅಂತಿಮ ಹಂತದಲ್ಲಿ ಬದಲಾಯಿತು. ಪರಿಣಾಮ ರಾಜಸ್ಥಾನ್​​ 10 ರನ್​ಗಳಿಂದ ಶರಣಾಯಿತು. KL​ ರಾಹುಲ್​ ನೇತೃತ್ವದ ತಂಡ 155 ರನ್​ ಗುರಿ ನೀಡಿತ್ತು. ಲಕ್ನೋ ಗೆದ್ದು ಅಂಕಪಟ್ಟಿಯಲ್ಲಿ 2 ಅಂಕ ಹೆಚ್ಚಿಸಿಕೊಂಡಿದೆ. ಇದರ ನಡುವೆಯೂ ನಾಯಕ ಕೆಎಲ್​ ರಾಹುಲ್​ ಭಾರಿ ಟ್ರೋಲ್​ಗೆ ಗುರಿಯಾಗಿದ್ದಾರೆ.

ಬೆನ್​ಸ್ಟೋಕ್ಸ್ ನಾಯಕನಾಗಿ ನೇಮಕಗೊಂಡ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್​ ಆಡುವ ವಿಧಾನವನ್ನು ಬದಲಾಯಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ‘ಬಝ್‌ಬಾಲ್‌’ ಹೆಸರಿನ ಮೂಲಕ ಟೆಸ್ಟ್‌ಗಳಲ್ಲೂ ಮನರಂಜನೆ ನೀಡುತ್ತಿದ್ದಾರೆ. ಟೆಸ್ಟ್​ ಕ್ರಿಕೆಟ್​​​​ನಲ್ಲೂ ಟಿ20 ವಾತಾವರಣ ನಿರ್ಮಿಸಿದ್ದಾರೆ. ಆದರೆ, ಕೆಎಲ್ ರಾಹುಲ್ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ಆಡುತ್ತಿದ್ದಾರೆ ಎಂದು ಫ್ಯಾನ್ಸ್​ ಗರಂ ಆಗಿದ್ದಾರೆ.

ರಾಜಸ್ಥಾನ್​ ರಾಯಲ್ಸ್​​ ಎದುರು ಸ್ಲೋ ಇನ್ನಿಂಗ್ಸ್​

ಏಪ್ರಿಲ್​​ 19ರಂದು ನಡೆದ ಪಂದ್ಯದಲ್ಲಿ ಕೆಎಲ್​ ರಾಹುಲ್​​, ನಿಧಾನಗತಿ ಇನ್ನಿಂಗ್ಸ್​ ಕಟ್ಟಿದರು. ಒಂದೊಂದು ರನ್​ ಗಳಿಸಲು ತಿಣುಕಾಡಿದರು. ಬೌಲರ್​ಗಳ ಎದುರು ಪರದಾಡಿದರು. ಕಣಕ್ಕಿಳಿದ ಮೊದಲ ಓವರ್​​​ನಲ್ಲೇ ಮೇಡಿನ್​ ಮಾಡಿದರು. ಬಳಿಕ ಒಂದು ಬಾಲ್​, ಒಂದು ರನ್​ ಗಳಿಸಿದರು. 32 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​​ ನೆರವಿನಿಂದ 39 ರನ್​ ಗಳಿಸಿದರು. ಸ್ಟ್ರೇಕ್​ರೇಟ್​​ ಇದ್ದದ್ದು 121 ಅಷ್ಟೆ. ಇದು ಒಂದು ಇನ್ನಿಂಗ್ಸ್​ಗೆ ಸೀಮಿತ ಅಲ್ಲ, ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಲ್ಲೂ ಇದೇ ಫಜೀತಿ.

ಫ್ಯಾನ್ಸ್​ ಟ್ರೋಲ್​

ಇಂಗ್ಲೆಂಡ್​ ತಂಡವು ಟೆಸ್ಟ್​ ಕ್ರಿಕೆಟ್​ ಅನ್ನು ಟಿ20ಯಂತೆ ಬ್ಯಾಟ್​ ಬೀಸುತ್ತಿದೆ. ಆದರೆ ನೀವ್ಯಾಕೆ ಹೊಡಿಬಡಿ ಆಟ ಟಿ20 ಕ್ರಿಕೆಟ್​​​ನಲ್ಲಿ ಟೆಸ್ಟ್​​ನಂತೆ ಬ್ಯಾಟ್​ ಬೀಸುತ್ತೀದ್ದೀರಾ? ಫ್ಯಾನ್ಸ್​ ಪ್ರಶ್ನೆ ಮಾಡುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ರಾಹುಲ್​​ ಚುಟುಕು ಫಾರ್ಮೆಟ್​ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಸ್ಟ್ರೈಕ್​ರೇಟ್​​ ಕೂಡ ತೀವ್ರ ಕುಸಿಯುತ್ತಿದೆ. ಐಪಿಎಲ್​​ನಲ್ಲಿ ಸ್ಟ್ರೈಕ್​​ರೇಟ್​ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಫ್ಯಾನ್ಸ್​ಗೆ ಭಾರಿ ನಿರಾಸೆಯಾಗಿದೆ.

