Kishan vs Bharat: ಭರತ್ ಅಥವಾ ಇಶಾನ್ ಕಿಶನ್; ಡಬ್ಲ್ಯೂಟಿಸಿ ಫೈನಲ್ಗೆ ವಿಕೆಟ್ ಕೀಪರ್ ಆಯ್ಕೆ ಮಾಡಿದ ರವಿಶಾಸ್ತ್ರಿ, ದಿನೇಶ್ ಕಾರ್ತಿಕ್
ಆಸ್ಟ್ರೇಲಿಯಾ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ವಿಕೆಟ್ ಕೀಪರ್ ಸ್ಥಾನಕ್ಕೆ ಯಾರಿಗೆ ಅವಕಾಶ ಸಿಗಬೇಕು? ಈ ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಈ ಬಗ್ಗೆ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Ishan kishan vs KS Bharat WTC Final 2023: ಐಪಿಎಲ್ ಮಧ್ಯೆಯೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಲೀಗ್ ಹಂತದಲ್ಲಿ ಹೊರ ಬಿದ್ದ ತಂಡಗಳ ಆಟಗಾರರು ಅಂದರೆ ಡಬ್ಲ್ಯೂಟಿಸಿ ಫೈನಲ್ಗೆ ಆಯ್ಕೆಯಾದವರು ಇಂಗ್ಲೆಂಡ್ನತ್ತ ಹೆಜ್ಜೆ ಹಾಕಿದ್ದಾರೆ. ಕೋಚಿಂಗ್ ಸಿಬ್ಬಂದಿ ಸಹ ಆಟಗಾರರ ಜೊತೆ ಲಂಡನ್ಗೆ ಪ್ರಯಾಣಿಸಿದ್ದಾರೆ. ಈ ಮಧ್ಯೆಯೇ ಫೈನಲ್ ಫೈಟ್ಗೆ ವಿಕೆಟ್ ಕೀಪರ್ ಯಾರಾಗಬೇಕೆಂಬ ಚರ್ಚೆ ಜೋರಾಗಿ ನಡೆಯುತ್ತಿದೆ.
ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ (WTC Final 2023) ವಿಕೆಟ್ ಕೀಪರ್ ಸ್ಥಾನಕ್ಕೆ ಯಾರಿಗೆ ಅವಕಾಶ ಸಿಗಬೇಕು? ಈ ಪ್ರಶ್ನೆಯೇ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಈ ಬಗ್ಗೆ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೂನ್ 7 ರಿಂದ ಓವಲ್‌ನಲ್ಲಿ ಆರಂಭವಾಗಲಿರುವ ಡಬ್ಲ್ಯೂಟಿಸಿ ಫೈನಲ್‌ಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇಶಾನ್ ಕಿಶನ್ ಮತ್ತು ಕೆಎಸ್ ಭರತ್ ಅವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬುದರ ಬಗ್ಗೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಗೊಂದಲದಲ್ಲಿದೆ. ಕೆಲವು ವರದಿಗಳು ಕೆಎಸ್ ಭರತ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರ ಕುತೂಹಲ ಮೂಡಿಸಿದೆ.
ಕಾರು ಅಪಘಾತದ ನಂತರ ವಿಕೆಟ್ ಕೀಪರ್ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಸ್ಥಾನಕ್ಕೆ ಕೆಎಲ್ ರಾಹುಲ್ ಆಯ್ಕೆ ಆಗಬೇಕಿದ್ದರೂ, ಗಾಯದ ಸಮಸ್ಯೆಯಿಂದ ಮಹತ್ವದ ಪಂದ್ಯದಿಂದ ಹೊರಗುಳಿದಿದ್ದಾರೆ. ರಾಹುಲ್ ಔಟ್ ಆದ ಬೆನ್ನಲ್ಲೇ ಇಶಾನ್ ಕಿಶನ್ಗೆ ಅವಕಾಶ ನೀಡಲಾಯಿತು.
ರವಿ ಶಾಸ್ತ್ರಿ ಹೇಳಿದ್ದೇನು?
ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ವಿಕೆಟ್ ಕೀಪರ್ ಪಾತ್ರಕ್ಕಾಗಿ ಕೆಎಸ್ ಭರತ್ ಆಯ್ಕೆ ಉತ್ತಮ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ವರ್ಷದ ಆರಂಭದಲ್ಲಿ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭರತ್ ವಿಕೆಟ್ ಕೀಪಿಂಗ್ ಮಾಡಿದ್ದರು. ಹಾಗಾಗಿ ಇಶಾನ್‌ಗಿಂತ ಭರತ್ಗೆ ಆದ್ಯತೆ ಸಿಗುತ್ತದೆ ಎಂದು ಭಾವಿಸುತ್ತೇನೆ. ಆದರೆ ಯಾರಿಗೆ ಅವಕಾಶ ಸಿಗುತ್ತದೋ ಕಾದು ನೋಡಬೇಕು ಎಂದು ಹೇಳಿದ್ದಾರೆ..
ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಹಾಗಾಗಿ, ಅಂತಿಮ 11ರಲ್ಲಿ ಆಯ್ಕೆಯಾಗುವ ಮೊದಲ ಆಯ್ಕೆ ಭರತ್ ಅವರೇ ಆಗಿರಲಿದೆ ಎಂದು ಭಾವಿಸುತ್ತೇನೆ. ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಪಿಚ್ ಪರಿಸ್ಥಿತಿಯೂ ನಿರ್ಣಾಯಕ. ಆ ಬಳಿಕ ಯಾರಿಗೆ ಅವಕಾಶ ಸಿಗಬೇಕು ಎಂಬುದನ್ನು ನಿರ್ಧರಿಸಬೇಕು. ಇಬ್ಬರು ಸ್ಪಿನ್ನರ್ಗಳನ್ನು ಆಡಿಸಿದರೆ ಭರತ್ರನ್ನೇ ಆಯ್ಕೆ ಮಾಡಬೇಕು ಎಂದು ರವಿಶಾಸ್ತ್ರಿ ಸಲಹೆ ಕೊಟ್ಟಿದ್ದಾರೆ.
ದಿನೇಶ್ ಕಾರ್ತಿಕ್ ಹೇಳಿದ್ದೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು, ಭರತ್ರನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಆತನಿಗೆ ಅಪಾರ ಅನುಭವ ಇದೆ. ಆತನೇ ಮೊದಲ ಆದ್ಯತೆಯಾದರೆ ಉತ್ತಮ. ಇಶಾನ್ ಕಿಶನ್ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ನೇರವಾಗಿ ಆಡುವುದು ನಿರೀಕ್ಷೆಗಿಂತ ಹೆಚ್ಚು ಎಂದು ನಾನು ಭಾವಿಸುತ್ತೇನೆ ಎಂದು ಸೂಚಿಸಿದ್ದಾರೆ.
ಆಸ್ಟ್ರೇಲಿಯಾ ಸರಣಿಯಲ್ಲಿ ಭರತ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಭಾರತ ವಿಕೆಟ್ ಕೀಪರ್ ಆಗಿ ಮಿಂಚಿದರೂ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಭರತ್, ಕೇವಲ 101 ರನ್ ಗಳಿಸಿದ್ದರು. ಭಾರತದ ಪರ ಕೇವಲ 4 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಆದರೆ 90 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವುದು ವಿಶೇಷ.
ಇಶಾನ್ ಇನ್ನೂ ಟೆಸ್ಟ್ಗೆ ಪದಾರ್ಪಣೆ ಮಾಡಿಲ್ಲ. ಆದರೆ 48 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕಿಶನ್ಗೆ ಅವಕಾಶ ಸಿಗದಿದ್ದರೂ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಗಾಯಗೊಂಡ ನಂತರ ಡಬ್ಲ್ಯೂಟಿಸಿ ಫೈನಲ್ಗೆ ಭಾರತ ತಂಡ ಸೇರಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಚಿತ್ತಗಾಂಗ್ ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಇಶಾನ್ ದ್ವಿಶತಕ ಸಿಡಿಸಿದ್ದರು.