ಸೇಡು ತೀರಿಸಿಕೊಳ್ಳುತ್ತಿದ್ದೀರಾ?

ಒಂದು ತಿಂಗಳ ಹಿಂದೆ ಮುಗಿದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ರಾಹುಲ್​​ ಅಟ್ಟರ್​ಫ್ಲಾಪ್​ ಶೋ ನೀಡಿದ್ದರು. ಮೊದಲೆರಡು ಪಂದ್ಯಗಳಲ್ಲಿ ತೀವ್ರ ಕಳಪೆ ಪ್ರದರ್ಶನ ನೀಡಿದ ರಾಹುಲ್ ಉಳಿದೆರಡು ಪಂದ್ಯಗಳಲ್ಲಿ ಬೆಂಚ್​ಗೆ ಸೀಮಿತರಾದರು. ಇದನ್ನೇ ವಿಚಾರವಾಗಿ ಕಾಲೆಳೆದಿರುವ ಅಂದು ಆಡಿಸಲಿಲ್ಲ ಎಂಬ ಕಾರಣಕ್ಕೆ ಐಪಿಎಲ್​ನಲ್ಲಿ ಟೆಸ್ಟ್ ಆಟಗಾರನನ್ನು ಹೊರ ತರುತ್ತಿದ್ದೀರಾ? ಆ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದೀರಾ? ಮತ್ತೆ ಆಯ್ಕೆಯಾಗುವ ನಿರೀಕ್ಷೆಯಲ್ಲಿ ಹೀಗೆ ಬ್ಯಾಟ್​ ಮಾಡುತ್ತಿದ್ದೀರಾ ಎಂದು ಟೀಕಿಸಿದ್ದಾರೆ.

ಸ್ಟ್ರೈಕ್​​ರೇಟ್​ ಅಂಕಿ-ಅಂಶ ನೋಡಿ

ಈ ಆವೃತ್ತಿಯ ಐಪಿಎಲ್​​ನಲ್ಲಿ ರಾಹುಲ್ ಪ್ರದರ್ಶನವು ಟೆಸ್ಟ್‌ಗಿಂತ ಕಳಪೆಯಾಗಿದೆ . ಇದರಲ್ಲಿ ಯಾವುದೇ ಸಂದೇಹವಿಲ್ಲ. ಅದಕ್ಕೆ ಈ ಅಂಕಿ ಅಂಶಗಳೇ ಅದಕ್ಕೆ ಸಾಕ್ಷಿ. T20 ಕ್ರಿಕೆಟ್​ನಲ್ಲಿ ಬ್ಯಾಟಿಂಗ್ ಮಾಡುವ ಯಾವುದೇ ತಂಡಕ್ಕೆ ಮೊದಲ ಪವರ್ ಪ್ಲೇ (ಮೊದಲ 6 ಓವರ್‌ಗಳು) ನಿರ್ಣಾಯಕವಾಗಿದೆ. ವೀರಾವೇಷದ ಬ್ಯಾಟ್ ಬೀಸಿದರೆ, ಬ್ಯಾಟ್ಸ್​ಮನ್​ಗಳು ಬೃಹತ್ ಸ್ಕೋರ್ ಗಳಿಸಲು ಸಾಧ್ಯವಾಗುತ್ತದೆ.

ಆದರೆ, ಟೆಸ್ಟ್​ ಕ್ರಿಕೆಟ್​​ನಂತೆ ಬ್ಯಾಟ್​​ ಬೀಸಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 12 ಎಸೆತಗಳಲ್ಲಿ 8 ರನ್ ಗಳಿಸಿದ್ದರು. ಸ್ಟ್ರೈಕ್​​ರೇಟ್ 66.67 ಇತ್ತು. ಚೆನ್ನೈ ಎದರು 111.11ರ ಸ್ಟ್ರೈಕ್​ರೇಟ್​​​ನಲ್ಲಿ 18 ಎಸೆತಗಳಲ್ಲಿ 20 ರನ್ ಗಳಿಸಿದ್ದರು. ಸನ್​​ರೈಸರ್ಸ್ ಹೈದರಾಬಾದ್ ವಿರುದ್ಧ 31 ಎಸೆತಗಳಲ್ಲಿ 35 ರನ್ (ಸ್ಟ್ರೈಕ್ ರೇಟ್ 112.90). ಆರ್​ಸಿಬಿ ಎದುರು 20 ಎಸೆತಗಳಲ್ಲಿ 18 ರನ್ (ಸ್ಟ್ರೈಕ್ ರೇಟ್ 90), ಪಂಜಾಬ್ ವಿರುದ್ಧ 56 ಎಸೆತಗಳಲ್ಲಿ 74 ರನ್ ಆದರೆ ಸ್ಟ್ರೈಕ್ ರೇಟ್ 132.14 ಮಾತ್ರ.